
ತೆಲುಗು ಚಿತ್ರರಂಗದ (Tollywood) ವನ್ ಆಂಡ್ ಓನ್ಲಿ ಮೆಗಾ ಸ್ಟಾರ್ ಅಂದ್ರೆ ಚಿರಂಜೀವಿ (Chiranjeevi). ಚಿತ್ರರಂಗದಲ್ಲಿ ಏನೇ ದೊಡ್ಡ ಬೆಳವಣಿಗೆ ಆದರೂ ಚಿರಂಜೀವಿ ಅವರ ನೇತೃತ್ವದಲ್ಲಿ ಸಭೆ ನಡೆಸಲಾಗುತ್ತದೆ. ಆಂಧ್ರ ಪ್ರದೇಶ (Andra Pradesh) ಸರ್ಕಾರ ಸಿನಿಮಾ ಟಿಕೆಟ್ ದರ ಏರಿಸಿರುವ ಕಾರಣ ಅವರೊಟ್ಟಿಗೆ ಮಾತುಕತೆ ನಡೆಸಲು ಚಿರಂಜೀವಿ ನಿರ್ಧರಿಸಿ ಅವರ ನಿವಾಸಕ್ಕೆ ಭೇಟಿ ನೀಡಿದ್ದರು. ಸೋಷಿಯಲ್ ಮೀಡಿಯಾದಲ್ಲಿ (Social media) ಈ ಸಭೆ ಬಗ್ಗೆ ತಪ್ಪು ಸುದ್ದಿ ಹರಿದಾಡುತ್ತಿರುವುದಕ್ಕೆ ಮೆಗಾ ಸ್ಟಾರ್ ಗರಂ ಆಗಿ ಟ್ಟೀಟ್ ಮಾಡಿದ್ದಾರೆ.
ಹೌದು! ಸಿನಿಮಾ ಟಿಕೆಟ್ (Film Ticket) ದರ ಇಳಿಸಬೇಕು ಇಲ್ಲವಾದರೂ ಚಿತ್ರರಂಗಕ್ಕೆ ನಷ್ಟವಾಗುತ್ತದೆ ಎಂದು ಮುಖ್ಯಮಂತ್ರಿ ಜಗನ್ (Jagan Mohan Reddy) ರನ್ನು ಭೇಟಿ ಮಾಡಿ ಅವರ ಮನೆಯಲ್ಲಿ ಭೋಜನ (Lunch) ಮಾಡಿದ್ದರು. ಸಭೆ ನಂತರ ಮಾಧ್ಯಮಗಳಲ್ಲಿ ಮಾತನಾಡಿದ ನಟ 'ಈ ಸಭೆ ಅತ್ಯಂತ ಯಶಸ್ವಿ ಸಭೆ. ಟಿಕೆಟ್ ದರಗಳನ್ನು ಇಳಿಸಿ ಸರ್ಕಾರ ನೀಡಿದ್ದ ಆದೇಶವನ್ನು ಹಿಂಪಡೆದು ಎಲ್ಲರಿಗೂ ಅನುಕೂಲಕರವಾಗುವ ಹೊಸ ಆದೇಶ ಜಾರಿ ಮಾಡಲು ಸಿಎಂ ಒಪ್ಪಿದ್ದಾರೆ' ಎಂದು ಚಿರಂಜೀವಿ ಹೇಳಿದ್ದರು.
ಮಾಧ್ಯಮಗಳಲ್ಲಿ ಏನೇ ಬೆಳವಣಿಗೆ ಆದರೂ ಸೋಷಿಯಲ್ ಮೀಡಿಯಾದಲ್ಲಿ ಬೇರೆಯೇ ತಿರುವು ಪಡೆದುಕೊಳ್ಳುತ್ತದೆ. ಜಗನ್ ನಿವಾಸಲ್ಲಿ ಚಿರಂಜೀವಿ ಏಕೆ ಚರ್ಚೆ ಮಾಡಿದ್ದರು, ಆಫೀಸ್‌ನಲ್ಲಿ ಸಭೆ ಯಾಕೆ ನಡೆದಿಲ್ಲ ಮಾತುಕತೆ ಸಮಯದಲ್ಲಿ ಬೇರೆ ಯಾರಿದ್ದರು? ಮಾಧ್ಯಮದವರ ಸಮ್ಮುಖದಲ್ಲಿ ಮಾತನಾಡಿದ್ದರೆ ಸತ್ಯವೇನೆಂದು ತಿಳಿಯುತ್ತಿತ್ತು ಎಂದು ನೆಟ್ಟಿಗರು ಟೀಕೆ ಮಾಡುತ್ತಿದ್ದಾರೆ.
