ತೃಪ್ತಿ ಡಿಮ್ರಿ ಮೈಮೇಲೆ ಹೀಗೆ ಕೈಹಾಕಿದ ಗಾಯಕ ಅಮಿ ವಿರ್ಕ್! ನಟಿ ಮಾಡಿದ್ದೇನು ನೋಡಿ- ವಿಡಿಯೋ ವೈರಲ್
ಸಂದೀಪ್ ರೆಡ್ಡಿ ವಂಗಾ ಅನಿಮಲ್ ಚಿತ್ರದಲ್ಲಿ ನಟ ರಣಬೀರ್ ಕಪೂರ್ ಜೊತೆ ಸಂಪೂರ್ಣ ಬೆತ್ತಲಾಗುವ ಮೂಲಕ ಭಾರಿ ಸಂಚಲನ ಸೃಷ್ಟಿಸಿರುವ ನಟಿ ತೃಪ್ತಿ ಡಿಮ್ರಿ. ಕಳೆದ ವರ್ಷದವರೆಗೂ ತೃಪ್ತಿ ಡಿಮ್ರಿ ಎನ್ನುವ ಬಾಲಿವುಡ್ ನಟಿ ಇದ್ದಾರೆ ಎನ್ನುವುದೇ ಎಷ್ಟೋ ಮಂದಿಗೆ ತಿಳಿದಿರಲಿಲ್ಲ. ಯಾವಾಗ ಚಿತ್ರದಲ್ಲಿ ಬೆತ್ತಲಾಗಿ ನಟಿಸಿದ್ರೋ ಆಗ ಈಕೆಯ ಹುಡುಕಾಟ ಗೂಗಲ್ನಲ್ಲಿ ಜೋರಾಯಿತು. ಪಾಳುಬಿದ್ದಿದ್ದ ಈಕೆಯ ಸೋಷಿಯಲ್ ಮೀಡಿಯಾ ಖಾತೆ ಸಕ್ರಿಯಗೊಂಡಿತ್ತು. ದಿಢೀರನೆ ಎಲ್ಲರ ಕಣ್ಣು ಕುಕ್ಕಿದ್ದರು ಈ ಬೆಡಗಿ. ಅನಿಮಲ್ ಚಿತ್ರದಲ್ಲಿ ನಟ ರಣಬೀರ್ ಕಪೂರ್ ಜೊತೆ ಈಕೆಯ ನಗ್ನ ದೃಶ್ಯಗಳನ್ನು ನೋಡುತ್ತಿದ್ದಂತೆಯೇ ದಿಢೀರನೆ ಫ್ಯಾನ್ಸ್ ಸಂಖ್ಯೆಯನ್ನೂ ಏರಿಸಿಕೊಂಡರು. ರಾತ್ರೋರಾತ್ರಿ ನ್ಯಾಷನಲ್ ಕ್ರಷ್ ಕೂಡ ಆದರು. ಅನಿಮಲ್ ಚಿತ್ರದಲ್ಲಿ ಆಲಿಯಾ ಭಟ್ ಪತಿ ರಣಬೀರ್ ಕಪೂರ್ ಜೊತೆ ಬೆತ್ತಲಾದ ಬಳಿಕ ಬ್ಯಾಡ್ ನ್ಯೂಸ್ ಚಿತ್ರದಲ್ಲಿ ಕತ್ರೀನಾ ಕೈಫ್ ಪತಿ ವಿಕ್ಕಿ ಕೌಶಲ್ ಜೊತೆ ಹಸಿಬಿಸಿ ದೃಶ್ಯದಲ್ಲಿ ಕಾಣಿಸಿಕೊಂಡವರು ತೃಪ್ತಿ ಡಿಮ್ರಿ.
