ಕಷ್ಟಪಟ್ಟು ಉಳಿಸಿದ್ದ 10 ಲಕ್ಷ ಪಿಎಂ ಕೊರೋನಾ ನಿಧಿಗೆ ನೀಡಿದ ವೃದ್ಧೆ

Suvarna News   | Asianet News
Published : Apr 10, 2020, 11:07 AM ISTUpdated : Apr 10, 2020, 12:39 PM IST
ಕಷ್ಟಪಟ್ಟು ಉಳಿಸಿದ್ದ 10 ಲಕ್ಷ ಪಿಎಂ ಕೊರೋನಾ ನಿಧಿಗೆ ನೀಡಿದ ವೃದ್ಧೆ

ಸಾರಾಂಶ

ದೇಶದ ಶ್ರೀಮಂತರು, ಉದ್ಯಮಿಗಳು, ಸೆಲೆಬ್ರಿಟಿಗಳು ಈಗಾಗಲೇ ಪಿಎಂ ಕೇರ್ಸ್‌ಗೆ ಹಣ ನೀಡಿ ಕೊರೋನಾ ವಿರುದ್ಧದ ಸಮರಕ್ಕೆ ಆರ್ಥಿಕವಾಗಿ ನೆರವು ನೀಡಿದ್ದಾರೆ. ಇದೀಗ ತನ್ನ ಜೀವಮಾನದ ಉಳಿತಾಯವನ್ನೆಲ್ಲ 60ರ ವೃದ್ಧೆಯೊಬ್ಬರು ಪಿಎಂ ಕೇರ್ಸ್‌ಗೆ ನೀಡಿದ್ದಾರೆ.  

ಡೆಹಾರಡೂನ್(ಏ.10): ದೇಶದ ಶ್ರೀಮಂತರು, ಉದ್ಯಮಿಗಳು, ಸೆಲೆಬ್ರಿಟಿಗಳು ಈಗಾಗಲೇ ಪಿಎಂ ಕೇರ್ಸ್‌ಗೆ ಹಣ ನೀಡಿ ಕೊರೋನಾ ವಿರುದ್ಧದ ಸಮರಕ್ಕೆ ಆರ್ಥಿಕವಾಗಿ ನೆರವು ನೀಡಿದ್ದಾರೆ. ಇದೀಗ ತನ್ನ ಜೀವಮಾನದ ಉಳಿತಾಯವನ್ನೆಲ್ಲ 60ರ ವೃದ್ಧೆಯೊಬ್ಬರು ಪಿಎಂ ಕೇರ್ಸ್‌ಗೆ ನೀಡಿದ್ದಾರೆ.

ಚಮೋಲಿಯ ಗೌಚರ್‌ನ ದೇವಕಿ ಭಂಡಾರಿ ಸಮಾಜಿಕ ಕಾರ್ಯಕರ್ತೆಯೂ ಹೌದು. ನನಗೆ ಮಕ್ಕಳಿಲ್ಲ. ನಾನು ಸರಳವಾಗಿ ಬದುಕುತ್ತೇನೆ. ಹಾಗಾಗಿ ನನ್ನ ಉಳಿತಾಯ ಕೊರೋನಾದಿಂದ ತತ್ತರಿಸಿದ ಜನರಿಗೆ ನೆರವಾಗಲಿ ಎಂದು ಹೇಳಿದ್ದಾರೆ.

ಲಾಕ್‌ಡೌನ್: 200 ಕುಟುಂಬಗಳನ್ನು ದತ್ತು ಪಡೆದ ಬಾಲಿವುಡ್ ನಟಿ

ನನ್ನ ಪೆನ್ಶನ್ ಹಾಗೂ ಉಳಿತಾಯ ಸೇರಿ ಸುಮಾರು 10 ಲಕ್ಷ ಎಫ್‌ಡಿ ಇಟ್ಟಿದ್ದೆ. ನಾನು ಸಣ್ಣ ಬಾಡಿಗೆ ಮನೆಯಲ್ಲಿ ವಾಸವಿದ್ದು, ನನಗೆ ಅಂತಹ ದೊಡ್ಡ ಖರ್ಚೇನೂ ಇಲ್ಲ. ಹಾಗಾಗಿ ಕೊರೋನಾ ವೈರಸ್‌ ವಿರುದ್ಧದ ಹೋರಾಟಕ್ಕೆ ಈ ಹಣ ಉಪಯೋಗವಾಗಬಹುದು ಎಂದಿದ್ದಾರೆ.

ಕೊರೋನಾ ವೈರಸ್ ವಿರುದ್ಧ ಭಾರತದ ಹೋರಾಟಕ್ಕೆ 100 ಕೋಟಿ ರೂ ನೀಡಿದ ಟಿಕ್‌ಟಾಕ್

ಸಿಎಂ ತ್ರಿವೇಂದ್ರ ಸಿಂಗ್ ದೇವಕಿ ಅವರ ಕಾರ್ಯವನ್ನು ಶ್ಲಾಘಿಸಿದ್ದಾರೆ. ಭಾರತದಲ್ಲಿ ಪ್ರಸಿದ್ಧ ರಾಜರ ದಾನ ಧರ್ಮಗಳ ಬಗ್ಗೆ ನಾವು ಕೇಳಿದ್ದೇವೆ. ಆದರೆ ಇಂದು ನಾವದನ್ನು ವ್ಯಕ್ತಿ ರೂಪದಲ್ಲಿ ಕಾಣುತ್ತಿದ್ದೇವೆ. ದೇವಕಿ ಅವರು ನಿಸ್ವಾರ್ಥವಾಗಿ ತಮ್ಮೆಲ್ಲ ಉಳಿತಾಯವನ್ನು ದೇಶಕ್ಕೆ ನೀಡಿದ್ದಾರೆ. ಅವರು ದೇಶವನ್ನೇ ತನ್ನ ಕುಟುಂಬ ಎಂದು ಭಾವಿಸಿದ್ದಾರೆ ಎಂದಿದ್ದಾರೆ. ಉತ್ತರಾಖಂಡ್‌ನಲ್ಲಿ 35 ಕೊರೋನಾ ಪ್ರಕರಣಗಳು ಕಾಣಿಸಿಕೊಂಡಿವೆ. ಇವರಲ್ಲಿ 26 ಜನರು ತಬ್ಲಿಘಿ ಜಮಾತ್‌ನ ಹಿಂಬಾಲಕರು.

ಕೋವಿಡ್-19 ಪರಿಹಾರ ಕಾರ್ಯಕ್ಕೆ ಇನ್ಫೋಸಿಸ್ ಫೌಂಡೇಷನ್‌ನಿಂದ 100 ಕೋಟಿ ರೂಪಾಯಿ ದೇಣಿಗೆ

"

PREV
click me!

Recommended Stories

ಅಕ್ಷಯ್ ಕುಮಾರ್ ರಾಮಸೇತು ಚಿತ್ರದ 45 ಕಿರಿಯ ಕಲಾವಿದರಿಗೂ ಕೊರೊನಾ ಪಾಸಿಟಿವ್!
ಕೊರೋನಾ ಅಟ್ಟಹಾಸ; 3 ರಾಜ್ಯಗಳಿಗೆ ತಜ್ಞರ ತಂಡ ಕಳುಹಿಸಿದ ಮೋದಿ!