ಅದಲ್ಲದೆ ಜಗನ್ ಮೋಹನ್ ರೆಡ್ಡಿ ಅವರು ತಮ್ಮ ವೈಎಸ್‌ಆರ್ ಕಾಂಗ್ರೆಸ್ (YSR Congress) ಪಕ್ಷದಿಂದ ಚಿರಂಜೀವಿ ಅವರಿಗೆ ರಾಜ್ಯಸಭಾ ಸೀಟು ನೀಡುವುದಾಗಿ ಭರವಸೆ ಕೊಟ್ಟಿದ್ದಾರೆ ಎನ್ನಲಾಗಿದೆ. ಜಗನ್ ವಿರುದ್ಧ ನಿಂತಿರುವ ಪವನ್ ಕಲ್ಯಾಣ್‌ಗೆ (Pavan Kalyan) ಚೆಕ್ ನೀಡಲು ಜಗನ್ ಈ ರೀತಿ ಪ್ಲ್ಯಾನ್ ಮಾಡಿ ಸಹೋರರ ನಡುವೆಯೇ ಗಿಮಿಕ್ ಮಾಡುತ್ತಿದ್ದಾರೆ ಎನ್ನಲಾಗಿದೆ. ಈ ಸುದ್ದಿ ಹರಿದಾಡುತ್ತಿದ್ದಂತೆ ಚಿರಂಜೀವಿ ಟ್ಟೀಟ್ ಮಾಡಿದ್ದಾರೆ.
'ತೆಲುಗು ಚಿತ್ರರಂಗದ ಉಳಿವಿಗಾಗಿ ಚಿತ್ರಮಂದಿರಗಳ ಉಳಿವಿಗಾಗಿ ನಾನು ಆಂಧ್ರ ಪ್ರದೇಶ ಸಿಎಂ ಜಗನ್‌ರನ್ನು ಭೇಟಿ ಮಾಡಿ ಅವರೊಟ್ಟಿಗೆ ಚರ್ಚಿಸಿದ ವಿಚಾರಗಳನ್ನು ದಿಕ್ಕು ತಪ್ಪಿಸುವ ಕೆಲಸ ನಡೆಯುತ್ತಿದೆ. ಜಗನ್ ಹಾಗೂ ನನ್ನ ನಡುವೆ ನಡೆದ ಸಭೆಯಲ್ಲಿ ರಾಜಕೀಯ ಚರ್ಚೆಯಾಗಿದೆ ಎಂದು ಹೇಳಲಾಗುತ್ತಿದೆ. ನನ್ನನ್ನು ರಾಜ್ಯಸಭಾ (Rajya Sabha) ಸದಸ್ಯರನ್ನಾಗಿ ಮಾಡಲಾಗುತ್ತಿದೆ ಎಂದು ಮಾಧ್ಯಮಗಳಲ್ಲಿ ವರದಿ ಮಾಡಿದ್ದಾರೆ. ಇದೆಲ್ಲಾ ಸುಳ್ಳು ಸುದ್ದಿ' ಎಂದು ಚಿರಂಜೀವಿ ಬರೆದುಕೊಂಡಿದ್ದಾರೆ.
ರಾಜಕೀಯ ಬಗ್ಗೆ ಸ್ಪಷ್ಟನೆ:
'ರಾಜಕೀಯದಿಂದ ದೂರ ಉಳಿದಿರುವ ನಾನು ಮತ್ತೆ ರಾಜಕೀಯಕ್ಕೆ ಬರುವುದಿಲ್ಲ. ರಾಜಕೀಯ ಸಭೆಗಳಲ್ಲಿ ನಾನು ಭಾಗವಹಿಸುವುದಿಲ್ಲ ಕಾಣಿಸಿಕೊಳ್ಳುವುದಿಲ್ಲ. ದಯವಿಟ್ಟು ನಿಮ್ಮ ಊಹೆಗಳನ್ನು ಸುದ್ದಿಗಳನ್ನಾಗಿ ಬಿತ್ತರಿಸಬೇಡಿ. ಈ ಸುಳ್ಳು ಸುದ್ದಿ ಮತ್ತು ಚರ್ಚೆಗಳಿಗೆ ಈಗಲೇ ಪೂರ್ಣ ವಿರಾಮ ಹಾಕಿದ್ದೀನಿ' ಎಂದು ಮತ್ತೊಂದು ಟ್ಟೀಟ್ ಮಾಡಿದ್ದಾರೆ.
'ಚಿತ್ರರಂಗದ ಇತರರಿಗೆ ನಾನು ಕೇಳಿಕೊಳ್ಳುವುದು ಏನೆಂದರೆ ಯಾರೂ ಸಹ ಧೈರ್ಯಗೆಡಬೇಡಿ. ಆತಂಕ ಪಡಬೇಡಿ. ಆತಂಕದಿಂ ಯಾರೂ ವಿರೋಧವಾಗಿಯೂ ಹೇಳಿಕೆಗಳನ್ನು ನೀಡಬೇಡಿ. ಚಿತ್ರರಂಗಕ್ಕೆ ಒಳ್ಳಯದಾಗುವ ರೀತಿಯಲ್ಲಿ ಜಗನ್ ಸರ್ಕಾ ನಿರ್ಣಯ ತೆಗೆದುಕೊಳ್ಳುತ್ತದೆ ಎಂಬ ಭರವಸೆ ನನಗಿದೆ. ನನ್ನ ಮೇಲೆ ನಂಬಿಕೆ ಇಟ್ಟು ನೀವು ಕೆಲ ಕಾಲ ಸಂಯಮದಿಂದ ಇರಿ' ಎಂದು ಚಿರಂಜೀವಿ ಮನವಿ ಮಾಡಿಕೊಂಡಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.