ಬಿಜೆಪಿ ಸದಸ್ಯೆ ಚಿತ್ರಾ ವಾಘ್ ನಟಿ ಉರ್ಫಿ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಅಶ್ಲೀಲತೆ ಪ್ರಚಾರ ಮಾಡುತ್ತಿದ್ದಾರೆ ಎಂದು ದೂರು ನೀಡಿದ್ದಾರೆ.
ನಟಿ, ಸಾಮಾಜಿಕ ಜಾಲತಾಣದ ಸೆನ್ಸೇಷನ್ ಉರ್ಫಿ ಜಾವೇದ್ ಯಾರಿಗೆ ತಾನೆ ಗೊತ್ತಿಲ್ಲ. ಚಿತ್ರ ವಿಚಿತ್ರ ಬಟ್ಟೆ ಧರಿಸುವ ಮೂಲಕವೇ ಉರ್ಫಿ ಸಿಕ್ಕಾಪಟ್ಟೆ ಫೇಮಸ್ ಆಗಿದ್ದಾರೆ. ಉರ್ಫಿ ದಿನಕ್ಕೊಂದು ರೀತಿ ಬಟ್ಟೆ ಧರಿಸಿ ಕ್ಯಾಮರಾ ಮುಂದೆ ಬರುತ್ತಾರೆ. ಉರ್ಫಿಯ ಹಾಟ್ ಆಂಡ್ ಬೋಲ್ಡ್ ಉಡುಗೆ ವಿರುದ್ಧ ಅನೇಕರು ಆಕ್ರೋಶ ಹೊರ ಹಾಕುತ್ತಾರೆ, ಸಿಕ್ಕಾಪಟ್ಟೆ ಟ್ರೋಲ್ ಮಾಡುತ್ತಾರೆ. ಆದರೆ ಯಾವುದಕ್ಕೂ ತಲೆಕೆಡಿಸಿಕೊಳ್ಳದ ನಟಿ ಉರ್ಫಿ ತನ್ನ ಸ್ಟೈಲ್, ತನ್ನ ಉಡುಪಿನ ಮೂಲವೇ ಸಾರ್ವಜನಿಕವಾಗಿ ಕಾಣಿಸಿಕೊಳ್ಳುತ್ತಾರೆ. ಬೋಲ್ಡ್ ಆಗಿ ಡ್ರೆಸ್ ಧರಿಸುವುದಲ್ಲದೇ ಮಾತು ಕೂಡ ಬೋಲ್ಡ್ ಆಗಿಯೇ ಇರುತ್ತದೆ.
ಇದೀಗ ಬಿಜೆಪಿ ಸದಸ್ಯೆ ಚಿತ್ರಾ ವಾಘ್ ನಟಿ ಉರ್ಫಿ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಅಷ್ಟೆಯಲ್ಲದೇ ಅಶ್ಲೀಲತೆ ಪ್ರಚಾರ ಮಾಡುತ್ತಿದ್ದಾರೆ ಎಂದು ದೂರು ನೀಡಿದ್ದಾರೆ. ಉರ್ಫಿ ಕಪ್ಪು ಬಣ್ಣದ ಬಗ್ಗೆ ಧರಿಸಿದ್ದ ವಿಡಿಯೋವನ್ನು ಶೇರ್ 'ಮುಂಬೈ ಬೀದಿಗಳಲ್ಲಿ ಸಾರ್ವಜನಿಕವಾಗಿ ನಗ್ನತೆ ಪ್ರಚಾರ ಮಾಡುತ್ತಿದ್ದಾರೆ' ಎಂದು ಆರೋಪ ಮಾಡಿದ್ದಾರೆ. ಉರ್ಫಿಯನ್ನು ಬಂಧಿಸಬೇಕು ಎಂದು ಆಗ್ರಹಿಸಿದ್ದಾರೆ. 'ಒಂದು ಕಡೆ ಮುಗ್ಧ ಹಿಡುಗಿಯರು ಈ ವುಕೃತಿಗೆ ಬಲಿಯಾಗುತ್ತಿದ್ದಾರೆ. ಮತ್ತೊಂದೆಡೆ ಹುಡುಗಿ ವಿಕೃತಿಯನ್ನು ಹರಡುತ್ತಿದ್ದಾರೆ' ಎಂದು ಆರೋಪಿಸಿದ್ದಾರೆ. ಉರ್ಫಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಚಿತ್ರಾ ಮುಂಬೈ ಪೊಲೀಸ್ ಆಯುಕ್ತರಿಗೆ ದೂರಿ ನೀಡಿದ್ದಾರೆ.
