ಎಣ್ಣೆ-ಸೀಗೆಕಾಯಿಯಂತಿದ್ದ ಹೀರೋಗಳು ಈಗ ಕುಚಿಕುಗಳಾದ್ರಾ? ಟಾಲಿವುಡ್ ಸ್ಟಾರ್ಸ್‌ ಮಧ್ಯೆ ಏನ್ ನಡಿತಿದೆ?

By Shriram Bhat  |  First Published Sep 4, 2024, 3:28 PM IST

ಹುಯ್ದಕ್ಕಿ ಬೆಯ್ಯದ ಕುಟುಂಬದ ಹೀರೋಗಳು ಒಂದಾಗುತ್ತಿದ್ದಾರಾ? ಟಾಲಿವುಡ್​​ನಲ್ಲಿ ಈಗ ಯಾರೂ ನಿರೀಕ್ಷೆ ಮಾಡದ ಘಟನೆಯೊಂದು ನಡೆದಿದೆ. ಎಣ್ಣೆ ಸೀಗೆಕಾಯಿ ಅಂತಿದ್ದ ಮೆಗಾ ಸ್ಟಾರ್ ಕುಟುಂಬದ ಚಿರಂಜೀವಿ ಹಾಗು ಎನ್‌ಟಿಆರ್​ ಕುಟುಂಬದ ನಟ ಬಾಲಯ್ಯ..


ಟಾಲಿವುಡ್​​​ನ ಮೆಗಾಸ್ಟಾರ್​ ಹಾಗು ಎನ್​​ಟಿಆರ್​ ಕುಟುಂಬಗಳ ಮಧ್ಯೆ ಹೂಯ್ದಕ್ಕಿ ಬೆಯ್ಯಲ್ಲ ಅನ್ನೋದು ಗೊಟ್ಟಾಗೇನು ಇಲ್ಲ. ಆದ್ರೆ ಅದನ್ನ ಎಲ್ಲೂ ನೇವರಾಗಿ ತೋರಿಸಿಕೊಳ್ಳದ ಈ ಕುಟುಂಬದ ಸದಸ್ಯರು ಆಗಾಗ ಪರೋಕ್ಷವಾಗಿ ಟಾಂಗ್ ಕೊಟ್ಟುಕೊಳ್ತಾನೆ ಇರುತ್ತಾರೆ. ಅದರಲ್ಲೂ ಚಿರಂಜೀವಿ ಹಾಗು ಬಾಲಯ್ಯ ಎಣ್ಣೆ ಸೀಗೆಕಾಯಿ ತರ ಇದ್ದವರು. ಈಗ ಈ ಟಾಲಿವುಡ್​​​ ಎನಿಮೀಸ್​ ಒಂದೇ ಸಿನಿಮಾದಲ್ಲಿ ಒಂದೇ ಫ್ರೇಮ್​ನಲ್ಲಿ ಒಟ್ಟಿಗೆ ಕಾಣಿಸಿಕೊಳ್ಳುತ್ತಿದ್ದಾರಂತೆ. ಅರೆ ಅದೇನ್ ಕಾಲ ಬಂತ್ರೀ ಅಂತ ಯೋಚಿಸೋ ಹಾಗಾಗಿದೆ!

