ಹೇಮಾ ಸಮಿತಿ; ಕಾಮಕಾಂಡ ಬಯಲು ಮಾಡಲು ನಟಿ ಅನುಷ್ಕಾ ಶೆಟ್ಟಿ ಪೋಸ್ಟ್‌

By Vaishnavi Chandrashekar  |  First Published Sep 4, 2024, 3:20 PM IST

ನಟಿಯರ ನಿದ್ದೆ ಕೆಡಿಸಿದ ಹೇಮಾ ಕಮಿಟಿ ಪೋಸ್ಟ್. ಲೈಂಗಿಕ ದೌರ್ಜನ್ಯದ ಬಗ್ಗೆ ಸರ್ಕಾರ ಹೊಸ ನಿಯಮ ತರಲೇ ಬೇಕು.....


ಮಲಯಾಳಂ ಚಿತ್ರರಂಗದಲ್ಲಿ ದೊಡ್ಡ ಸಂಚಲ ಸೃಷ್ಟಿ ಮಾಡುತ್ತಿರುವ ಹೇಮಾ ಕಮಿಟಿ ವರದಿ ಬಗ್ಗೆ ನಟಿಮಣಿಯರ ನಿದೆ ಕೆಡಿಸಿದೆ. ಸ್ಟಾರ್ ನಟರಾದ ಮೋಹನ್ ಲಾಲ್ ಸೇರಿದಂತೆ ಹಲವರು ಮಾತನಾಡುವುದಕ್ಕೆ ಹಿಂದೇಟು ಹಾಕಿದ್ದಾರೆ. ಒಬ್ಬೊಬ್ಬರ ಕರಾಳ ಮುಖ ಬಯಲಾಗುತ್ತಿದ್ದಂತೆ ಜಸ್ಟೀಸ್ ಹೇಮಾ ಕಮಿಟಿ ಗಟ್ಟಿಯಾಗುತ್ತಿದೆ, ಏಕೆಂದರೆ ಸಲ್ಲಿಸಿರುವ ವರದಿ ಪರೋಕ್ಷವಾಗಿ ನಿಜ ಎಂದು ಸಾಭೀತಾಗುತ್ತಿದೆ. ಹೇಮಾ ಕಮಿಟಿ ವರದಿಯನ್ನು ಕೇರಳ ಸರ್ಕಾ ಗಂಭೀರವಾಗಿ ಪರಿಗಣಿಸಿದೆ.

ಹೇಮಾ ಕಮಿಟಿ ರಿಪೋರ್ಟ್ ದೊಡ್ಡದಾಗುತ್ತಿದ್ದಂತೆ ಅಕ್ಕ ಪಕ್ಕ ಚಿತ್ರರಂಗದವರು ಈ ಬಗ್ಗೆ ಚರ್ಚೆ ಶುರು ಮಾಡಿದ್ದಾರೆ. ಸ್ಟಾರ್ ನಟಿಯರು ಒಟ್ಟಾಗಿ ಧ್ವನಿ ಎತ್ತುತ್ತಿದ್ದಾರೆ, ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕುತ್ತಿದ್ದಾರೆ. ಈಗಾಗಲೆ ನಟಿ ಸಮಂತಾ, ಮಂಚು ಲಕ್ಷ್ಮಿ, ನಿರ್ದೇಶಕಿ ನಂದಿನಿ ರೆಡ್ಡಿ ಹಾಕಿರುವ ಪೋಸ್ಟ್‌ ವೈರಲ್ ಆಗುತ್ತಿದೆ. ಈಗ ಟಾಲಿವುಡ್ ಸ್ವೀಟಿ ಅನುಷ್ಕಾ ಶೆಟ್ಟಿ ಕೂಡ ಅದೇ ಪೋಸ್ಟ್ ಶೇರ್ ಮಾಡಿದ್ದಾರೆ.

