ಜೋಸೆಫ್‌ ವಿಜಯ್‌ ಜೊತೆಗಿನ ಸಂಬಂಧದ ನಡುವೆಯೇ ತಮಿಳುನಾಡಿನ ಜಯಲಲಿತಾ ಆಗ್ತಾರಾ ನಟಿ ತ್ರಿಶಾ, ಇದಕ್ಕೆ ಕಾರಣವೂ ಇದೆ!

Published : Mar 02, 2026, 08:06 PM IST
trisha krishnan jayalalithaa comparison

ಸಾರಾಂಶ

ನಟ ವಿಜಯ್ ಪತ್ನಿ ಸಂಗೀತಾ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದು, ನಟಿ ತ್ರಿಶಾ ಜೊತೆಗಿನ ಸಂಬಂಧವನ್ನು ಆರೋಪಿಸಿದ್ದಾರೆ. ಈ ಬೆಳವಣಿಗೆಯು ತ್ರಿಶಾ ಮತ್ತು ಮಾಜಿ ಸಿಎಂ ಜಯಲಲಿತಾ ನಡುವಿನ ಸಾಮ್ಯತೆಗಳ ಬಗ್ಗೆ ಚರ್ಚೆ ಹುಟ್ಟುಹಾಕಿದೆ.

ಬೆಂಗಳೂರು (ಮಾ.2): ತಮಿಳು ಚಿತ್ರರಂಗದಲ್ಲಿ ದಳಪತಿ ಎಂದೇ ಫೇಮಸ್‌ ಆಗಿರುವ ನಟ ಹಾಗೂ ಟಿವಿಕೆ ಪಕ್ಷದ ಸಂಸ್ಥಾಪಕ ಜೋಸೆಫ್‌ ವಿಜಯ್‌ ಅವರ ಸಂಸಾರ ಬೀದಿಗೆ ಬಿದ್ದಿದೆ. 27 ವರ್ಷಗಳ ಕಾಲ ಸಂಸಾರದಲ್ಲಿದ್ದ ಪತ್ನಿ ಸಂಗೀತಾ ಸ್ವರ್ಣಲಿಂಗಂ ತನಗೆ ವಿಚ್ಛೇದನ ಬೇಕು ಎಂದು ನೇರವಾಗಿ ಕೋರ್ಟ್‌ ಮೆಟ್ಟಿಲೇರಿದ್ದಾರೆ. ಅಲ್ಲದೆ, ತಮ್ಮ ಆರೋಪದಲ್ಲಿ ಅವರು ವಿಜಯ್‌ಗೆ ಇನ್ನೊಬ್ಬ ನಟಿಯ ಜೊತೆ ಸಂಬಂಧವೂ ಇದೆ ಎಂದು ಹೇಳಿದ್ದಾರೆ. ಎಲ್ಲೂ ಅವರು ಆಕೆಯ ಹೆಸರನ್ನು ಹೇಳಿಲ್ಲವಾದರೂ, ಸೋಶಿಯಲ್‌ ಮೀಡಿಯಾ ಮಾತ್ರ ತ್ರಿಶಾ ಕೃಷ್ಣನ್‌ ಅವರನ್ನು ಗುರಿಯಾಗಿಸಿಕೊಂಡು ಸೈಬರ್‌ ದಾಳಿ ಮಾಡಿದ್ದಾರ.ೆ ವಿಜಯ್‌ ಸಂಸಾರ ಬೀದಿಗೆ ಬರಲು ತ್ರಿಶಾ ನೇರ ಕಾರಣ ಎಂದು ಅವರ ಅಭಿಮಾನಿಗಳೂ ಕೂಡ ಆರೋಪಿಸಿದ್ದಾರೆ.

ಈ ಎಲ್ಲದರ ನಡುವೆ ಸೋಶಿಯಲ್‌ ಮೀಡಿಯಾದಲ್ಲಿ ಬೇರೆಯದೇ ರೀತಿಯಾದ ಆದರೆ, ಅತ್ಯಂತ ಕುತೂಹಲವಾದ ಚರ್ಚೆಗೆ ಈ ಪ್ರಕರಣ ಸಾಕ್ಷಿಯಾಗಿದೆ. ವಿಜಯ್‌ ಈಗಾಗಲೇ ರಾಜಕೀಯ ಪ್ರವೇಶಿಸಿದ್ದು, ಮುಂಬರುವ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡುವ ನಿಟ್ಟಿನಲ್ಲಿ ವ್ಯಾಪಕ ಪ್ರಚಾರ ಕೈಗೊಂಡಿದ್ದಾರೆ. ಇದರ ಹಿನ್ನಲೆಯಲ್ಲಿ ಅವರ ವಿಚ್ಛೇದನ ಸುದ್ದಿ ಸಣ್ಣ ಹಿಂಜರಿತ ನೀಡಿದ್ದಂತೂ ಸತ್ಯ. ಆದರೆ, ಹೋಗುತ್ತಿರುವ ರೀತಿ ನೋಡಿದರೆ, ಮುಂದೊಂದು ದಿನ ತಮಿಳುನಾಡು ರಾಜಕೀಯ ಹೊಸ 'ಜಯಲಲಿತಾ' ಆಗಿ ತ್ರಿಶಾ ರೂಪುಗೊಳ್ಳಬಹುದು ಎನ್ನಲಾಗುತ್ತಿದೆ. ಅದಕ್ಕೆ ಕಾರಣ ಜಯಲಲಿತಾ ಹಾಗೂ ತ್ರಿಶಾ ನಡುವೆ ಇರುವ ಸಾಮ್ಯತೆ.

