ಭಾರತ್‌ ಲಾಕ್‌ಡೌನ್‌: ತುರ್ತು ಸೇವೆಗೆ ಬಸ್‌ ಓಡಿಸಿದ KSRTC

By Kannadaprabha NewsFirst Published Apr 3, 2020, 12:30 PM IST
Highlights

ಕೆಎಸ್‌ಆರ್‌ಟಿಸಿಯು ತುರ್ತು ಹಾಗೂ ಅಗತ್ಯ ಸೇವೆಗಳಿಗಾಗಿ ರಾಜ್ಯದಲ್ಲಿ 15 ಬಸ್‌ಗಳ ಕಾರ್ಯಾಚರಣೆ ನಡೆಸಿದ ಕೆಎಸ್‌ಆರ್‌ಟಿಸಿ| ಮೈಸೂರು ನಗರ ಸಾರಿಗೆ ಮೂರು, ಮಂಗಳೂರು ಐದು, ಶಿವಮೊಗ್ಗ ಆರು ಹಾಗೂ ದಾವಣಗೆರೆಯಲ್ಲಿ ಒಂದು ಸೇರಿ ಒಟ್ಟು 15 ಬಸ್‌ ಕಾರ್ಯಾಚರಣೆ| 

ಬೆಂಗಳೂರು(ಏ.03): ಕೊರೋನಾ ಸೋಂಕಿನ ನಿಯಂತ್ರಣದ ನಿಟ್ಟಿನಲ್ಲಿ ಲಾಕ್‌ಡೌನ್‌ ಜಾರಿ ಮಾಡಿರುವುದರಿಂದ ಸಂಪೂರ್ಣ ಬಸ್‌ ಸೇವೆ ಸ್ಥಗಿತಗೊಳಿಸಿರುವ ಕೆಎಸ್‌ಆರ್‌ಟಿಸಿಯು ತುರ್ತು ಹಾಗೂ ಅಗತ್ಯ ಸೇವೆಗಳಿಗಾಗಿ ಗುರುವಾರ ರಾಜ್ಯದಲ್ಲಿ 15 ಬಸ್‌ಗಳ ಕಾರ್ಯಾಚರಣೆ ಮಾಡಿದೆ.

ಜಿಲ್ಲಾಡಳಿತಗಳ ಮನವಿ ಮೇರೆಗೆ ಮೈಸೂರು ನಗರ ಸಾರಿಗೆ ಮೂರು, ಮಂಗಳೂರು ಐದು, ಶಿವಮೊಗ್ಗ ಆರು ಹಾಗೂ ದಾವಣಗೆರೆಯಲ್ಲಿ ಒಂದು ಸೇರಿ ಒಟ್ಟು 15 ಬಸ್‌ಗಳನ್ನು ತುರ್ತು ಹಾಗೂ ಅಗತ್ಯ ಸೇವೆಗಾಗಿ ನಗರ ವ್ಯಾಪ್ತಿಯಲ್ಲಿ ಕಾರ್ಯಚರಣೆ ಮಾಡಲಾಗಿದೆ ಎಂದು ನಿಗಮ ತಿಳಿಸಿದೆ.

ಲಾಕ್‌ಡೌನ್‌ ಇದ್ದರೂ ಪಾರ್ಟಿ, ಮೋಜು ಮಸ್ತಿ: ಐವರ ಸೆರೆ

ಕೊರೋನಾ ವೈರಸ್‌ಅನ್ನು ಹೋಗಲಾಡಿಸಲು ಏ.14ರ ವರೆಗೆ ಭಾರತ್‌ ಲಾಕ್‌ಡೌನ್‌ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಆದೇಶಿಸಿದ್ದಾರೆ. ಹೀಗಾಗಿ ದೇಶಾದ್ಯಂತ ಯಾವುದೇ ತರಹದ ಸಾರ್ವಜನಿಕರ ಸೇವೆಗಳು ಲಭ್ಯವಿಲ್ಲ. 
 

click me!