ಕೇಂದ್ರಾಡಳಿತ ಪ್ರದೇಶವಾಗಲಿದೆಯಾ ಕಾಸರಗೋಡು..?

By Kannadaprabha NewsFirst Published Apr 1, 2020, 7:30 AM IST
Highlights

ಕೊರೋನಾ ಸೋಂಕು ಹರಡದಂತೆ ಈ ಮೊದಲು ಗಡಿ ಪ್ರದೇಶ ಬಂದ್‌ ಮಾಡುವುದಾಗಿ ಹೇಳಿ ಈಗ ಉಲ್ಟಾಹೊಡೆಯುತ್ತಿರುವ ಕೇರಳ ಸಿಎಂ ನಿಲುವು ವಿರೋಧಿಸಿ ಈಗ ಗಡಿನಾಡ ಯುವಜನತೆ, ಕೇರಳ ಸರ್ಕಾರಕ್ಕೆ ಬೇಡವಾದ ಕಾಸರಗೋಡನ್ನು ಕೇಂದ್ರಾಡಳಿತ ಪ್ರದೇಶವಾಗಿ ಘೋಷಿಸುವಂತೆ ಜಾಲತಾಣದಲ್ಲಿ ಇನ್ನೊಂದು ಅಭಿಯಾನ ಆರಂಭಿಸಿದ್ದಾರೆ.

ಮಂಗಳೂರು(ಎ.01): ಕೊರೋನಾ ಸೋಂಕು ಹರಡದಂತೆ ಈ ಮೊದಲು ಗಡಿ ಪ್ರದೇಶ ಬಂದ್‌ ಮಾಡುವುದಾಗಿ ಹೇಳಿ ಈಗ ಉಲ್ಟಾಹೊಡೆಯುತ್ತಿರುವ ಕೇರಳ ಸಿಎಂ ನಿಲುವು ವಿರೋಧಿಸಿ ಈಗ ಗಡಿನಾಡ ಯುವಜನತೆ, ಕೇರಳ ಸರ್ಕಾರಕ್ಕೆ ಬೇಡವಾದ ಕಾಸರಗೋಡನ್ನು ಕೇಂದ್ರಾಡಳಿತ ಪ್ರದೇಶವಾಗಿ ಘೋಷಿಸುವಂತೆ ಜಾಲತಾಣದಲ್ಲಿ ಇನ್ನೊಂದು ಅಭಿಯಾನ ಆರಂಭಿಸಿದ್ದಾರೆ.

ಭಾನುವಾರವಷ್ಟೆಮಂಗಳೂರು ಆಸ್ಪತ್ರೆ ಬೇಡ ಎಂದು ಕಾಸರಗೋಡಿನ ಕೆಲವರು ಆರಂಭಿಸಿದ ಅಭಿಯಾನಕ್ಕೆ ಪ್ರತಿಯಾಗಿ ಈ ಅಭಿಯಾನ ಆರಂಭವಾಗಿದೆ. ಕೇರಳದಲ್ಲಿ ವ್ಯಾಪಕವಾಗಿ ಕಾಣಿಸಿದ ಕೊರೋನಾ ಸೋಂಕು ಹಿನ್ನೆಲೆಯಲ್ಲಿ ಕರ್ನಾಟಕ-ಕೇರಳ ಗಡಿ ರಸ್ತೆಗಳನ್ನು ಬಂದ್‌ ಮಾಡುವ ಬಗ್ಗೆ ಉಭಯ ಜಿಲ್ಲೆಗಳ ಜಿಲ್ಲಾಡಳಿತ ಕ್ರಮ ಕೈಗೊಂಡಿತ್ತು.

ದೇಶದಲ್ಲಿ ಕೊರೋನಾಕ್ಕೆ ಮತ್ತೆ 3 ಬಲಿ, ಹೊಸದಾಗಿ 220 ಜನರಿಗೆ ಸೋಂಕು!

