Vikram Trailer; ಕಮಲ್ ಹಾಸನ್ 'ವಿಕ್ರಮ್' ಸಿನಿಮಾದಲ್ಲಿ ಯಶ್ KGF 2 ಗನ್, ನೆಟ್ಟಿಗರ ಟ್ರೋಲ್

By Shruiti G Krishna  |  First Published May 16, 2022, 1:05 PM IST

ಜನಪ್ರಿಯ ನಟ, ಸಕಲಕಲಾವಲ್ಲಭ ಕಮಲ್ ಹಾಸನ್(Kamal Haasan)ನಟನಯ ಬಹುನಿರೀಕ್ಷೆಯ ವಿಕ್ರಮ್ ಸಿನಿಮಾದ ಟ್ರೈಲರ್ ರಿಲೀಸ್ ಆಗಿದೆ. ಈ ಸಿನಿಮಾ ಬಿಡುಗಡೆಗೂ ಮೊದಲೇ ಸಾಕಷ್ಟು ಸದ್ದು ಮಾಡುತ್ತಿದ್ದು ಇದೀಗ ಟ್ರೈಲರ್ ಮೂಲಕ ಅಭಿಮಾನಿಗಳ ಗಮನ ಸೆಳೆದಿದೆ.


ಜನಪ್ರಿಯ ನಟ, ಸಕಲಕಲಾವಲ್ಲಭ ಕಮಲ್ ಹಾಸನ್(Kamal Haasan)ನಟನಯ ಬಹುನಿರೀಕ್ಷೆಯ ವಿಕ್ರಮ್ ಸಿನಿಮಾದ ಟ್ರೈಲರ್ ರಿಲೀಸ್ ಆಗಿದೆ. ಈ ಸಿನಿಮಾ ಬಿಡುಗಡೆಗೂ ಮೊದಲೇ ಸಾಕಷ್ಟು ಸದ್ದು ಮಾಡುತ್ತಿದ್ದು ಇದೀಗ ಟ್ರೈಲರ್ ಮೂಲಕ ಅಭಿಮಾನಿಗಳ ಗಮನ ಸೆಳೆದಿದೆ. ನಿರ್ದೇಶಕ ಲೋಕೇಶ್ ಕನಗರಾಜ್ ಸಾರಥ್ಯದಲ್ಲಿ ಮೂಡಿಬಂದಿರುವ ವಿಕ್ರಮ್ ಸಿನಿಮಾದಲ್ಲಿ ಕಮಲ್ ಹಾಸನ್ ಜೊತೆ ಖ್ಯಾತ ನಟರಾದ ವಿಜಯ್ ಸೇತುಪತಿ ಮತ್ತು ಫಹಾದ್ ಫಾಸಿಲ್ ನಟಿಸಿದ್ದಾರೆ.

ಸದ್ಯ ಬಿಡುಗಡೆಯಾಗಿರುವ ಟ್ರೈಲರ್ ನಲ್ಲಿ ಕಮಲ್ ಹಾಸನ್ ಆಕ್ಷನ್ ದೃಶ್ಯಕ್ಕೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಪವರ್ ಫುಲ್ ಆಕ್ಷನ್ ದೃಶ್ಯಗಳಲ್ಲಿ ಕಮಲ್ ಹಾಸನ್ ಅಬ್ಬರಿಸಿದ್ದಾರೆ. ಗನ್ ಶಬ್ದಕ್ಕೆ ಪ್ರೇಕ್ಷಕರು ಬೆದ್ದಿಬಿದ್ದಿದ್ದಾರೆ. ಅಂದಹಾಗೆ ವಿಕ್ರಮ್ ಸಿನಿಮಾದ ಟ್ರೈಲರ್ ನೋಡಿದವರಿಗೆ ರಾಕಿಂಗ್ ಸ್ಟಾರ್ ಯಶ್ ನಟನೆಯ ಕೆಜಿಎಫ್-2 ಚಿತ್ರದ ಒಂದು ದೃಶ್ಯ ನೆನಪಾಗುತ್ತಿದೆ. ಕೆಜಿಎಫ್-2 ಸಿನಿಮಾದಲ್ಲಿ ಯಶ್ ಹಿಡಿದಿದ್ದ ಒಂದು ಗನ್ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಪೊಲೀಸ್ ಸ್ಟೇಷನ್ ಉಡೀಸ್ ಮಾಡಲು ಬಳಸಿದ್ದ ಗನ್ ಕೆಜಿಎಫ್-2ನ ಹೈಲೆಟ್ ಗಳಲ್ಲಿ ಒಂದಾಗಿತ್ತು. ಕೆಜಿಎಫ್-2 ಟೀಸರ್ ಬಿಡುಗೆಯಾದಾಗ ಯಶ್ ದೃಶ್ಯ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಆ ಗನ್ ಗ ದೊಡ್ಡಮ್ಮ ಗನ್ ಹೆಸರಿಡಲಾಗಿತ್ತು.