ಇದೀಗ ತೃಪ್ತಿ ಡಿಮ್ರಿಯ ವಿಡಿಯೋ ಒಂದು ವೈರಲ್ ಆಗುತ್ತಿದೆ. ಇದರಲ್ಲಿ ಗಾಯಕ ಅಮ್ಮಿ ವಿರ್ಕ್ ಹಾಗೂ ಬಾಲಿವುಡ್ ನಟ ವಿಕ್ಕಿ ಕೌಶಲ್ ಅವರನ್ನು ನೋಡಬಹುದು. ತೃಪ್ತಿ ಡಿಮ್ರಿ ಫೋಟೋಗೆ ಪೋಸ್ ಕೊಡುವ ಸಮಯದಲ್ಲಿ ಗಾಯಕ ಅಮ್ಮಿ ವಿರ್ಕ್ ಭುಜದ ಮೇಲೆ ಕೈಹಾಕಿದ್ದಾರೆ. ಸಹಜವಾಗಿ ಅಮ್ಮಿ ಅವರು ನಟಿಯ ಮೈಮೇಲೆ ಕೈಹಾಕಿದ್ದಾರೆ. ಆದರೆ ಇದರಿಂದ ನಟಿ ಸಿಟ್ಟಿಗೆದ್ದದ್ದನ್ನು ವಿಡಿಯೋದಲ್ಲಿ ನೋಡಬಹುದು. ಅಸಮಾಧಾನದಿಂದ ಮೈಯನ್ನು ಕೊಡವಿ ಕೈಯನ್ನು ಕೆಳಕ್ಕೆ ಇಳಿಸಿದ್ದಾರೆ. ಇದರ ವಿಡಿಯೋ ವೈರಲ್ ಆಗಿದೆ.
ರಣಬೀರ್ ಜೊತೆ ಬೆತ್ತಲಾಗಿದ್ದು ಸಾಕಾಗಿಲ್ಲ ಎಂದು ಹೀಗೆಲ್ಲಾ ಮಾಡೋದಾ ನಟಿ ತೃಪ್ತಿ ಡಿಮ್ರಿ! 5 ಲಕ್ಷ ಟೋಪಿ?
ಇದಕ್ಕೆ ಥಹರೇವಾರಿ ಕಮೆಂಟ್ಸ್ ಸುರಿಮಳೆಯಾಗುತ್ತಿದೆ. ಮಹಿಳೆಯರಾದ್ರೆ ಪುರುಷರ ಮೇಲೆ ಎಲ್ಲಿ ಬೇಕಾದರೂ ಕೈಹಾಕಬಹುದು, ಅದೇ ಪುರುಷರು ಮಾಡಿದ್ರೆ ತಪ್ಪಾ ಎನ್ನುವುದು ನೆಟ್ಟಿಗರ ಪ್ರಶ್ನೆ. ಇಲ್ಲಿ ನಟಿ, ಗಾಯಕನ ಭುಜದ ಮೇಲೆ ಕೈಹಾಕಿದರಂತೆ ಅವರು ಕೂಡ ಭುಜದ ಮೇಲೆ ಕೈಹಾಕಿದ್ದಾರೆ. ಆದರೆ ಅವರು ತೊಟ್ಟ ಡ್ರೆಸ್ನಲ್ಲಿ ಬರಿ ಮೈ ಮೇಲೆ ಕೈಹಾಕಿರುವುದು ನಟಿಗೆ ಇರುಸು ಮುರುಸಾಗಿರಬಹುದು. ಅದಕ್ಕಾಗಿ ಕೈಯನ್ನು ಕೊಡವಿದ್ದಾರೆ. ಆದರೆ ಇದಕ್ಕೆ ವಿರೋಧ ವ್ಯಕ್ತಪಡಿಸುತ್ತಿರುವವರೇ ಹೆಚ್ಚು. ನಟಿಗೆ ಮೊದಲು ಹೇಗೆ ಡ್ರೆಸ್ ಹಾಕಿಕೊಳ್ಳಬೇಕು ಎನ್ನುವ ಸೆನ್ಸ್ ಇರಬೇಕು, ಇಲ್ಲವೇ ಪುರುಷರ ಜೊತೆ ಫೋಟೋಗೆ ಪೋಸ್ ಕೊಡಬಾರದು. ಇಲ್ಲದೇ ಹೋದರೆ, ತಾನೊಬ್ಬಳೇ ಪ್ರತ್ಯೇಕ ನಿಂತುಕೊಳ್ಳಬೇಕು, ಆದರೆ ಇದು ಮಾತ್ರ ಪರಮಾವಧಿ ಆಯ್ತು ಎಂದು ನಟಿಯ ವಿರುದ್ಧ ನೆಟ್ಟಿಗರು ಕಿಡಿ ಕಾರುತ್ತಿದ್ದಾರೆ.
