ಅರ್ಜುನ್ ಸರ್ಜಾ-ಆಶಾರಾಣಿ ಲವ್ ಸ್ಟೋರಿ ಸೀಕ್ರೆಟ್ ಗೊತ್ತಾ? ಇದು ತೀರಾ ಡಿಫ್ರಂಟ್ ಆಂಗಲ್..!

Published : Feb 14, 2026, 02:55 PM IST
Arjun Sarja Asha Rani

ಸಾರಾಂಶ

ಅರ್ಜುನ್ ಸರ್ಜಾ-ಆಶಾರಾಣಿ ಜೋಡಿ 1988 ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಮದುವೆ ನಂತರ ಆಶಾ ರಾಣಿ ಗಂಡ, ಮನೆ ಮತ್ತು ಮಕ್ಕಳು ಅಂತ ತೊಡಗಿಸಿಕೊಂಡರು. ಇವರಿಗೆ ಐಶ್ವರ್ಯ ಮತ್ತು ಅಂಜನಾ ಅನ್ನುವ ಇಬ್ಬರು ಹೆಣ್ಣುಮಕ್ಕಳಿದ್ದಾರೆ. ಐಶ್ವರ್ಯ ಚಿತ್ರರಂಗದಲ್ಲಿ, ಅಂಜನಾ ಓದಿನಲ್ಲಿ ಬ್ಯುಸಿಯಾಗಿದ್ದಾರೆ.

ಅರ್ಜುನ್ ಸರ್ಜಾ-ಆಶಾರಾಣಿ ಲವ್ ಸ್ಟೋರಿ

ಕನ್ನಡಿಗ, ಬಹುಭಾಷಾ ನಟ ಅರ್ಜುನ್ ಸರ್ಜಾ (Arjun Sarja) ಹಾಗೂ ನಟಿ ಆಶಾರಾಣಿ (Asha Rani) ಪ್ರೇಮಕಥೆ ಹಲವರಿಗೆ ಗೊತ್ತಿರಲಿಕ್ಕಿಲ್ಲ. ಅವರಿಬ್ಬರದೂ ಲವ್ ಮ್ಯಾರೇಜ್ ಎಂಬುದು ಬಹತೇಕರಿಗೆ ಗೊತ್ತಿದ್ದರೂ ಅದು ಹೇಗೆ ಆಯ್ತು? ಮೊದಲು ಪ್ರಪೋಸ್ ಮಾಡಿದ್ದು ಯಾರು? ಈ ಎಲ್ಲಾ ರಹಸ್ಯ ಸಂಗತಿ ಇಲ್ಲಿದೆ ನೋಡಿ..

ಸುದ್ದಿಮೂಲಗಳಿಂದ ಬಂದ ಮಾಹಿತಿ ಪ್ರಕಾರ, ತೆಲುಗಿನ 'ಡಾಕ್ಟರ್ ಗಾರಿ ಅಬ್ಬಾಯಿ' (Doctor Gari Abbai Movie) ಚಿತ್ರಕ್ಕೆ ನಾಯಕ ಅರ್ಜುನ್ ಸರ್ಜಾ ಅವರೇ ನಾಯಕಿಯಾಗಿ ಆಶಾರಾಣಿಯನ್ನು ಪರಿಚಯಿಸಿದ್ರು. ಈ ಚಿತ್ರದ ಮೂಲಕವೇ ಆಶಾ ರಾಣಿ ಟಾಲಿವುಡ್‌ಗೆ ಕಾಲಿಟ್ಟಿದ್ದರು. ಆಶಾರಾಣಿಯ ಮೂಲ ಹಸೆರು ನಿವೇದಿತಾ. ಈ ಚಿತ್ರದ ಕೆಲಸ ಮುಗಿಯೋ ಹೊತ್ತಿಗೆ ಇವರ ನಡುವೆ ಒಂದು ಆತ್ಮೀಯತೆ ಬೆಳೆದಿತ್ತು, ಅತ್ಮೀಯ ಸ್ನೇಹಿತರಾಗಿದ್ದರು.

