ಓಟಿಟಿಯಲ್ಲಿ ನೋಡಲೇಬೇಕಾದ ಮೂರು ಕೊರಿಯನ್ ಸಸ್ಪೆನ್ಸ್, ಥ್ರಿಲ್ಲರ್ ಸಿನಿಮಾಗಳು

By Mahmad Rafik  |  First Published Jun 14, 2024, 12:24 PM IST

ಒಟಿಟಿ ಪ್ಲಾಟ್‌ಫಾರಂನಲ್ಲಿ ನೋಡಲೇಬೇಕಾದ ಸ್ಪಸೆನ್ಸ್, ಥ್ರಿಲ್ಲರ್ ಮೂರು ಕೊರಿಯನ್ ಸಿನಿಮಾಗಳ (Korean Cinemas) ಬಗ್ಗೆ ಹೇಳುತ್ತಿದ್ದೇವೆ. ಈ ಕೊರಿಯನ್ ಭಾಷೆಯ ಸಿನಿಮಾಗಳು ಹಿಂದಿಗೆ ಡಬ್ ಆಗಿದ್ದು, ಅಮೇಜಾನ್ ಹಾಗೂ ನೆಟ್‌ಫ್ಲಿಕ್ಸ್‌ನಲ್ಲಿ ನೋಡಬಹುದಾಗಿದೆ.


ಬೆಂಗಳೂರು: ಇಂದು ಥಿಯೇಟರ್‌ಗೆ ಹೋಗಿ ಸಿನಿಮಾ ನೋಡುವ ಕಾಲ ದಿನದಿಂದ ದಿನಕ್ಕೆ ಮರೆಯಾಗುತ್ತಿದೆ. ಅಮೇಜಾನ್, ನೆಟ್‌ಫ್ಲಿಕ್ಸ್, ವೂಟ್, ಜಿ5ನತ್ತ ಒಟಿಟಿ ಪ್ಲಾಟ್‌ಫಾರಂ ಆಪ್‌ಗಳು (OTT Platform) ಎಲ್ಲರ ಮೊಬೈಲ್‌ನಲ್ಲಿ ಸ್ಥಳಾವಕಾಶ ಮಾಡಿಕೊಂಡಿವೆ. ಹಾಗಾಗಿ ಜನರು ಮನೆಯಲ್ಲಿಯೇ ಕುಳಿತು ತಮಿಗಿಷ್ಟದ ಸಿನಿಮಾಗಳನ್ನು (Watching Cinema) ನೋಡುವಂತಾಗಿದೆ. ಸಿನಿಮಾ ವೀಕ್ಷಕರ ಅಭಿರುಚಿ ಬದಲಾಗಿದ್ದು, ಬೇರೆ ಬೇರೆ ಭಾಷೆಯ ಚಿತ್ರಗಳನ್ನು ನೋಡುತ್ತಿದ್ದಾರೆ. ಇಂಗ್ಲಿಷ್ ಸೇರಿದಂತೆ ವಿದೇಶಿ ಭಾಷೆಯ ಸಿನಿಮಾಗಳು ಹಿಂದಿಗೆ ಡಬ್ ಆಗುವ ಮೂಲಕ ಭಾರತೀಯ ವೀಕ್ಷಕರ ಮುಂದೆ ಬರುತ್ತಿವೆ. ಇಂದು ನಾವು ನಿಮಗೆ ಒಟಿಟಿ ಪ್ಲಾಟ್‌ಫಾರಂನಲ್ಲಿ ನೋಡಲೇಬೇಕಾದ ಸ್ಪಸೆನ್ಸ್, ಥ್ರಿಲ್ಲರ್ ಮೂರು ಕೊರಿಯನ್ ಸಿನಿಮಾಗಳ (Korean Cinemas) ಬಗ್ಗೆ ಹೇಳುತ್ತಿದ್ದೇವೆ. ಈ ಕೊರಿಯನ್ ಭಾಷೆಯ ಸಿನಿಮಾಗಳು ಹಿಂದಿಗೆ ಡಬ್ ಆಗಿದ್ದು, ಅಮೇಜಾನ್ ಹಾಗೂ ನೆಟ್‌ಫ್ಲಿಕ್ಸ್‌ನಲ್ಲಿ ನೋಡಬಹುದಾಗಿದೆ.

