ಇಬ್ಬರು ಹೆಂಡಿರ ಮುದ್ದಿನ ಯುಟ್ಯೂಬರ್:​ ವೆಲಂಟೈನ್ಸ್​ ಡೇ ಗಿಫ್ಟಿಗೆ ಪತ್ನಿಯರ ಹೊಡೆದಾಟ

Published : Feb 17, 2023, 02:23 PM ISTUpdated : Feb 17, 2023, 02:47 PM IST
ಇಬ್ಬರು ಹೆಂಡಿರ ಮುದ್ದಿನ ಯುಟ್ಯೂಬರ್:​ ವೆಲಂಟೈನ್ಸ್​ ಡೇ ಗಿಫ್ಟಿಗೆ ಪತ್ನಿಯರ ಹೊಡೆದಾಟ

ಸಾರಾಂಶ

ಇಬ್ಬರು ಪತ್ನಿಯರನ್ನು ಹೊಂದಿರುವ ಯುಟ್ಯೂಬರ್​ ಅರ್ಮಾನ್ ಮಲಿಕ್ ಪತ್ನಿಯರ ಜಗಳದ ಕುರಿತು ಆಗಾಗ್ಗೆ ವಿಡಿಯೋ ಶೇರ್​ ಮಾಡುತ್ತಿರುತ್ತಾರೆ. ಅವರ ಪ್ರೇಮಿಗಳ ದಿನ ಹೇಗಿತ್ತು ಗೊತ್ತಾ?  

ನವದೆಹಲಿ: ಯುಟ್ಯೂಬರ್ (Youtuber) ಆಗಿರುವ ಅರ್ಮಾನ್ ಮಲಿಕ್ (Armaan Mallik) ಯಾವಾಗಲೂ ತಮ್ಮ ಇಬ್ಬರು ಪತ್ನಿಯರಾದ ಪಾಯಲ್ ಮಲಿಕ್ ಮತ್ತು ಕೃತಿಕಾ ಮಲಿಕ್​ ಅವರ ಕುರಿತು  ಸಾಮಾಜಿಕ ಜಾಲತಾಣದಲ್ಲಿ ಶೇರ್​ ಮಾಡುತ್ತಲೇ ಇರುತ್ತಾರೆ. ಇವರ ಪ್ರೀತಿ, ಜಗಳ ಇತ್ಯಾದಿ ವಿಷಯಗಳ ಕುರಿತು ಜಾಲತಾಣದಲ್ಲಿ ವಿಷಯಗಳನ್ನು ಬಿತ್ತರಿಸುತ್ತಾ ಜನರ ಗಮನ ಸೆಳೆಯುವಲ್ಲಿ ಇವರು ನಿಸ್ಸೀಮರು. ಕೆಲವೊಮ್ಮೆ ಉದ್ದೇಶಪೂರ್ವಕವಾಗಿ ಇಬ್ಬರು ಪತ್ನಿಯರ ನಡುವೆ ಜಗಳ ತಂದಿಟ್ಟು ಅದನ್ನು ಶೇರ್​ ಮಾಡಿಕೊಂಡು ಅಸಂಖ್ಯ ಕ್ಲಿಕ್ಸ್​ಗಳನ್ನು ಪಡೆಯುತ್ತಾರೆ. ಇವರ ಅಭಿಮಾನಿಗಳು ಕೂಡ ಹೆಂಗಸರ ಜಗಳವನ್ನು ನೋಡಲು ತುಂಬಾ ಇಷ್ಟಪಡುತ್ತಾರೆ. ಒಬ್ಬಳು ಪತ್ನಿಯನ್ನೇ ನಿಭಾಯಿಸುವುದು ಕಷ್ಟವಾಗಿರುವಾಗ ಇಬ್ಬರು ಪತ್ನಿಯರನ್ನು ಹೇಗೆ ನಿಭಾಯಿಸುತ್ತೀರಿ ಎಂದು ತಮಾಷೆಯ ಕಮೆಂಟ್​ಗಳನ್ನೂ ಹಾಕುತ್ತಿರುತ್ತಾರೆ.

