
ಒಂದು ಚಿತ್ರದ ಹಿಂದೆ ಸಾವಿರಾರು ಮಂದಿಯ ಪರಿಶ್ರಮವಿರುತ್ತದೆ. ನಟ, ನಟಿ, ನಿರ್ದೇಶಕ ಹಾಗೂ ನಿರ್ಮಾಪಕರ ಪ್ರತಿಭೆ ಮತ್ತು ಶ್ರಮ ಮಾತ್ರ ಬೆಳಕಿಗೆ ಬರುತ್ತದೆ. ನಿರ್ದೇಶಕರಷ್ಟೇ ತಂಡದಲ್ಲಿ ಪ್ರಾಮುಖ್ಯತೆ ಪಡೆದು ಕೆಲಸದಲ್ಲಿ ಒಂದು ಕೈ ಮುಂದಿರುವ ವ್ಯಕ್ತಿ ಅಂದ್ರೆ ಸಹ ನಿರ್ದೇಶಕ. ತೆರೆ ಮೇಲೆ ಅವರಿಗೆ ಗೌರವ ಸಿಗದಿದ್ದರೂ ತೆರೆ ಹಿಂದೆ ಆದರೂ ಗೌರವ ಬಯಸುತ್ತಾರೆ. ಆದರೆ ಅವಸರಾಲ ಶ್ರೀನಿವಾಸ್ ಬಹಳ ದಿನಗಳಿಂದೆ ನಡೆದುಕೊಳ್ಳುತ್ತಿದ್ದ ರೀತಿಗೆ ಇಂದು ಫುಲ್ ಸ್ಟಾಪ್ ಇಟ್ಟಿದ್ದಾರೆ.
ಬೆಳಗ್ಗೆ 6ರಿಂದ 9ರ ತನಕ ಯಶ್ ಕೆಜಿಎಫ್ 2 ಡಬ್ಬಿಂಗ್; ಡಾ.ರಾಜ್‌ರೂಲ್ಸ್ ಫಾಲೋ ಮಾಡಿದ ರಾಕಿ!
ತೆಲುಗು ಚಿತ್ರರಂಗದ ಖ್ಯಾತ ನಿರ್ದೇಶಕ ಕಮ್ ನಟನಾಗಿ ಗುರುತಿಸಿಕೊಂಡಿರುವ ಅವಸರಾಲು ಶ್ರೀನಿವಾಸ್ ತಮ್ಮ ಚಿತ್ರದಲ್ಲಿ ಸಹ ನಿರ್ದೇಶಕನಾಗಿ ಕೆಲಸ ಮಾಡುತ್ತಿರುವ ಮಹೇಶ್ ಜೊತೆ ದಿನ ಬೆಳಗ್ಗೆ ಕಾರಣವಿಲ್ಲದೇ ಜಗಳ ಮಾಡುತ್ತಿದ್ದರಂತೆ. ಪ್ರಶ್ನೆ ಮಾಡಿದರೆ, ಕಚೇರಿಯಿಂದ ಹೊರಗೆ ಅಟ್ಟಿದ್ದಾರೆ. ನಟನ ಕಾಟ ಹಾಗೂ ಅವಮಾನ ತಡೆಯಲಾಗದೇ ಮಹೇಶ್ ವಿಡಿಯೋ ಶೇರ್ ಮಾಡಿಕೊಂಡಿದ್ದಾರೆ.
ಸಿಟ್ಟಿನಲ್ಲಿ ಕ್ಯಾಮೆರಾ ಹಿಡಿದು ಅವಸರಾಲು ಶ್ರೀನಿವಾಸ ಬಳಿ ಹೋದ ಮಹೇಶ್ ಅವರನ್ನು ನೋಡಿ ಬಯ್ಯಲು ಆರಂಭಿಸುತ್ತಾರೆ. ಕೊಡಲೇ ಸಹ ನಿರ್ದೇಶಕ ಮಹೇಶ್ ಶ್ರೀನಿವಾಸ್ ತಲೆಗೆ ಧರಿಸಿದ್ದ ಟೋಪಿ ತೆಗೆದು ನೋಡಿ ಅವರ ಬೊಕ್ಕ ತಲೆ ಎಂದು ಶ್ರೀನಿವಾಸ್ ರಿಯಲ್ ಲುಕ್ ರಿವೀಲ್ ಮಾಡಿದ್ದಾರೆ. ಗಾಬರಿಗೊಂಡ ಶ್ರೀನಿವಾಸ್ ಈ ವಿಡಿಯೋ ಹೊರಗೆ ಹೋಗಬಾರದು, ಯಾರಿಗೂ ಕೊಡಬಾರದು ಎಂದು ಕೂಗಾಡಿದ್ದಾರೆ.
ರಾಜ್‌ಕುಮಾರ್ ಮೊಮ್ಮಗಳ ಚಿತ್ರಕ್ಕೆ ರಘು ದೀಕ್ಷಿತ್ Rap ಸಾಂಗ್; 'ಈ ನಶೆಯೂ ಹೇಳಿದೆ ಪತ್ತೆಯಾ..'
ವೈರಲ್ ಆಗುತ್ತಿರುವ ವಿಡಿಯೋ ಬಗ್ಗೆ ನೆಟ್ಟಿಗರು ಮಿಶ್ರ ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ. ಇದು ಅವರ ಮುಂದಿನ ಸಿನಿಮಾ ಪ್ರಚಾರಕ್ಕೆ ಮಾಡಿರುವ ಗಿಮಿಕ್ ಎಂದೂ ಹೇಳಿದ್ದಾರೆ. ಆದರೆ, ಈ ಬಗ್ಗೆ ಯಾರೂ ಕೇರ್ ಮಾಡಿಲ್ಲ. ಆದರೆ ಇನ್ನೂ ಇಷ್ಟೊಂದು ಹ್ಯಾಂಡ್ಸಮ್ ಆಗಿರುವ ನಟ ವಿಗ್ ಧರಿಸುತ್ತಾರೆ ಎಂದರೆ ನಂಬಲು ಅಸಾಧ್ಯ ಎಂದಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.