ಮಲಗಿದ್ದ ಪುಟ್ಟ ಕಂದನಿಗೆ ಜೋರಾಗಿ ಹೊಡೆದ ಬಾಲಯ್ಯ; ವಿಡಿಯೋ ವೈರಲ್

Published : Jun 05, 2022, 10:23 AM IST
ಮಲಗಿದ್ದ ಪುಟ್ಟ ಕಂದನಿಗೆ ಜೋರಾಗಿ ಹೊಡೆದ ಬಾಲಯ್ಯ; ವಿಡಿಯೋ ವೈರಲ್

ಸಾರಾಂಶ

ಟಾಲಿವುಡ್‌ನ ಖ್ಯಾತ ನಟ ನಂದಮೂರಿ ಬಾಲಕೃಷ್ಣ(Nandamuri Balakrishna) ಒಂದಲ್ಲೊಂದು ವಿಚಾರಕ್ಕೆ ಸದ್ದು ಮಾಡುತ್ತಲೇ ಇರುತ್ತಾರೆ. ಸಿನಿಮಾಗಿಂತ ಹೆಚ್ಚಾಗಿ ಬಾಲಯ್ಯ ಬೇರೆ ವಿಚಾರಗಳ ಮೂಲಕವೇ ಸುದ್ದಿಯಲ್ಲಿರುತ್ತಾರೆ. ಇದೀಗ ಮಲಗಿರೋ ಪುಟ್ಟ ಮಗುವಿಗೆ ಜೋರಾಗಿ ಹೊಡೆದು ಬಾಲಯ್ಯ ಸುದ್ದಿಯಾಗಿದ್ದಾರೆ.

ಟಾಲಿವುಡ್‌ನ ಖ್ಯಾತ ನಟ ನಂದಮೂರಿ ಬಾಲಕೃಷ್ಣ(Nandamuri Balakrishna) ಒಂದಲ್ಲೊಂದು ವಿಚಾರಕ್ಕೆ ಸದ್ದು ಮಾಡುತ್ತಲೇ ಇರುತ್ತಾರೆ. ಸಿನಿಮಾಗಿಂತ ಹೆಚ್ಚಾಗಿ ಬಾಲಯ್ಯ ಬೇರೆ ವಿಚಾರಗಳ ಮೂಲಕವೇ ಸುದ್ದಿಯಲ್ಲಿರುತ್ತಾರೆ. ಅದರಲ್ಲೂ ಅಭಿಮಾನಿಗಳ ಜೊತೆ ಬಾಲಯ್ಯ ವರ್ತನೆ ಆಗಾಗ ನೆಟ್ಟಿಗರ ಕೋಪಕ್ಕೆ ಕಾರಣವಾಗುತ್ತಿರುತ್ತದೆ. ಇದೀಗ ಮತ್ತೆ ಬಾಲಯ್ಯ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಮಲಗಿರೋ ಪುಟ್ಟ ಮಗುವಿಗೆ ಜೋರಾಗಿ ಹೊಡೆದು ಬಾಲಯ್ಯ ಸುದ್ದಿಯಾಗಿದ್ದಾರೆ. ಮಕ್ಕಳನ್ನು ದೇವರಂತೆ ಕಾಣುತ್ತಾರೆ. ಮಕ್ಕಳ ಜೊತೆ ಮಕ್ಕಳಾಗಿ ಇರಲು ಇಷ್ಟ ಪಡುತ್ತಾರೆ. ಪ್ರೀತಿಯಿಂದ ಮಾತನಾಡಿಸಿ ಮುದ್ದಾಡುತ್ತಾರೆ. ಆದರೆ ಬಾಲಯ್ಯ ಎಲ್ಲರ ವಿಚಾರದಲ್ಲೂ ಒಂದೇ.

ಮಕ್ಕಳು ಒಂದೇ ದೊಡ್ಡವರು ಒಂದೇ. ಅಭಿಮಾನಿಗಳ ಜೊತೆ ಖಾರವಾಗಿ ನಡೆದುಕೊಳ್ಳುವ ಬಾಲಯ್ಯನ ವಿಡಿಯೋಗಳು ಆಗಾಗ ವೈರಲ್ ಆಗುತ್ತಿರುತ್ತವೆ. ತನ್ನ ಚಿತ್ರ ವಿಚಿತ್ರ ವರ್ತನೆ ಮೂಲಕವೇ ಗಮನ ಸೆಳೆದಿರುವ ಬಾಲಯ್ಯ ಆನ್ ಸ್ಕ್ರೀನ್ ಮತ್ತು ಆಫ್ ಸ್ಕ್ರೀನ್ ಎಲ್ಲಾ ಕಡೆ ಒಂದೇ ರೀತಿ. ಈಗಾಗಲೇ ಅನೇಕ ಬಾರಿ ಅಭಿಮಾನಿಗಳಿಗೆ ಹೊಡೆದಿದ್ದಾರೆ, ಕಪಾಳಮೋಕ್ಷ ಮಾಡಿದ್ದಾರೆ. ವಿಚಿತ್ರವಾಗಿ ನಡೆದುಕೊಂಡಿದ್ದಾರೆ. ಬಾಲಯ್ಯ ಸಾರ್ವಜನಿಕ ಸ್ಥಳದಲ್ಲಿ ಹೊಡೆದಿದ್ದು ಒಬ್ಬರಿಗಾ ಇಬ್ಬರಿಗಾ. ಸಾಕಷ್ಟು ಅಭಿಮಾನಿಗಳು ಬಾಲಯ್ಯನಿಂದ ಹೊಡೆತ ತಿಂದಿದ್ದಾರೆ.

