ಮನೆಯಲ್ಲೆ ವರ್ಕೌಟ್‌, ರೆಡಿ ಆಗುತ್ತಿದೆ ಹೊಸ ಪ್ರಾಜೆಕ್ಟ್; ಇದೆಲ್ಲಾ ಕೊರೋನಾ ಎಫೆಕ್ಟ್‌!

By Suvarna NewsFirst Published Mar 24, 2020, 9:13 AM IST
Highlights

ಚರ್ಚೆ ಕೂಟಗಳು ಇಲ್ಲ, ಸಿನಿಮಾ ಶೂಟಿಂಗ್‌ ಗೆ ಓಡಾತ್ತಿಲ್ಲ. ಲೋಕೇಶನ್‌ ನೋಡುವ ತಾಪತ್ರಯ ಇಲ್ವೇ ಇಲ್ಲ, ಯಾರನ್ನೋ ಭೇಟಿ ಮಾಡಬೇಕು ಅಥವಾ ನಿರ್ಮಾಪಕ- ನಿರ್ದೇಶಕ, ನಟ- ನಟಿಯರನ್ನು ಹುಡುಕಿಕೊಂಡು ಹೋಗಬೇಕಾದ ಅವಸರ ಇಲ್ಲ. ಅಭಿಮಾನಿಗಳನ್ನು ಭೇಟಿ ಮಾಡಿ ಅವರ ಜತೆ ಸೆಲ್ಫಿ ತೆಗೆಸಿಕೊಳ್ಳುತ್ತಿಲ್ಲ, ಇಷ್ಟಕ್ಕೂ ಇವರಾರೂ ಮನೆ ಬಿಟ್ಟು ಆಚೆ ಹೋಗುತ್ತಿಲ್ಲ... ಇದು ನಿಮ್ಮ ನೆಚ್ಚಿನ ಸಿನಿಮಾ ಮಂದಿಯ ಸದ್ಯದ ಪರಿಸ್ಥಿತಿ. ಹಾಗಾದರೆ ಅವರ ದಿನಚರಿ ಹೇಗಿದೆ, ಶೂಟಿಂಗ್‌ ಮೈದಾನದಿಂದ ಆಚೆಗೂ ಸಿನಿಮಾ ಮಂದಿ ಏನು ಮಾಡಲು ಸಾಧ್ಯ ಎನ್ನುವ ಕುತೂಹಲ ಇದ್ದವರಿಗೆ ಈ ಮಾಹಿತಿ.