ಇದೀಗ ಅಂಥದ್ದೇ ಇನ್ನೊಂದು ವಿಷಯೋ ಮೂಲಕ ಅರ್ಮಾನ್ ಮಲಿಕ್ ಗಮನ ಸೆಳೆದಿದ್ದಾರೆ. ಇದು ಇಬ್ಬರು ಪತ್ನಿಯರಿಗೆ (wives) ನೀಡಿರುವ ಪ್ರೇಮಿಗಳ ದಿನದ ಉಡುಗೊರೆ ಕುರಿತು. ಮೊನ್ನೆ ಫೆ.14ರ ವೆಲಂಟೈನ್ಸ್​ ಡೇ ದಿನ ತಮ್ಮ ಇಬ್ಬರು ಪತ್ನಿಯರಿಗೆ ಬೇರೆ ಬೇರೆ ರೀತಿಯ ಉಡುಗೊರೆ ಕೊಟ್ಟಿದ್ದು ಹೇಗೆ ಪೇಚಿಗೆ ಸಿಲುಕಿತು ಎಂಬ ಬಗ್ಗೆ ಶೇರ್​ ಮಾಡಿಕೊಂಡು ಅದೀಗ ಸಾಮಾಜಿಕ ಜಾಲತಾಣದಲ್ಲಿ ಸಕತ್​ ವೈರಲ್​ ಆಗುತ್ತಿದೆ. ಇದನ್ನು ನೋಡಿ ನೆಟ್ಟಿಗರು ಮಜಾ ಪಡೆಯುತ್ತಿದ್ದಾರೆ. ಉದ್ದೇಶಪೂರ್ವಕವಾಗಿ ಜನರನ್ನು ರಂಜಿಸಲು ಈ ವಿಡಿಯೋ  ಮಾಡಲಾಗಿದೆ ಎಂದು ಹಲವರು ಕಮೆಂಟ್​ ಹಾಕುತ್ತಿದ್ದರೂ ನೋಡಿ ಮನರಂಜನೆಯಂತೂ ಪಡೆಯುತ್ತಿದ್ದಾರೆ.

ಅಪ್ಪ-ಮಗ ಇಬ್ರನ್ನೂ ತಬ್ಬಿ ರೊಮಾನ್ಸ್​ ಮಾಡಿರೋ ಬಾಲಿವುಡ್​ ಬೆಡಗಿಯರಿವರು

ಅಷ್ಟಕ್ಕೂ ಆಗಿರುವುದು ಏನೆಂದರೆ ಮಲಿಕ್​ ಅವರು,  ವ್ಯಾಲೆಂಟೈನ್ಸ್ ಡೇ ಉಡುಗೊರೆ ಕೊಟ್ಟಿದ್ದಾರೆ. ಒಬ್ಬ ಪತ್ನಿ ಗರ್ಭಿಣಿಯಾಗಿರುವ ಅರ್ಮಾನ್ ಮಲಿಕ್ ಪಾಯಲ್‌ಗೆ (Payal) ಚಾಕೊಲೇಟ್ ಬಾಕ್ಸ್ ಮತ್ತು ಇನ್ನೋರ್ವ ಪತ್ನಿ ಕೃತಿಕಾಗೆ (Kruthika) ಹೊಸ ಐಫೋನ್ 14 ಉಡುಗೊರೆಯಾಗಿ ನೀಡಿದ್ದಾರೆ. ಈ  ಮೂಲಕ ತಾವು ಪ್ರೇಮಿಗಳ ದಿನವನ್ನು ಆಚರಿಸಿಕೊಂಡಿರುವುದಾಗಿ ಹೇಳಿದ್ದಾರೆ.  ಪಾಯಲ್ ನಿಜವಾಗಿಯೂ ಸಿಹಿತಿಂಡಿಗಳನ್ನು ಇಷ್ಟಪಡುವುದಿಲ್ಲ, ಆದರೆ ತಮ್ಮ ಗಂಡನ ಪ್ರೇಮಿಗಳ ದಿನಕ್ಕೆ ಇದನ್ನು ಕೊಟ್ಟಿರುವುದನ್ನು ಇಷ್ಟವಿಲ್ಲದಿದ್ದರೂ ಪತಿಯನ್ನು ಸಂತೋಷವಾಗಿಡುವ ಸಲುವಾಗಿ ನಗುಮೊಗದಿಂದ ಉಡುಗೊರೆಯನ್ನು ಸ್ವೀಕರಿಸಿದ್ದಾರೆ.

