
ಹೈದರಾಬಾದ್(ಏ.10): ಐಐಟಿ ಹೈದಾರಾಬಾದ್ ತಮಗೆ ಅಗತ್ಯವಿರುವ ಸ್ಯಾನಿಟೈಸರ್ ತಯಾರಿಸುವುದು ಮಾತ್ರವಲ್ಲದೆ ಪ್ರತಿದಿನ 100 ಲೀಟರ್ ಸ್ಯಾನಿಟೈಸರ್ ಸಂಗಾರೆಡ್ಡಿ ಜಿಲ್ಲಾಡಳಿತಕ್ಕೆ ಕಳುಹಿಸಿಕೊಡುತ್ತಿದೆ.
ಬಯೋಮೆಡಿಕಲ್ ಎಂಜಿನಿಯರಿಂಗ್ ವಿಭಾಗದ ಅಸೋಸಿಯೇಟ್ ಪ್ರೋಫೆಸರ್ ಆಗಿರುವ ಡಾ. ಜ್ಯೋತ್ಸನೆಂಡು ಗಿರಿ ಅವರ ನೇತೃತ್ವದ ಸಂಶೋಧನಾ ತಂಡ ಸ್ಯಾನಿಟೈಸರ್ ತಯಾರಿಸುತ್ತಿದೆ. ನಂತರ ಸಂಗಾರೆಡ್ಡಿ ಕಲೆಕ್ಟರೇಟ್‌ಗೆ ಕಳುಹಿಸಲಾಗುತ್ತಿದೆ. ನಂತರದಲ್ಲಿ ಸ್ತಳೀಯ ಜನರಿಗೆ ಅದನ್ನು ವಿತರಿಸಲಾಗುತ್ತಿದೆ.
ಕಷ್ಟಪಟ್ಟು ಉಳಿಸಿದ್ದ 10 ಲಕ್ಷ ಪಿಎಂ ಕೊರೋನಾ ನಿಧಿಗೆ ನೀಡಿದ ವೃದ್ಧೆ
ಏ.04ನೇ ತಾರೀಕಿನಿಂದಲೇ ಐಐಟಿ ಈ ಕೆಲಸ ಮಾಡುತ್ತಿದ್ದು, ಕೊರೋನಾ ವಿರುದ್ಧ ಹೋರಾಡಲು ಸ್ಥಳೀಯ ಜನರಿಗೆ ನೆರವಾಗುತ್ತಿದೆ. ಈ ಬಗ್ಗೆ ಮಾತನಾಡಿದ ಐಐಟಿ ಹೈದರಾಬಾದ್‌ನ ನಿರ್ದೇಶಕ ಪ್ರೊಫೆಸರ್ ಬಿಎಸ್ ಮೂರ್ತಿ, ಕೊರೋನಾ ವೈರಸ್ ಭೀತಿಯಲ್ಲಿರುವ ಜನರಿಗೆ ಏನಾದರೂ ನೆರವು ನೀಡುವ ನಿಟ್ಟಿನಲ್ಲಿ ಐಐಟಿ ಕೆಲಸ ಮಾಡುತ್ತಿದೆ.
ಕೊರೋನಾ ವೈರಸ್ ವಿರುದ್ಧ ಭಾರತದ ಹೋರಾಟಕ್ಕೆ 100 ಕೋಟಿ ರೂ ನೀಡಿದ ಟಿಕ್‌ಟಾಕ್
ಸಂಸ್ಥೆಯ ಸಂಶೋಧನೆ ಮೂಲಕ ಜನರಿಗೆ ನೆರವಾಗುತ್ತಿದೆ. ಆರಂಭದಲ್ಲಿ ಸಂಸ್ಥೆಯ ಬಳಕೆಗಾಗಿ ಹ್ಯಾಂಡ್ ಸ್ಯಾನಿಟೈಸರ್ ತಯಾರಿಸಲಾಗುತ್ತಿತ್ತು. ನಂತರದಲ್ಲಿ ಸಾರ್ವಜನಿಕರಿಗೂ ನೆರವಾಗುವ ನಿಟ್ಟಿನಲ್ಲಿ ಹೆಚ್ಚು ಸ್ಯಾನಿಟೈಸರ್ ತಯಾರಿಸಲಾಗುತ್ತಿದ್ದು, ಪ್ರತಿದಿನ 100ನಷ್ಟು ಸ್ಯಾನಿಟೈಸರ್ ಸಂಗಾರೆಡ್ಡಿ ಜಿಲ್ಲಾಧಿಕಾರಿ ಕಚೇರಿಗೆ ನೀಡಲಾಗುತ್ತಿದೆ ಎಂದಿದ್ದಾರೆ.
"