ಅರ್ಜುನ್-ಆಶಾ ನಡುವೆ ಪ್ರೀತಿ

ಅರ್ಜುನ್-ಆಶಾ ನಡುವೆ ಪ್ರೀತಿ ಅರಳಿತ್ತು. ಆದರೆ, ಒಂದೇ ಒಂದು ದಿನವೂ ಪರಸ್ಪರ ಪ್ರೀತಿ ಇದೆ ಅಂತ ಈ ಇಬ್ಬರೂ ಹೇಳಿಕೊಳ್ಳಲಿಲ್ಲ ಎನ್ನಲಾಗಿದೆ. ಅದೊಂದು ಒಂದು ದಿನ ಅರ್ಜುನ್ ಸರ್ಜಾ ಅವರನ್ನ ಆಶಾ ರಾಣಿ ಅವರೇ 'ನೀವು ನನ್ನ ಲೈಕ್ ಮಾಡ್ತೀರಾ?" ಅಂತ ಕೇಳಿದಾಗ ಅರ್ಜುನ್ ಸರ್ಜಾ 'ಹೌದು' ಎಂದರಂತೆ. ಜೊತೆಗೆ, ನಾನು ಮದುವೆ ಅಂತ ಆಗೋದಿದ್ದರೆ ಅದು ನಿನ್ನನ್ನೇ' ಅಂತಲೇ ಹೇಳಿದ್ದರು ಎನ್ನಲಾಗಿದೆ. ಆ ಬಳಿಕ ಅವರಬ್ಬರೂ ಮನೆಯವರನ್ನು ಒಪ್ಪಿಸಿ ಮದುವೆ ಆಗಿ 2 ಮಕ್ಕಳ ಪೋಷಕರಾಗಿದ್ದು ಈಗ ಇತಿಹಾಸ.

ಅಚ್ಚರಿ ಎಂಬಂತೆ, ಅರ್ಜುನ್ ಸರ್ಜಾ ಮತ್ತು ಆಶಾ ರಾಣಿ ಪ್ರೀತಿನೇ ಒಂಥರಾ ವಿಶೇಷವಾಗಿದೆ. ಅವರಿಬ್ಬರ ಪ್ರೀತಿಯಲ್ಲಿ 'ಪ್ರಪೋಸ್' ಅನ್ನುವ ಕಾನ್ಸೆಪ್ಟ್ ಇಲ್ಲ. ಪ್ರೀತಿ, ಮಾತಿಲ್ಲದ ಭಾವನೆ, ಮದುವೆ, ಮಕ್ಕಳು ಹೀಗೆ ಈ ಜೋಡಿ ಪರಸ್ಪರ ಅರ್ಥ ಮಾಡಿಕೊಂಡು ಇಂದಿಗೂ ಆದರ್ಶ ದಂಪತಿಗಳು ಎಂಬಂತಿದ್ದಾರೆ.

ನಟಿ ಆಶಾರಾಣಿ ಅವರು ಕನ್ನಡದಲ್ಲಿ ಶಿವರಾಜ್‌ಕುಮಾರ್ ಜೋಡಿಯಾಗಿ 'ರಥಸಪ್ತಮಿ' ಚಿತ್ರ ಮಾಡಿದ್ದರು. ಆದರೆ, ಇವರನ್ನ ತೆಲುಗು ಚಿತ್ರರಂಗಕ್ಕೆ ಪರಿಚಯಿಸೋ ಕೆಲಸವನ್ನು ಮಾಡಿದ್ದು ಅರ್ಜುನ್ ಸರ್ಜಾ. 'ಡಾಕ್ಟರ್ ಗಾರಿ ಅಬ್ಬಾಯಿ' ಚಿತ್ರದ ಸಮಯದಲ್ಲಿ ಅರ್ಜುನ್ ಸರ್ಜಾ ಮತ್ತು ಆಶಾ ರಾಣಿ (ನಿವೇದಿತಾ) ಪರಿಚಯ ಆದರು, ಇಬ್ಬರೂ ಆತ್ಮೀಯರಾದರು. ಪ್ರೀತಿನೂ ಬೆಳೆದಿತ್ತು, ಮದುವೆಯಲ್ಲಿ ಅವರಿಬ್ಬರ ಪ್ರೀತಿ ಒಂದಾಯಿತು.

