ದೇಶದಲ್ಲಿ ಕೊರೋನಾಕ್ಕೆ ಮತ್ತೆ 3 ಬಲಿ, ಹೊಸದಾಗಿ 220 ಜನರಿಗೆ ಸೋಂಕು!

Published : Apr 01, 2020, 07:20 AM ISTUpdated : Apr 28, 2021, 01:37 PM IST
ದೇಶದಲ್ಲಿ ಕೊರೋನಾಕ್ಕೆ ಮತ್ತೆ 3 ಬಲಿ, ಹೊಸದಾಗಿ 220 ಜನರಿಗೆ ಸೋಂಕು!

ಸಾರಾಂಶ

ಕೊರೋನಾಕ್ಕೆ ಮತ್ತೆ 3 ಬಲಿ, ಹೊಸದಾಗಿ 200 ಜನರಿಗೆ ಸೋಂಕು| ಸಾವಿನ ಸಂಖ್ಯೆ 42ಕ್ಕೆ, ಸೋಂಕಿತರ ಸಂಖ್ಯೆ 1471ಕ್ಕೆ ಏರಿಕೆ

ನವದೆಹಲಿ(ಏ. 01): ಜಗತ್ತಿನಾದ್ಯಂತ ಭಾರೀ ನಡುಕ ಹುಟ್ಟಿಸಿರುವ ಕೊರೋನಾ ದೇಶದ ವಿವಿಧ ಭಾಗಗಳಲ್ಲಿ ಮಂಗಳವಾರ ಮೂವರನ್ನು ಬಲಿಪಡೆದಿದೆ. ಇದರೊಂದಿಗೆ ದೇಶಾದ್ಯಂತ ಕೊರೋನಾ ಮಾರಿಗೆ ಬಲಿಯಾದವರ ಸಂಖ್ಯೆ 42 ಆಗಿದೆ. ಮಂಗಳವಾರ ಪಶ್ಚಿಮ ಬಂಗಾಳ, ಪಂಜಾಬ್‌ ಹಾಗೂ ಕೇರಳದಲ್ಲಿ ತಲಾ ಒಬ್ಬರು ಸಾವನ್ನಪ್ಪಿದ್ದಾರೆ.

ಇದರೊಂದಿಗೆ ಕೊರೋನಾಕ್ಕೆ ಮಹಾರಾಷ್ಟ್ರದಲ್ಲಿ ಅತಿಹೆಚ್ಚು 10, ತೆಲಂಗಾಣದಲ್ಲಿ 8 ಪಂಜಾಬ್‌- 4, ಮಧ್ಯಪ್ರದೇಶ-4, ಕರ್ನಾಟಕ- 3, ಪಶ್ಚಿಮ ಬಂಗಾಳ- 3, ದೆಹಲಿ-2, ಜಮ್ಮು-ಕಾಶ್ಮೀರ-2, ಕೇರಳದಲ್ಲಿ ಇಬ್ಬರು ಹಾಗೂ ತಮಿಳುನಾಡಿನಲ್ಲಿ ಒಬ್ಬರು ಸಾವನ್ನಪ್ಪಿದಂತಾಗಿದೆ.

200ಕ್ಕೂ ಹೆಚ್ಚು ದೇಶಕ್ಕೆ ಕೊರೋನಾ: 8 ಲಕ್ಷ ಜನಕ್ಕೆ ವೈರಸ್‌, 1.75 ಲಕ್ಷ ಗುಣಮುಖ!

ಈ ನಡುವೆ ಮಂಗಳವಾರ ದೇಶಾದ್ಯಂತ ಮತ್ತೆ 220 ಜನರಿಗೆ ಸೋಂಕು ಹಬ್ಬಿರುವುದು ದೃಢಪಟ್ಟಿದೆ. ಇದರೊಂದಿಗೆ ದೇಶದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 1471ಕ್ಕೆ ತಲುಪಿದೆ. ಮಂಗಳವಾರ ಮಹಾರಾಷ್ಟ್ರದಲ್ಲಿ 72, ತಮಿಳುನಾಡಿನಲ್ಲಿ 57, ಉತ್ತರಪ್ರದೇಶದಲ್ಲಿ 24 ಪ್ರಕರಣಗಳು ಬೆಳಕಿಗೆ ಬಂದಿದೆ.

PREV
click me!

Recommended Stories

ಅಕ್ಷಯ್ ಕುಮಾರ್ ರಾಮಸೇತು ಚಿತ್ರದ 45 ಕಿರಿಯ ಕಲಾವಿದರಿಗೂ ಕೊರೊನಾ ಪಾಸಿಟಿವ್!
ಕೊರೋನಾ ಅಟ್ಟಹಾಸ; 3 ರಾಜ್ಯಗಳಿಗೆ ತಜ್ಞರ ತಂಡ ಕಳುಹಿಸಿದ ಮೋದಿ!