ಕಾಸರಗೋಡಲ್ಲಿ ಹೆಚ್ಚಿದ COVID19 ಕೇಸ್, ಮಂಗ್ಳೂರು ಟೋಟಲ್ ಲಾಕ್‌ಡೌನ್

By Suvarna NewsFirst Published Mar 28, 2020, 8:50 AM IST
Highlights

ನೆರೆಯ ರಾಜ್ಯ ಕೇರಳದ ಕಾಸರಗೋಡಿನಲ್ಲಿ ಕೊರೋನಾ ವೈರಸ್ ಸೋಂಕಿತರ ಸಂಖ್ಯೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಮಂಗಳೂರಿನಲ್ಲಿ ಕಂಪ್ಲೀಟ್‌ ಲಾಕ್‌ಡೌನ್‌ಗೆ ಪೊಲೀಸ್ ಆಯುಕ್ತ ಐಪಿಎಸ್‌ ಹರ್ಷ ಆದೇಶಿಸಿದ್ದಾರೆ.

ಮಂಗಳೂರು(ಮಾ.28): ನೆರೆಯ ರಾಜ್ಯ ಕೇರಳದ ಕಾಸರಗೋಡಿನಲ್ಲಿ ಕೊರೋನಾ ವೈರಸ್ ಸೋಂಕಿತರ ಸಂಖ್ಯೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಮಂಗಳೂರಿನಲ್ಲಿ ಕಂಪ್ಲೀಟ್‌ ಲಾಕ್‌ಡೌನ್‌ಗೆ ಪೊಲೀಸ್ ಆಯುಕ್ತ ಐಪಿಎಸ್‌ ಹರ್ಷ ಆದೇಶಿಸಿದ್ದಾರೆ.

ನಾಳೆ ಸಂಪೂರ್ಣ ಲಾಕ್‌ಡೌನ್‌ ಇರಲಿದೆ. ನೆರೆಯ ಕಾಸರಗೋಡಿನಲ್ಲಿ ಹೆಚ್ಚಿನ ಕೊರೋನಾ ಪ್ರಕರಣಗಳು ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರೂ, ಶಾಸಕರೂ, ಸಂಸದರೊಂದಿಗೆ ಸಭೆ ನಡೆಸಿ ಈ ನಿರ್ಧಾರ ಮಾಡಲಾಗಿದೆ. ಎಲ್ಲರೂ ಮನೆಯಲ್ಲಿರಿ ಎಂದು ಅವರು ಟ್ವೀಟ್ ಮಾಡಿದ್ದಾರೆ.

TOTAL LOCKDOWN TOMORROW.. please find enclosed detailed press release ..in wake of high cases reported in neighbouring kasaragod..in A high level meeting chaired by Hon district minister in presence of MLA/ MLCs and MP it has been decided to enforce total lockdown..STAY HOME... pic.twitter.com/Ex2dX9Mb9G

— Harsha IPS CP Mangaluru City (@compolmlr)

ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಗಲ್ಫ್‌, ದುಬೈನಿಂದ ಈ ಹಿಂದೆ ಹೆಚ್ಚಿನ ಜನ ಬಂದಿಳಿದ ಪರಿಣಾಮ ಕಾಸರಗೋಡಿನಲ್ಲೂ ಸೋಂಕಿತರ ಸಂಖ್ಯೆ ಅತಿವೇಗದಲ್ಲಿ ಏರಿಕೆಯಾಗುತ್ತಿದೆ.

ಕೊರೋನಾ ನೆಗೆಟಿವ್‌ ಬಂದಿದ್ದ ವೃದ್ಧೆ ಸಾವು

click me!