Tap to resize

Latest Videos

ಪ್ರೆಗ್ನೆಂಟ್‌ ಅಂತ ಗೊತ್ತಾಗಿ 1 ವಾರ ಆದ್ಮೇಲೆ ಆಸ್ಪತ್ರೆಗೆ ಹೋಗಿದ್ದು, ಗಂಡ ನಂಬಲೇ ಇಲ್ಲ: ನೇಹಾ ಗೌಡ  

'ತೆಲುಗು ಚಿತ್ರರಂಗಕ್ಕೆ ಸೇರಿದ ಮಹಿಳೆಯರಾದ ನಾವು ಹೇಮಾ ಸಮಿತಿಯನ್ನು ಖುಷಿಯಿಂದ ಸ್ವಾಗತಿಸುತ್ತೇವೆ. ಕೇರಳಾದ ಡಬ್ಲ್ಯುಸಿಸಿ ನಿರ್ದೇಶಕರ ಶ್ರಮವನ್ನು ನಾನು ಶ್ಲಾಘಿಸುತ್ತೇವೆ. ಇವರಿಂದ ಮಾತ್ರ ಈ ವರದಿ ನೀಡಲು ಸಾಧ್ಯವಾಗಿದ್ದು. 2019ರಲ್ಲಿ ಡಬ್ಲ್ಯುಸಿಸಿ ಸಹಾಯದಿಂದ ತೆಲುಗು ಇಂಡಸ್ಟ್ರಿಯಲ್ಲಿ ದಿ ವಾಯ್ಸ್ ಆಫ್ ವುಮೆನ್‌ ಸಮಿತಿ ರಚನೆ ಆಗಿತ್ತು. ಚಿತ್ರರಂಗದಲ್ಲಿ ಕಲಾವಿದರು ಎದುರಿಸುತ್ತಿರುವ ಲೈಂಗಿಕ ಕಿರುಕುಳದ ವರದಿಯನ್ನು ಈ ಕೂಡಲೇ ತೆಲಂಗಾಣ ಸರ್ಕಾರಕ್ಕೆ ಸಲ್ಲಿಸಬೇಕು ಎಂದು ಮನವಿ ಮಾಡುತ್ತೀನಿ. ಈ ಮೂಲಕ ಸರ್ಕಾದಿಂದ ಇಂಡಸ್ಟ್ರಿಯಲ್ಲಿ ಇರುವ ಹೆಣ್ಣು ಮಕ್ಕಳಿಗೆ ಒಳ್ಳೆಯ ವಾತಾವರಣ ಸೃಷ್ಟಿಯಾಗುತ್ತದೆ' ಎಂದು ಪೋಸ್ಟ್ ಹಾಕಿದ್ದಾರೆ ಅನುಷ್ಕಾ. 

ಕಮಿಟ್ಮೆಂಟ್ ಇದ್ದ ಕಾರಣ ಮದ್ವೆಯಾಗಿ 6 ವರ್ಷ ಆದ್ಮೇಲೆ ಈಗ ಪ್ರೆಗ್ನೆನ್ಸಿ ಪ್ಲ್ಯಾನ್ ಮಾಡಿದೆ: ನೇಹಾ ಗೌಡ

ಜಸ್ಟೀಸ್ ಹೇಮಾ ನೇತೃತ್ವದಲ್ಲಿ ರಚನೆಯಾಗಿರುವ ಈ ಸಮಿತಿಯಲ್ಲಿ ಹೆಣ್ಣುಮಕ್ಕಳ ಮೇಲೆ ಆಗುತ್ತಿರುವ ದೌರ್ಜನ್ಯದ ಬಗ್ಗೆ 235 ಪುಟಗಳ ವರದಿಯನ್ನು ನೀಡಿದ್ದಾರೆ. ಕೆಲ ಕಾಮುಕರು ಗುರಿಯಾಗಿದ್ದಾರೆ. ವಾಯ್ಸ್‌ ಆಫ್ ವುಮೆನ್ ಟಾಲಿವುಡ್‌ ಕೂಡ ಗಟ್ಟಿಯಾಗಬೇಕು ಎಂದು ನಟಿಯರು ಒತ್ತಾಯ ಮಾಡುತ್ತಿದ್ದಾರೆ. ಇನ್ನು ಜಸ್ಟೀಸ್ ಹೇಮಾ ಸಮಿತಿ ಅಂದ್ರೆ ಏನೂ ಅಲ್ಲಿ ಏನಾಗುತ್ತಿದೆ ಗೊತ್ತಿಲ್ಲ ಎಂದು ರಜನಿಕಾಂತ್ ಪ್ರತಿಕ್ರಿಯೆ ನೀಡಿಲ್ಲ.

click me!