ಎನ್​ಟಿಆರ್​ ಕುಟುಂಬ.. ಮೆಗಾ ಸ್ಟಾರ್ ಕುಟುಂಬ.. ಇವೆರಡು ಟಾಲಿವುಡ್​ ಚಿತ್ರ ಜಗತ್ತಿನ ಪ್ರೈಡ್​​​ ಇದ್ದಂತೆ ಅಂತ ಈ ಎರಡೂ ಕುಟುಂಬದ ಅಭಿಮಾನಿಗಳು ಹೇಳಿಕೊಳ್ತಾರೆ. ಅದು ನಿಜಾ ಕೂಡ. ತೆಲುಗು ಚಿತ್ರರಂಗವನ್ನ ದಶಕಗಳಿಂದ ಆಳುತ್ತಾ ಬಂದ ಫ್ಯಾಮಿಲಿ ಅಂದ್ರೆ ಮೆಗಾ ಸ್ಟಾರ್​ ಹಾಗು ಎನ್​ಟಿಆರ್​ ಕುಟುಂಬಗಳು. ಈ ಫ್ಯಾಮಿಲಿ ಮಧ್ಯೆ ಮುಸುಕಿನ ಗುದ್ದಾಟ ಇರೋದು ಗುಟ್ಟಾಗೇನು ಉಳಿದಿಲ್ಲ. ಅದನ್ನ ತೋರಿಸಿಕೊಳ್ಳದೇ ಇದ್ರು. ಪರೋಕ್ಷವಾಗಿ ಟಾಂಗ್ ಕೊಟ್ಟುಕೊಂಡೇ ಬಂದವರು ಎನ್​ಟಿಆರ್​​ ಹಾಗು ಮೆಗಾ ಸ್ಟಾರ್ ಕುಟುಂಬದವರು. 

Tap to resize

Latest Videos

ನಿಮ್ಮಿಂದ ಲೈಫಲ್ಲಿ ತುಂಬಾ ಕಲಿಯುತ್ತಿದೀನಿ, ಥಾಂಕ್ ಯು ಬಾಸ್: ನಟಿ ತನಿಷಾ ಕುಪ್ಪಂಡ!

ಈಗ ಹುಯ್ದಕ್ಕಿ ಬೆಯ್ಯದ ಕುಟುಂಬದ ಹೀರೋಗಳು ಒಂದಾಗುತ್ತಿದ್ದಾರಾ? ಟಾಲಿವುಡ್​​ನಲ್ಲಿ ಈಗ ಯಾರೂ ನಿರೀಕ್ಷೆ ಮಾಡದ ಘಟನೆಯೊಂದು ನಡೆದಿದೆ. ಎಣ್ಣೆ ಸೀಗೆಕಾಯಿ ಅಂತಿದ್ದ ಮೆಗಾ ಸ್ಟಾರ್ ಕುಟುಂಬದ ಚಿರಂಜೀವಿ ಹಾಗು ಎನ್‌ಟಿಆರ್​ ಕುಟುಂಬದ ನಟ ಬಾಲಯ್ಯ ಒಂದಾಗುತ್ತಿದ್ದಾರೆ. ಅರೆ ಇದು ನಿಜಾನಾ..? ಹುಯ್ದಕ್ಕಿ ಬೆಯ್ಯದ ಕುಟುಂಬದ ಹೀರೋಗಳು ಒಂದಾಗುತ್ತಿದ್ದಾರಾ.? ಅಂತ ಆಶ್ಚರ್ಯ ಆಗ್ತಿದೆಯಾ ಅದು ನಿಜ ಕೂಡ. 
 
RRR ನಲ್ಲಿ ಒಟ್ಟಿಗೆ ನಟಿಸಿದ್ದ ರಾಮ್​ ಚರಣ್​-ಜ್ಯೂ.ಎನ್​ಟಿಆರ್; ಬಾಲಕೃಷ್ಣ ಜೊತೆ ನಟಿಸೋ ಆಸೆ ವ್ಯಕ್ತಪಡಿಸಿದ ಚಿರಂಜೀವಿ: ಇತ್ತೀಚಿನ ವರ್ಷಗಳಲ್ಲಿ ಎರಡೂ ಫ್ಯಾಮಿಲಿಗಳ ನಡುವಿನ ಸಂಘರ್ಷ ಕೊಂಚ ಕಮ್ಮಿ ಆಗಿದೆ. 'RRR' ಚಿತ್ರದಲ್ಲಿ ರಾಮ್‌ಚರಣ್- ಜ್ಯೂ. ಎನ್‌ಟಿಆರ್ ಒಟ್ಟಿಗೆ ನಟಿಸಿ ಈ ಪೈಪೋಟಿಗೆ ಕೊಂಚ ಮಟ್ಟಿಗೆ ಬ್ರೇಕ್ ಹಾಕಿದ್ದಾರೆ. ತಾವಿಬ್ಬರು ಬೆಸ್ಟ್ ಫ್ರೆಂಡ್ಸ್ ಎಂದು ಸಾರಿ ಹೇಳಿದ್ದಾರೆ. ಆದರೂ ಅಭಿಮಾನಿಗಳ ನಡುವೆ ಕೆಸರೆರಚಾಟ ನಿಂತಿಲ್ಲ. ಇದೀಗ ಬಾಲಕೃಷ್ಣ ಜೊತೆ ನಟಿಸೋ ಆಸೆಯನ್ನು ಸ್ವತಃ ಚಿರಂಜೀವಿ ವ್ಯಕ್ತಪಡಿಸಿದ್ದಾರೆ.