ಇಷ್ಟೇ ಆಗಿದ್ದರೆ ಈ ವಿಡಿಯೋ ವೈರಲ್​ ಆಗುತ್ತಿರಲಿಲ್ಲ. ಅರ್ಮಾನ್​ ಅವರು ಇನ್ನೊಂದು ಪತ್ನಿಗೆ  ಐಫೋನ್ ಕೊಟ್ಟಿದ್ದಾರೆ. ಇದು ಪಾಯಲ್​  ಅವರಿಗೆ ತಿಳಿದಿದೆ. ಇದರ ವಿಷಯ ತಿಳಿಯುತ್ತಲೇ ಆಕೆ  ಅರ್ಮಾನ್‌ನೊಂದಿಗೆ ಜಗಳವಾಡಲು ಪ್ರಾರಂಭಿಸಿದ್ದಾರೆ. ತನಗೂ ಫೋನ್ ಗಿಫ್ಟ್ ಆಗಿ ಏಕೆ ನೀಡಲಿಲ್ಲ ಎಂದು ಪಾಯಲ್ ಪತಿಯನ್ನು ಕೇಳಿದ್ದಾರೆ. ಅದೇ ಸಮಯದಲ್ಲಿ, ಕೃತಿಕಾ ಹೊಸ ಫೋನ್ ಬಗ್ಗೆ ತುಂಬಾ ಸಂತೋಷಪಟ್ಟರು. ಪಾಯಲ್ ಮತ್ತು ಕೃತಿಕಾ ಫೋನ್‌ಗಾಗಿ  ಜಗಳವಾಡುವುದನ್ನು ವಿಡಿಯೋದಲ್ಲಿ ನೋಡಬಹುದು. ಈ ಉಡುಗೊರೆಯನ್ನು ವಾಪಸ್​ ತೆಗೆದುಕೊಂಡು ಹೋಗುವಂತೆ  ಪಾಯಲ್ ಅರ್ಮಾನ್‌ಗೆ ಸೂಚಿಸಿದರು.  ಇದನ್ನು  ಕೇಳಿದ ಕೃತಿಕಾ ಇನ್ನಷ್ಟು ಕೋಪಗೊಂಡರು. ಇವಿಷ್ಟನ್ನೂ ವಿಡಿಯೋದಲ್ಲಿ ನೋಡಬಹುದು. 

ಗಂಡ ಜೈಲಿಗೆ ಹೋಗ್ತಿದ್ದಂತೆ ಬದ್ಧ ವೈರಿಯನ್ನು ತಬ್ಬಿ ಮುದ್ದಾಡಿದ ರಾಖಿ ಸಾವಂತ್​!