ತನ್ನ ವಿರುದ್ಧ ಯಾರೆ ಮಾತನಾಡಿದ್ರು ಸೈಲೆಂಟ್ ಆಗಿರುವ ಹುಡಿಗಿ ಉರ್ಫಿ ಅಲ್ಲ. ಎಲ್ಲರಿಗೂ ಸರಿಯಾಗಿ ತಿರುಗೇಟು ನೀಡುವ ಮೂಲಕ ವಿರೋಧಿಗಳ ಬಾಯಿ ಮುಚ್ಚಿಸುತ್ತಾರೆ. ಇದೀಗ ಬಿಜೆಪಿ ಸದಸ್ಯೆ ವಿರುದ್ಧವು ಕಿಡಿ ಕಾರಿರುವ ಉರ್ಫಿ ಅಶ್ಲೀಲತೆಯ ಪಾಠ ಮಾಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ದೀರ್ಘವಾಗಿ ಬರೆದುಕೊಂಡಿದ್ದಾರೆ. 'ನನ್ನ ಹೊಸ ವರ್ಷ ರಾಜಕಾರಣಿ ಮತ್ತು ಪೊಲೀಸ್ ದೂರಿನಿಂದ ಪ್ರಾರಂಭವಾಗಿದೆ' ಎಂದು ಹೇಳಿದ್ದಾರೆ.
ಕಿರುತೆರೆ ನಟಿ ಉರ್ಫಿ ಜಾವೇದ್ ಮೂತಿ ಮುಸುಡಿ ಊಸ್ಟ್; ಫೋಟೋ ವೈರಲ್
'ನನ್ನನ್ನು ಜೈಲಿಗೆ ಕಳುಹಿಸಲು ಸಂವಿಧಾನದಲ್ಲಿ ಯಾವುದೇ ವಿಧಿ ಇಲ್ಲ. ಅಶ್ಲೀಲತೆ, ನಗ್ನತೆಯ ವ್ಯಾಖ್ಯಾನವು ವ್ಯಕ್ತಿಯಿಂದ ವ್ಯಕ್ತಿಗೆ ವಿಭಿನ್ನವಾಗಿರುತ್ತದೆ. ನನ್ನ (ಖಾಸಗಿ ಭಾಗಗಳು) ಕಾಣಿಸದ ಹೊರತು, ನೀವು ನನ್ನನ್ನು ಜೈಲಿಗೆ ಕಳುಹಿಸಲು ಸಾಧ್ಯವಿಲ್ಲ. ಪ್ರಚಾರ ಪಡೆಯಲು ಮಾತ್ರ ಇವರು ಇದನ್ನು ಮಾಡುತ್ತಿದ್ದಾರೆ' ಎಂದು ಅವರು ಹೇಳಿದರು.
ಚೇತನ್ ಭಗತ್ ವಿರುದ್ಧ ಉರ್ಫಿ ಕಿಡಿ; '2 ಸ್ಟೇಟ್ಸ್' ಲೇಖಕನ ವಾಟ್ಸಪ್ ಚಾಟ್ ಲೀಕ್ ಮಾಡಿ ಸಿಡಿದೆದ್ದ ನಟಿ
'ಅತ್ಯಾಚಾರದ ಅಪರಾಧಿಗಳು ಸ್ವತಂತ್ರವಾಗಿ ತಿರುಗುತ್ತಿರುವಾಗ ಈ ರಾಜಕಾರಣಿಗಳು ನನ್ನನ್ನು ಬಂಧಿಸಲು ಬಂದಿದ್ದಾರೆ. ನಮ್ಮ ದೇಶದ ರಾಜಕಾರಣಿಗಳು ನನ್ನ ಬಂಧನಕ್ಕೆ ಒತ್ತಾಯಿಸುತ್ತಿರುವಾಗ ಅವರು ಮುಕ್ತವಾಗಿ ತಿರುಗಾಡುತ್ತಿದ್ದಾರೆ. ಎಂಥ ವಿಪರ್ಯಾಸ. ಹಾಗಾದರೆ ನಾನು ಅತ್ಯಾಚಾರಿಗಳಿಗಿಂತ ಸಮಾಜಕ್ಕೆ ದೊಡ್ಡ ಭಯ ಆಗಿದ್ದೀನಾ? ಎಂದು ಪ್ರಶ್ನೆಸಿದ್ದಾರೆ.
ಈ ಹಿಂದೆ ಕಳೆದ ವರ್ಷ ಉರ್ಫಿ ಖ್ಯಾತ ಲೇಖಕ ಚೇತನ್ ಭಗತ್ ವಿರುದ್ಧ ಸಿಡಿದೆದ್ದಿದ್ದರು. ಯುವಕರು ಉರ್ಫಿ ಜಾವೇದ್ ನೋಡುತ್ತಾ ಸಮಯ ಕಳೆಯುತ್ತಿದ್ದಾರೆ ಎಂದು ಚೇತನ್ ಭಗತ್ ಹೇಳಿದ ಹೇಳಿಕೆಗೆ ಉರ್ಫಿ ಖಡಕ್ ಪ್ರತಿಕ್ರಿಯೆ ನೀಡಿದ್ದರು. ಅಲ್ಲದೇ ಅವರ ವಾಟ್ಸಪ್ ಚಾಟ್ ಲೀಕ್ ಮಾಡಿ ಕಿಡಿ ಕಾರಿದ್ದರು.