ಒಂದೇ ಒಂದು ಸಿನಿಮಾ ರಿಲೀಸ್‌ ಆಗಿಲ್ಲ; ವಿಶ್ವದಲ್ಲೇ ಅತಿ ಹೆಚ್ಚು ಸಂಭಾವನೆ ಪಡೆದ ನಟಿ ಹೆಗ್ಗಳಿಕೆ ಹೇಗೆ ಬಂತು?

Published : Feb 21, 2025, 05:06 PM IST
ಒಂದೇ ಒಂದು ಸಿನಿಮಾ ರಿಲೀಸ್‌ ಆಗಿಲ್ಲ; ವಿಶ್ವದಲ್ಲೇ ಅತಿ ಹೆಚ್ಚು ಸಂಭಾವನೆ ಪಡೆದ ನಟಿ ಹೆಗ್ಗಳಿಕೆ ಹೇಗೆ ಬಂತು?

ಸಾರಾಂಶ

ಇಲ್ಲೋರ್ವ ನಟಿಯೊಬ್ಬರ ಸಿನಿಮಾ ರಿಲೀಸ್‌ ಆಗದೆ ಇದ್ರೂ ಕೂಡ ಆ ವರ್ಷ ಅವರು ಅತಿ ಹೆಚ್ಚು ಸಂಭಾವನೆ ಪಡೆದಿದ್ದಾರೆ. ಹೇಗೆ?   

ವರ್ಷದಲ್ಲಿ ಬಿಗ್‌ ಬಜೆಟ್‌ ಸಿನಿಮಾ ರಿಲೀಸ್‌ ಆದಾಗ ನಟ ಅಥವಾ ನಟಿಗೆ ಅತಿ ಹೆಚ್ಚು ಸಂಭಾವನೆ ಸಿಗುತ್ತದೆ ಅಲ್ವಾ? ಆದರೆ ಇಲ್ಲೋರ್ವ ನಟಿಯ ಸಿನಿಮಾ ರಿಲೀಸ್‌ ಆಗದೆ ವಿಶ್ವದಲ್ಲೇ ಅತಿ ಹೆಚ್ಚು ಸಂಭಾವನೆ ಪಡೆದ ಪಟ್ಟ ಪಡೆದುಕೊಂಡಿದ್ದಾರೆ. ಜಾನಿ ಡೆಪ್‌, Robert Downey Jr, Dwayne Johnson,  Margot Robbie, Angelina Jolie, Nicole Kidman ಮುಂತಾದ ಸೂಪರ್‌ ಸ್ಟಾರ್‌ಗಳು ಕೂಡ ಸಿನಿಮಾ ರಿಲೀಸ್‌ ಆದಾಗ ಮಾತ್ರ ಸಂಭಾವನೆ ಪಡೆಯೋದು ಅಲ್ವೇ? 2020ರಲ್ಲಿ ನಟಿಯೋರ್ವರು ಸಿನಿಮಾ ರಿಲೀಸ್‌ ಆಗದಿದ್ರೂ ಕೂಡ ವಿಶ್ವದಲ್ಲೇ ಅತಿ ಹೆಚ್ಚು ಸಂಭಾವನೆ ಪಡೆದಿದ್ದಾರೆ.