Duniya Vijay: ಮುಸಲಿ ಮಡುಗು ಪ್ರತಾಪ್ ರೆಡ್ಡಿಯಾದ ಸ್ಯಾಂಡಲ್‌ವುಡ್‌ನ ದುನಿಯಾ ವಿಜಯ್!

ಆದರೂ ಅಭಿಮಾನಿಗಳ ಕ್ರೇಜ್ ಕಡಿಮೆಯಾಗಿಲ್ಲ. ಬಾಲಯ್ಯ ಹೋದಲೆಲ್ಲಾ ಮುತ್ತಿಕೊಳ್ಳುತ್ತಾರೆ. ಸೆಲ್ಪಿಗಾಗಿ ಮುಗಿಬೀಳುತ್ತಾರೆ. ಬಾಲಯ್ಯ ಅಭಿಮಾನಿಗಳ ಜೊತೆ ಖಾರವಾಗಿ ನಡೆದುಕೊಂಡರೂ ತಲೆಕೆಡಿಸಿಕೊಳ್ಳುವುದಿಲ್ಲ. ಆದರೀಗ ಪುಟ್ಟ ಮಗುವಿನ ಜೊತೆಯೂ ಹಾಗೆ ನಡೆದುಕೊಂಡಿರುವುದು ನೆಟ್ಟಿಗರ ಕೋಪಕ್ಕೆ ಕಾರಣವಾಗಿದೆ. ಬಾಲಯ್ಯ ನೋಡಲು ಅಭಿಮಾನಿಗಳು ಮುಗಿಬಿದ್ದರು. ಅಭಿಮಾನಿಯೊಬ್ಬ ಪುಟ್ಟ ಮಗುವನ್ನು ಕರೆದುಕೊಂಡು ಬಂದಿದ್ದರು. ಬಾಲಯ್ಯ ಜೊತೆ ಸೆಲ್ಫಿಗಾಗಿ ಓಡಿ ಬಂದು ಬಾಲಯ್ಯ ಪಕ್ಕದಲ್ಲಿ ನಿಂತರು. ಭಜದ ಮೇಲೆ ಮಗುವನ್ನು ಮಲಗಿಸಿಕೊಂಡಿದ್ದರು.

ತೆಲುಗು ಸ್ಟಾರ್ ಬಾಲಯ್ಯ ಸಿನಿಮಾಗೆ ಕನ್ನಡತಿ ಶ್ರೀಲೀಲಾ ನಾಯಕಿ

ನಿದ್ರಿಸುತ್ತಿದ್ದ ಪುಟ್ಟ ಕಂದನನ್ನು ಬಾಲಯ್ಯ ಜೋರಾಗಿ ಹೊಡೆದು ಎಬ್ಬಿಸಿ ಕ್ಯಾಮರಾ ನೋಡುವಂತೆ ಹೇಳಿದ್ದಾರೆ. ಬಾಲಯ್ಯನ ಹೊಡೆತಕ್ಕೆ ಬೆಚ್ಚಿದ ಮಗು ನಿದ್ರೆಯಿಂದ ಎದ್ದು ಗಾಬರಿಯಿಂದ ನೋಡಿದೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.

 

ಈ ಬಗ್ಗೆ ಪರ ವಿರೋಧ ಚರ್ಚೆ ನಡೆಯುತ್ತಿದೆ. ಕೆಲವರು ಬಾಲಯ್ಯ ಇರೋದೇ ಹೀಗೆ ಎಂದು ಕಾಮೆಂಟ್ ಮಾಡುತ್ತಿದ್ದರೆ, ಇನ್ನು ಕೆಲವು ಪುಟ್ಟ ಮಕ್ಕಳ ಜೊತೆ ಹೀಗೆ ನಡೆದುಕೊಳ್ಳುತ್ತಾರಾ ಎಂದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಆದರೆ ಇದ್ಯಾವುದಕ್ಕೂ ಬಾಲಯ್ಯ ತಲೆ ಕೊಡಿಸಿಕೊಳ್ಳುವುದಿಲ್ಲ. ಪ್ರತಿಬಾರಿಯೂ ಬಾಲಯ್ಯ ಅಭಿಮಾನಿಗಳ ಜೊತೆ ಹೀಗೆ ನಡೆದುಕೊಳ್ಳುತ್ತಾರೆ. ಹಾಗಾಗಿ ಎಷ್ಟೇ ಟ್ರೋಲ್ ಆದರೂ, ಆಕ್ರೋಶ ಹೊರಹಾಕಿದರು ತನ್ನ ಸ್ಟೈಲ್ ಬಿಟ್ಟಿಲ್ಲ ಬಾಲಯ್ಯ.

 

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ನಾನೇನು ಸಾಧುವಲ್ಲ.. ಹೀಗೆ ಮಾತಾಡೋಕೆ ನನಗೂ ಬರುತ್ತೆ: ಪುಷ್ಪ ನಟಿ ಹೇಳಿದ್ದೇನು?
ವೃತ್ತಿಜೀವನದಲ್ಲಿ 2 ಬಾರಿ ದೊಡ್ಡ ತಪ್ಪು ಮಾಡಿದ ರಾಮ್ ಚರಣ್.. ಚಿರಂಜೀವಿಯೂ ಏನೂ ಮಾಡಲಾಗಲಿಲ್ಲವೇ?