ಲಾಕ್‌ಡೌನ್‌: ಕಾಂಗ್ರೆಸಿಂದ ಹಸಿದವರ ಹೊಟ್ಟೆ ತುಂಬಿಸಲು ಆಹಾರ ವಿತರಣೆ

Kannadaprabha News   | Asianet News
Published : Apr 03, 2020, 12:14 PM ISTUpdated : Apr 03, 2020, 02:56 PM IST
ಲಾಕ್‌ಡೌನ್‌: ಕಾಂಗ್ರೆಸಿಂದ ಹಸಿದವರ ಹೊಟ್ಟೆ ತುಂಬಿಸಲು ಆಹಾರ ವಿತರಣೆ

ಸಾರಾಂಶ

ಬಡವರು ಹಾಗೂ ಹಸಿದವರ ಹೊಟ್ಟೆ ತುಂಬಿಸಲು ಕಾಂಗ್ರೆಸ್‌ ಪಕ್ಷದಿಂದ ಆಹಾರ ವಿತರಣೆ| ಬಿಟಿಎಂ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಲಕ್ಕಸಂದ್ರದ ಚೌಡೇಶ್ವರಿ ಕಲ್ಯಾಣ ಮಂಟಪದಲ್ಲಿ ಆಹಾರ ಸಿದ್ಧಪಡಿಸಲಾಗುತ್ತಿದೆ|

ಬೆಂಗಳೂರು(ಏ.03): ಕೊರೋನಾ ವೈರಸ್‌ ಹರಡದಿರಲು ಲಾಕ್‌ಡೌನ್‌ ಜಾರಿಗೊಳಿಸಿರುವುದರಿಂದ ಸಂಕಷ್ಟದಲ್ಲಿರುವ ನಗರದ ಬಡವರು ಹಾಗೂ ಹಸಿದವರ ಹೊಟ್ಟೆ ತುಂಬಿಸಲು ಕಾಂಗ್ರೆಸ್‌ ಆಹಾರ ಸಿದ್ಧಪಡಿಸಿ ಹಂಚುತ್ತಿದೆ.

ಬಿಟಿಎಂ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಲಕ್ಕಸಂದ್ರದ ಚೌಡೇಶ್ವರಿ ಕಲ್ಯಾಣ ಮಂಟಪದಲ್ಲಿ ಆಹಾರ ಸಿದ್ಧಪಡಿಸಲಾಗುತ್ತಿದೆ. ಇಲ್ಲಿ ಸಿದ್ಧವಾದ ಆಹಾರವನ್ನು ಪೊಟ್ಟಣ ಮಾಡಿ ಬಳಿಕ ಬಡವರು, ನಿರ್ಗತಿಕರು ಹಾಗೂ ಹಸಿದವರಿಗೆ ವಿತರಿಸಲಾಗುತ್ತಿದೆ. 

ಭಾರತ್‌ ಲಾಕ್‌ಡೌನ್‌: ಒಂದೊತ್ತಿನ ಊಟಕ್ಕೂ ಬಡವರ ಪರದಾಟ, ಕಾಂಗ್ರೆಸ್‌ನಿಂದ ಆಹಾರ ವಿತರಣೆ

ಕೊರೋನಾ ಲಾಕ್‌ಡೌನ್‌: RSS ರೀತಿ ಕಾಂಗ್ರೆಸ್ಸಿಂದಲೂ ಬಡವರಿಗೆ ನೆರವು

ಗುರುವಾರ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಹಾಗೂ ಸ್ಥಳೀಯ ಶಾಸಕ ಮಾಜಿ ಸಚಿವ ರಾಮಲಿಂಗಾ ರೆಡ್ಡಿ ಅವರು ಕಲ್ಯಾಣ ಮಂಟಪಕ್ಕೆ ಭೇಟಿ ನೀಡಿ, ಆಹಾರ ತಯಾರಿಕೆಯನ್ನು ಪರಿಶೀಲಿಸಿದರಲ್ಲದೇ, ಖುದ್ದು ಆಹಾರ ಸೇವಿಸಿ ಗುಣಮಟ್ಟ ಪರೀಕ್ಷಿಸಿದ್ದಾರೆ.
 

PREV
click me!

Recommended Stories

ವೈರಸ್‌ ಕಾಟ: ಕೊರೋನಾ ತಡೆಗೆ ಸಾರ್ವಜನಿಕರ ಸಹಕಾರ ಅಗತ್ಯ, ಸಚಿವ ಪಾಟೀಲ್‌
ಮತ್ತೆ ಕೊರೋನಾರ್ಭಟ: ಪೂಲಿಂಗ್ ಟೆಸ್ಟ್ ಮೊರೆಹೋದ ಆರೋಗ್ಯ ಇಲಾಖೆ, ಏನಿದು ಹೊಸ ಪರೀಕ್ಷೆ?