'ಜಾತ್ಯತೀತ' ಸ್ವರಾ ಭಾಸ್ಕರ್ ಖುಲ್ಲಂಖುಲ್ಲಾ ವಿಡಿಯೋ ಕೆದಕುತ್ತಲೇ ಹೀಗೆಲ್ಲಾ ರೋಸ್ಟ್‌ ಮಾಡೋದಾ ಯೂಟ್ಯೂಬರ್ ಶಬನಮ್‌?

Published : Dec 07, 2024, 05:22 PM ISTUpdated : Dec 07, 2024, 06:13 PM IST
'ಜಾತ್ಯತೀತ' ಸ್ವರಾ ಭಾಸ್ಕರ್  ಖುಲ್ಲಂಖುಲ್ಲಾ ವಿಡಿಯೋ ಕೆದಕುತ್ತಲೇ ಹೀಗೆಲ್ಲಾ ರೋಸ್ಟ್‌ ಮಾಡೋದಾ ಯೂಟ್ಯೂಬರ್ ಶಬನಮ್‌?

ಸಾರಾಂಶ

ನಾನು ಜಾತ್ಯತೀತೆ, ಹೆಣ್ಣುಮಕ್ಕಳ ಶಿಕ್ಷಣವೇ ಪ್ರಮುಖ ಆದ್ಯತೆ ಎಂದೆಲ್ಲಾ ಭಾಷಣ ಮಾಡಿದ್ದ  ಮಾಜಿ ನಟಿ ಸ್ವರಾ ಭಾಸ್ಕರ್ ಅವರನ್ನು ಯೂಟ್ಯೂಬರ್‍‌ ಶಬನಮ್‌ ಶೇಖ್‌ ಹೇಗೆಲ್ಲಾ ರೋಸ್ಟ್‌ ಮಾಡಿದ್ದಾರೆ ನೋಡಿ!  

 ಸ್ವರಾ ಭಾಸ್ಕರ್​ ಅವರು  ಸಮಾಜವಾದಿ ಪಕ್ಷದ ನಾಯಕ ಫಹಾದ್ ಝಿರಾರ್ ಅಹ್ಮದ್ (Fahad Zirar  ಅವರೊಂದಿಗೆ ಕಳೆದ ವರ್ಷದ  ಜನವರಿ 6 ರಂದು ಮದುವೆಯಾಗಿದ್ದು, ಇದೀಗ ತಮ್ಮ ಗೆಟಪ್‌ ಬದಲಿಸಿಕೊಂಡು ಸುಖ ಸಂಸಾರ ನಡೆಸುತ್ತಿದ್ದಾರೆ.  ತಾವು ವಿಶೇಷ ವಿವಾಹ ಕಾಯ್ದೆಯಡಿಯಲ್ಲಿ ತಮ್ಮ ವಿವಾಹವನ್ನು ನ್ಯಾಯಾಲಯದಲ್ಲಿ ನೋಂದಾಯಿಸಿಕೊಂಡಿರುವುದಾಗಿ  ತಿಳಿಸಿದ್ದ ಸ್ವರಾ ಅಭಿಮಾನಿಗಳಿಗೆ ಶಾಕ್‌ ನೀಡಿದ್ದರು. ಅದಾದ ಬಳಿಕ,  ಒಂದು ಹೆಣ್ಣು ಮಗುವಿನ ಅಮ್ಮ ಆಗಿದ್ದಾರೆ. ಇದರ ನಡುವೆಯೇ ಸ್ವರಾ ಭಾಸ್ಕರ್ ಕೆಲವು ದಿನಗಳಿಂದ ಸೋಷಿಯಲ್‌ ಮೀಡಿಯಾಗಳಲ್ಲಿ ಚರ್ಚೆಯಲ್ಲಿದ್ದಾರೆ. ಇದಕ್ಕೆ ಕಾರಣ, ಸ್ವರಾ ಭಾಸ್ಕರ್ ಅವರು  ಪತಿ ಫಹಾದ್ ಅಹ್ಮದ್ ಜೊತೆ ಮೌಲಾನಾ ಸಜ್ಜದ್ ನೊಮಾನಿ ಅವರನ್ನು ಭೇಟಿಯಾಗಿದ್ದು ಮಾತ್ರವಲ್ಲದೇ, ಅವರ ಬಗ್ಗೆ ಹಾಡಿ ಹೊಗಳಿರುವುದಕ್ಕೆ. ಅಷ್ಟಕ್ಕೂ ಹೀಗೆ ಸ್ವರಾ ಟ್ರೋಲ್ ಆಗಲು ಕಾರಣವೂ ಇದೆ. ಅದೇನೆಂದರೆ,  ಸ್ವರಾ ಮದುವೆಗೂ ಮುನ್ನ ಹೆಣ್ಣುಮಕ್ಕಳ ರಕ್ಷಣೆ, ಅವರ ಸ್ವಾತಂತ್ರ, ಹೆಣ್ಣುಮಕ್ಕಳ ಶಿಕ್ಷಣದ ಬಗ್ಗೆ ಹೋರಾಟ ಮಾಡಿ ಹೆಸರು ಮಾಡಿದವರು. ಆದರೆ ಮೌಲಾನಾ ಸಜ್ಜನ್‌ ನೊಮಾನಿ ಸ್ತ್ರೀ ಶಿಕ್ಷಣದ ವಿರೋಧಿ ಎನ್ನಲಾಗಿದೆ. ಇದೇ ಕಾರಣಕ್ಕೆ ಸ್ವರಾ ಅವರು ಇನ್ನಿಲ್ಲದ ಟೀಕೆ ಎದುರಿಸುತ್ತಿದ್ದಾರೆ. ಮಾಡುವುದೆಲ್ಲಾ ಅನಾಚಾರ, ಮನೆ ಮುಂದೆ ಬೃಂದಾವನ ಎಂದೂ ಇವರಿಗೆ ಟೀಕೆ ಮಾಡಲಾಗುತ್ತಿದೆ. 