ಬಾಲಯ್ಯ 50 ವರ್ಷ ಸಿನಿ ಜರ್ನಿ ಕಾರ್ಯಕ್ರಮದಲ್ಲಿ ಚಿರಂಜೀವಿ ಕಾಣಿಸಿಕೊಂಡಿದ್ದರು. ನಟ ಬಾಲಕೃಷ್ಣ ಚಿತ್ರರಂಗದಲ್ಲಿ 50 ವರ್ಷ ಪೂರೈಸಿದ್ದಾರೆ. ಈ ಹಿನ್ನೆಲೆಯಲ್ಲಿ ಚಿತ್ರರಂಗದಿಂದ ಅವರನ್ನು ಗೌರವಿಸಲಾಯಿತು. ಈ ಅದ್ಧೂರಿ ಕಾರ್ಯಕ್ರಮದಲ್ಲಿ ಮೆಗಾ ಸ್ಟಾರ್ ಚಿರಂಜೀವಿ ಕೂಡ ಭಾಗಿ ಆಗಿದ್ರು. ಬಾಲಯ್ಯ ಪಕ್ಕದಲ್ಲಿ ಇರುವಾಗಲೇ ಇಬ್ಬರೂ ಸೇರಿ ಸಿನಿಮಾ ನೋಡೋಣ ಎಂದು ಮೆಗಾಸ್ಟಾರ್ ಹೇಳಿದ್ದಾರೆ. 

ಈ ಪ್ರಪಂಚಕ್ಕೆ ಅವ್ಳನ್ನ ತಂದಿರೋದು ನಾನು, ಅದು ನನ್ನ ಜವಾಬ್ದಾರಿ ಅಂದ್ರೆ ಒಪ್ಕೋತೀನಿ: ಕಿಚ್ಚ ಸುದೀಪ್

ಅದಕ್ಕೆ ಬಾಲಯ್ಯ ಕೂಡ ಸೈ ಎಂದಿದ್ದಾರೆ.  ಇದನ್ನ ಕೇಳಿಸಿಕೊಂಡ ಟಾಲಿವುಡ್​ನ ಒಂದಿಷ್ಟು ಟ್ಯಾಲೆಂಟೆಡ್ ಡೈರೆಕ್ಟರ್ಸ್​ ಈ ಮಲ್ಟಿ ಸ್ಟಾರ್ಸ್​ಗೆ ಕತೆ ಹೆಣೆಯೋ ಸಾಹಸಕ್ಕೂ ಸಜ್ಜಾಗಿದ್ದಾರಂತೆ. ಆದ್ರೆ ಬಾಲಯ್ಯ ಚಿರು ಒಂದಾಗಿ ನಟಿಸೋ ಆ ಗಳಿಗೆ ಯಾವಾಗ ಬರುತ್ತೋ ಬಾಲಯ್ಯ-ಚಿರಂಜೀವಿಗೆ, ಅವರನ್ನು ಒಂದಾಗಿಸೋ ಪ್ರಯತ್ನದಲ್ಲಿ ಇರೋರಿಗೆ ಮಾತ್ರ ಗೊತ್ತು..

 

click me!