ಡ್ರಗ್ಸ್​ 'ಕಿಂಗ್​ಪಿನ್​'ಗೆ ಕಿಸ್​ ಕೊಟ್ಟು ತಗ್ಲಾಕ್ಕೊಂಡ ಖ್ಯಾತ ನಟಿ- ವಿಡಿಯೋದಲ್ಲಿ ಹೇಳಿದ್ದೇನು?

Published : Jun 26, 2023, 10:52 AM ISTUpdated : Nov 21, 2023, 06:44 PM IST
ಡ್ರಗ್ಸ್​ 'ಕಿಂಗ್​ಪಿನ್​'ಗೆ ಕಿಸ್​ ಕೊಟ್ಟು ತಗ್ಲಾಕ್ಕೊಂಡ ಖ್ಯಾತ ನಟಿ- ವಿಡಿಯೋದಲ್ಲಿ ಹೇಳಿದ್ದೇನು?

ಸಾರಾಂಶ

ಟಾಲಿವುಡ್​ನ ಕೋಲಾಹಲ ಸೃಷ್ಟಿಸಿರೋ ಡ್ರಗ್ಸ್​ ಕೇಸ್​ನಲ್ಲಿ ಖ್ಯಾತ ನಟಿ ಸುರೇಖಾ ವಾಣಿ ಹೆಸರು ವೈರಲ್​ ಆಗಿದ್ದು, ವಿಡಿಯೋ ಮೂಲಕ ಅವರು ಹೇಳಿದ್ದೇನು?  

ನಟಿ ಸುರೇಖಾ ವಾಣಿ ತೆಲುಗು ಮನರಂಜನಾ ಉದ್ಯಮದ ಅತ್ಯಂತ ಪ್ರಸಿದ್ಧ ಮುಖಗಳಲ್ಲಿ ಒಬ್ಬರು. ತೆಲುಗು ಚಲನಚಿತ್ರಗಳಲ್ಲಿ ಅತ್ತೆ, ಸೊಸೆ ಮತ್ತು ಹೆಂಡತಿಯಾಗಿ ಸಕತ್​ ಫೇಮಸ್​ ಆಗಿದ್ದಾರೆ. ಅವರ ಅತ್ಯುತ್ತಮ ಅಭಿನಯಕ್ಕಾಗಿ ಅವರು ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ನಟಿ ಇಂದುವದನ, ಲೀಸಾ, ತೇಜ್ ಐ ಲವ್ ಯೂ ಮತ್ತು ಜುವ್ವಾ ಸೇರಿದಂತೆ ಹಲವಾರು ಜನಪ್ರಿಯ ಚಲನಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ. ಇದರೊಂದಿಗೆ, ನಟಿ ಸಕ್ರಿಯ ಸಾಮಾಜಿಕ ಮಾಧ್ಯಮ ಬಳಕೆದಾರರೂ ಆಗಿದ್ದಾರೆ. ತನ್ನ ಅಭಿಮಾನಿಗಳೊಂದಿಗೆ ಸಂಪರ್ಕದಲ್ಲಿರಲು ಅವಳು ಆಗಾಗ್ಗೆ ತನ್ನ ಕೆಲಸ ಮತ್ತು ವೈಯಕ್ತಿಕ ಜೀವನದ ಗ್ಲಿಂಪ್‌ಗಳನ್ನು ಇನ್​ಸ್ಟಾಗ್ರಾಮ್​ (Instagram) ನಲ್ಲಿ ಶೇರ್​ ಮಾಡಿಕೊಳ್ಳುತ್ತಿರುತ್ತಾರೆ. ಆದರೆ ಈಗ ಅವರ ಹಾಟ್​ ಟಾಪಿಕ್​ ಆಗಿದ್ದಾರೆ. ಇದಕ್ಕೆ ಕಾರಣ, ಟಾಲಿವುಡ್ ನಿರ್ಮಾಪಕ ಕೆ.ಪಿ ಚೌಧರಿಯನ್ನು ಡ್ರಗ್ಸ್ ಪ್ರಕರಣದಲ್ಲಿ ಅರೆಸ್ಟ್​ ಆಗುತ್ತಿದ್ದಂತೆಯೇ, ಸುರೇಖಾ ವಾಣಿ ಮುನ್ನೆಲೆಗೆ ಬಂದಿದ್ದಾರೆ. ಈ ಕೇಸ್​ನಲ್ಲಿ ಇವರ ಹೆಸರೂ ಥಳಕು ಹಾಕಿಕೊಂಡಿದೆ. 

