ಜನತಾ ಕರ್ಫ್ಯೂ ದಿನವಾದ ಭಾನುವಾರ ನಗರದಲ್ಲಿ ವಾಯು ಮಾಲಿನ್ಯ ಭರ್ಜರಿ ಪ್ರಮಾಣದಲ್ಲಿ ಇಳಿಮುಖ ಕಂಡಿದೆ. ಕಳೆದ 15 ದಿನಗಳಿಂದ ನಿರಂತರವಾಗಿ ನಗರದಲ್ಲಿ ವಾಹನ ಸಂಚಾರ ಪ್ರಮಾಣ ಕಡಿಮೆ ಆಗಿರುವುದರಿಂದ ಅಂದಾಜು ಶೇ.20ರಷ್ಟುಮಾಲಿನ್ಯ ಪ್ರಮಾಣ ಕುಸಿದಿದೆ.
ಬೆಂಗಳೂರು(ಮಾ.24): ಜನತಾ ಕರ್ಫ್ಯೂ ದಿನವಾದ ಭಾನುವಾರ ನಗರದಲ್ಲಿ ವಾಯು ಮಾಲಿನ್ಯ ಭರ್ಜರಿ ಪ್ರಮಾಣದಲ್ಲಿ ಇಳಿಮುಖ ಕಂಡಿದೆ. ಕಳೆದ 15 ದಿನಗಳಿಂದ ನಿರಂತರವಾಗಿ ನಗರದಲ್ಲಿ ವಾಹನ ಸಂಚಾರ ಪ್ರಮಾಣ ಕಡಿಮೆ ಆಗಿರುವುದರಿಂದ ಅಂದಾಜು ಶೇ.20ರಷ್ಟುಮಾಲಿನ್ಯ ಪ್ರಮಾಣ ಕುಸಿದಿದೆ.
ಸಾಮಾನ್ಯವಾಗಿ ಬೇರೆ ದಿನಗಳಿಗಿಂತ ಭಾನುವಾರ ಮಾಲಿನ್ಯ ಪ್ರಮಾಣ ಕಡಿಮೆ ಇರುತ್ತದೆ. ಜನತಾ ಕಫä್ರ್ಯ ಪರಿಣಾಮವಾಗಿ ಮತ್ತಷ್ಟುಕುಸಿತವಾಗಿದೆ ಎಂದು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಮೂಲಗಳು ತಿಳಿಸಿವೆ.
ಬೊಮ್ಮನಹಳ್ಳಿ ವ್ಯಾಪ್ತಿಯಲ್ಲಿ 2000 ಮಂದಿಗೆ ಸ್ಟ್ಯಾಂಪಿಂಗ್
ಸಾಮಾನ್ಯವಾಗಿ ನಗರದಲ್ಲಿ ವಾಹನಗಳ ಸಂಚಾರ ಹಾಗೂ ಸಿಗ್ನಲ್‌ಗಳಲ್ಲಿ ವಾಹನಗಳು ನಿಲ್ಲುವುದರಿಂದ ಮಾಲಿನ್ಯ ಪ್ರಮಾಣ ಹೆಚ್ಚಳವಾಗುತ್ತದೆ. ಆದರೆ, ಭಾನುವಾರ ವಾಹನಗಳೇ ಇರಲಿಲ್ಲ. ಹೀಗಾಗಿ ಸಿಗ್ನಲ್‌ನಲ್ಲಿ ನಿಲ್ಲುವ ಪ್ರಶ್ನೆಯೇ ಉದ್ಬವಿಸುವುದಿಲ್ಲ. ಹೀಗಾಗಿ ಸಹಜವಾಗಿಯೇ ಮಾಲಿನ್ಯ ಕುಸಿತವಾಗಿದೆ ಎಂದು ತಿಳಿಸಿದ್ದಾರೆ.