ಈ ವಿಡಿಯೋವನ್ನು ಸೂಕ್ಷ್ಮವಾಗಿ ಗಮನಿಸಿದರೆ ಇದು ಯೂಟ್ಯೂಬ್​ನಲ್ಲಿ (Youtube) ಅಪ್​ಲೋಡ್​ ಮಾಡಿ ಹೆಚ್ಚು ವೀಕ್ಷಣೆ ಗಳಿಸುವ ಸಲುವಾಗಿ ಉದ್ದೇಶಪೂರ್ವಕವಾಗಿ ಮಾಡಿರುವುದು ಎಂಬುದು ತಿಳಿಯುತ್ತದೆ ಎಂದು ಹಲವರು ಕಮೆಂಟ್​ ಮೂಲಕ ಪ್ರತಿಕ್ರಿಯೆ ನೀಡಿದ್ದಾರೆ. ಒಟ್ಟಿನಲ್ಲಿ ಈ ವಿಡಿಯೋ ವೈರಲ್​ ಆಗುತ್ತಿದೆ. ಈ ಹಿಂದೆ ಕೂಡ ಮೂರನೆಯವಳನ್ನು ಮದುವೆಯಾಗಿರುವುದಾಗಿ ಹೇಳಿ ಹುಡುಗಿಯೊಬ್ಬಳ ಜೊತೆ ಬಂದು ತಮ್ಮ ಇಬ್ಬರು ಪತ್ನಿಯರನ್ನು ಇದೇ ಯೂಟ್ಯೂಬರ್​ ದಂಗು ಬಡಿಸಿದ್ದರು. ಕೊನೆಗೆ ಜಗಳ ಶುರುವಾದಾಗ ನಿಜಾಂಶವನ್ನು ಹೇಳಿದ್ದರು. ಹೀಗೆ ಇಬ್ಬರು ಪತ್ನಿಯರನ್ನು ಇಟ್ಟುಕೊಂಡು ಮಲಿಕ್​ ಯೂಟ್ಯೂಬ್​ನಲ್ಲಿ ಹೆಚ್ಚು ಹೆಚ್ಚು ಫಾಲೋವರ್ಸ್​  (Followers) ಗಳಿಸುತ್ತಿದ್ದಾರೆ. ಇದಾಗಲೇ ಅರ್ಮಾನ್ ಮಲಿಕ್ ಅವರ ಯೂಟ್ಯೂಬ್ ಚಾನೆಲ್ 2.3 ಮಿಲಿಯನ್ ಚಂದಾದಾರರನ್ನು (Subscriber) ಹೊಂದಿದೆ. ಅವರ ಪ್ರೊಫೈಲ್ ಪ್ರಕಾರ, ಅವರು ಸರಿಸುಮಾರು 1.6 ಮಿಲಿಯನ್ Instagram ಅನುಯಾಯಿಗಳೊಂದಿಗೆ ಡಿಜಿಟಲ್ ವಿಷಯ ರಚನೆಕಾರರಾಗಿದ್ದಾರೆ. ಅರ್ಮಾನ್ ಪತ್ನಿಯರಾದ ಪಾಯಲ್ ಮತ್ತು ಕೃತಿಕಾ ಸೋಷಿಯಲ್ ಮೀಡಿಯಾದಲ್ಲೂ ಸಾವಿರಾರು ಫಾಲೋವರ್ಸ್ ಹೊಂದಿದ್ದಾರೆ. ಮಲಿಕ್ ಅವರ ಸಾಮಾನ್ಯ ಫಿಟ್‌ನೆಸ್ ವ್ಲಾಗ್‌ಗಳು ಆಗಾಗ್ಗೆ ವೈರಲ್ ಆಗುತ್ತವೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಅಖಂಡ 2 ರಿಲೀಸ್ ನಿಲ್ಲೋಕೆ ಅಸಲಿ ಕಾರಣ ಇದೇನಾ? ಅಷ್ಟಕ್ಕೂ ಬಾಲಯ್ಯ ಮುಂದೆ ಏನ್ಮಾಡ್ತಾರೆ?
ಹೀರೋ ಆಗುವ ಮುನ್ನ ಶಾಕ್ ಕೊಟ್ಟ ಅಕೀರಾ ನಂದನ್: ರೇಣು ದೇಸಾಯಿ ಫೋನ್ ಮಾಡಿದಾಗ ಪವನ್ ನಕ್ಕಿದ್ದೇಕೆ?