ಇದೀಗ ಸ್ವರಾ ಅವರ ಹಿನ್ನೆಲೆಯನ್ನು ಕೆದಕುವ ಮೂಲಕ ಯೂಟ್ಯೂಬರ್ ಶಬನಮ್‌ ಶೇಖ್‌ ಅವರು ಮಾಜಿನಟಿಯನ್ನು ಇನ್ನಿಲ್ಲದಂತೆ ರೋಸ್ಟ್‌ ಮಾಡಿದ್ದಾರೆ. ನಾನು ಜಾತ್ಯಾತೀತದಲ್ಲಿ ನಂಬಿಕೆ ಇಟ್ಟವಳು. ಭಾರತದ ಸಂವಿಧಾನದಲ್ಲಿ ನಂಬಿಕೆ ಇಟ್ಟವಳು ಎಂದು ಭಾಷಣ ಮಾಡಿದ್ದ ಸ್ವರಾ ಅವರ ವಿಡಿಯೋ ತುಣಕನ್ನು ಶೇರ್‍‌ ಮಾಡಿರುವ ಶಬನಮ್‌ ಅವರು, ನಟಿಯಾಗಿದ್ದ ಸಂದರ್ಭದಲ್ಲಿ ಸ್ವರಾ ಸಂಪೂರ್ಣ ಬಹುತೇಕ ನಗ್ನ ಆಗಿದ್ದರ ವಿಡಿಯೋಗಳನ್ನು ಶೇರ್‍‌ ಮಾಡಿದ್ದಾರೆ. ಇದೇ ಅವರ ಜಾತ್ಯತೀತ ಎಂದು ಟಾಂಗ್‌ ನೀಡಿದ್ದಾರೆ. ಮಾತ್ರವಲ್ಲದೇ, ಕೇಂದ್ರ ಸರ್ಕಾರದ ವಿರುದ್ಧ ನಡೆಯುತ್ತಿದ್ದ ಸಿಎಎ ವಿರೋಧ ಪ್ರತಿಭಟನೆಯಲ್ಲಿ ಮುಂಚೂಣಿ ವಹಿಸಿದ್ದ ಸ್ವರಾ ಅವರು, ನನ್ನ ಬಳಿ ಆಧಾರ್ ಕಾರ್ಡ್  ಇಲ್ಲ, ಪಾಸ್‌ಪೋರ್ಟ್ ಇಲ್ಲ, ರೇಷನ್‌ ಕಾರ್ಡ್ ಇಲ್ಲ, ಅಡ್ರೆಸ್‌ ಪ್ರೂಫ್‌ ಇಲ್ಲ, ಹುಟ್ಟಿದ ಪ್ರಮಾಣ ಪತ್ರ ಇಲ್ಲ... ನನ್ನಂಥವರು ಏನು ಮಾಡಬೇಕು ಎಂದು ಹೇಳಿದ್ದರು. 

