ಬಿಬಿಎಂಪಿ ವಲಯ ಬೊಮ್ಮನಹಳ್ಳಿ ವ್ಯಾಪ್ತಿಯಲ್ಲಿ ಸುಮಾರು 2000ಕ್ಕೂ ಅಧಿಕ ಮಂದಿ ವಿದೇಶದಿಂದ ಆಗಮಿಸಿದ್ದು, ಅವರನ್ನು ಗುರುತಿಸಿ ಸ್ಟ್ಯಾಂಪಿಂಗ್ ಮಾಡಲಾಗುತ್ತಿದೆ ಎಂದು ಬಿಬಿಎಂಪಿ ಜಂಟಿ ಆಯುಕ್ತ ರಾಮಕೃಷ್ಣ ತಿಳಿಸಿದ್ದಾರೆ.
ಬೆಂಗಳೂರು(ಮಾ.24): ಬಿಬಿಎಂಪಿ ವಲಯ ಬೊಮ್ಮನಹಳ್ಳಿ ವ್ಯಾಪ್ತಿಯಲ್ಲಿ ಸುಮಾರು 2000ಕ್ಕೂ ಅಧಿಕ ಮಂದಿ ವಿದೇಶದಿಂದ ಆಗಮಿಸಿದ್ದು, ಅವರನ್ನು ಗುರುತಿಸಿ ಸ್ಟ್ಯಾಂಪಿಂಗ್ ಮಾಡಲಾಗುತ್ತಿದೆ ಎಂದು ಬಿಬಿಎಂಪಿ ಜಂಟಿ ಆಯುಕ್ತ ರಾಮಕೃಷ್ಣ ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಂಗಳೂರು ಕೆಂಪೇಗೌಡ ಏರ್‌ಪೋರ್ಟ್‌ಗೆ ಮಾ.8ರಿಂದ ವಿದೇಶದಿಂದ ಬಂದಿರುವವರ ವಿಳಾಸಗಳನ್ನು ಆಗ್ನೇಯ ವಲಯ ಡಿಸಿಪಿ ಶ್ರೀಕಾಂತ್ ಜೋಷಿ ಹಾಗೂ ಪಾಲಿಕೆ ಸಿಬ್ಬಂದಿ ಪತ್ತೆ ಹಚ್ಚಿದ್ದಾರೆ. ಅವರ ಮನೆಗಳಿಗೆ ತೆರಳಿ 14 ದಿನದ ವರೆಗೆ ಗೃಹಬಂಧನದಲ್ಲಿ ಇರುವಂತೆ ಎಚ್ಚರಿಸಿ 2 ಸ್ಟ್ಯಾಂಪಿಂಗ್ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
Big Breaking:ಕರ್ನಾಟಕ ಸಂಪೂರ್ಣ ಲಾಕ್ ಡೌನ್, ಹೊರಗಡೆ ಬಂದ್ರೆ ಹುಷಾರ್..!
ಅವರು ಹೊರದೇಶದಿಂದ ಬಂದಿರುವುದಕ್ಕೆ ಹಾಗೂ ಬಂದ ದಿನಾಂಕವನ್ನು ಕೈ ಮೇಲೆ ಸೀಲ್ ಹಾಕಲಾಗುತ್ತದೆ. ಆದರೂ 14 ದಿನಗಳವರೆಗೆ ಅವರ ಮೇಲೆ ತೀವ್ರ ನಿಗಾ ವಹಿಸಲಾಗುವುದು. ವಿದೇಶಗಳಿಂದ ನಗರಕ್ಕೆ ಬಂದಿರುವ ಬೆಂಗಳೂರು ನಿವಾಸಿಗಳು ಹಾಗೂ ವಿದೇಶಿಗರನ್ನು ಪತ್ತೆ ಹಚ್ಚಲಾಗಿದ್ದು, ಶಂಕಿತ ಸೋಂಕಿತರನ್ನು ಹೊಸಕೋಟೆ ಬಳಿಯಿರುವ ತಪಾಸಣಾ ಕೇಂದ್ರಕ್ಕೆ ಕರೆದೊಯ್ದು ತಪಾಸಣೆಗೆ ಒಳಪಡಿಸಿ ಕೈಗೆ ಸೀಲು ಹಾಕಲಾಗುತ್ತದೆ ಎಂದು ಮಾಹಿತಿ ನೀಡಿದರು.
ಬೆಂಗಳೂರಲ್ಲಿ ಗುಡುಗು ಸಹಿತ ಮಳೆಗೆ 10 ಮರ ಧರೆಗೆ
ಈವರೆಗೂ ಯಾವುದೇ ಕೊರೋನಾ ಸೋಂಕು ಬೊಮ್ಮನಹಳ್ಳಿ ವ್ಯಾಪ್ತಿಯಲ್ಲಿ ಪತ್ತೆಯಾಗಿಲ್ಲ. ಬೊಮ್ಮನಹಳ್ಳಿ ವಲಯ ವ್ಯಾಪ್ತಿಯಲ್ಲಿ 2000 ಜನ ಕೊರೋನಾ ಸೋಂಕಿತರು ಬಂದಿದೆ ಎಂದು ಸುಳ್ಳು ವದಂತಿಗಳು ವಾಟ್ಸಾಪ್‌ನಲ್ಲಿ, ಜನರ ಬಾಯಿಂದ ಬಾಯಿಗೆ ಹರಡುತ್ತಿರುವ ಬಗ್ಗೆ ಸಾರ್ವಜನಿಕರು ಕಿಗೊಡಬೇಡಿ ಎಂದು ಜಂಟಿ ಆಯುಕ್ತರು ಮನವಿ ಮಾಡಿದರು.