ಕೊರೋನಾ ವ್ಯಾಪಿಸ್ತಿದ್ರೂ ಡೋಂಟ್‌ ಕೇರ್, ಕಂಪನಿ ನಡೆಸೋ ಹುಚ್ಚು..!

By Suvarna NewsFirst Published Mar 28, 2020, 9:18 AM IST
Highlights

ಕೊರೋನಾ ವೈರಸ್ ಸೋಂಕಿತರ ಸಂಖ್ಯೆ ಹೆಚ್ಚುತ್ತಲೇ ಇದ್ದರೂ ಸಿಲಿಕಾನ್ ಸಿಟಿ ಜನ ಎಚ್ಚೆತ್ತುಕೊಳ್ಳದಿರುವುದು ನಿಜಕ್ಕೂ ವಿಪರ್ಯಾಸ. ಒಂದೆಡೆ ಕೊರೋನಾ ಸಾವಿನ ಸುದ್ದಿ ವರದಿಯಾಗುತ್ತಿರುವಾಗಲೇ ಬೆಂಗಳೂರಲ್ಲಿ ಮಾತ್ರ ಕಂಪನಿ ನಡೆಸುವ ಹುಚ್ಚು ಬಿಟ್ಟಿಲ್ಲ.

ಬೆಂಗಳೂರು(ಮಾ.28): ಕೊರೋನಾ ವೈರಸ್ ಸೋಂಕಿತರ ಸಂಖ್ಯೆ ಹೆಚ್ಚುತ್ತಲೇ ಇದ್ದರೂ ಸಿಲಿಕಾನ್ ಸಿಟಿ ಜನ ಎಚ್ಚೆತ್ತುಕೊಳ್ಳದಿರುವುದು ನಿಜಕ್ಕೂ ವಿಪರ್ಯಾಸ. ಒಂದೆಡೆ ಕೊರೋನಾ ಸಾವಿನ ಸುದ್ದಿ ವರದಿಯಾಗುತ್ತಿರುವಾಗಲೇ ಬೆಂಗಳೂರಲ್ಲಿ ಮಾತ್ರ ಕಂಪನಿ ನಡೆಸುವ ಹುಚ್ಚು ಬಿಟ್ಟಿಲ್ಲ.

ಒಂದುಕಡೆ ಕರೋನಾಗೆ ಜನ ಬಲಿಯಾಗುತ್ತಿದ್ದರೆ, ಇನ್ನೊಂದು ಕಡೆ ಜನರ ಬೇಜವಾಬ್ದಾರಿ ಜನರ ಬೇಜವಾಬ್ದಾರಿ ನಡವಳಿಕೆಗಳು ಹೆಚ್ಚುತ್ತಿವೆ. ಇಡೀ ದೇಶವೇ ಲಾಕ್ ಡೌನ್ ಅದರೂ ಕೆವರಿಗೆ ಕಂಪನಿ ನಡೆಸುವ ಹುಚ್ಚು ಮಾತ್ರ ಬಿಟ್ಟಿಲ್ಲ.

ಕಾಸರಗೋಡಲ್ಲಿ ಹೆಚ್ಚಿದ COVID19 ಕೇಸ್, ಮಂಗ್ಳೂರು ಟೋಟಲ್ ಲಾಕ್‌ಡೌನ್

Visionet  ಕಂಪನಿಯ ಮುಖ್ಯಸ್ಥ ಎಂಪ್ಲಾಯಿಗಳಿಗೆ ಬೋನಸ್ ಆಫರ್ ಮಾಡಿ ಕೆಲಸಕ್ಕೆ ಬರುವಂತೆ ಕರೆ ನೀಡಿದ್ದಾರೆ. ನಾನು ಎಲ್ಲಾ ಕಡೆಯಲ್ಲೂ ಅಡ್ಡಾಡಿಕೊಂಡು ಬಂದಿದ್ದೇನೆ. ಯಾವ ಪೊಲೀಸೂ ಇಲ್ಲ, ಯಾರೂ ತಡೆಯೋದೂ ಇಲ್ಲ. ಸುಮ್ಮನೆ ಪ್ಯಾನಿಕ್ ಸಿಚುಯೇಷನ್ ಕ್ರಿಯೇಟ್ ಮಾಡ್ತಿದ್ದಾರೆ ಎಂದು ಕಂಪನಿ ಮುಖ್ಯಸ್ಥ ವಿಡಿಯೋ ಸಂದೇಶ ಕಳುಹಿಸಿದ್ದಾರೆ.

ಕಂಪನಿ ಉದ್ಯೋಗಿಗಳಿಗೆ ವಿಡಿಯೋ ಸಂದೇಶ ಕಳುಹಿಸಿದ Visionet ಮುಖ್ಯಸ್ಥ, ಆಫಿಸಿಗೆ ಬನ್ನಿ. ಯಾರೂ ತಡೆಯೋದಿಲ್ಲ ಎಂದಿದ್ದಾರೆ. ದಿನದಿನಕ್ಕೂ ಲಾಕ್ ಡೌನ್ ಸಡಿಲಗೊಳ್ಳುತ್ತಿರುವುದು ಅಪಾಯಕಾರಿ ಬೆಳವಣಿಗೆಯಾಗಿದ್ದರೂ ಜನ ಮಾತ್ರ ಇದನ್ನು ಗಂಭೀರವಾಗಿ ಪರಿಗಣಿಸಿಲ್ಲ.

ಕೊರೋನಾ ನೆಗೆಟಿವ್‌ ಬಂದಿದ್ದ ವೃದ್ಧೆ ಸಾವು

ಕಂಪನಿ ಮಾಲೀಕರು ಲಾಕ್ ಡೌನ್ ಸಡಿಲಗೊಳ್ತಿರೋದನ್ನೇ ಬಂಡವಾಳ ಮಾಡಿಕೊಂಡು ಆಫೀಸ್ ನಡೆಸಲು ಮುಂದಾಗುತ್ತಿದ್ದಾರೆ. ಜನರ ಬೇಜವಾಬ್ದಾರಿಯಿಂದ ಭಾರತ ಇನ್ನೊಂದು ಇಟಲಿ, ಇನ್ನೊಂದು ಸ್ಪೇನ್  ಆಗೋದು ಗ್ಯಾರೆಂಟಿ ಎಂಬ ಮಾತು ಕೇಳಿ ಬರುತ್ತಿದ್ದು, ಸದ್ಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗಿದೆ. ಜನರು ಈ ಬಗ್ಗೆ ಸಾಕಷ್ಟು ಆಕ್ರೋಶ ವ್ಯಕ್ತಪಡಿಸಿದ್ದಾರೆ.

click me!