I SAW THE DEVIL
ಈ ಸಿನಿಮಾ ಆರಂಭವಾಗುತ್ತಿದ್ದಂತೆ ಮೊದಲು ನಿರ್ಜನ ಪ್ರದೇಶದಲ್ಲಿ ರಾತ್ರಿ ಯುವತಿಯೊಬ್ಬಳ ಕಾರ್ ಕೆಟ್ಟು ನಿಲ್ಲುತ್ತದೆ. ಈ ಸಮಯದಲ್ಲಿ ಯುವತಿ ಬಳಿ ಬರುವ ಅಪರಿಚಿತ ವ್ಯಕ್ತಿ ಆಕೆ ಮೇಲೆ ಭೀಕರವಾಗಿ ಹಲ್ಲೆಗೈದು ಕೊಲೆ ಮಾಡುತ್ತಾನೆ. ಇದೆಲ್ಲವನ್ನು ಯುವತಿ ಪ್ರಿಯಕರ ಫೋನ್‌ನಲ್ಲಿ ಕೇಳಿಸಿಕೊಳ್ಳುತ್ತಾನೆ. ಯುವತಿಯನ್ನು ಕೊಲೆಗೈದ ಆ ವ್ಯಕ್ತಿ ಯಾರು? ಪ್ರಿಯಕರ ಹಂತಕನ್ನು ಹೇಗೆ ಪತ್ತೆ ಮಾಡುತ್ತಾನೆ  ಅನ್ನೋದು ಸಿನಿಮಾದ ಒನ್‌ ಲೈನ್ ಕತೆ. ಈ ಸಿನಿಮಾ ರೋಚಕ ಕತೆಯನ್ನು ಹೊಂದಿದ್ದು, ಟ್ವಿಸ್ಟ್ ಆಂಡ್ ಟರ್ನ್‌ಗಳನ್ನು ಹೊಂದಿದೆ.

Tap to resize

Latest Videos

Photos: ಗರ್ಭಿಣಿ ಪತ್ನಿ ಜೊತೆ ಡಾರ್ಲಿಂಗ್ ಕೃಷ್ಣ ರೊಮ್ಯಾಂಟಿಕ್ ಫೋಟೋಶೂಟ್

ಈ ಚಿತ್ರ 2010ರಲ್ಲಿ ಬಿಡುಗಡೆ ಆಗಿದೆ. ಅಮೇಜಾನ್ ಪ್ರೈಂನಲ್ಲಿ ಈ ಸಿನಿಮಾವನ್ನು ನೋಡಬಹುದು. ಐಎಂಡಿಬಿ ಐ ಸಾ ದಿ ಡೆವಿಲ್ ಸಿನಿಮಾಗೆ  7.8 ಅಂಕ ನೀಡಿದೆ. ಚಿತ್ರಕ್ಕೆ ಕಿಮ್ ಜೀ-ವೂನ್ ಅವರ ನಿರ್ದೇಶನವಿದ್ದು, ಪಾರ್ಕ್ ಹೂನ್-ಜಂಗ್ಕಿಮ್ ಜೀ-ವೂನ್ ಅವರ ಚಿತ್ರಕತೆ ಇದೆ. ಲೀ ಬ್ಯುಂಗ್-ಹನ್‌, ಚೋಯ್ ಮಿನ್-ಸಿಕ್‌, ಜಿಯೋನ್ ಗೂಕ್-ಹ್ವಾನ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.

