ನೋಟಿನಲ್ಲಿ ಸಿಂಬಳ, ಮುಖ ಒರೆಸಿ, ಕೊರೋನಾ ವೈರಸ್ ಅಲ್ಲ, ಅಲ್ಲಾನ ಶಿಕ್ಷೆ ಎಂದವ ಅರಸ್ಟ್!

Suvarna News   | Asianet News
Published : Apr 02, 2020, 09:52 PM ISTUpdated : Apr 03, 2020, 10:40 AM IST
ನೋಟಿನಲ್ಲಿ ಸಿಂಬಳ, ಮುಖ ಒರೆಸಿ, ಕೊರೋನಾ ವೈರಸ್ ಅಲ್ಲ, ಅಲ್ಲಾನ ಶಿಕ್ಷೆ ಎಂದವ ಅರಸ್ಟ್!

ಸಾರಾಂಶ

ಕೊರೋನಾ ಹರಡದಂತೆ ತಡೆಯವು ಸಲುವಾಗಿ ಪ್ರಧಾನಿ ಮೋದಿ ಅತ್ಯಂತ ಕಠಿಣವಾದ ಲಾಕ್‌ಡೌನ್ ನಿರ್ಧಾರ ತೆಗೆದುಕೊಂಡಿದ್ದಾರೆ. ಸಾಮಾಜಿಕ ಅಂತರ ಕಾಯ್ದುಕೊಳ್ಳುವುದೇ ಇದಕ್ಕಿರುವ ಪರಿಹಾರ. ಆದರೆ ಕೆಲ ಕಿಡಿಗೇಡಿಗಳು ನಿಯಮ ಉಲ್ಲಂಘಿಸುವುದು ಮಾತ್ರವಲ್ಲ, ಉದ್ದಟತನದ ಜೊತೆಗೆ ಇತರರ ಜೀವಕ್ಕೂ ಕಂಟಕವಾಗುತ್ತಿದ್ದಾರೆ. ಹೀಗೆ ನೋಟಿನಲ್ಲಿ ಸಿಂಬಳ, ಹಾಗೂ ಮುಖ ಒರೆಸಿ ಇದು ಅಲ್ಲಾ ನೀಡುವ ಶಿಕ್ಷೆ ಎಂದು ವಿಡಿಯೋ ಮಾಡಿದ ಕಿಡಿಗೇಡಿ ಇದೀಗ ಕಂಬಿ ಹಿಂದೆ ಸೇರಿಕೊಂಡಿದ್ದಾನೆ.

ನಾಸಿಕ್(ಏ.02): ಕೊರೋನಾ ವೈರಸ್ ತಡೆಯಲು ಸಾಮಾಜಿಕ ಅಂತರವೇ ಮದ್ದು. ಇದಕ್ಕಾಗಿ ಎಲ್ಲರನ್ನೂ ಮನೆಯಲ್ಲಿರಲು ಮನವಿ ಮಾಡಲಾಗಿದೆ. ಇಷ್ಟೇ ಅಲ್ಲ ಸೋಂಕಿತರ ಸ್ಪರ್ಶಿಸಿದ ಸ್ಥಳ ಮುಟ್ಟಿದರೂ ಸೋಂಕು ಹರಡಲಿದೆ. ಹೀಗಿರುವಾಗ ಮಹಾರಾಷ್ಟ್ರದ ನಾಸಿಕ್‌ನಲ್ಲಿ ಕೇಡಿಗೇಡಿಯೋರ್ವ ನೋಟಿನಲ್ಲಿ ಮುಖ ಹಾಗೂ ಸಿಂಬಳ ಒರೆಸಿ, ಕೊರೋನಾ ವೈರಸ್‌ಗೆ ಮದ್ದಿಲ್ಲ, ಇದು ವೈರಸ್ ಅಲ್ಲ, ಇದು ನಿಮಗೆ ಅಲ್ಲಾ ನೀಡಿದ ಶಿಕ್ಷೆ ಎಂದು ವಿಡಿಯೋ ಮಾಡಿದ್ದ ಇದು ವೈರಲ್ ಆಗಿತ್ತು. 

"

ಬೆಂಗಳೂರು: ಕೊರೋನಾ ಜಾಗೃತಿಗೆ ತೆರಳಿದ್ದ ಆಶಾ ಕಾರ್ಯಕರ್ತೆಯ ಮೇಲೆ ಹಲ್ಲೆ!