ಆ ನಟಿ ಯಾರು?
2020ರಲ್ಲಿ ಫೋರ್ಬ್ಸ್‌ ಪಟ್ಟಿಯಲ್ಲಿ ಮೂರನೇ ಬಾರಿಗೆ ಅತಿ ಹೆಚ್ಚು ಸಂಭಾವನೆ ಪಡೆದ ನಟ ಎಂದು Dwayne Johnson ಅವರ ಹೆಸರು ಬಂತು. ಆ ವರ್ಷ ಅವರು ಎಂಭತ್ತೇಳು ಮಿಲಿಯನ್‌ ಸಂಭಾವನೆ ಪಡೆದಿದ್ದರು. ಕೊರೊನಾ ಕಾರಣಕ್ಕೆ ಅತಿ ಹೆಚ್ಚು ಬಿಗ್‌ ಬಜೆಟ್‌ ಸಿನಿಮಾಗಳು ಆ ವರ್ಷ ರಿಲೀಸ್‌ ಆಗಲಿಲ್ಲ. Scarlett Johansson ಅವರು ಎರಡು ವರ್ಷಗಳ ಕಾಲ ವಿಶ್ವದಲ್ಲೇ ಅತಿ ಹೆಚ್ಚು ಸಂಭಾವನೆ ಪಡೆದ ನಟಿಯಾಗಿ ಹೊರಹೊಮ್ಮಿದ್ದರು. ಇವರನ್ನು Sofia Vergara ಬೀಟ್‌ ಮಾಡಿದ್ದಾರೆ. 

ಸಂಭಾವನೆ ಎಷ್ಟು?
2020 ಮಾರ್ಚ್‌ ಬಳಿಕ ಅಷ್ಟು ಮೇಜರ್‌ ಸಿನಿಮಾಗಳು ರಿಲೀಸ್ ಆಗಲಿಲ್ಲ.‌ ಆದರೆ ಸೋಫಿಯಾ ಬಳಿ ಶೋಗಳಿದ್ದವು. ಮಾಡರ್ನ್‌ ಫ್ಯಾಮಿಲಿ ಶೋನ ಕೊನೆಯ ಸೀಸನ್‌ನಲ್ಲಿ ಅವರು ಕಾಣಿಸಿಕೊಂಡರು.  ಅಮೆರಿಕಾಸ್‌ ಗಾಟ್‌ ಟಾಲೆಂಟ್‌ನಲ್ಲಿ ಕೂಡ ಅವರು ಜಡ್ಜ್‌ ಆದರು. ಹೀಗಾಗಿ ಇವರಿಗೆ 43 ಬಿಲಿಯನ್‌ ಸಂಭಾವನೆ ಸಿಕ್ಕಿತು. ಈ ಮೂಲಕ ಅವರು ಅತಿ ಹೆಚ್ಚು ಸಂಭಾವನೆ ಪಡೆದ ನಟಿಯಾದರು.

ಧ್ವನಿ ನೀಡಿದ್ರು 
ಮಾಡರ್ನ್‌ ಫ್ಯಾಮಿಲಿ ಅಂತ್ಯ ಆದ್ಮೇಲೆ ಸೋಫಿಯಾ ಸಂಭಾವನೆ ಕಡಿಮೆ ಆಗಿದೆ. ಟಿವಿಯಲ್ಲಿ ಅವರು ಒಂದಾದ ಮೇಲೆ ಒಂದರಂತೆ ಶೋಗಳಲ್ಲಿ ಭಾಗವಹಿಸುತ್ತಿದ್ದಾರೆ. ಕೆಲ ಆನಿಮೇಶನ್‌ ಸಿನಿಮಾಗಳಿಗೂ ಅವರು ಧ್ವನಿ ನೀಡುತ್ತಿದ್ದಾರೆ. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಯಾವುದೇ ಹಿನ್ನೆಲೆ ಇಲ್ಲದೆ ಸ್ಟಾರ್ ಆದ ನಟ.. ಮಗ ಹುಟ್ಟಿದಾಗ ಜಾತಕ ಹೇಳಿದ್ರು ಚಿರಂಜೀವಿ: ಅಷ್ಟಕ್ಕೂ ಯಾರು ಆ ಹೀರೋ?
ಮದುವೆ ಬಳಿಕ ಹನಿಮೂನ್ ಕ್ಯಾನ್ಸಲ್ ಮಾಡಿದ ಸಮಂತಾ? ಈ ಹೊಸ ನಿರ್ಧಾರ ತಗೊಂಡು ಶಾಕ್ ಕೊಟ್ಟಿದ್ಯಾಕೆ?