'ಜನನಾಯಗನ್' ನೋಡಿ ನಟಿ ತ್ರಿಷಾಗೆ ಖುಷಿ, ತಾಯಿಗೆ ಭಾರೀ ಬೇಸರ.. ಉಮಾ ಕೃಷ್ಣನ್‌ ಹೇಳಿಕೆಗೆ 'ವಿಜಯ್ ಫ್ಯಾನ್ಸ್' ಶಾಕ್!

Published : Jul 24, 2026, 04:01 PM IST
Trisha Krishan Uma Krishnan Thalapathy Vijay

ಸಾರಾಂಶ

ವಾಸ್ತವವಾಗಿ ಜನವರಿ 9ರಂದೇ ಪೊಂಗಲ್ ಹಬ್ಬಕ್ಕೆ ಬರಬೇಕಿದ್ದ ಈ ಚಿತ್ರ, ಸೆನ್ಸಾರ್ ಮಂಡಳಿಯ ತಕರಾರಿನಿಂದ ವಿಳಂಬವಾಯಿತು. ಚಿತ್ರದ ಕೆಲವು ದೃಶ್ಯಗಳು ಧಾರ್ಮಿಕ ಭಾವನೆಗೆ ಧಕ್ಕೆ ತರುತ್ತವೆ ಎಂಬ ದೂರಿನ ಹಿನ್ನೆಲೆಯಲ್ಲಿ ದೊಡ್ಡ ಮಟ್ಟದ ಹೋರಾಟವೇ ನಡೆದಿತ್ತು. ಕೊನೆಗೂ ಎಲ್ಲಾ ಕಾನೂನು ಸಮರಗಳನ್ನು ಗೆದ್ದು ಸಿನಿಮಾ ಈಗ ಜನರ ಮುಂದೆ ಬಂದಿದೆ.

ದಳಪತಿ ವಿಜಯ್‌ 'ಜನನಾಯಕನ್' ನೋಡಿ ತ್ರಿಷಾ ತಾಯಿ ಆಡಿದ ಆ ಒಂದು ಮಾತು ಈಗ ಸಖತ್ ವೈರಲ್!

ದಕ್ಷಿಣ ಭಾರತದ ಚಿತ್ರರಂಗದಲ್ಲಿ 'ದಳಪತಿ' ಅಂದ್ರೆ ಅದೊಂದು ಬ್ರ್ಯಾಂಡ್. ಅವರ (Thalapathy Vijay) ಸಿನಿಮಾ ಬರ್ತಿದೆ ಅಂದ್ರೆ ಹಬ್ಬದ ವಾತಾವರಣ ಮನೆ ಮಾಡಿರುತ್ತೆ. ಈಗ ಅಂತಹದ್ದೇ ಒಂದು ಸಂಚಲನವನ್ನು ಸೃಷ್ಟಿಸಿದೆ ನಟ ವಿಜಯ್ (Vijay Joseph) ನಟನೆಯ ಬಹುನಿರೀಕ್ಷಿತ ಸಿನಿಮಾ 'ಜನನಾಯಕನ್'. ಸಾಕಷ್ಟು ಅಡೆತಡೆಗಳು, ಸೆನ್ಸಾರ್ ಮಂಡಳಿಯ ಕತ್ತರಿ ಪ್ರಯೋಗ ಹಾಗೂ ದೀರ್ಘ ಕಾಯುವಿಕೆಯ ನಂತರ ಈ ಚಿತ್ರ (Jana Nayagan) ಗುರುವಾರ ವಿಶ್ವದಾದ್ಯಂತ ಅದ್ಧೂರಿಯಾಗಿ ತೆರೆಗೆ ಬಂದು ಧೂಳೆಬ್ಬಿಸುತ್ತಿದೆ. ಆದರೆ, ಈ ಸಂಭ್ರಮದ ನಡುವೆಯೇ ನಟಿ ತ್ರಿಷಾ ಕೃಷ್ಣನ್ ಅವರ ತಾಯಿ ಉಮಾ ಕೃಷ್ಣನ್ ನೀಡಿರುವ ಒಂದು ಹೇಳಿಕೆ ವಿಜಯ್ ಅಭಿಮಾನಿಗಳ ಕಣ್ಣಾಲಿಗಳು ಒದ್ದೆಯಾಗುವಂತೆ ಮಾಡಿದೆ!

ಥಿಯೇಟರ್‌ನಲ್ಲಿ ಉಮಾ ಕೃಷ್ಣನ್ ಅಬ್ಬರ!