ವಿನೋದ್‌ ಪ್ರಭಾಕರ್‌, ನಟ

ಸಿನಿಮಾ ಕೆಲಸ ಸಂಪೂರ್ಣ ಬಂದ್‌ ಆಗಿವೆ. ಶೂಟಿಂಗ್‌ ಕೂಡ ಇಲ್ಲ. ಮನೆಯಿಂದಾಚೆ ಹೋಗದೆ ಮೂರ್ನಾಲ್ಕು ದಿನಗಳಾದವು. ಪ್ರತಿ ದಿನ ಬೆಳಗ್ಗೆ ಮನೆಯಲ್ಲಿಯೇ ವರ್ಕೌಟ್‌ ಮಾಡುತ್ತಿದ್ದೇನೆ. ಅದಾದ ನಂತರ ಬೆಳಗಿನ ತಿಂಡಿ ಮುಗಿಸಿ, ಸಿನಿಮಾ ನೋಡುವುದು, ಬುಕ್‌ ಓದುವುದು ಮಾಮೂಲು ಆಗಿದೆ. ಭಾನುವಾರ ದಿನವೀಡಿ ಅಂದ್ರೆ ಬೆಳಗ್ಗೆಯಿಂದ ಸಂಜೆ 5 ಗಂಟೆವರೆಗೆ ಮನೆಯಿಂದಾಚೆ ಕಾಲಿಟ್ಟಿರಲಿಲ್ಲ. ಅಮೆಜಾನ್‌ ಪ್ರೈಮ್‌ನಲ್ಲಿ ‘ಲವ್‌ ಮಾಕ್ಟೆಲ್‌’ ಸೇರಿ ಒಂದಷ್ಟುಸಿನಿಮಾ ನೋಡಿದೆ. ಅದರ ಜತೆಗೆ ಹೊಸ ಪ್ರಾಜೆಕ್ಟ್ವೊಂದರ ಕೆಲಸ ನಡೆಯುತ್ತಿದೆ. ಈಗ ಅದೇ ಕೆಲಸದಲ್ಲಿ ಬ್ಯುಸಿ ಆಗಿದ್ದೇನೆ. ಅಸಿಸ್ಟೆಂಟ್‌ ಸೇರಿ ಯಾರೂ ಕಡ ಮನೆಗೆ ಬರೋದು ಬೇಡ ಅಂತ ಹೇಳಿದ್ದೇನೆ. ಮನೆಯಲ್ಲಿಯೇ ಇದ್ದು ನಿಮ್ಮ ಆರೋಗ್ಯದ ಕಡೆ ಗಮನ ಕೊಡಿ ಅಂತ ಸಲಹೆ ನೀಡಿದ್ದೇನೆ. ಸಾಧ್ಯವಾದಷ್ಟುಕೊರೋನಾ ವೈರಸ್‌ ತಡೆಗಟ್ಟಲು ಮುನ್ನೆಚ್ಚರಿಕೆ ವಹಿಸುವಂತೆ ಫ್ಯಾನ್ಸ್‌ ಜೊತೆಗೆ ನಮ್ಮ ಸಿನಿಮಾ ತಂಡದವರಿಗೆ ಹೇಳುತ್ತಿದ್ದೇನೆ. ಅವಶ್ಯಕತೆ ಇರುವವರಿಗೆ ಮಾಸ್ಕ್‌ ಹಾಗೂ ಸ್ಯಾನಿಟರಿ ವಸ್ತುಗಳನ್ನು ಮನೆಯಲ್ಲಿಯೇ ಇದ್ದು ವಿತರಣೆ ಮಾಡುತ್ತಿದ್ದೇನೆ. ಸದ್ಯಕ್ಕೆ ಇದಿಷ್ಟುನನ್ನ ನಿತ್ಯದ ಕೆಲಸ.

ಕೊರೋನಾ ಕಾಲದಲ್ಲಿ ಬೆಂದಕಾಳೂರು; ಹೀಗಿದೆ ನೋಡಿ!

ನೀನಾಸಂ ಸತೀಶ್‌, ನಟ

ಕೊರೋನಾ ವೈರಸ್‌ ತಡೆಗಟ್ಟಲು ಮನೆಯಲ್ಲಿರುವುದು ಒಳ್ಳೆಯ ಮದ್ದು ಅಂತಾರೆ. ಅದನ್ನೇ ನಾವು ಪಾಲಿಸುತ್ತಿದ್ದೇವೆ. ಎಲ್ಲರಿಗೂ ಇದು ಅನಿವಾರ್ಯ ಕೂಡ. ಕೆಲಸ,

ಕಾರ್ಯಗಳಿಗಿಂತ ಆರೋಗ್ಯಮುಖ್ಯ. ನಾನಂತೂ ಮನೆಯಾಚೆ ಹೊರಟಿಲ್ಲ. ಒಂದು ಸಾಂಗ್‌ ಶೂಟಿಂಗ್‌ ಉದ್ದೇಶಕ್ಕೆ ಹೆವಿ ವರ್ಕೌಟ್‌ ಮಾಡಬೇಕಿತ್ತು. ಆ ಕೆಲಸ ಈಗ ಮನೆಯಲ್ಲೇ ಆಗುತ್ತಿದೆ. ಅದಕ್ಕಂತೆಯೇ ಒಂದಷ್ಟುಜಿಮ್‌ ಸೆಟಪ್‌ ಆಗಿದೆ. ಬೆಳಗ್ಗೆ ವರ್ಕೌಟ್‌ ಮುಗಿಸಿ, ನಿತ್ಯದ ಕೆಲಸ ಶುರುವಾಗುತ್ತಿದೆ. ಸದ್ಯಕ್ಕೆ ಮೈ ನೇಮ್‌ ಈಸ್‌ ಸಿದ್ದೇಗೌಡ ಸಿನಿಮಾದ

ಥ್ಯಾಕ್ಸ್‌ ಟು ಕೊರೋನಾ;ಮನೆ ಬಿಟ್ಟು ಆಚೆ ಬಾರದ ತಾರೆಗಳು ದಿನಚರಿ ಹೀಗಿದೆ?