ಡ್ರಗ್ಸ್ ದಂಧೆ ಆರೋಪದ ಮೇಲೆ ಟಾಲಿವುಡ್‌ ನಿರ್ಮಾಪಕ, ರಜನಿಕಾಂತ್ ನಟನೆಯ ‘ಕಬಾಲಿ’ ಚಿತ್ರದ  ನಿರ್ಮಾಪಕರೂ ಆಗಿರುವ ಕೆ.ಪಿ.ಚೌಧರಿ  ಅರೆಸ್ಟ್ ಆದ ಬಳಿಕ ಪೊಲೀಸರ ಇತ್ತೀಚೆಗೆ ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ. ಈ ಸಂದರ್ಭದಲ್ಲಿ ಅವರು ನೀಡಿರುವ ಮಾಹಿತಿಗಳು ಟಾಲಿವುಡ್​​ನಲ್ಲಿ ಸಂಚಲನ ಮೂಡಿಸಿವೆ. ನಿರ್ಮಾಪಕ ಚೌಧರಿ ಜೊತೆ ನಂಟು ಹೊಂದಿದ ಸುಮಾರು 12 ಮಂದಿಯ ಹೆಸರುಗಳು ತನಿಖೆಯಲ್ಲಿ ಬೆಳಕಿಗೆ ಬಂದಿದೆ ಎನ್ನಲಾಗಿದೆ. ಕೆಪಿ ಚೌಧರಿ ಬಂಧನದ ಬಳಿಕ ಅವರಿಗೆ ತೆಲುಗು ಚಿತ್ರರಂಗದ ಹಲವು ನಟ-ನಟಿಯರೊಟ್ಟಿಗೆ ಆಪ್ತ ಬಂಧ ಇರುವುದು ಗೊತ್ತಾಗಿದೆ.  ಇದರಲ್ಲಿ  ‘ಬಿಗ್ ಬಾಸ್ ತೆಲುಗು’ಖ್ಯಾತಿಯ ನಟಿ ಅಶು ರೆಡ್ಡಿ ಹೆಸರು ವೈರಲ್​ ಆಗಿತ್ತು.  ಕೆ.ಪಿ.ಚೌಧರಿ (K.P.Choudhary) ಜೊತೆ ಅಶು ರೆಡ್ಡಿ ನೂರಾರು ಬಾರಿ ಫೋನ್​ನಲ್ಲಿ ಮಾತನಾಡಿರುವುದು ಪೊಲೀಸರ ತನಿಖೆಯಿಂದ ಗೊತ್ತಾಗಿತ್ತು. ಅದೇ ರೀತಿ ಇನ್ನೊಂದು ಹೆಸರು ಥಳಕು ಹಾಕಿಕೊಂಡಿದೆ. ಅದೇ ಸುರೇಖಾ ವಾಣಿಯವರದ್ದು.

