ಮದ್ಯ ಪ್ರಿಯರಿಗೆ ಗುಡ್‌ನ್ಯೂಸ್: ಹೋಮ್ ಡೆಲಿವರಿಗೆ ಸರಕಾರ ಅನುಮತಿ..?

By Suvarna News  |  First Published Apr 10, 2020, 8:21 AM IST

21 ದಿನಗಳ ಲಾಕ್‌ಡೌನ್‌ ಸಂದರ್ಭ ಮದ್ಯ ವ್ಯಸನಿಗಳು ಭಾರೀ ಸಮಸ್ಯೆ ಎದುರಿಸುತ್ತಿದ್ದು ಈಗಾಗಲೇ ಹಲವು ಕಡೆಗಳಲ್ಲಿ ಕಳ್ಳಭಟ್ಟಿ ದಂಧೆ ಜೋರಾಗಿದೆ. ಹಾಗೆಯೇ ಮದ್ಯವಿಲ್ಲದೆ ಆತ್ಮಹತ್ಯೆ ಘಟನೆಗಳೂ ನಡೆಯುತ್ತಿವೆ. ಈ ಸಂದರ್ಭ ಮದ್ಯ ಹೋಂ ಡೆಲಿವರಿಗೆ ಸರ್ಕಾರ ಅನುಮತಿ ನೀಡುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.


ಕೊಲ್ಕತ್ತ(ಏ.10): 21 ದಿನಗಳ ಲಾಕ್‌ಡೌನ್‌ ಸಂದರ್ಭ ಮದ್ಯ ವ್ಯಸನಿಗಳು ಭಾರೀ ಸಮಸ್ಯೆ ಎದುರಿಸುತ್ತಿದ್ದು ಈಗಾಗಲೇ ಹಲವು ಕಡೆಗಳಲ್ಲಿ ಕಳ್ಳಭಟ್ಟಿ ದಂಧೆ ಜೋರಾಗಿದೆ. ಹಾಗೆಯೇ ಮದ್ಯವಿಲ್ಲದೆ ಆತ್ಮಹತ್ಯೆ ಘಟನೆಗಳೂ ನಡೆಯುತ್ತಿವೆ. ಈ ಸಂದರ್ಭ ಮದ್ಯ ಹೋಂ ಡೆಲಿವರಿಗೆ ಸರ್ಕಾರ ಅನುಮತಿ ನೀಡುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ಸಾಕಷ್ಟು ಮಂದಿಗೆ ಕುಡಿಯುವುದು ವ್ಯಸನವಾಗಿ ಪರಿಣಮಿಸಿದ್ದು, ಆದರೆ ಲಾಕ್‌ಡೌನ್‌ನಿಂದಾಗಿ ಯಾರೊಬ್ಬರಿಗೂ ಹನಿ ಮದ್ಯವೂ ಸಿಗುತ್ತಿಲ್ಲ. ಸಂಪೂರ್ಣ ಲಾಕ್‌ಡೌನ್ ಮಾಡಿರುವುದರಿಂದ ಒಂದಷ್ಟು ಜನ ಮದ್ಯ ಮೊದಲೇ ಸ್ಟಾಕ್ ಇಟ್ಟುಕೊಂಡಿದ್ದರು. ಲಾಕ್‌ಡೌನ್ ಘೋಷಿಸಿದ್ದರೂ ಈ ನಡುವೆ ಜನರು ಹೊರಗಡೆ ಓಡಾಡುವುದನ್ನು ಮಾತ್ರ ನಿಲ್ಲಿಸಿಲ್ಲ. ಈ ನಿಟ್ಟಿನಲ್ಲಿ ಮದ್ಯದ ಕುರಿತು ಲಾಕ್‌ಡೌನ್ ರೂಲ್ಸ್‌ಗಳನ್ನು ಸಡಿಲಗೊಳಿಸುವ ಬಗ್ಗೆ ಸರ್ಕಾರಗಳು ಚಿಂತಿಸುವಂತಾಗಿದೆ.

Latest Videos

undefined

ಕೇರಳ ಜನರ ಮದ್ಯ ಖರೀದಿ ಶಿಸ್ತಿಗೆ ಮನಸೋತ ಲಂಕಾ ಕ್ರಿಕೆಟಿಗ ಜಯವರ್ದನೆ!