ಈ ಕುರಿತು ಕೇರಳ ಸಿಎಂ ಮಾ.23ರಂದು ಟ್ವೀಟ್‌ ಕೂಡ ಮಾಡಿದ್ದರು. ಅದರಂತೆ ಕರ್ನಾಟಕದಿಂದ ಕೇರಳಕ್ಕೆ ಬಾರದಂತೆ ಗಡಿ ರಸ್ತೆಗಳನ್ನು ಬಂದ್‌ ಕೂಡ ಮಾಡಿದ್ದರು. ಬಳಿಕ ಕರ್ನಾಟಕವೂ ಕೇರಳ ಸಂಪರ್ಕದ ಎಲ್ಲ 17 ರಸ್ತೆಗಳನ್ನು ಬಂದ್‌ ಮಾಡಿತ್ತು. ಇದರಿಂದಾಗಿ ತುರ್ತು ಚಿಕಿತ್ಸೆಗೆ ತೆರಳುವವರಿಗೆ ತೊಂದರೆಯಾಗುತ್ತದೆ ಎಂದು ಕ್ಯಾತೆ ತೆಗೆದ ಕೇರಳ ಸರ್ಕಾರ, ಗಡಿ ರಸ್ತೆಗಳನ್ನು ತೆರವುಗೊಳಿಸುವಂತೆ ಸ್ವಯಂ ಹಿತಾಸಕ್ತಿಯಿಂದ ಕರ್ನಾಟಕ ಹಾಗೂ ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯಿತು. ಇದೇ ವೇಳೆ ಕೆಲವು ಮಂದಿ ಗಡಿನಾಡಿನ ಕೆಲವು ನಾಗರಿಕರು ಮಂಗಳೂರು ಆಸ್ಪತ್ರೆ ಬಹಿಷ್ಕರಿಸುವಂತೆ ಜಾಲತಾಣದಲ್ಲಿ ಅಭಿಯಾನ ಶುರು ಮಾಡಿದ್ದರು.

200ಕ್ಕೂ ಹೆಚ್ಚು ದೇಶಕ್ಕೆ ಕೊರೋನಾ: 8 ಲಕ್ಷ ಜನಕ್ಕೆ ವೈರಸ್‌, 1.75 ಲಕ್ಷ ಗುಣಮುಖ!

ಈ ಮಧ್ಯೆ ಮಂಗಳೂರು ಹಾಗೂ ಮಡಿಕೇರಿ ಸಂಪರ್ಕಿಸುವ ಗಡಿ ಪ್ರದೇಶದ ರಸ್ತೆ ತೆರವುಗೊಳಿಸುವಂತೆ ಆಗ್ರಹಿಸಿ ಸೋಮವಾರ ಕಾಸರಗೋಡು ಸಂಸದ ಹಾಗೂ ಕೇರಳ ಸಿಎಂ ಸುಪ್ರೀಂ ಕೋರ್ಟ್‌ ಬಾಗಿಲು ತಟ್ಟಿದ್ದಾರೆ. ಇದರಿಂದ ಸಿಟ್ಟಿಗೆದ್ದಿರುವ ಕಾಸರಗೋಡಿನ ನಾಗರಿಕರು ಕಾಸರಗೋಡನ್ನೇ ಕೇಂದ್ರಾಡಳಿತ ಪ್ರದೇಶವಾಗಿ ಘೋಷಿಸುವಂತೆ ಅಭಿಯಾನ ಆರಂಭಿಸಿದ್ದಾರೆ.

ಅಭಿಯಾನದ ಒತ್ತಾಯ ಏನು?

ಇಡೀ ದೇಶವನ್ನು ಕಾಡುತ್ತಿರುವ ಕೊರೋನಾ ವೈರಸ್‌ ಕಾಸರಗೋಡಿನಲ್ಲಿ ವ್ಯಾಪಕವಾಗಿ ಹರಡುತ್ತಿದೆ. ರಾಜ್ಯ ಸರ್ಕಾರದ ನಿರ್ಲಕ್ಷ್ಯದಿಂದ ಹೀಗಾಗುತ್ತಿದೆ. ಹಾಗಾಗಿ ಕಾಸರಗೋಡು ಜಿಲ್ಲೆಯನ್ನು ಕೇಂದ್ರಾಡಳಿತ ಪ್ರದೇಶವಾಗಿ ಘೋಷಿಸಲು ಅಲ್ಲಿನ ಯುವ ಸಮುದಾಯ ಸಾಮಾಜಿಕ ಹೋರಾಟಕ್ಕೆ ಮುಂದಾಗಿದೆ.

