ದುಬಾರಿ ಲ್ಯಾಂಬರ್ಗಿನಿ ಖರೀದಿಸಿದ ನಟ ಪ್ರಭಾಸ್; ಇದರ ಬೆಲೆ ಕೇಳಿದ್ದೀರಾ?

By Suvarna News  |  First Published Mar 29, 2021, 11:38 AM IST

ಕನಸಿನ ಕಾರು ಖರೀದಿಸಿದ ನಟ ಪ್ರಭಾಸ್. ಬಣ್ಣ ಸೂಪರ್ ಆದರೆ ಬೆಲೆ ಕೇಳಿದ್ರೆ ಶಾಕ್ ಖಂಡಿತ.


ಟಾಲಿವುಡ್‌ ಸ್ಮಾರ್ಟ್‌ ಮ್ಯಾನ್‌, ಎಲಿಜಿಬಲ್ ಬ್ಯಾಚುಲರ್ ಪ್ರಭಾಸ್‌ ಬಹಳ ದಿನಗಳಿಂದ ಈ ದುಬಾರಿ ಕಾರನ್ನು ಖರೀದಿ ಮಾಡಬೇಕೆಂದ ಕನಸು ಕಂಡಿದ್ದರು. ಮಾರ್ಚ್‌ 28 ಸರಿಯಾದ ಸಮಯ ಕೂಡಿ ಬಂದಿದೆ. ಮನೆಯ ಮುಂದೆ ಆರೆಂಜ್ ಕಾರು ನಿಲ್ಲಿಸಿ ಸಂಭ್ರಮಿಸಿದ್ದಾರೆ.

ಪ್ರಭಾಸ್‌ಗೆ ಫುಡ್ ಅಂದ್ರೆ‌ ಲವ್: ತಾವೂ ತಿಂತಾರೆ, ಜೊತೆಲಿದ್ದೋರ್ಗೂ ತಿನಿಸ್ತಾರೆ 

Tap to resize

Latest Videos

undefined

ಹೌದು! ಅತ್ಯಂತ ದುಬಾರಿ ಲ್ಯಾಂಬರ್ಗಿನಿ ಅವೆಂಟಡಾರ್ ಎಸ್‌ ರೋಡ್‌ಸ್ಟಾರ್  ಕಾರನ್ನು ಪ್ರಭಾಸ್ ಖರೀದಿಸಿದ್ದಾರೆ. ಭಾರತದಲ್ಲಿ ಇದರ ಬೆಲೆ ಸುಮಾರು 5.6 ಕೋಟಿ ರೂ ಎನ್ನಲಾಗಿದೆ.  ಸೋಷಿಯಲ್ ಮೀಡಿಯಾದಲ್ಲಿ ಪ್ರಭಾಸ್ ಕಾರಿನ ಫೋಟೋ ಸಖತ್ ವೈರಲ್ ಆಗುತ್ತಿದೆ. ಈಗಾಗಲೇ ಪ್ರಭಾಸ್‌ ಬಳಿ  ಬಿಎಂಡಬ್ಲ್ಯು. ಮರ್ಸಿಡಿಸ್ ಹಾಗೂ ಆಡಿ ಕ್ಯೂ 5 ಕಾರುಗಳಿವೆ.

ಅಂತೂ ಸಿಕ್ಕೇಬಿಟ್ಲು ಪ್ರಭಾಸ್ ಹೈಟ್ ಮ್ಯಾಚ್ ಮಾಡೋ ಚೆಲುವೆ 

ಪ್ರಭಾಸ್‌ ಪಕ್ಕ ನಿಂತ ಕಾರಿಗೆ ಬೆಲೆ ಹೆಚ್ಚಾತ್ತೋ ಅಥವಾ ನಮ್ಮ ಸ್ಟಾರ್ ಖದರ್‌ ಇದು ಮ್ಯಾಚ್‌ ಆಯ್ತೋ ಒಟ್ಟಿನಲ್ಲಿ ಇಬ್ಬರು ಸೂಪರ್ ಎಂದು ಅಭಿಮಾನಿಗಳು ಕಾಮೆಂಟ್ ಮಾಡಿದ್ದಾರೆ.  

ಇನ್ನು ರಾಧೆ ಶ್ಯಾಮ್ ಸಿನಿಮಾ ಚಿತ್ರೀಕರಣ ಮುಗಿಸಿದ ಪ್ರಭಾಸ್ ರಿಲೀಸ್‌ಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಸಲಾರ್ ಹಾಗೂ ಆದಿಪುರುಷ್ ಸಿನಿಮಾ ಚಿತ್ರೀಕರಣ ನಡೆಯುತ್ತಿದೆ.

click me!