ಸ್ಕಿ್ರಪ್ಟ್‌ ವರ್ಕ್ ನಡೆಯುತ್ತಿದೆ. ದಿನದ ಬಹುತೇಕ ಸಮಯ ಅದರಲ್ಲಿಯೇ ಕಳೆಯುತ್ತಿದ್ದೇನೆ. ಬೇಜಾರು ಆದಾಗ ಸಿನಿಮಾ ನೋಡುತ್ತಿದ್ದೇನೆ. ಅಮೆಜಾನ್‌ ಹಾಗೂ ನೆಟ್‌ಫ್ಲಿಕ್ಸ್‌ನಲ್ಲೀಗ ಒಳ್ಳೆಯ ಸಿನಿಮಾಗಳು ನೋಡಲು ಸಿಗುತ್ತಿವೆ. ಈ ಮೂರ್ನಾಲ್ಕು ದಿನದಲ್ಲಿ ಐದಾರು ಸಿನಿಮಾ ನೋಡಿದೆ. ಹಾಗೆಯೇ ಕೊರೋನಾ ತಡೆಗಟ್ಟುವ ಸಂಬಂಧ ಯಾವುದಾದರೂ ಒಳ್ಳೆಯ ಸಲಹೆ, ಸೂಚನೆಯ ವಿಡಿಯೋ ಬಂದ್ರೆ ಬೇರೆಯವರಿಗೂ ಫಾರ್ವರ್ಡ್‌ ಮಾಡುತ್ತಿದ್ದೇನೆ. ಪರಿಚಯವಿದ್ದವರಿಗೆ, ಫ್ಯಾನ್ಸ್‌ಗೆ ಎಚ್ಚರ ವಹಿಸುವಂತೆ ಹೇಳುತ್ತಿದ್ದೇನೆ.

ರಾಗಿಣಿ, ನಟಿ

ಕೊರೋನಾ ತೀವ್ರ ಆತಂಕ ಹುಟ್ಟಿಸಿದೆ. ಬೇರೆ ದೇಶಗಳಲ್ಲಿ ಅದು ಉಂಟು ಮಾಡಿದ ಅನಾಹುತ ನೋಡಿದರೆ, ನಾವೆಲ್ಲ ಹೆಚ್ಚು ಎಚ್ಚರ ವಹಿಸಲೇಬೇಕಿದೆ. ಈ ನಿಟ್ಟಿನಲ್ಲಿ ನನಗೆ

ಗೊತ್ತಿರುವವರಿಗೆ, ಪರಿಚಯವಿದ್ದವರಿಗೆ ಸಾಧ್ಯವಾದಷ್ಟುಕೇರ್‌ ತೆಗೆದುಕೊಳ್ಳಿ ಅಂತ ಹೇಳುತ್ತಿದ್ದೇನೆ. ಮನೆಯಲ್ಲೂ ನಾವು ಅಷ್ಟೇ ಎಚ್ಚರ ತೆಗೆದುಕೊಂಡಿದ್ದೇವೆ. ಇನ್ನು ನಿತ್ಯದ ಕೆಲಸಗಳಲ್ಲೂ ಬ್ಯುಸಿ ಆಗಿದ್ದೇನೆ. ವರ್ಕೌಟ್‌ ಜತೆಗೆ ಸಿನಿಮಾ ನೋಡುವುದು, ಬುಕ್ಸ್‌ ಓದುವುದರ ಜತೆಗೆ ವೈರಟಿ ಅಡುಗೆ ಮಾಡುವುದನ್ನು ಕಲಿಯುತ್ತಿದ್ದೇನೆ. ಅಡುಗೆ ಮಾಡುವುದೆಂದ್ರೆ ನಂಗೆ ತುಂಬಾ ಇಷ್ಟ, ವೆಜ್‌ ಅಥವಾ ನಾನ್‌ ವೆಜ್‌ ಎಲ್ಲಾ ಬಗೆಯ ಅಡುಗೆ ಮಾಡುವುದನ್ನು ಕಲಿಯಬೇಕು ಅಂತ ಟ್ರೈ ಮಾಡುತ್ತಿದ್ದೇನೆ. ಅಡುಗೆ ಮಾಡೋದ್ರಲ್ಲಿ ನಾನು ನಾನ್‌ವೆಜ್‌ ಸ್ಪೆಷಲಿಸ್ಟ್‌. ಈಗ ನಾನ್‌ ವೆಜ್‌ನಲ್ಲಿಯೇ ವೈರಟಿ ಅಡುಗೆ ಮಾಡುವುದರನ್ನು ಕಲಿಯುವುದರಲ್ಲಿ ದಿನ ಕಳೆಯುತ್ತಿದ್ದೇನೆ, ಜತೆಗೆ ನೆಟ್‌ಫ್ಲಿಕ್ಸ್‌ ನಲ್ಲಿ ಮಹಿಳಾ ಪ್ರಧಾನ ಕತೆಯ ಸಿನಿಮಾ ನೋಡುತ್ತಿದ್ದೇನೆ.