ಇನ್ನು ನಟಿಯ ಚಿತ್ರಗಳ ಕುರಿತು ಹೇಳುವುದಾದರೆ, ಇತ್ತೀಚೆಗೆ, ಅನೀಸ್ ಬಾಜ್ಮಿ ನಿರ್ದೇಶಿಸಿದ ಬಹು ನಿರೀಕ್ಷಿತ ಭೂಲ್ ಭುಲೈಯಾ 3 ಸೇರಿದಂತೆ ಇನ್ನು ಕೆಲವು ಚಿತ್ರಗಳಿಗಾಗಿ ತೃಪ್ತಿ ಗಮನ ಸೆಳೆದಿದ್ದಾರೆ, ಈ ಚಿತ್ರದಲ್ಲಿ ಇವರು ಕಾರ್ತಿಕ್ ಆರ್ಯನ್ ಜೊತೆಗೆ ನಟಿಸಿದ್ದಾರೆ. ಇದು 1990 ರ ದಶಕದ ಕಥೆ ಆಧರಿಸಿರುವ ವಿಕ್ಕಿ ವಿದ್ಯಾ ಕಾ ವೋ ವಾಲಾ ವಿಡಿಯೋ ಚಿತ್ರದಲ್ಲಿ ಅವರು ಋಷಿಕೇಶದ ವಿದ್ಯಾ ಎಂಬ ಸಣ್ಣ-ಪಟ್ಟಣದ ಹುಡುಗಿಯಾಗಿ ನಟಿಸಿದ್ದಾರೆ ಮತ್ತು ಟ್ರೈಲರ್ ಈಗಾಗಲೇ 90 ರ ದಶಕದ ವೈಬ್ ಮತ್ತು ಹಾಸ್ಯಮಯ ಒಳನೋಟಗಳೊಂದಿಗೆ ಪ್ರೇಕ್ಷಕರ ಗಮನವನ್ನು ಸೆಳೆದಿದೆ. ರಾಜ್‌ಕುಮಾರ್ ರಾವ್ ಅವರನ್ನೂ ಒಳಗೊಂಡಿರುವ ಈ ಚಿತ್ರವು ಒಂದು ಟ್ವಿಸ್ಟ್‌ನೊಂದಿಗೆ ಕ್ಲಾಸಿಕ್ ಪ್ರೇಮಕಥೆಯನ್ನು ರಿಫ್ರೆಶ್ ಮಾಡುವ ಭರವಸೆ ನೀಡುತ್ತದೆ. ಇನ್ನು ವಿಕ್ಕಿ ಕೌಶಲ್ ಅವರು, ಲಕ್ಷ್ಮಣ್ ಉಟೇಕರ್ ಅವರ ಛಾವಾದಲ್ಲಿ ನಟಿಸಲು ಸಿದ್ಧರಾಗಿದ್ದಾರೆ, ಅಲ್ಲಿ ಅವರು ಮರಾಠ ದೊರೆ ಮತ್ತು ಛತ್ರಪತಿ ಶಿವಾಜಿಯ ಮಗ ಸಂಭಾಜಿಯ ಪಾತ್ರ ಮಾಡುತ್ತಿದ್ದಾರೆ.
'ಅನಿಮಲ್'ನಲ್ಲಿ ಬೆತ್ತಲಾಗಿ ಸಂಕಷ್ಟಕ್ಕೆ ಸಿಲುಕಿದ ತೃಪ್ತಿ ಡಿಮ್ರಿ: ಆಶಿಕಿ-3ಯಿಂದ ಔಟ್; ಚಿತ್ರತಂಡ ಹೇಳಿದ್ದೇನು?