ಈತನಿಗೆ ಸೋಂಕು ತಗುಲಿದ್ದರೆ, ಈತ ಸಿಂಬಳ ಒರೆಸಿದ ನೋಟಿನ ಮುಖಾಂತರ ಹರಡಲಿದೆ. ಈ ಕುರಿತು ನಾಸಿಕ್ ಹಾಗೂ ಮಹಾರಾಷ್ಟ್ರ ಜನರು ಆತಂಕಕ್ಕೆ ಒಳಗಾಗಿದ್ದರು. ಅಗತ್ಯ ವಸ್ತುಗಳ ಖರೀದಿಸುವಾಗಿ ಈತನ ನೋಟು ನಮ್ಮ ಕೈಸೇರಿದರೆ ಗತಿ ಏನು ಅನ್ನೋದು ಸಾರ್ವಜನಿಕರ ಪ್ರಶ್ನೆಯಾಗಿತ್ತು. ಜನರ ಆತಂಕಕ್ಕೆ ಇದೀಗ ನಾಸಿಕ್ ಪೊಲೀಸರು ಫುಲ್‌ಸ್ಟಾಪ್ ಇಟ್ಟಿದ್ದಾರೆ. ಈ ಕಿಡಿಗೇಡಿಯನ್ನು ಪೊಲೀಸರ ಬಂಧಿಸಿ ಕೇಸ್ ದಾಖಲಿಸಿದ್ದಾರೆ. 

 

ಕರ್ನಾಟಕದಲ್ಲಿ ಕೊರೋನಾಕ್ಕೆ 4ನೇ ಬಲಿ; ಜಮಾತ್ ನಲ್ಲಿ ಭಾಗವಹಿಸಿದ್ದ ವ್ಯಕ್ತಿ ಸಾವು

ಈ ಕುರಿತು ನಾಸಿಕ್ ಗ್ರಾಮೀಣ ಪೊಲೀಸ್ ತಮ್ಮ ಟ್ವಿಟರ್ ಖಾತೆಯಲ್ಲಿ ಸ್ಪಷ್ಟಪಡಿಸಿದೆ. ಈಗಾಗಲೇ ಲಾಕ್‌ಡೌನ್ ಆದೇಶ ಧಿಕ್ಕರಿಸಿ ದೆಹಲಿಯ ಮಸೀದಿಯಲ್ಲಿ ಸಭೆ ಸೇರಿದ್ದ 2,000ಕ್ಕೂ ಹೆಚ್ಚು ಮಂದಿಯಲ್ಲಿ 300 ಜನರಿಗೆ ಕೊರೋನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಇದೀಗ ಅವರ ಟ್ರಾವೆಲ್ ಹಿಸ್ಟರಿ ಮಾತ್ರ ಇನ್ನು ಪತ್ತೆಹಚ್ಚಲು ಸಾಧ್ಯವಾಗಿಲ್ಲ. ದೇಶದ ಕಾನೂನು ಗೌರವಿಸುವುದು, ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳುವ ಬದಲು ತಮ್ಮ ಬೇಳೆ ಬೇಯಿಸಿಕೊಳ್ಳು ಈ ತುರ್ತು ಸಂದರ್ಭವನ್ನು ಉಪಯೋಗಿಸುತ್ತಿರುವುದು ನಿಜಕ್ಕೂ ದುರಂತ.

"

ಕೊರೋನಾ ಸೋಂಕಿಗೆ ಮಹಾರಾಷ್ಟ್ರ ನಲುಗಿದೆ. ದೇಶದಲ್ಲಿ ಅತೀ ಹೆಚ್ಚು ಪ್ರಕರಣಗಳು ಮಹಾರಾಷ್ಟ್ರದಲ್ಲಿ ವರದಿಯಾಗಿದೆ. ಇತ್ತೀಚೆಗಷ್ಟೇ ಮುಂಬೈನ 56 ವರ್ಷದ ಧಾರಾವಿ ಸ್ಲಂ ನಿವಾಸಿ ಕೊರೋನಾ ವೈರಸ್‌ನನಿಂದ ಮೃತಪಟ್ಟಿದ್ದರು. ಇದರ ಬೆನ್ನಲ್ಲೇ ಧಾರವಿಯಲ್ಲಿರುವ ಸುಮಾರು 15 ಲಕ್ಷಕ್ಕೂ ಅಧಿಕ ಮಂದಿಗೆ ಸೋಂಕು ಹರಡದಂತೆ ತಡೆಯಲು ಬಹುತೇಕರನ್ನು ಕ್ವಾರಂಟೈನ್‌ಗೆ ಸೂಚಿಸಲಾಗಿದೆ. ಮಹಾರಾಷ್ಟ್ರ ವೈರಸ್ ಹರಡದಂತೆ ತಡೆಯಲು ಇನ್ನಿಲ್ಲದ ಪ್ರಯತ್ನ ನಡೆಸುತ್ತಿದೆ. 

PREV
click me!

Recommended Stories

ಅಕ್ಷಯ್ ಕುಮಾರ್ ರಾಮಸೇತು ಚಿತ್ರದ 45 ಕಿರಿಯ ಕಲಾವಿದರಿಗೂ ಕೊರೊನಾ ಪಾಸಿಟಿವ್!
ಕೊರೋನಾ ಅಟ್ಟಹಾಸ; 3 ರಾಜ್ಯಗಳಿಗೆ ತಜ್ಞರ ತಂಡ ಕಳುಹಿಸಿದ ಮೋದಿ!