ಸೋನು ಗೌಡ, ನಟಿ

ಕೊರೋನಾ ಬಗ್ಗೆಯೇ ಹೆಚ್ಚು ಚರ್ಚೆ ನಡೆಯುತ್ತಿದೆ

ಡೈಲಿ ವರ್ಕ್ ಸ್ಟೈಲ್‌ ಚೇಂಜ್‌ ಆಗಿದೆ. ಶೂಟಿಂಗ್‌ ಇದ್ದಾಗ ಇರುತ್ತಿದ್ದ ನಿತ್ಯದ ದಿನಚರಿ ಈಗಿಲ್ಲ. ಮನೆ ಬಿಟ್ಟು ಹೊರ ಹೋಗದ ಕಾರಣ ಲೇಟಾಗಿ ಏಳೋದು ಸಹಜ ಎನ್ನುವಂತಾಗಿದೆ. ಆದರೂ, ಡೈಲಿ ಮಾಡಲೇ ಬೇಕಾದ ಕೆಲಸಗಳು ನಿಂತಿಲ್ಲ, ಜಿಮ್‌ಗೆ ಹೋಗಲೇಬೇಕು. ಅದರ ಜತೆಗೆ ದಿನ ಸಮಯ ಜಾರುತ್ತಿದೆ. ಹಾಗೆ ನೋಡಿದರೆ ಈಗ ದಿನ

ಕಳೆಯುವುದು ಕಷ್ಟಏನಿಲ್ಲ. ಫೇಸ್‌ ಬುಕ್‌, ಇನ್‌ಸ್ಟಾಗ್ರಾಮ್‌, ಟ್ವಿಟರ್‌ ಇರೋದ್ರಿಂದ, ಸುಮ್ನೆ ಅವುಗಳನ್ನು ನೋಡುತ್ತಾ ಹೊರಟರೆ ಸಮಯ ಕಳೆದಿದ್ದೆ ಗೊತ್ತಾಗುತ್ತಿಲ್ಲ. ನನ್ನ ಮಟ್ಟಿಗೆ ಹೆಚ್ಚಿನ ಸಮಯ ಹಾಗೆ ಆಗುತ್ತಿದೆ. ಹಾಗಂತ ಅದು ವೆಸ್ಟ್‌ ಅಲ್ಲ. ಕೊರೋನಾ ಬಗ್ಗೆ ಏನ್‌ ನಡೆಯುತ್ತಿದೆ, ಯಾರೆಲ್ಲ ಏನ್‌ ಹೇಳಿದ್ದಾರೆ, ಮುನ್ನೆಚ್ಚರಿಕೆಯ ಮಾಹಿತಿ ಏನ್‌ ಇರುತ್ತೆ ಅನ್ನೋದನ್ನು ನೋಡಿ, ಬೇರೆಯವರಿಗೂ ಫಾರ್ವರ್ಡ್‌ ಮಾಡುತ್ತಿದ್ದೇನೆ. ಅದರಲ್ಲೇ ಹೆಚ್ಚು ಹೊತ್ತು ಕಳೆಯೋದಿಕ್ಕೆ ಆಗೋದಿಲ್ಲ. ಅದು ಬೇಜಾರು ಆದ ನಂತರ ಸಿನಿಮಾ ನೋಡುತ್ತಿದ್ದೇನೆ. ಫ್ರೆಂಡ್ಸ್‌ ಜತೆಗೆ ಫೋನ್‌ನಲ್ಲಿ ಮಾತನಾಡುವುದು ಮಾಮೂಲು. ಏನ್‌ ಆದ್ರೂ ಈ ಕೊರೋನಾ ಭೀತಿಯೇ ಹೆಚ್ಚು ಕಾಡುತ್ತಿದೆ.

click me!