Tap to resize

Latest Videos

ಕೆಜಿಎಫ್-2ನಲ್ಲಿ ಬಳಸಿದ್ದ ದೊಡ್ಡಮ್ಮ ಗನ್ ಹಾಗೆ ಇರುವ ಗನ್ ಅನ್ನು ಕಮಲ್ ಹಾಸನ್ ಸಹ ಬಳಸಿದ್ದಾರೆ. ಸದ್ಯ ಬಿಡುಗಡೆಯಾಗಿರುವ ಟ್ರೈಲರ್್ನಲ್ಲಿ ಕಮಲ್ ಹಾಸನ್ ಕೈಯಲ್ಲಿರುವ ಗನ್ ಪ್ರೇಕ್ಷಕರ ಗಮನ ಸೆಳೆಯುತ್ತಿದೆ. ಇದನ್ನು ನೋಡಿದವರು ಕೆಜಿಎಫ್-2 ಸಿನಿಮಾ ನೆನಪಿಸುತ್ತಿದ್ದಾರೆ. ಯಶ್ ಕೂಡ ಇದೇ ರೀತಿಯ ಗನ್ ಬಳಸಿದ್ದರು ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಕಮಲ್ ಹಾಸನ್ ಹಾಗೂ ಯಶ್ ಇಬ್ಬರು ದೊಡ್ಡ ಗನ್ ಹಿಡಿದು ಶೂಟ್ ಮಾಡುತ್ತಿರುವ ಫೋಟೋವನ್ನು ಶೇರ್ ಮಾಡಿ ಪ್ರೇಕ್ಷಕರು ನಾನಾರೀತಿ ಕಾಮೆಂಟ್ ಮಾಡುತ್ತಿದ್ದಾರೆ. ವಿಕ್ರಮ್ ಸಿನಿಮಾದ ಟ್ರೈಲರ್ ಈಗಾಗಲೇ ಸಿಕ್ಕಾಪಟ್ಟೆ ವೈರಲ್ ಆಗಿದೆ. ಬಿಡುಗಡೆಯಾಗಿ ಕೆಲವೇ ಗಂಟೆಗಳಲ್ಲಿ 10 ಮಿಲಿಯನ್‌ಗೂ ಅಧಿಕ ವೀಕ್ಷಣೆ ಕಂಡಿದೆ.

KGF 2 ವೀಕ್ಷಿಸಿದ ಕಮಲ್ ಹಾಸನ್ ಮತ್ತು ಇಳಯರಾಜ; ಫೋಟೋ ವೈರಲ್

ವಿಕ್ರಮ್ ಸಿನಿಮಾದ ಹಾಡಿನ ವಿವಾದ

ಸಿನಿಮಾದ ಹಾಡು ಇತ್ತೀಚಿಗಷ್ಟೆ ಬಿಡುಗಡೆಯಾಗಿದ್ದು 'ಪಾತಾಳ ಪಾತಾಳ...' ಎನ್ನುವ ಸಾಹಿತ್ಯವಿರುವ ಹಾಡು ಇದಾಗಿದೆ. ಈ ಹಾಡಿನಲ್ಲಿ ಕೇಂದ್ರ ಸರ್ಕಾರವನ್ನು ಅಣಕ ಮಾಡಲಾಗಿದೆ ಎನ್ನುವ ಕಾರಣಕ್ಕೆ ವಿವಾದ ಸೃಷ್ಟಿಯಾಗಿದ್ದು ಕಮಲ್ ಹಾಸನ್ ವಿರುದ್ಧ ದೂರು ಕೂಡ ದಾಖಲಾಗಿದೆ. ವಿವಾದಾತ್ಮಕ ಹಾಡನ್ನು ಕಮಲ್ ಹಾಸನ್ ಅವರೇ ಬರೆದು ಹಾಡಿದ್ದಾರೆ. ಈ ಹಾಡಿನಲ್ಲಿ ಕೇಂದ್ರ ಸರ್ಕಾರವನ್ನು ಅಣಕಿಸುವ ಸಾಲುಗಳಿವೆ ಎಂದು ಚೆನ್ನೈನ ಕೊರುಕ್ಕುಪೆಟ್ಟೈ ನಿವಾಸಿಯಾದ ಸೆಲ್ವಂ ಅವರು ಕಮಲ್ ದೂರು ದಾಖಲಿಸಿದ್ದಾರೆ. ಕೇಂದ್ರ ಸರ್ಕಾರವನ್ನು ಅಣಕಿಸಲಾಗಿದೆ ಮತ್ತು ಕೊವಿಡ್ ನಿಧಿ ಸಂಗ್ರಹ ಹಣದ ಬಗ್ಗೆ ನಕಾರಾತ್ಮಕವಾಗಿ ಸಾಲಿನಲ್ಲಿ ಉಲ್ಲೇಖಿಸಲಾಗಿದೆ ಎಂದು ದೂರಿದ್ದಾರೆ.

ವಿವಾದದಲ್ಲಿ 'ವಿಕ್ರಮ್' ಸಿನಿಮಾದ ಹಾಡು; ಕಮಲ್ ಹಾಸನ್ ವಿರುದ್ಧ ದೂರು ದಾಖಲು

ಕಮಲ್ ಸಿನಿಮಾಗಳ ವಿವಾದ

ಕಮಲ್ ಹಾಸನ್ ಸಿನಿಮಾಗಳು ಅಂದ್ಮೇಲೆ ವಿವಾದಗಳು ಕಾಮನ್ ಎನ್ನುವ ಹಾಗೆ ಆಗಿದೆ. ಯಾಕೆಂದರೆ ಈ ಮೊದಲ ಬಿಡುಗಡೆಯಾಗಿರುವ 2004ರಲ್ಲಿ ಬಂದ ವಿರುಮಾಂಡಿ ಮತ್ತು 2013ರಲ್ಲಿ ಬಂದ ವಿಷ್ವರೂಪಮ್ ಸಿನಿಮಾಗಳು ಬಿಡುಗಡೆಗೂ ಮೊದಲೇ ಭಾರಿ ವಿವಾದ ಸೃಷ್ಟಿ ಮಾಡಿದ್ದವು. ವಿವಾದಗಳ ನಡುವೆಯೂ ಬಾರಿ ಕುತೂಹಲ ಮೂಡಿಸಿರುವ ವಿಕ್ರಮ್ ಸಿನಿಮಾ ಜುನ್ 3ರಂದು ತೆರೆಗೆ ಬರುತ್ತಿದೆ.

click me!