ಕ್ವಾರೆಂಟೈನ್ ಉಲ್ಲಂಘಿಸಿದವನಿಂದ ಸೋಂಕಿತರ ಚಿಕಿತ್ಸಾವೆಚ್ಚ ವಸೂಲಿ

Kannadaprabha News   | Asianet News
Published : Apr 03, 2020, 12:24 PM IST
ಕ್ವಾರೆಂಟೈನ್ ಉಲ್ಲಂಘಿಸಿದವನಿಂದ ಸೋಂಕಿತರ ಚಿಕಿತ್ಸಾವೆಚ್ಚ ವಸೂಲಿ

ಸಾರಾಂಶ

ಕ್ವಾರಂಟೈನ್‌ ನಿಯಮವನ್ನು ಪಾಲಿಸದ ಉಡುಪಿ ಜಿಲ್ಲೆಯ ಕೊರೋನಾ ವೈರಾಣು ಸೋಂಕಿತನ ಮೇಲೆ ಕ್ರಿಮಿನಲ್‌ ಕೇಸು ದಾಖಲಿಸಿರುವ ಜಿಲ್ಲಾಡಳಿತ, ಈತನ ಸಂಪರ್ಕಕ್ಕೆ ಬಂದು ಸೋಂಕಿತರಾದವರ ಚಿಕಿತ್ಸಾ ವೆಚ್ಚವನ್ನೂ ಈ ವ್ಯಕ್ತಿಯಿಂದಲೇ ವಸೂಲಿ ಮಾಡಲು ನಿರ್ಧರಿಸಲಾಗಿದೆ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್‌ ತಿಳಿಸಿದ್ದಾರೆ.  

ಉಡುಪಿ(ಏ.03): ಕ್ವಾರಂಟೈನ್‌ ನಿಯಮವನ್ನು ಪಾಲಿಸದ ಉಡುಪಿ ಜಿಲ್ಲೆಯ ಕೊರೋನಾ ವೈರಾಣು ಸೋಂಕಿತನ ಮೇಲೆ ಕ್ರಿಮಿನಲ್‌ ಕೇಸು ದಾಖಲಿಸಿರುವ ಜಿಲ್ಲಾಡಳಿತ, ಈತನ ಸಂಪರ್ಕಕ್ಕೆ ಬಂದು ಸೋಂಕಿತರಾದವರ ಚಿಕಿತ್ಸಾ ವೆಚ್ಚವನ್ನೂ ಈ ವ್ಯಕ್ತಿಯಿಂದಲೇ ವಸೂಲಿ ಮಾಡಲು ನಿರ್ಧರಿಸಲಾಗಿದೆ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್‌ ತಿಳಿಸಿದ್ದಾರೆ.

ಕಾಪು ತಾಲೂಕಿನ ಮಣಿಪುರ ಗ್ರಾಮದ 35 ವರ್ಷದ ಈ ವ್ಯಕ್ತಿ ದುಬೈಯಿಂದ ಬಂದ ಮೇಲೆ ಮನೆಯೊಳಗೆ ಇರುವಂತೆ ಸೂಚಿಸಲಾಗಿತ್ತು. ಆದರೆ, ಆತ ಮನೆಯಿಂದ ಹೊರಗೆ ಬಂದು ಜನರ ನಡುವೆ ಇತರರಿಗೆ ಕೊರೋನಾ ಹರಡುವ ಆತಂಕವನ್ನು ಮೂಡಿಸಿದ್ದಾನೆ. ಇದು ಸಾಂಕ್ರಾಮಿಕ ರೋಗ ನಿಯಂತ್ರಣ ಕಾಯ್ದೆಯ ಉಲ್ಲಂಘನೆಯಾದ್ದರಿಂದ, ಅದರನ್ವಯ ಆತನ ಮೇಲೆ ಪ್ರಕರಣ ದಾಖಲಿಸಲಾಗಿದೆ.

'ಕೊರೋನಾ ವಿಚಾರದಲ್ಲೂ ಬಿಜೆಪಿ ರಾಜಕೀಯ ಮಾಡ್ತಿದೆ'

ಮಾ.18ರಂದು ಆತ ದುಬೈಯಿಂದ ಊರಿಗೆ ಬಂದಿದ್ದ, 21ರಂದು ಕೊರೋನ ರೋಗದ ಲಕ್ಷಣದಿಂದಾಗಿ ಆಸ್ಪತ್ರೆಗೆ ದಾಖಲಾಗಿದ್ದ. 25ರಂದು ಆತನಿಗೆ ಕೊರೋನಾ ಇರುವುದು ಪತ್ತೆಯಾಗಿದೆ. ಆತ 18ರಿಂದ 21ರ ಮಧ್ಯೆ ಹೋಮ್‌ ಕ್ವಾರಂಟೈನ್‌ ಪಾಲಿಸದೆ ಊರು ತುಂಬಾ ತಿರುಗಾಡಿ, ಕ್ರಿಕೆಟ್‌ ಆಡಿದ್ದಾನೆ.

PREV
click me!

Recommended Stories

ವೈರಸ್‌ ಕಾಟ: ಕೊರೋನಾ ತಡೆಗೆ ಸಾರ್ವಜನಿಕರ ಸಹಕಾರ ಅಗತ್ಯ, ಸಚಿವ ಪಾಟೀಲ್‌
ಮತ್ತೆ ಕೊರೋನಾರ್ಭಟ: ಪೂಲಿಂಗ್ ಟೆಸ್ಟ್ ಮೊರೆಹೋದ ಆರೋಗ್ಯ ಇಲಾಖೆ, ಏನಿದು ಹೊಸ ಪರೀಕ್ಷೆ?