ಹ್ಯಾಷ್‌ ಟ್ಯಾಗ್‌ ಮೂಲಕ ಕೇಂದ್ರದ ಗಮನ ಸೆಳೆಯಲು ಹೊರಟಿದೆ. ಉತ್ತಮ ಶಿಕ್ಷಣ ವ್ಯವಸ್ಥೆಗಳಿಲ್ಲದೆ ಇಲ್ಲಿನ ವಿದ್ಯಾರ್ಥಿಗಳು ಮಂಗಳೂರಿಗೆ ಪ್ರತಿನಿತ್ಯ 30 ಕಿ.ಮೀ. ಪ್ರಯಾಣಿಸಬೇಕಿದೆ. ಆರೋಗ್ಯದ ದೃಷ್ಟಿಯಿಂದ ನೋಡುವುದಾದರೆ ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತಿದೆ.

ಕಲಬುರಗಿಯಲ್ಲಿ ಮತ್ತೆ ಕೊರೋನಾ ಹಾವಳಿ, ರಾಜ್ಯದಲ್ಲಿ 100ರ ಗಡಿ ದಾಟಿದ ಸೊಂಕಿತರ ಸಂಖ್ಯೆ

ಪ್ರತಿ ನಿತ್ಯ ಕೊರೊನೋ ಸೋಂಕಿತರ ಸಂಖ್ಯೆ ಬೆಳೆಯುತ್ತಲೇ ಇದೆ. ಕೇಂದ್ರ ಸರ್ಕಾರ ಘೋಷಿಸಿರುವ ಅಪಾಯ ವಲಯಗಳ ಪಟ್ಟಿಯಲ್ಲಿ ಕಾಸರಗೋಡು ಕೂಡ ಸ್ಥಾನ ಪಡೆದಿದೆ. ಆದರೆ ರಾಜ್ಯ ಸರ್ಕಾರ ಗಡಿ ವಿಚಾರದಲ್ಲಿ ಕೋರ್ಟ್‌ ಮೆಟ್ಟಿಲೇರಿದೆಯೇ ಹೊರತು ಕೊರೋನಾ ವಿರುದ್ಧ ಸೂಕ್ತ ಕ್ರಮಗಳನ್ನು ಕೈಗೊಂಡಿಲ್ಲ.

ಗಡಿ ಬಂದ್‌ಗೆ ಟ್ವೀಟ್‌ ಮಾಡಿದ್ದೇ ಕೇರಳ ಸಿಎಂ!

ಕರ್ನಾಟಕ-ಕೇರಳ ಗಡಿ ರಸ್ತೆಗಳನ್ನು ಬಂದ್‌ ಮಾಡುವ ಬಗ್ಗೆ ಕೇರಳ ಸಿಎಂ ಈ ಹಿಂದೆಯೇ ಟ್ವೀಟ್‌ ಮಾಡಿ ಎಚ್ಚರಿಕೆ ನೀಡಿದ್ದರು. ಈಗ ಅವರೇ ಗಡಿ ತೆರವುಗೊಳಿಸುವಂತೆ ಸುಪ್ರೀಂ ಕೋರ್ಟ್‌ ಬಾಗಿಲು ತಟ್ಟುತ್ತಿದ್ದಾರೆ ಎಂದು ಜಾಲತಾಣಿಗರು ಕಿಡಿಕಾರಿದ್ದಾರೆ. ಈ ಬಗ್ಗೆ ದಾಖಲೆಯಾಗಿ ಮಾ.23ರಂದು ಸ್ವತಃ ಕೇರಳ ಸಿಎಂ ಟ್ವೀಟ್‌ ಮಾಡಿರುವುದನ್ನು ನೆಟ್ಟಿಗರು ಪೋಸ್ಟ್‌ ಮಾಡಿ ಪ್ರಶ್ನಿಸುತ್ತಿದ್ದಾರೆ.

click me!