ಕೊರೋನಾ ಭೀತಿ: ಒಡಿಶಾದಲ್ಲಿ 30ರವರೆಗೆ ಲಾಕ್‌ಡೌನ್‌ ವಿಸ್ತರಣೆ

By Kannadaprabha NewsFirst Published Apr 10, 2020, 9:44 AM IST
Highlights

ಕೊರೋನಾ ವೈರಸ್ ಭೀತಿಯಿಂದಾಗಿ ಈಗಾಗಲೇ ದೇಶಾದ್ಯಂತ ಏಪ್ರಿಲ್ 14ರವರೆಗೆ ಲಾಕ್‌ಡೌನ್ ವಿಧಿಸಲಾಗಿದೆ. ಹೀಗಿರುವಾಗಲೇ ಒಡಿಶಾ ಸರ್ಕಾರ ಲಾಕ್‌ಡೌನ್‌ ಅನ್ನು ರಾಜ್ಯಾದ್ಯಂತ ಏಪ್ರಿಲ್ 30ರವರೆಗೆ ವಿಸ್ತರಿಸಿದೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ.

ಭುವನೇಶ್ವರ(ಏ.10): ಕೊರೋನಾ ವೈರಸ್‌ ಹರಡುವಿಕೆ ನಿಗ್ರಹಿಸಲು ಒಡಿಶಾ ಸರ್ಕಾರ ಏಪ್ರಿಲ್‌ 30ರವರೆಗೆ ಲಾಕ್‌ಡೌನ್‌ ವಿಸ್ತರಿಸುವ ಘೋಷಣೆ ಮಾಡಿದೆ. ಹೀಗಾಗಿ ಕೇಂದ್ರ ಸರ್ಕಾರದ ನಿರ್ಧಾರಕ್ಕೆ ಕಾಯದೆ ಲಾಕ್‌ಡೌನ್‌ ವಿಸ್ತರಣೆ ನಿರ್ಧಾರ ಮಾಡಿದ ಮೊದಲ ರಾಜ್ಯ ಎನ್ನಿಸಿಕೊಂಡಿದೆ.

ಲಾಕ್‌ಡೌನ್: ಬಿಡುವಿನ ಸಮಯದಲ್ಲಿ ಪ್ರಿಯಾಂಕ ಮಕ್ಕಳಿಗೆ ಏನ್ ಹೇಳ್ಕೊಡ್ತಿದ್ದಾರೆ ನೋಡಿ!

ಗುರುವಾರ ಸಚಿವರ ಜತೆ ವಿಡಿಯೋ ಕಾನ್ಫರೆನ್ಸ್‌ ನಡೆಸಿದ ಮುಖ್ಯಮಂತ್ರಿ ನವೀನ್‌ ಪಟ್ನಾಯಕ್‌ ಈ ನಿರ್ಧಾರ ಪ್ರಕಟಿಸಿದರು. ಇದೇ ವೇಳೆ, ಜೂನ್‌ 17ರವರೆಗೆ ಶಾಲಾ- ಕಾಲೇಜುಗಳು ತೆರೆಯುವುದಿಲ್ಲ ಎಂದು ಪ್ರಕಟಿಸಿದರು.

ಈ ನಡುವೆ, ಕೇಂದ್ರ ಸರ್ಕಾರ ರೈಲು ಹಾಗೂ ವಿಮಾನ ಸೇವೆಗಳನ್ನು ಏ.30ರವರೆಗೆ ಆರಂಭಿಸಬಾರದು ಎಂದು ಆಗ್ರಹಿಸಿದ ಪಟ್ನಾಯಕ್‌, ದೇಶಾದ್ಯಂತ ಮಾಸಾಂತ್ಯದ ತನಕ ಲಾಕ್‌ಡೌನ್‌ ವಿಸ್ತರಿಸಿ ಎಂಬ ಶಿಫಾರಸನ್ನು ಕೇಂದ್ರಕ್ಕೆ ಕಳಿಸಲಾಗುವುದು ಎಂದರು. ಏ.14ಕ್ಕೆ ಮೊದಲ ಹಂತದ ಲಾಕ್‌ಡೌನ್‌ ಮುಗಿಯಬೇಕಿತ್ತು. ಒಡಿಶಾದಲ್ಲಿ ಈವರೆಗೆ 44 ಕೊರೋನಾ ಪ್ರಕರಣಗಳು ದೃಢಪಟ್ಟಿವೆ.

click me!