ಕೊರೋನಾ ವೈರಸ್ ವಿರುದ್ಧ ಭಾರತದ ಹೋರಾಟಕ್ಕೆ 100 ಕೋಟಿ ರೂ ನೀಡಿದ ಟಿಕ್‌ಟಾಕ್

By Suvarna NewsFirst Published Apr 2, 2020, 6:30 PM IST
Highlights

ದೇಶದಲ್ಲಿ ಕೊರೋನಾ ವೈರಸ್ ಹತೋಟಿಗೆ ಸರ್ಕಾರ ಅವಿರತ ಪ್ರಯತ್ನ ಮಾಡುತ್ತಿದೆ. ಇದರ ನಡುವೆ ಸಂಸ್ಥೆಗಳು ಸೇರಿದಂತೆ ಹಲವರು ಸರ್ಕಾರದ ಹೋರಾಟಕ್ಕೆ ಕೈಜೋಡಿಸಿದೆ. ಇದೀಗ  ಟಿ‌ಕ್‌ಟಾಕ್ ವಿಡಿಯೋ ನೆಟ್‌‌ವರ್ಕ್ ಆ್ಯಪ್ ಬರೋಬ್ಬರಿ 100 ಕೋಟಿ ರೂಪಾಯಿ ನೀಡಿದೆ.

ನವದೆಹಲಿ(ಏ.02): ಜನಪ್ರಿಯ ಟಿಕ್‌ಟಾಕ್ ವಿಡಿಯೋ ಆ್ಯಪ್ ನೆಟ್‌ವರ್ಕ್ ಕೊರೋನಾ ವೈರಸ್ ವಿರುದ್ಧದ ಹೋರಾಟಕ್ಕೆ ಸಾಥ್ ನೀಡಿದೆ. ಭಾರತೀಯ ಮೆಡಿಕಲ್ ಸಿಬ್ಬಂದಿಗಳ ಸಲಕರಣೆಗೆ 100 ಕೋಟಿ ರೂಪಾಯಿ ನೀಡಿದೆ. ಆಸ್ಪತ್ರೆ ಸಿಬ್ಬಂದಿಗಳಿಗೆ 4 ಲಕ್ಷ ಪ್ರೊಟೆಕ್ಟೀವ್ ಸ್ಯೂಟ್ಸ್, ಹಾಗೂ 2 ಲಕ್ಷ ಮಾಸ್ಕ್ ಖರೀದಿಗೆ ಹಣ ನೀಡಿದೆ. ಈ ಮೂಲಕ ಕೊರೋನಾ ವೈರಸ್ ತಡೆಯಲು ಹೋರಾಡುತ್ತಿರುವ ವೈದ್ಯರು ಆಸ್ಪತ್ರೆ ಸಿಬ್ಬಂದಿಗಳ ಜೊತೆ ಟಿಕ್‌ಟಾಕ್ ಕೈಜೋಡಿಸಿದೆ.

ಕೊರೋನಾ ಮಣಿಸಲು ಕೇಂದ್ರದ ದಿಟ್ಟ ಹೆಜ್ಜೆಗಳು 1,2,3,4.

ಕೊರೋನಾ ವೈರಸ್ ಹರಡುವುದನ್ನು ತಡೆಯಲು ಭಾರತೀಯ ವೈದ್ಯರು ಹಾಗೂ ಸಿಬ್ಬಂದಿಗಳು ಯೋಧರಂತೆ ಕಾರ್ಯನಿರ್ವಹಿಸುತ್ತಿದ್ದಾರೆ. ಇವರ ಸುರಕ್ಷತೆಯೂ ಅಷ್ಟೇ ಮುಖ್ಯ. ಸೋಂಕಿತರ ಜೊತೆ ನೇರ ಸಂಪರ್ಕದಲ್ಲಿರುವ ವೈದ್ಯಕೀಯ ಸಿಬ್ಬಂದಿಗಳ ಆರೋಗ್ಯದ ಅಷ್ಟೇ ಮುಖ್ಯ. ಹೀಗಾಗಿ ಟಿಕ್‌ಟಾಕ್ ಭಾರತೀಯ ವೈದ್ಯಕೀಯ ಸಿಬ್ಬಂದಿಗೆ ಎಲ್ಲಾ ರೀತಿಯ ನೆರವು ನೀಡಲಿದೆ ಎಂದಿದೆ.

ಭಾರತದ ಪ್ರತಿಯೊಬ್ಬ ಪ್ರಜೆಯ ಆರೋಗ್ಯ ನಮಗೆ ಮುಖ್ಯವಾಗಿದೆ. ಈ ನಿಟ್ಟಿನಲ್ಲಿ ನಾವು ಭಾರತ ಸರ್ಕಾರಕ್ಕೆ ಎಲ್ಲಾ ರೀತಿಯ ನೆರವು ನೀಡಲು ಸಿದ್ದ. ನಾವೆಲ್ಲಾ ಜೊತೆಯಾಗಿ ಕೊರೋನಾ ವೈರಸ್ ವಿರುದ್ದದ ಹೋರಾಡೋಣ ಎಂದು ಟಿಕ್‌ಟಾಕ್ ಸಂಸ್ಥೆ ಹೇಳಿದೆ. 

ಭಾರತದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 1000 ಗಡಿ ದಾಟಿದೆ. ಸೋಂಕಿತರ ಚಿಕಿತ್ಸೆಗಾಗಿ ಸರ್ಕಾರ ಅವಿರತ ಪ್ರಯತ್ನ ಮಾಡುತ್ತಿದೆ. ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಭಾರತವನ್ನ 21 ದಿನಗಳ ಕಾಲ ಲಾಕ್‌ಡೌನ್ ಮಾಡಲಾಗಿದೆ.

click me!