ನಗರದಲ್ಲಿ ಪ್ರಮುಖವಾಗಿ ನಗರದ ಶೇ.40ರಷ್ಟುಮಾಲಿನ್ಯ ವಾಹನಗಳು, ಶೇ.10ಕ್ಕಿಂತ ಪ್ರಮಾಣ ಕಟ್ಟಡ ನಿರ್ಮಾಣ, ಕೈಗಾರಿಕೆಗಳಿಂದಲೇ ಮಾಲಿನ್ಯ ಉಂಟಾಗುತ್ತದೆ. ಭಾನುವಾರ ಈ ಎರಡೂ ಕ್ಷೇತ್ರಗಳು ಸ್ತಬ್ದವಾಗಿದ್ದರಿಂದ ಮಾಲಿನ್ಯ ಪ್ರಮಾಣ ಕೂಡ ಕಡಿಮೆಯಾಗಿತ್ತು. ನಗರದ ವಾತಾವರಣದಲ್ಲಿ ಇಂಗಾಲ, ಧೂಳಿನ ಕಣಗಳ ಪ್ರಮಾಣ (ಪಿಎಂ 2.5, 10) ಕಡಿಮೆಯಾಗಿದ್ದರಿಂದ ಧೂಳು, ಹೊಗೆ, ಶಬ್ದ ಈ ಯಾವುದರ ಮಾಲಿನ್ಯವೂ ಇಲ್ಲದೆ ಇಡೀ ನಗರ ಸ್ವಚ್ಛಂದವಾಗಿತ್ತು.
Big Breaking:ಕರ್ನಾಟಕ ಸಂಪೂರ್ಣ ಲಾಕ್ ಡೌನ್, ಹೊರಗಡೆ ಬಂದ್ರೆ ಹುಷಾರ್..!
ನಗರದಲ್ಲಿ ಮಾ.9ರಂದು ವಾಯು ಗುಣಮಟ್ಟಸೂಚ್ಯಂಕದ ಪ್ರಮಾಣ ಸಿಲ್‌್ಕ ಬೋರ್ಡ್ ಬಳಿ 87 ಇತ್ತು. ಇದು ಭಾನುವಾರ 60ಕ್ಕೆ ಇಳಿದಿತ್ತು. ಅದೇ ರೀತಿ ಹೊಸೂರು ರಸ್ತೆ (ನಿಮ್ಹಾನ್ಸ್) ಬಳಿ 90ರಿಂದ 65ಕ್ಕೆ ಕುಸಿದಿದೆ. ಮೈಸೂರು ರಸ್ತೆ (ಕವಿಕ)ಯಲ್ಲಿ 89ರಿಂದ 56ಕ್ಕೆ, ಜಯನಗರದ (ಶಾಲಿನಿ ಮೈದಾನ)ದಲ್ಲಿ 78ರಿಂದ 67, ಹೆಬ್ಬಾಳ (ಪಶು ವೈದ್ಯಕೀಯ)ದಲ್ಲಿ 86ರಿಂದ 63, ಸಾಣೆ ಗುರುವನಹಳ್ಳಿಯಲ್ಲಿ 70ರಿಂದ 64ಕ್ಕೆ ಕುಸಿದಿತ್ತು.
ನಗರದಲ್ಲಿ ಪ್ರತಿ ದಿನ ಸಿಲ್‌್ಕಬೋರ್ಡ್, ಮೈಸೂರು ರಸ್ತೆ, ವಿಮಾನ ನಿಲ್ದಾಣ ರಸ್ತೆ, ಕೆ.ಆರ್.ಪುರ, ಟಿನ್ ಫ್ಯಾಕ್ಟರಿ ವಾಹನದಟ್ಟಣೆ ಪ್ರದೇಶಗಳಾಗಿದ್ದವು. ಭಾನುವಾರ ಈ ಎಲ್ಲಾ ಪ್ರದೇಶಗಳು ಖಾಲಿ ಖಾಲಿಯಾಗಿದ್ದರಿಂದ ಮಾಲಿನ್ಯ ಪ್ರಮಾಣ ಕೂಡ ಕಡಿಮೆಯಾಗಿತ್ತು.
ಮಾಲಿನ್ಯ ನಿಯಂತ್ರಣ ಮಂಡಳಿಯು ವಾಯು ಗುಣಮಟ್ಟಸೂಚ್ಯಂಕದ ಪ್ರಮಾಣ 0-50ರ ವರೆಗೆ ಗುಣಮಟ್ಟದ ಗಾಳಿ, 51-100ರ ವರೆಗೆ ಸಮಾಧಾನಕರ ಎಂದು ಪರಿಗಣಿಸಲಾಗುತ್ತಿದೆ. ಇದೀಗ ನಗರದ ಗಾಳಿ ಸಾಧಾರಣದಿಂದ ಉತ್ತಮ ಗುಣಮಟ್ಟದತ್ತ ಸಾಗುತ್ತಿದೆ.