400 ತಬ್ಲೀಘಿ ಸದಸ್ಯರಿಗೆ ಕೊರೋನಾ ಸೋಂಕು

Kannadaprabha News   | Asianet News
Published : Apr 03, 2020, 11:15 AM IST
400 ತಬ್ಲೀಘಿ ಸದಸ್ಯರಿಗೆ ಕೊರೋನಾ ಸೋಂಕು

ಸಾರಾಂಶ

ನವದೆಹಲಿಯ ತಬ್ಲೀಘಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದವರ ಪೈಕಿ ಕನಿಷ್ಠ 400 ಮಂದಿಗೆ ಸೋಂಕು ತಗುಲಿರುವ ವಿಚಾರವನ್ನು ಸರ್ಕಾರ ಖಚಿತಪಡಿಸಿದೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ.

ನವದೆಹಲಿ(ಏ.03): ದಿಲ್ಲಿಯ ನಿಜಾಮುದ್ದೀನ್‌ ಮಸೀದಿಯಲ್ಲಿ ಕೊರೋನಾ ಲಾಕ್‌ಡೌನ್‌ ನಡುವೆ ಧರ್ಮಸಭೆಗೆ ಬಂದಿದ್ದ 9 ಸಾವಿರ ತಬ್ಲೀಘಿ ಜಮಾತ್‌ ಸಂಘಟನೆಯ ಸದಸ್ಯರು ಹಾಗೂ ಅವರ ಪ್ರಾಥಮಿಕ ಸಂಪರ್ಕಕ್ಕೆ ಬಂದವರನ್ನು ಗುರುತಿಸಿ ಕ್ವಾರಂಟೈನ್‌ನಲ್ಲಿ (ಪ್ರತ್ಯೇಕ ವಾಸದಲ್ಲಿ) ಇರಿಸಲಾಗಿದೆ ಎಂದು ಕೇಂದ್ರ ಗೃಹ ಸಚಿವಾಲಯ ಹೇಳಿದೆ. ಇದೇ ವೇಳೆ ತಬ್ಲೀಘಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದವರ ಪೈಕಿ ಕನಿಷ್ಠ 400 ಜನರಿಗೆ ಸೋಂಕು ತಗುಲಿದೆ ಎಂದು ಸರ್ಕಾರ ತಿಳಿಸಿದೆ.

ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವಾಲಯದ ಜಂಟಿ ಕಾರ‍್ಯದರ್ಶಿ ಪುಣ್ಯಸಲಿಲ ಶ್ರೀವಾಸ್ತವ ಈ ವಿಷಯ ತಿಳಿಸಿದರು. ‘ದಿಲ್ಲಿಯೊಂದರಲ್ಲೇ 250 ವಿದೇಶೀಯರು ಸೇರಿ 2000 ಜಮಾತ್‌ ಕಾರ್ಯಕರ್ತರನ್ನು ಗುರುತಿಸಲಾಗಿದೆ. ಇವರಲ್ಲಿ 1804 ಜನರನ್ನು ಕ್ವಾರಂಟೈನ್‌ ಕೇಂದ್ರಗಳಿಗೆ ರವಾನಿಸಲಾಗಿದೆ ಹಾಗೂ 334 ಜನರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ’ ಎಂದರು.

ಬೀದರ್‌: ಜಮಾತ್‌ಗೆ ಹೋಗಿ ಬಂದವರ ಪೈಕಿ 11 ಮಂದಿಗೆ ಕೊರೋನಾ ಸೋಂಕು

‘ಇನ್ನು ದೇಶದ ವಿವಿಧ ಭಾಗಗಳಲ್ಲಿ ಗುರುತಿಸಿ ಕ್ವಾರಂಟೈನ್‌ನಲ್ಲಿ ಇರಿಸಲಾಗಿರುವ 9000 ಜಮಾತ್‌ ಕಾರ‍್ಯಕರ್ತರು ಹಾಗೂ ಅವರ ಪ್ರಾಥಮಿಕ ಸಂಪರ್ಕಗಳಲ್ಲಿ 1,306 ವಿದೇಶೀಯರಿದ್ದಾರೆ’ ಎಂದು ಅವರು ವಿವರಿಸಿದರು.

ಲಾಕ್‌ಡೌನ್‌ ಉಲ್ಲಂಘನೆ ಶಿಕ್ಷಾರ್ಹ:

ಈ ನಡುವೆ ವಿವಿಧ ರಾಜ್ಯಗಳಿಗೆ ಸುತ್ತೋಲೆಯನ್ನು ಕೇಂದ್ರ ಗೃಹ ಸಚಿವಾಲಯ ರವಾನಿಸಿದೆ. ಲಾಕ್‌ಡೌನ್‌ ಉಲ್ಲಂಘನೆ ಐಪಿಸಿ ಹಾಗೂ ವಿಕೋಪ ನಿರ್ವಹಣೆ ಕಾಯಿದೆ ಪ್ರಕಾರ ಶಿಕ್ಷಾರ್ಹ ಎಂದು ತಿಳಿಸಲಾಗಿದೆ.

PREV
click me!

Recommended Stories

ಅಕ್ಷಯ್ ಕುಮಾರ್ ರಾಮಸೇತು ಚಿತ್ರದ 45 ಕಿರಿಯ ಕಲಾವಿದರಿಗೂ ಕೊರೊನಾ ಪಾಸಿಟಿವ್!
ಕೊರೋನಾ ಅಟ್ಟಹಾಸ; 3 ರಾಜ್ಯಗಳಿಗೆ ತಜ್ಞರ ತಂಡ ಕಳುಹಿಸಿದ ಮೋದಿ!