ಅಷ್ಟಕ್ಕೂ ಶಬನಮ್‌ ಅವರು ಈ ವಿಡಿಯೋ ಮಾಡಿದ್ದು, ಸ್ವರಾ ಭಾಸ್ಕರ್ ಮೌಲಾನಾ ಸಜ್ಜನ್‌ ನೊಮಾನಿ ಅವರನ್ನು ಹಾಡಿ ಹೊಗಳಿದ್ದಕ್ಕೆ. ಇವರು ಸ್ತ್ರೀ ಶಿಕ್ಷಣ ವಿರೋಧಿ. ತಾಲಿಬಾನಿಗಳ ಬೆಂಬಲಿಗರು. ಅಪ್ಘಾನಿಸ್ತಾನದಲ್ಲಿ ಮೂಲ ನಿವಾಸಿಗಳೇ ದೇಶ ಬಿಟ್ಟು ಜೀವ ಭಯದಿಂದ ಹೊರಕ್ಕೆ ಹೋಗುತ್ತಿದ್ದಾಗ, ಭಾರತದಲ್ಲಿ ಕುಳಿತು ತಾಲಿಬಾನಿಗಳ ಬೆಂಬಲ ಸೂಚಿಸಿದ ವ್ಯಕ್ತಿ ಈತ. ಇಂಥವರ ಆಶೀರ್ವಾದ ಪಡೆದಿದ್ದಾರೆ ಜಾತ್ಯಾತೀತ ಸ್ವರಾ ಎಂದು ಶಬನಮ್‌ ಈ ವಿಡಿಯೋದಲ್ಲಿ ಹೇಳಿದ್ದಾರೆ. ಹೆಣ್ಣು ಮಕ್ಕಳ ಹೋರಾಟ, ಶಿಕ್ಷಣ, ಸ್ವಾತಂತ್ರವೇ ನನ್ನ ಹಕ್ಕು ಎಂದು ಭಾಷಣ ಬೀಗುತ್ತಿದ್ದ ಸ್ವರಾ ಭಾಸ್ಕರ್ ಹೀಗೆ ಮಾಡಿದ್ದು ಎಷ್ಟು ಸರಿ ಎಂದು ಅವರು ಪ್ರಶ್ನಿಸಿದ್ದಾರೆ. 

ಅಷ್ಟಕ್ಕೂ ಸ್ವರಾ ಭಾಸ್ಕರ್ ಇವರ ಬಳಿ ಹೋಗಿದ್ದು ಪತಿ ಚುನಾವಣೆಯಲ್ಲಿ ಗೆಲುವು ಸಾಧಿಸಲಿ ಎನ್ನುವ ಕಾರಣಕ್ಕೆ ಎಂದು ಶಬನಮ್‌ ಹೇಳಿದ್ದಾರೆ. ಅಷ್ಟಕ್ಕೂ, ಇವರ ಪತಿ,  ಮಹಾರಾಷ್ಟ್ರದ ಅನುಶಕ್ತಿ ನಗರದಲ್ಲಿ ಸ್ಪರ್ಧಿಸಿದ್ದರು.  ಶರದ್ ಪವಾರ್ ನೇತೃತ್ವದ ಎನ್‌ಸಿಪಿ ಬಣದ ಅಭ್ಯರ್ಥಿಯಾಗಿದ್ದ ಅವರು,  ಅಜಿತ್ ಪವಾರ್ ಅವರ ಎನ್‌ಸಿಪಿಯ ನಾಮನಿರ್ದೇಶಿತ ಸನಾ ಮಲಿಕ್ ವಿರುದ್ಧ ಸ್ಪರ್ಧಿಸಿ ಸೋಲು ಅನುಭವಿಸಿದ್ದಾರೆ. ಸೋಲಿನ ಬಳಿಕ ಸ್ವರಾ ಇವಿಎಂ ಮೇಲೆ ಗಂಭೀರ ಆರೋಪ ಹೊರಿಸಿದ್ದರು. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಕೊಳಕು ಪ್ಯಾಂಟ್‌ ಬಗ್ಗೆ ಮಾತನಾಡಿದ್ರು, ಮೊಮ್ಮಗನ ಸಿನಿಮಾಕ್ಕೆ ಸಮಸ್ಯೆ ತಂದ್ರು: Jaya Bachchan ಬಾಯ್ಕಾಟ್‌ ಆಗ್ತಾರಾ?
ಅತ್ತ ಪಂಚೆ ಉದುರಿ ಹೋಗುತ್ತಿದೆ.. ಇತ್ತ ಕುಣಿದು ಕುಪ್ಪಳಿಸಿ ಇಳಯರಾಜಾ ಕಂಪೋಸ್ ಮಾಡಿದ ಮಜವಾದ ಹಾಡು ಯಾವುದು?