ಮೈಸೂರು ಲಾಕ್‌ಡೌನ್: ಕೊರೋನಾ ಎಮರ್ಜೆನ್ಸಿ ಉಲ್ಲಂಘಿಸಿದ್ರೆ ಕ್ರಿಮಿನಲ್ ಕೇಸ್

By Suvarna NewsFirst Published Mar 23, 2020, 12:19 PM IST
Highlights

ಮೈಸೂರು ನಗರ ಸಂಪೂರ್ಣ ಲಾಕ್‌ಡೌನ್| ಅಗತ್ಯ ವಸ್ತುಗಳು, ಎಮರ್ಜೆನ್ಸಿ ಇದ್ದರೆ ಮಾತ್ರ ಹೊರಗೆ ಬನ್ನಿ| ಕೊರೋನಾ ಎಮರ್ಜೆನ್ಸಿ ಉಲ್ಲಂಘಿಸಿದರೆ ಕ್ರಿಮಿನಲ್ ಕೇಸ್| ಬೆಂಗಳೂರಿನಿಂದ ಮೈಸೂರಿಗೆ ಬರುವ ಪ್ರತಿ ಪ್ರಯಾಣಿಕರ ತಪಾಸಣೆ|

ಮೈಸೂರು[ಮಾ. 23]: ಇನ್ನು ಹತ್ತು ದಿನಗಳ ಕಾಲ ಮೈಸೂರು ನಗರ ಸಂಪೂರ್ಣ ಲಾಕ್‌ಡೌನ್ ಆಗಲಿದೆ. ಅನಗತ್ಯ ಓಡಾಟ ಕಂಡು ಬಂದಲ್ಲಿ ಅವರ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಲಾಗುವುದು. ಪೊಲೀಸ್ ಇಲಾಖೆ ಕೊರೋನಾ ನಿರ್ಬಂಧವನ್ನ ಪೊಲೀಸ್ ಇಲಾಖೆ ಗಂಭೀರವಾಗಿ ಪರಿಗಣಿಸಿದೆ ಎಂದು ಮೈಸೂರು ನಗರ ಪೊಲೀಸ್ ಆಯುಕ್ತ ಚಂದ್ರಗುಪ್ತ ಹೇಳಿದ್ದಾರೆ.

ಇಂದು[ಸೋಮವಾರ] ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು,  ಮೈಸೂರು ಜನರಿಗೆ ಈ ಮೂಲಕ ಎಚ್ಚರಿಕೆ ಕೊಡುತ್ತೇನೆ. ಅಗತ್ಯ ವಸ್ತುಗಳು, ಎಮರ್ಜೆನ್ಸಿ ಇದ್ದರೆ ಮಾತ್ರ ಹೊರಗೆ ಬನ್ನಿ. ಕೊರೋನಾ ಎಮರ್ಜೆನ್ಸಿ ಉಲ್ಲಂಘಿಸಿದರೆ ಕ್ರಿಮಿನಲ್ ಕೇಸ್ ದಾಖಲಿಸಲಾಗುವುದು ಎಂದು ಹೇಳಿದ್ದಾರೆ.

ಕನ್ನಿಕಾ ಕಪೂರ್ ಇದ್ದ ಹೋಟೆಲ್‌ನಲ್ಲೇ ಉಳಿದುಕೊಂಡಿದ್ದರು ಆಫ್ರಿಕಾ ಕ್ರಿಕೆಟಿಗರು..! 

ಬೆಂಗಳೂರಿನಿಂದ ಮೈಸೂರಿಗೆ ಬರುವ ಪ್ರತಿ ಪ್ರಯಾಣಿಕರನ್ನ ತಪಾಸಣೆ  ಮಾಡಲಾಗುತ್ತಿದೆ. ಕೆಲ ಭಾಗದಲ್ಲಿ ಹೋಟೆಲ್ ಗಳಲ್ಲಿ ಪಾರ್ಸಲ್ ಪಡೆಯದೆ ಅಲ್ಲೇ ಸೇವನೆ ಮಾಡುವುದು, ಗುಂಪು ಗೂಡುವುದು ಕಂಡು ಬಂದಿದೆ. ಪರಿಸ್ಥಿತಿ ವಿಕೋಪಕ್ಕೆ ಹೋಗುತ್ತಿರುವ ಹಿನ್ನೆಲೆಯಲ್ಲಿ ಆಟೋ ಸೇವೆ ಬಂದ್ ಮಾಡುತ್ತೇವೆ. ಸುಖಾಸುಮ್ಮನೆ ಓಡಾದಿದರೆ, ಅಂಗಡಿ ತೆರೆದರೆ ಕ್ರಿಮಿನಲ್ ಕೇಸ್ ದಾಖಲಿಸಲಾಗುವುದು ಎಂದು ತಿಳಿಸಿದ್ದಾರೆ. 

"

click me!