1988 ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು

ಅರ್ಜುನ್ ಸರ್ಜಾ-ಆಶಾರಾಣಿ ಜೋಡಿ 1988 ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಮದುವೆ ನಂತರ ಆಶಾ ರಾಣಿ ಅವರು ಗಂಡ, ಮನೆ ಮತ್ತು ಮಕ್ಕಳು ಅಂತ ತಮ್ಮನ್ನು ತೊಡಗಿಸಿಕೊಂಡರು. ಇವರಿಗೆ ಐಶ್ವರ್ಯ ಮತ್ತು ಅಂಜನಾ ಅನ್ನುವ ಇಬ್ಬರು ಹೆಣ್ಣುಮಕ್ಕಳಿದ್ದಾರೆ. ಹಿರಿಯ ಮಗಳು ಐಶ್ವರ್ಯ ಈಗಾಗಲೇ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದಾರೆ. ಮತ್ತೊಬ್ಬರು ಅಂಜನಾ ವಿದೇಶದಲ್ಲಿ ಓದುತ್ತಿದ್ದಾರೆ.

ಪ್ರೇಮಿಗಳ ದಿನ ಮಗಳು ಐಶ್ವರ್ಯಾ ಸಿನಿಮಾ ರಿಲೀಸ್

ಹೌದು, ಅರ್ಜುನ್ ಸರ್ಜಾ ಮಗಳು ಐಶ್ವರ್ಯಾ ನಟನೆಯ 'ಸೀತಾ ಪಯಣ' ಚಿತ್ರವು ಇಂದು, ಅಂದರೆ 14 ಫೆಬ್ರವರಿ 2026ರಂದು, ಪ್ರೇಮಿಗಳ ದಿನ (Valentine's Day) ಬಿಡುಗಡೆ ಆಗುತ್ತಿದೆ. ಈ ಚಿತ್ರಕ್ಕೆ ಉಪೇಂದ್ರ ಅಣ್ಣ ಸುಧೀಂದ್ರ ಮಗ ನಿರಂಜನ್ ನಾಯಕರು. ಅಂದಹಾಗೆ, ಅರ್ಜುನ್ ಸರ್ಜಾ ಅವರು ನಟಕರಷ್ಟೆ ಅಲ್ಲ, ನಿರ್ದೇಶಕ ಮತ್ತು ನಿರ್ಮಾಪಕರೂ ಕೂಡ. ಈಗ ಮಗಳು ಐಶ್ವರ್ಯಾ ಸರ್ಜಾ, ನಿರಂಜನ್ ಸುಧೀಂದ್ರ ತಾರಾಗಣದಲ್ಲಿ 'ಸೀತಾ ಪಯಣ' ಹೆಸರಿನ ಸಿನಿಮಾ ಮಾಡಿ ತೆರೆಗೆ ತಂದಿದ್ದಾರೆ. ಮುಂದೇನು ಅನ್ನೋದನ್ನ ಕಾದು ನೋಡಬೇಕಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಮತ್ತೊಂದು ವಿಭಿನ್ನ ಪಾತ್ರದಲ್ಲಿ ನಟಿಸಿ ಗೆದ್ದ ರಾಜ್! ಆಗ ಕಾವಿ, ಈಗ ಖಾಕಿ. ನಮ್ ಶೆಟ್ರು ವರ್ಸಟೈಲ್ ಆಕ್ಟರ್!
ಸಹನಟಿ, ಬದುಕಿಗೆ ಪ್ರೇಮ ರಶ್ಮಿಯಾದಳು! 14 ವರ್ಷದ ಪ್ರೀತಿಗೆ ಸದ್ಯದಲ್ಲೆ ಮದುವೆ ಬಂಧ - ಜೆ.ಪಿ. ತುಮಿನಾಡು