ಮತ್ತೆ ಸದ್ದು ಮಾಡುತ್ತಿದೆ ಡ್ರಗ್ಸ್ ದಂಧೆ; ನಿರ್ಮಾಪಕ ಅರೆಸ್ಟ್ ಬಳಿಕ ಬಿಗ್ ಬಾಸ್ ಸ್ಪರ್ಧಿಯ ಹೆಸರು ರಿವೀಲ್

ಅಷ್ಟಕ್ಕೂ ಸುರೇಖಾ ವಾಣಿಯವರ (Surekha Vani) ಹೆಸರು ಥಳಕು ಹಾಕಿಕೊಳ್ಳಲು ಕಾರಣ, ಖುದ್ದು ಚೌಧರಿ ಅವರ ಇನ್​ಸ್ಟಾಗ್ರಾಮ್​. ಈಗ ಅರೆಸ್ಟ್​ ಆಗಿರೋ ಚೌಧರಿ ಜೊತೆ ಸುರೇಖಾ ಹಾಗೂ ಅವರ ಮಗಳಿಗೆ ಆಪ್ತ ಗೆಳೆತನ ಇತ್ತು ಎನ್ನುವುದನ್ನು ಸಾರುತ್ತಿದೆ ಈ ಫೋಟೋ. ಇಬ್ಬರೂ ಜೊತೆಯಾಗಿರುವ ಕೆಲವು ಫೋಟೋಗಳನ್ನು  ಕೆ.ಪಿ ಚೌಧರಿ ಇನ್​ಸ್ಟಾಗ್ರಾಂನಲ್ಲಿ ಶೇರ್​ ಮಾಡಿಕೊಂಡಿದ್ದು, ಅದು ತನಿಖೆಯಿಂದ ಬಯಲಾಗಿದೆ.  ಅವರ ನಡುವೆ ನಿಕಟ ಸಂಪರ್ಕ ಇತ್ತು ಎನ್ನುಲ ಒಂದು ಫೋಟೋ ಸಾಕ್ಷಿಯಾಗಿದೆ. ಅದರಲ್ಲಿ  ನಟಿ ಸುರೇಖಾ, ಕೆಪಿ ಚೌಧರಿಗೆ ಮುತ್ತು ನೀಡುತ್ತಿದ್ದಾರೆ.   

ಇದು ಸುದ್ದಿಯಾಗುತ್ತಲೇ ನಟಿ ಸಾಮಾಜಿಕ ಜಾಲತಾಣದಲ್ಲಿ ಸ್ಪಷ್ಟನೆ ನೀಡಿದ್ದಾರೆ.   ವಿಡಿಯೋ ಹಂಚಿಕೊಂಡಿರುವ ನಟಿ ಸುರೇಖಾ ವಾಣಿ ಅವರು, 'ಕಳೆದ ಕೆಲವು ದಿನಗಳಿಂದ ನನ್ನ ಮೇಲೆ ವೃಥಾ ಆರೋಪ ಮಾಡಲಾಗುತ್ತಿದೆ. ಡ್ರಗ್ಸ್​ ಕೇಸ್​ನಲ್ಲಿ ವಿನಾ ಕಾರಣ ನನ್ನನ್ನು ಸಿಲುಕಿಸಲಾಗುತ್ತಿದೆ. ಈ  ಆರೋಪಗಳು ನಿಜವಲ್ಲ. ದಯವಿಟ್ಟು ಇಂಥ ಸುದ್ದಿ ಹರಡುವುದನ್ನು ನಿಲ್ಲಿಸಿ. ವಿನಾ ಕಾರಣ, ನನ್ನ ಮೇಲೆ ಮತ್ತು ನನ್ನ ಕುಟುಂಬ ಸದಸ್ಯರ ಮೇಲೆ ಮಾಡುತ್ತಿರುವ ಆರೋಪಗಳನ್ನು ಮಾಡಬೇಡಿ' ಎಂದಿದ್ದಾರೆ. ನೀವು ಮಾಡುತ್ತಿರುವ ಆರೋಪಗಳಿಂದ ನಮ್ಮ ವೃತ್ತಿ, ನಮ್ಮ ಭವಿಷ್ಯ ಮುಖ್ಯವಾಗಿ ನನ್ನ ಮಕ್ಕಳ (Children) ವೃತ್ತಿ ಮತ್ತು ಭವಿಷ್ಯಕ್ಕೆ ಧಕ್ಕೆ ಆಗುತ್ತಿದೆ. ಮಾತ್ರವಲ್ಲದೆ ಕೌಟುಂಬಿಕ ಆರೋಗ್ಯವೂ ಹದಗೆಡುತ್ತಿದೆ. ಬೇರೆ ಬೇರೆ ವಿಧದಲ್ಲಿ ಈ ಆರೋಪಗಳು ನಮ್ಮ ಮೇಲೆ ಪರಿಣಾಮ ಬೀರುತ್ತಿವೆ. ದಯವಿಟ್ಟು ನಮ್ಮ ಅರ್ಥ ಮಾಡಿಕೊಳ್ಳಿ ಎಂದು ತೆಲಗುವಿನಲ್ಲಿ ಸುರೇಖಾ ಮನವಿ ಮಾಡಿಕೊಂಡಿದ್ದಾರೆ.

