ಕೊರೋನಾ ಹೋದ್ಮೇಲೆ ಅಮೆರಿಕಾದಿಂದ ಬಾ ಅಪ್ಪ ಎಂದ 4 ವರ್ಷದ ಮಗಳು!

Published : Mar 24, 2020, 07:43 AM IST
ಕೊರೋನಾ ಹೋದ್ಮೇಲೆ ಅಮೆರಿಕಾದಿಂದ ಬಾ ಅಪ್ಪ ಎಂದ 4 ವರ್ಷದ ಮಗಳು!

ಸಾರಾಂಶ

ಎಲ್ಲೆಡೆ ಕೊರೋನಾ ವೈರಸ್ ಹಾವಳಿ| ಕೊರೋನಾ ಹೋದ ಮೇಲೆ ಅಮೆರಿಕಾದಿಂದ ಬಾ ಎಂದ 4 ವರ್ಷದ ಮಗಳು!

ಮಂಡ್ಯ(ಮಾ.24): ಅಮೆರಿಕದಲ್ಲಿರುವ ತಂದೆ ಮಗಳೇ ನಿನ್ನನ್ನು ಕಾಣಲು ಭಾರತಕ್ಕೆ ಬರುತ್ತೇನೆ ಎನ್ನುತ್ತಿದ್ದಂತೆ, 4 ವರ್ಷದ ಮಗುವೊಂದು ಕೊರೋನಾ ವೈರಸ್‌ ಹೋದ ಮೇಲೆ ಭಾರತಕ್ಕೆ ಬಾ ಅಪ್ಪ ಎಂದಿದ್ದು, ತಂದೆ ಹಾಗೂ ಪುಟ್ಟಮಗುವಿನ ನಡುವಿನ ಈ ಮಾತುಕತೆ ವಿಡಿಯೋ ವೈರಲ್‌ ಆಗಿದೆ.

ಮಂಡ್ಯದ ಬಾಲರಾಜ್‌ ಎಂಬುವವರು ಅಮೆರಿಕದಲ್ಲಿ ಕೆಲಸದಲ್ಲಿದ್ದು, ಅವರ ಪತ್ನಿ ಹಾಗೂ ಪುತ್ರಿ ನಗರದಲ್ಲಿದ್ದಾರೆ. ಸೋಮವಾರ ಬಾಲರಾಜ್‌ ತಮ್ಮ 4 ವರ್ಷದ ಮಗಳಿಗೆ ವಿಡಿಯೋ ಕಾlf ಮಾಡಿದ್ದು, ನಿನ್ನನ್ನು ನೋಡಲು ಭಾರತಕ್ಕೆ ಬರುತ್ತಿದ್ದೇನೆ ಎಂದಿದ್ದಾರೆ.

ಇದಕ್ಕೆ ಪ್ರತಿಯಾಗಿ ಮಗಳು ಕೊರೋನಾ ವೈರಸ್‌ ಹೋದ ಮೇಲೆ ಬಾ ಅಪ್ಪ ಎಂದಿದ್ದಾಳೆ. ಕೊರೋನಾ ನೋಡಿದ್ದೀಯಾ ಮಗಳೇ ಎಂಬ ಬಾಲರಾಜ್‌ ಪ್ರಶ್ನೆಗೆ, ಹೂಂ ಅಪ್ಪಾ ಟಿ.ವಿ.ಯಲ್ಲಿ ನೋಡಿದ್ದೇನೆ ಎಂದು ಮಗು ಉತ್ತರಿಸಿದ್ದಾಳೆ.

PREV
click me!

Recommended Stories

ವೈರಸ್‌ ಕಾಟ: ಕೊರೋನಾ ತಡೆಗೆ ಸಾರ್ವಜನಿಕರ ಸಹಕಾರ ಅಗತ್ಯ, ಸಚಿವ ಪಾಟೀಲ್‌
ಮತ್ತೆ ಕೊರೋನಾರ್ಭಟ: ಪೂಲಿಂಗ್ ಟೆಸ್ಟ್ ಮೊರೆಹೋದ ಆರೋಗ್ಯ ಇಲಾಖೆ, ಏನಿದು ಹೊಸ ಪರೀಕ್ಷೆ?