ಜಯಲಲಿತಾ ಹಾಗೂ ತ್ರಿಶಾ ಇಬ್ಬರೂ ಓದಿದ್ದು ಚರ್ಚ್‌ ಪಾರ್ಕ್‌ ಪ್ರದೇಶದಲ್ಲಿ, ಅಲ್ಲದೇ ಇಬ್ಬರೂ ಕೂಡ ಜಾತಿಯಲ್ಲಿ ಬ್ರಾಹ್ಮಣರು. ಅಲ್ಲದೆ, ನಟಿಯರೂ ಕೂಡ ಹೌದು. ಜಯಲಲಿತಾ ತಮ್ಮ ಜೀವನದುದ್ದಕ್ಕೂ ಅವಿವಾಹಿತರಾಗಿಯೇ ಉಳಿದಿದ್ದರು. ತ್ರಿಶಾ ಕೂಡ 40 ವರ್ಷವಾದರೂ ಅವಿವಾಹಿತರಾಗಿಯೇ ಇದ್ದಾರೆ. ಮದುವೆ ಬಗ್ಗೆ ಅವರು ಎಂದಿಗೂ ಮುಕ್ತವಾಗಿ ಮಾತನಾಡಿಲ್ಲ. ಇನ್ನೂ ಇಬ್ಬರ ಹೆಸರು ಕೂಡ ನಟರಾಗಿ-ರಾಜಕಾರಣಿಯಾಗಿ ಬದಲಾದ ಪುರುಷ ವ್ಯಕ್ತಿಯೊಂದಿಗೆ ಇರುವ ರಿಲೇಷನ್‌ಷಿಪ್‌ನೊಂದಿಗೆ ಗುರುತಿಸಿಕೊಂಡಿದ್ದಾರೆ. ಜಯಲಲಿತಾ ನಟ ಹಾಗೂ ತಮಿಳುನಾಡು ಮಾಜಿ ಸಿಎಂ ಎಂಜಿಆರ್‌ ಜೊತೆಗಿನ ರಿಲೇಷನ್‌ಷಿಪ್‌ ಸಖತ್‌ ಜನಪ್ರಿಯ. ಜಯಲಲಿತಾ ಮುಖ್ಯಮಂತ್ರಿಯಾಗಿ ತಮಿಳುನಾಡಿನಲ್ಲಿ ಯಶಸ್ವಿಯಾಗಿದ್ದರೆ, ಬಹುಶಃ ತ್ರಿಶಾ ಅವರ ಭವಿಷ್ಯ ಅದೇ ಆಗಿರಬಹುದು ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ. ತಮಿಳುನಾಡಿನಲ್ಲಿ ಮತ್ತೆ ಇಂಥದ್ದೇ ಇತಿಹಾಸ ಮರುಕಳಿಸುತ್ತಾ ಎನ್ನುವ ಚರ್ಚೆ ಎಲ್ಲಡೆ ನಡೆಯುತ್ತಿದೆ.

ಇದೇ ಮಾತನ್ನು ಹೇಳಿರುವ ವಿಜಯ್‌ ಪತ್ನಿ

ಮೂಲಗಳ ಪ್ರಕಾರ ವಿಜಯ್‌ ಪತ್ನಿ ಸಂಗೀತಾ ಕೂಡ ಮನೆಯಲ್ಲಿ ಗಲಾಟೆಯ ಸಂದರ್ಭದಲ್ಲಿ ವಿಜಯ್‌ಗೆ ಇದೇ ಮಾತನ್ನು ಹೇಳಿದ್ದಾರೆ ಎಂದು ವರದಿಗಳು ಬಂದಿವೆ. 'ನಾನು ವಿಎನ್‌ ಜಾನಕಿಯೂ ಅಲ್ಲ, ಸದಾನಂದವತಿಯೂ ಅಲ್ಲ. ಇದಲ್ಲದೆ, ನೀನು ಎಂಜಿಆರ್‌ ಕೂಡ ಇಲ್ಲ. ನಾನು ಶ್ರೀಲಂಕಾದ ಮಹಿಳೆ. ನಂಬಿಕೆದ್ರೋಹಿಗಳ ಜೊತೆ ಹೇಗೆ ವ್ಯವಹರಿಸಬೇಕು ಅನ್ನೋದು ನನಗೆ ಗೊತ್ತಿದೆ' ಎಂದು ಎಚ್ಚರಿಕೆ ನೀಡಿದ್ದಾರೆ ಎನ್ನಲಾಗಿದೆ.

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ನಟ ಪ್ರಭಾಸ್ ಅವರದ್ದು ಅಂಬಾನಿಗಿಂತಲೂ ಶ್ರೀಮಂತ ಕುಟುಂಬ; ರಾಜಮನೆತದ ಲಕ್ಷ ಎಕರೆ ಭೂಮಿಯನ್ನ ದಾನ ಮಾಡಿದ್ದೇ ಹೆಚ್ಚು!
ನಟಿಯ ಮೇಲೆ ಲೈಂಗಿಕ ದೌರ್ಜನ್ಯ, Manjummel Boys ನಿರ್ದೇಶಕ ಅರೆಸ್ಟ್‌!