ಸಿನಿಮಾ ಬಿಡುಗಡೆಯಾದ ಮೊದಲ ದಿನವೇ ಅದ್ದೂರಿ ರೆಸ್ಪಾನ್ಸ್ ಸಿಕ್ಕಿದೆ. ವಿಶೇಷ ಅಂದ್ರೆ, ಚೆನ್ನೈನ ಜನಪ್ರಿಯ ಚಿತ್ರಮಂದಿರವೊಂದರಲ್ಲಿ ನಟಿ ತ್ರಿಷಾ ಅವರ ತಾಯಿ ಉಮಾ ಕೃಷ್ಣನ್ 'ಜನನಾಯಕನ್' ಚಿತ್ರವನ್ನು ವೀಕ್ಷಿಸಿದರು. ಸಿನಿಮಾ ನೋಡಿ ಹೊರಬರುತ್ತಿದ್ದಂತೆ ಮಾಧ್ಯಮಗಳು ಅವರನ್ನು ಮುತ್ತಿಕೊಂಡವು. ಚಿತ್ರ ಹೇಗಿದೆ ಎಂಬ ಪ್ರಶ್ನೆಗೆ ನಗುನಗುತ್ತಲೇ ಉತ್ತರಿಸಿದ ಉಮಾ, "ಸಿನಿಮಾ ನಿಜಕ್ಕೂ ಅಮೇಜಿಂಗ್ ಆಗಿದೆ. ಕಥೆ, ಆಕ್ಷನ್ ಮತ್ತು ಎಂಟರ್‌ಟೈನ್‌ಮೆಂಟ್ ಎಲಿಮೆಂಟ್ಸ್ ನಮಗೆ ತುಂಬಾ ಇಷ್ಟವಾಯ್ತು. ನಾವೆಲ್ಲರೂ ಈ ಸಿನಿಮಾವನ್ನು ಎಂಜಾಯ್ ಮಾಡಿದೆವು," ಎಂದು ಹರ್ಷ ವ್ಯಕ್ತಪಡಿಸಿದರು.

ಫ್ಯಾನ್ಸ್ ಎದೆಯಲ್ಲಿ ನಡುಕ ಹುಟ್ಟಿಸಿದ ಆ ಮಾತು!

ಆದರೆ, ಮಾಧ್ಯಮದವರು "ವಿಜಯ್ ಅವರಿಗೆ ಇದು ಕೊನೆಯ ಸಿನಿಮಾವಂತೆ, ಅವರು ಪೂರ್ಣ ಪ್ರಮಾಣದಲ್ಲಿ ರಾಜಕೀಯಕ್ಕೆ ಹೋಗುತ್ತಿದ್ದಾರಲ್ಲಾ?" ಎಂದು ಕೇಳಿದಾಗ ಉಮಾ ಕೃಷ್ಣನ್ ಅವರ ಮುಖದಲ್ಲಿ ಒಂದು ಕ್ಷಣ ವಿಷಾದದ ಛಾಯೆ ಮೂಡಿತು. ಭಾವುಕರಾದ ಅವರು, "ನನಗೆ ನಿಜವಾಗಿಯೂ ತುಂಬಾ ಬೇಸರವಾಗುತ್ತಿದೆ. ಒಬ್ಬ ಅದ್ಭುತ ನಟನಾಗಿ ನಾವು ವಿಜಯ್ ಅವರನ್ನು ಕಳೆದುಕೊಳ್ಳುತ್ತಿದ್ದೇವೆ," ಎಂದು ಹೇಳಿದರು. ವಿಜಯ್ ಮತ್ತು ತ್ರಿಷಾ ತೆರೆಯ ಮೇಲೆ ಬೆಸ್ಟ್ ಜೋಡಿ ಎಂಬ ಹೆಸರಿದೆ. ಹೀಗಿರುವಾಗ ತ್ರಿಷಾ ಅವರ ತಾಯಿಯೇ ವಿಜಯ್ ಅವರ ನಟನಾ ಜೀವನದ ಅಂತ್ಯದ ಬಗ್ಗೆ ಮಾತನಾಡಿದ್ದು ಅಭಿಮಾನಿಗಳಿಗೆ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ.