Casting Couch: ನನ್ನನ್ನೇ ಮಂಚಕ್ಕೆ ಕರೆದಿದ್ದ ಆತ, ಇನ್ನು ನಟಿಯರ ಗತಿ? ಎಂದ ನಟ ರಾಜೀವ್​

ಮೂಲಗಳ ಪ್ರಕಾರ ನಿರ್ಮಾಪಕರು ಅನೇಕ ಕಲಾವಿದರಿಗೆ ಡ್ರಗ್ಸ್ ಸರಬರಾಜು ಮಾಡಿದ್ದ ವಿಚಾರವನ್ನು ತನಿಖೆ ವೇಳೆ ಬಹಿರಂಗ ಪಡಿಸಿದ್ದಾರೆ ಎನ್ನಲಾಗಿದೆ. ಕೆಪಿ ಚೌಧರಿ ಅವರ ಫೋನ್‌ನಿಂದ ಸಾಕಷ್ಟು ಪುರಾವೆ ಸಿಕ್ಕಿವೆ ಎನ್ನಲಾಗಿದೆ. ತನಿಖೆಯಲ್ಲಿ ಅವರ ಬ್ಯಾಂಕ್ ಖಾತೆಯಲ್ಲಿ ಹನ್ನೊಂದು ಅನುಮಾನಾಸ್ಪದ ವಹಿವಾಟುಗಳು ಬಹಿರಂಗವಾಗಿವೆ ಎನ್ನಲಾಗಿದೆ. ಜೂನ್ 14 ರಂದು ರಾಜೇಂದ್ರನಗರ ಪೊಲೀಸರು ಡ್ರಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ನಿರ್ಮಾಪಕ ಕೆಪಿ ಚೌಧರಿ ಅವರನ್ನು ಬಂಧಿಸಿದ್ದರು. ಚೌಧರಿ ಬಳಿ ಡ್ರಗ್ಸ್ ಕೂಡ ಪತ್ತೆ ಆಗಿತ್ತು. ಈ ಕಾರಣದಿಂದ ಚೌಧರಿಯನ್ನು ಪೊಲೀಸರು ನ್ಯಾಯಾಲಯದ ಎದುರು ಹಾಜರು ಪಡಿಸಿ, ತಮ್ಮ ಕಸ್ಟಡಿಗೆ ಪಡೆದಿದ್ದರು.  

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ರಾಜ್ ನಿಧಿಮೋರುಗಾಗಿ ಧರ್ಮ ಬದಲಾಯಿದ್ರಾ ಸಮಂತಾ? ಮದುವೆಯ ರಹಸ್ಯ ರಿವೀಲ್!
ಧುರಂಧಾರ್ ಚಿತ್ರೀಕರಣ ಪಾಕಿಸ್ತಾನದಲ್ಲಿ ಆಗಿತ್ತಾ? ಸಿನಿಮಾದಲ್ಲಿನ ದೃಶ್ಯಗಳ ರಹಸ್ಯ ಬಯಲು ಮಾಡಿದ ನಟ!