
ತೆಲುಗು ಚಿತ್ರರಂಗದಲ್ಲಿ ನಾಲ್ಕು ದಶಕಗಳ ಕಾಲ ನಾಯಕನಾಗಿ, ವಿಲನ್‌ನಾಗಿ, ಪೋಷಕ ನಟನಾಗಿ ಮಿಂಚಿದ ನಟ ಶ್ರೀಕಾಂತ್ ಮಂಗಳವಾರ (October 12th) ರಾತ್ರಿ ಚೆನ್ನೈನಲ್ಲಿ ನಿಧನರಾಗಿದ್ದಾರೆ. ವಯೋಸಹಜ ಕಾಯಿಲೆಗಳಿಂದ ಅವರು ಬಳಲುತ್ತಿದ್ದರು ಎನ್ನಲಾಗಿದೆ.
ಶ್ರೀಕಾಂತ್ ನಿಧನದ ವಿಚಾರ ತಿಳಿದು ಗಣ್ಯರು ಮತ್ತು ಅಭಿಮಾನಿಗಳು ಸೋಷಿಯಲ್ ಮೀಡಿಯಾದಲ್ಲಿ ಸಂತಾಪ ಸೂಚಿಸಿದ್ದಾರೆ. ' ಆತ್ಮೀಯ ಸ್ನೇಹಿತನ ಸಾವು ತುಂಬಾ ದುಃಖಕರವಾಗಿದೆ,' ಎಂದು ತಲೈವಾ ರಜನೀಕಾಂತ್ ಟ್ಟೀಟ್ ಮಾಡಿದ್ದಾರೆ. 'ನಾಯಕ, ಕ್ಯಾರೆಕ್ಟರ್ ಆರ್ಟಿಸ್ಟ್ ಆಗಿ ಸರ್ವತೋಮುಖ ಪ್ರತಿಭೆ ಶ್ರೀಕಾಂತ್ ಅವರ ನಿಧನ ವಾರ್ತೆ ಕೇಳಿ ಹೃದಯ ಭಾರವಾಗಿದೆ,' ಎಂದು ನಟ ಕಮಲ್ ಹಾಸನ್ ಟ್ಟೀಟ್ ಮಾಡಿದ್ದಾರೆ.
ಜಯಲಲಿತಾ ನಟನೆಯ 'ವೆನ್ರಿಯಾ ಅಡೈ' ಚಿತ್ರದ ಮೂಲಕ ಕಾಲಿವುಡ್ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಶ್ರೀಕಾಂತ್ ಅವರು ಪೂರ್ಣ ಪ್ರಮಾಣದಲ್ಲಿ ನಾಯಕನಾಗಿ ನಟಿಸಿದ ಸಿನಿಮಾ ಭೈರವಿ. ಭಾಮ ವಿಜಯಂ, ಪೂರ್ವ ತಲಯ, ಎತ್ತಿರ್ ನಿಚಲ್ ಸೇರಿದಂತೆ ಹಲವಾರು ಸಿನಿಮಾಗಳಲ್ಲಿ ನಟಿಸಿದ್ದಾರೆ. ಶ್ರೀಕಾಂತ್ ಅವರ ಕೊನೆ ಸಂದರ್ಶನದಲ್ಲಿ ಸೂಪರ್ ಸ್ಟಾರ್ ರಜನಿಕಾಂತ್ ಅವರನ್ನು ಭೇಟಿ ಮಾಡಬೇಕು, ಎಂಬ ಆಸೆ ಹೇಳಿಕೊಂಡಿದ್ದರು. ಆದರೆ ಅವರ ಆಸೆ ಈಡೇರುವ ಮುನ್ನವೇ ವಿದಾಯ ಹೇಳಿದ್ದಾರೆ.
ಬಣ್ಣದ ಬದುಕಿಗೆ ಕಾಲಿಡುವ ಮುನ್ನ ಶ್ರೀಕಾಂತ್ ಅವರು ಅಮೆರಿಕನ್ ಕಾನ್ಸೊಲೇಟ್‌ನಲ್ಲಿ ಕೆಲಸ ಮಾಡುತ್ತಿದ್ದರು. ಚಿತ್ರರಂಗದಲ್ಲಿ ಅವರನ್ನು ವೆನ್ನಿರ ಆದೈ ಶ್ರೀಕಾಂತ್ ಎಂದು ಗುರುತಿಸುತ್ತಿದ್ದರು. ಶ್ರೀಕಾಂತ್ ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸೋಣ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.