ಕೊರೋನಾ ಭೀತಿ: ‘ಎಷ್ಟೇ ಮುಂಜಾಗ್ರತಾ ಕ್ರಮ ಕೈಗೊಂಡರೂ ಜನ್ರು ಜಾಗೃತರಾಗ್ತಿಲ್ಲ’

By Suvarna NewsFirst Published Mar 23, 2020, 12:45 PM IST
Highlights

ತುಳಸಿ ಅಂಶಗಳುಳ್ಳ ಆಯುರ್ವೇದಿಕ್ ಮಾತ್ರೆಗಳನ್ನು ಜನರಿಗೆ ನೀಡುವುದು ಸೂಕ್ತ| ಇದರಿಂದ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸಬಹುದು| ಸಾಧ್ಯವಾದಷ್ಟು ಮಟ್ಟಿಗೆ ಕರೋನಾ ವೈರಸ್ ನಿಯಂತ್ರಿಸಬಹುದಾಗಿದೆ| 

ಬೆಂಗಳೂರು[ಮಾ.23]: ಸರ್ಕಾರ ಎಷ್ಟೇ ಮುಂಜಾಗ್ರತಾ ಕ್ರಮ ಕೈಗೊಂಡರೂ ಜನರು ಜಾಗೃತರಾಗುತ್ತಿಲ್ಲ. ಹೀಗಾಗಿ ಜನರಲ್ಲಿ ಇನ್ನೂ ಹೆಚ್ಚಿನ ರೀತಿಯಲ್ಲಿ ಜಾಗೃತಿ ಮೂಡಿಸುವ ಕೆಲಸವಾಗಬೇಕಿದೆ. ದೂರವಾಣಿ ಕರೆಗಳ ಮೂಲಕ ಪ್ರಖ್ಯಾತ ವೈದ್ಯರ ಧ್ವನಿ ಬಳಕೆ ಮಾಡಿಕೊಂಡ ಜಾಗೃತಿ ಮೂಡಿಸಬೇಕು. ಡಾ.ದೇವಿಶೆಟ್ಟಿ, ಡಾ. ಮಂಜುನಾಥ್ ಸೇರಿದಂತೆ ಪ್ರಖ್ಯಾತ ವೈದ್ಯರ ಧ್ವನಿ ಮುದ್ರಿಕೆಯ ಮೆಸೆಜ್ ಜನರಿಗೆ ಮುಟ್ಟಿಸುವಂತ ಕಾರ್ಯವಾಗಬೇಕು ಎಂದು ಖಾಸಗಿ ಆಸ್ಪತ್ರೆ ಮುಖ್ಯಸ್ಥರು ರಾಜ್ಯ ಸರ್ಕಾರಕ್ಕೆ ಸಲಹೆ ನೀಡಿದ್ದಾರೆ. 

ಇಂದು[ಸೋಮವಾರ] ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಅವರು  ಖಾಸಗಿ ಆಸ್ಪತ್ರೆಗಳ ಮುಖ್ಯಸ್ಥರ ಜೊತೆಗೆ ಸಭೆ ನಡೆಸಿದ್ದಾರೆ. ಖಾಸಗಿ ಆಸ್ಪತ್ರೆಯಲ್ಲಿ ಶೇ. 30 ರಷ್ಟು ಕೊರೋನಾ‌ ವೈರಸ್ ಗೆ ಚಿಕಿತ್ಸೆಗಾಗಿ ಮೀಸಲಿಡಲು ಆರೋಗ್ಯ ಸಚಿವ ಶ್ರೀರಾಮುಲು ಮನವಿ ಮಾಡಿಕೊಂಡಿದ್ದಾರೆ.

ಲಾಕ್‌ಡೌನ್ ಮಾಡಿ ಅಂದ್ರೆ ಡಬಲ್ ರೇಟ್ ಮಾಡಿ ಸುಲಿಗೆಗಿಳಿದ ಖಾಸಗಿ ಬಸ್‌ಗಳು!

ತುಳಸಿ ಅಂಶಗಳುಳ್ಳ ಆಯುರ್ವೇದಿಕ್ ಮಾತ್ರೆಗಳನ್ನು ಜನರಿಗೆ ನೀಡುವುದು ಸೂಕ್ತ, ಇದರಿಂದ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸಬಹುದು. ಸಾಧ್ಯವಾದಷ್ಟು ಮಟ್ಟಿಗೆ ಕರೋನಾ ವೈರಸ್ ಅನ್ನು ನಿಯಂತ್ರಿಸಬಹುದಾಗಿದೆ ಎಂದು ಖಾಸಗಿ ಆಸ್ಪತ್ರೆ ಮುಖ್ಯಸ್ಥರು ಸರ್ಕಾರಕ್ಕೆ ಸಲಹೆ ನೀಡಿದ್ದಾರೆ. 

ಕೊರೋನಾ ಸಮರಕ್ಕೆ ಮಹೀಂದ್ರಾ ಸಾಥ್: ಸ್ಯಾಲರಿ, ರೆಸಾರ್ಟ್‌ ಎಲ್ಲವೂ ರೋಗಿಗಳ ಸಹಾಯಕ್ಕೆ!

ವೆಂಟಿಲೇಟರ್ ಗಳ ಕೊರತೆ ಇದ್ದು ಆರ್ಡರ್ ಮಾಡೋದಿದ್ರೆ ತಕ್ಷಣ ಆರ್ಡರ್ ಮಾಡಿ. ಸದ್ಯ ಆರ್ಡರ್ ನೀಡಿದರೂ ಅದು ಬರಬೇಕೆಂದ್ರೆ ಮೂರು ತಿಂಗಳು ಬೇಕಾಗುತ್ತದೆ. ಹೀಗಾಗಿ ಹೊಸ ವೆಂಟಿಲೇಟರ್ ಖರೀದಿಸಲೇಬೇಕು ಅಂದರೆ ತಕ್ಷಣ ಆರ್ಡರ್ ಮಾಡಬೇಕು. ಇಲ್ಲವೇ ಏಕಾಏಕಿ ಸಮಸ್ಯೆ ಉಲ್ಬಣಿಸಿದ್ರೆ ವೆಂಟಿಲೇಟರ್ ಬಳಕೆ ಕಷ್ಟವಾಗಬಹುದು ಎಂದು  ಸರ್ಕಾರಕ್ಕೆ ಖಾಸಗಿ ಆಸ್ಪತ್ರೆಗಳ ಮುಖ್ಯಸ್ಥರು ಸಲಹೆ ನೀಡಿದ್ದಾರೆ. 
 

click me!