ಟ್ರಂಪ್‌ ಮಾತ್ರವಲ್ಲ ನಟ ಬಾಲಕೃಷ್ಣ ಸಹಿಯನ್ನೂ ಯಾರೂ ಫೋರ್ಜ್ ಮಾಡೋಕಾಗಲ್ಲ!

Suvarna News   | Asianet News
Published : Feb 27, 2020, 11:23 AM IST
ಟ್ರಂಪ್‌ ಮಾತ್ರವಲ್ಲ ನಟ ಬಾಲಕೃಷ್ಣ ಸಹಿಯನ್ನೂ ಯಾರೂ ಫೋರ್ಜ್ ಮಾಡೋಕಾಗಲ್ಲ!

ಸಾರಾಂಶ

ಭಾರತಕ್ಕೆ ಆಗಮಿಸಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಸಬರಮತಿ ಆಶ್ರಮದ ಸಂದರ್ಶನ ಪುಸ್ತಕದಲ್ಲಿ ಬರೆದ ಸಹಿ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದೆ. ಇದೇ ಟೈಮಲ್ಲಿ ಟಾಲಿವುಡ್‌ ನಟ ಬಾಲಕೃಷ್ಣ ಸಹಿಯೂ ವೈರಲ್‌ ಆಗಿದೆ. ಹೇಗಿದೆ ನೀವೇ ನೋಡಿ.

ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌, ಪತ್ನಿ ಮೆಲಾನಿಯಾ, ಪುತ್ರಿ ಇವಾಂಕಾ ಹಾಗೂ ಅಳಿಯಾ ಜಾರೆಟ್‌ ಫೆಬ್ರವರಿ 24 ಹಾಗೂ 25ರಂದು ಎರಡು ದಿನಗಳ ಕಾಲ ಭಾರತ ಪ್ರವಾಸದಲ್ಲಿದ್ದರು. 

ಸಬರಮತಿ ಭೇಟಿ: ಗಾಂಧಿಯನ್ನು ಮರೆತ ಟ್ರಂಪ್, 5 ವರ್ಷದ ಹಿಂದೆ ಒಬಾಮಾ ಹೀಗೆ ಬರೆದಿದ್ರು!

ಈ ವೇಳೆ ಕುಟುಂಬದ ಜೊತೆ ಟ್ರಂಪ್‌ ಸಬರಮತಿ ಆಶ್ರಮ, ಮೊಟೆರಾ ಕ್ರೀಡಾಂಗಣ ಹಾಗೂ ವರ್ಲ್ಡ್‌ ಫೇಮಸ್‌ ತಾಜ್‌ ಮಹಲ್‌‌ಗೂ ಭೇಟಿ ನೀಡಿದ್ದರು. ಸಬರಮತಿ ಆಶ್ರಮದ ಸಂದರ್ಶಕರ ಪುಸ್ತಕದಲ್ಲಿ 'To my great friend prime minister modi Thank you for this wonderful visit' ಎಂದು ಬರೆದು ಹಾಕಿದ ಸಹಿ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದೆ. 

ಸಿಗ್ನೇಚರ್‌ ನೋಡಲು ECG ತರ ಕಾಣುತ್ತಿದೆ, ಇದು ಗ್ರೇಟ್ ವಾಲ್‌ ಆಫ್‌ ಚೈನಾ ತರ ಇದೆ, ಇದನ್ನು ಯಾರೂ ಫೋರ್ಜ್ ಮಾಡಲು ಸಾಧ್ಯವಿಲ್ಲ ಎಂದು ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್‌ ಆಯಿತು. ಇದಕ್ಕೆ ಸಾಟಿ ಎಂಬಂತೆ ಟಾಲಿವುಡ್‌ ಸೂಪರ್‌ ಸ್ಟಾರ್‌ ಬಾಲಕೃಷ್ಣ ಸಹಿ ವೈರಲ್‌ ಆಗುತ್ತಿದೆ. 

ನಂದಮೂರಿ ಬಾಲಾಕೃಷ್ಣ ಅಂಧ್ರ ಪ್ರದೇಶದ ಮಾಜಿ ಮುಖ್ಯಮಂತ್ರಿ ಎನ್‌.ಟಿ. ರಾಮಾರಾವ್‌ ಅವರ 6ನೇ ಪುತ್ರ, ಬಾಲನಟನಾಗಿ ಚಿತ್ರರಂಗಕ್ಕೆ ಕಾಲಿಟ್ಟ ಬಾಲಕೃಷ್ಣ ಸುಮಾರು 150ಕ್ಕೂ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಇಂದುಪುರದ ಟಿಡಿಪಿ ಶಾಸಕರಾಗಿಯೂ ಕಾರ್ಯನಿರ್ವಹಿಸಿದ್ದಾರೆ.

ಉತ್ತರ ಕರ್ನಾಟಕದ ಸರಕಾರಿ ಅಧಿಕಾರಿಯೊಬ್ಬರು ಮಾಡುವ ಸಹಿಯೂ ಈ ಹಿಂದೆ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಅವರು ಸಿಗ್ನೇಚರ್ ಶಾಂತಯ್ಯ ಎಂದೇ ಪ್ರಸಿದ್ಧಿ ಪಡೆದರು.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

Abhishek Bachchan: ಮಗಳು ಆರಾಧ್ಯಾ ಗೂಗಲ್‌ನಲ್ಲಿ ಈ ಡಿವೋರ್ಸ್ ಸುದ್ದಿ ಓದಿದರೇ ಏನಾಗುವುದೋ ಏನೋ..!?
ಪ್ರೀತಿಸಿದ ಹುಡುಗಿ ಮೋಸ ಮಾಡಿದ್ರೆ ತಿರುಗಿ ನೋಡದ ಹುಡುಗರು; ದ್ರೋಹ ಮಾಡಿದೋಳ ಹಿಂದೆ ಹೋದ Bigg Boss ಸ್ಪರ್ಧಿ