ಸಂಕಷ್ಟಗಳ ಸರಮಾಲೆ ದಾಟಿ ಬಂದ 'ಜನನಾಯಕನ್'

ಈ ಸಿನಿಮಾ ಸುಲಭವಾಗಿ ತೆರೆಗೆ ಬಂದಿಲ್ಲ. ವಾಸ್ತವವಾಗಿ ಜನವರಿ 9ರಂದೇ ಪೊಂಗಲ್ ಹಬ್ಬಕ್ಕೆ ಬರಬೇಕಿದ್ದ ಈ ಚಿತ್ರ, ಸೆನ್ಸಾರ್ ಮಂಡಳಿಯ ತಕರಾರಿನಿಂದ ವಿಳಂಬವಾಯಿತು. ಚಿತ್ರದ ಕೆಲವು ದೃಶ್ಯಗಳು ಧಾರ್ಮಿಕ ಭಾವನೆಗೆ ಧಕ್ಕೆ ತರುತ್ತವೆ ಎಂಬ ದೂರಿನ ಹಿನ್ನೆಲೆಯಲ್ಲಿ ದೊಡ್ಡ ಮಟ್ಟದ ಹೋರಾಟವೇ ನಡೆದಿತ್ತು. ಕೊನೆಗೂ ಎಲ್ಲಾ ಕಾನೂನು ಸಮರಗಳನ್ನು ಗೆದ್ದು ಸಿನಿಮಾ ಈಗ ಜನರ ಮುಂದೆ ಬಂದಿದೆ.

ತಾರಾಗಣದ ದಂಡೇ ಇದೆ!

ಎಚ್. ವಿನೋತ್ ನಿರ್ದೇಶನದ ಈ ಸಿನಿಮಾವನ್ನು ಕೆವಿಎನ್ ಪ್ರೊಡಕ್ಷನ್ಸ್ ಅತ್ಯಂತ ಅದ್ಧೂರಿಯಾಗಿ ನಿರ್ಮಿಸಿದೆ. ಚಿತ್ರದಲ್ಲಿ ಪೂಜಾ ಹೆಗ್ಡೆ, ಮಮಿತಾ ಬೈಜು, ಪ್ರಕಾಶ್ ರಾಜ್, ಬಾಬಿ ಡಿಯೋಲ್ ಹಾಗೂ ಪ್ರಿಯಾಮಣಿ ಅವರಂತಹ ಘಟಾನುಘಟಿ ಕಲಾವಿದರಿದ್ದಾರೆ. ಅನಿರುದ್ಧ್ ರವಿಚಂದರ್ ಅವರ ಹಿನ್ನೆಲೆ ಸಂಗೀತವಂತೂ ಥಿಯೇಟರ್‌ನಲ್ಲಿ ಸೌಂಡ್ ಬಾಕ್ಸ್ ಕಿತ್ತುಬರುವಂತೆ ಮಾಡುತ್ತಿದೆ.

ಸದ್ಯಕ್ಕೆ ವಿಜಯ್ ರಾಜಕೀಯದತ್ತ ಮುಖ ಮಾಡಿರುವುದರಿಂದ, ಇದು ಅವರ ಬೆಳ್ಳಿಪರದೆಯ 'ಲಾಸ್ಟ್ ಆಕ್ಟ್' ಇರಬಹುದು ಎಂಬ ಕಾರಣಕ್ಕೆ ಫ್ಯಾನ್ಸ್ ಭಾವುಕರಾಗಿಯೇ ಚಿತ್ರಮಂದಿರಗಳತ್ತ ಹರಿದು ಬರುತ್ತಿದ್ದಾರೆ. ಉಮಾ ಕೃಷ್ಣನ್ ಹೇಳಿದಂತೆ, ವಿಜಯ್ ಅವರನ್ನು ರಾಜಕೀಯದಲ್ಲಿ ಜನನಾಯಕನಾಗಿ ನೋಡಲು ಖುಷಿಯಿದ್ದರೂ, ನಟನಾಗಿ ಮಿಸ್ ಮಾಡಿಕೊಳ್ಳುತ್ತೇವೆ ಎಂಬ ನೋವು ಮಾತ್ರ ಕನ್ನಡಿಗರಲ್ಲೂ ಮನೆ ಮಾಡಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

'ಡ್ಯಾಡೀಸ್ ಹೋಮ್'.. ಯಶ್ ಹೋದಲ್ಲೆಲ್ಲಾ ಫಾಲೋ ಮಾಡ್ತಿದೆ ಈ ಡೈಲಾಗ್; ಅಷ್ಟಕ್ಕೂ ಇದರಲ್ಲಿರೋ ಸೀಕ್ರೆಟ್ ಏನು?
RAMAYANA: ಅಮೆರಿಕಾದಲ್ಲಿ ಯಶ್, ಫೋಟೋಗಾಗಿ ಮುಗಿಬಿದ್ದ ಫ್ಯಾನ್ಸ್.. 'ರಾಮಾಯಣ' ಪ್ರಚಾರಕಾರ್ಯ ಇನ್ನೆಷ್ಟು ದಿನ?