ಬೇಕರಿಗಳನ್ನು, ಹೂವಿನ ಮಾರುಕಟ್ಟೆಗಳನ್ನೂ ತೆರೆದ ನಂತರ ಇದೀಗ ಮಮತಾ ಬ್ಯಾನರ್ಜಿ ಸರ್ಕಾರ ಮದ್ಯ ಮಾರಾಟ ಬಗ್ಗೆಯೂ ನಿಯಮ ಸಡಿಲಿಸುವ ಬಗ್ಗೆ ಚಿಂತನೆ ನಡೆಸಿದೆ. ಪಶ್ಚಿಮ ಬಂಗಾಳ ಅಬಕಾರಿ ಇಲಾಖೆ ಈ ಬಗ್ಗೆ ಚಿಂತಿಸಿದ್ದು ಮನೆಗಳಿಗೆ ಮದ್ಯ ಹೋಂ ಡೆಲಿವರಿ ನೀಡುವ ಬಗ್ಗೆ ಆಲೋಚಿಸಿದೆ. ಕೊಲ್ಕತ್ತಾ ಹಾಗೂ ಪಶ್ಚಿಮ ಬಂಗಾಳದ ಹಲವು ಭಾಗಗಳಿಗೆ ಮದ್ಯ ಹೋಂ ಡೆಲಿವರಿ ನೀಡುವ ಬಗ್ಗೆ ಚರ್ಚೆ ನಡೆದಿದೆ. ಹೀಗಾಗಿ ಮದ್ಯ ಪ್ರಿಯರಿಗೆ ಮದ್ಯ ನೇರವಾಗಿ ಮನೆ ಬಾಗಿಲಿನಲ್ಲೇ ದೊರೆಯುವಂತಾಗಲಿದೆ. 

ಮದ್ಯದ ಹೋಂ ಡೆಲಿವರಿ ಹೇಗೆ..?

ಮದ್ಯ ಪ್ರಿಯರು ತಮ್ಮ ಹತ್ತಿರದ ಎಂಆರ್‌ಪಿಗೆ ಕಾಲ್‌ ಮಾಡಿ ಮದ್ಯವನ್ನು ಬುಕ್ ಮಾಡಬಹುದಾಗಿದೆ. ಬೆಳಗ್ಗೆ 11 ಗಂಟೆಯಿಂದ ಮಧ್ಯಾಹ್ನ 2 ಗಂಟೆಯ ಒಳಗೆ ಆರ್ಡರ್‌ಗಳನ್ನು ತೆಗೆದುಕೊಳ್ಳಲಾಗುತ್ತದೆ. ನಂತರ ಮದ್ಯವನ್ನು ಆಯಾ ಮನೆಗಳಿಗೆ ಡೆಲಿವರಿ ಮಾಡಲಾಗುತ್ತದೆ. ಮದ್ಯವನ್ನು ಡೆಲಿವರಿ ಮಾಡುವುದಕ್ಕೆ ಪ್ರಿ ಡೆಲಿವರಿ ಬಾಯ್‌ಗೂ ಮೂರು ಲಾಕ್‌ಡೌನ್ ಪಾಸ್‌ಗಳನ್ನು ನೀಡಲಾಗುತ್ತದೆ. ಇದಕ್ಕೆ ಸ್ಥಳೀಯ ಪೊಲೀಸ್‌ ಠಾಣೆಯ ಅಧಿಕಾರಿಯ ಸಹಿಯೂ ಬೇಕಾಗಿರುತ್ತದೆ. ಸಂಜೆ 5 ಗಂಟೆಯ ಹೊತ್ತಿಗೆ ಡೆಲಿವರಿ ಲಭ್ಯವಾಗಲಿದೆ.

ವೈದ್ಯರ ಚೀಟಿ ಇದ್ರೆ ಮದ್ಯ ವಿತರಿಸುವ ನಿರ್ಧಾರ: ಕೇರಳ ಸರ್ಕಾರಕ್ಕೆ ಛೀಮಾರಿ!

ಮದ್ಯ ಪ್ರಿಯರು ಯಾವುದೇ ಕಾರಣಕ್ಕೂ ಮನೆಯಿಂದ ಹೊರಬಂದು ಅಂಗಡಿಗಳಿಗೆ ಹೋಗುವುದನ್ನು ತಡೆಯಲು ಈ ರೀತಿಯ ಕ್ರಮ ಕೈಗೊಳ್ಳುತ್ತಿದೆ ಎನ್ನಲಾಗುತ್ತದೆ. ಈ ಸಂಬಂಧ ಅಬಕಾರಿ ಇಲಾಖೆ ಸ್ಥಳೀಯ ಪೊಲೀಸ್ ಅಧಿಕಾರಿಗಳೊಂದಿಗೆ ಈಗಾಗಲೇ ಸಭೆ ನಡೆಸಿದೆ. ಹೋಂ ಡೆಲಿವರಿ ಹೊರತುಪಡಿಸಿ ಯಾವುದೇ ರೀತಿಯಲ್ಲೂ ಮದ್ಯ ಮರಾಟಕ್ಕೆ ಅವಕಾಶವಿಲ್ಲ ಎನ್ನಲಾಗಿದೆ. ಲಾಕ್‌ಡೌನ್ ನಿಯಮ ಮೀರಿದಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎನ್ನಲಾಗಿದೆ. 

"

click me!