THE CALL -  NETFLIX
ಈ ಚಿತ್ರದಲ್ಲಿ ಭೂತಕಾಲ ಮತ್ತು ಭವಿಷ್ಯಕಾಲದ ಎರಡು ಫೋನ್‌ಗಳು ಕನೆಕ್ಟ್ ಆಗುತ್ತವೆ. ಈ ಎರಡು ಕರೆಗಳನ್ನು ಸ್ವೀಕರಿಸುವ ಯುವತಿಯರ ಜೀವನದಲ್ಲಿ ಭಯಾನಕ ಘಟನೆಗಳು ಸಂಭವಿಸಲು ಆರಂಭಿಸುತ್ತವೆ. ಈ  ಎರಡೂ ಕರೆಗಳ ಹಿಂದಿನ ಕತೆ ಏನು? ಕೊನೆಗೆ ಆ ಯುವತಿಯರ ಜೀವನದಲ್ಲಿ ಏನಾಗುತ್ತೆ ಅನ್ನೋದನ್ನು ನೀವು ಊಹೆ ಸಹ ಮಾಡಿರಲು  ಆಗಲ್ಲ. ಈ  ಸಿನಿಮಾವನ್ನು ನೆಟ್‌ಫ್ಲಿಕ್ಸ್‌ನಲ್ಲಿ  ನೋಡಬಹುದಾಗಿದೆ. ಈ ಸಿನಿಮಾಗೆ ಐಎಂಡಿಬಿ 7.1 ಅಂಕವನ್ನು ನೀಡಿದೆ. ಸೆರ್ಗಿಯೋ ಕ್ಯಾಸಿಚುಂಗ್-ಹ್ಯುನ್ ಲೀ ಅವರ ಕತೆಗೆ ಚುಂಗ್-ಹ್ಯುನ್ ಲೀ ಆಕ್ಷನ್ ಕಟ್ ಹೇಳಿದ್ದಾರೆ. ಪಾರ್ಕ್ ಶಿನ್-ಹೈ, ಜಿಯೋನ್ ಜೊಂಗ್-ಸಿಯೊ, ಕಿಮ್ ಸುಂಗ್-ರ್ಯುಂಗ್ ಈ ಸಿನಿಮಾದಲ್ಲಿ ನಟಿಸಿದ್ದಾರೆ. ಈ ಚಿತ್ರ ನವೆಂಬರ್ 2020ರಂದು ಬಿಡುಗಡೆ ಆಗಿತ್ತು. 

ಬಿಕಿನಿ ಧರಿಸಿ ಕುಟುಂಬಸ್ಥರಿಂದ ದೂರವಾದೆ ಎಂದ ಮುಸ್ಲಿಂ ನಟಿ

THE WAILING
ಪುಟ್ಟ ಊರಿನೊಂದರಲ್ಲಿ ಸಾಲು ಸಾಲು ಕೊಲೆಗಳು ಆಗುತ್ತಿರುತ್ತವೆ. ಈ ಕೊಲೆಗಳ ಸುತ್ತ ಸಿನಿಮಾ ಸಾಗುತ್ತದೆ. ಈ ಸಿನಿಮಾದ ಟ್ವಿಸ್ಟ್ ಏನಂದ್ರೆ ಹಂತಕ ಅ ಜನರಗಳ ಮಧ್ಯೆ ಇರುತ್ತಾನೆ. ಅದೇ ಊರಿನ ಸಾಮಾನ್ಯ ಪೊಲೀಸ್ ಅಧಿಕಾರಿ ಈ ಕೊಲೆ ಪ್ರಕರಣಗಳನ್ನು ಹೇಗೆ ಬೇಧಿಸುತ್ತಾನೆ ಅನ್ನೋದು ಸಿನಿಮಾದ ಕತೆಯಾಗಿದೆ. ಹಂತಕ ಬೇರೆಯೊಬ್ಬರ  ವಶದಲ್ಲಿರೋದು ಗೊತ್ತಾಗುತ್ತದೆ. ಹಂತಕ ಯಾರ ವಶದಲ್ಲಿರುತ್ತಾನೆ ಅನ್ನೋದು ಸಿನಿಮಾದ ರೋಚಕ ತಿರುವು. ಈ ಮೂವಿಯನ್ನು ಅಮೇಜಾನ್ ಪ್ರೈಂನಲ್ಲಿ ವೀಕ್ಷಿಸಬಹುದಾಗಗಿದೆ. ಐಎಂಡಿಬಿ ಈ ಸಿನಿಮಾಗೆ 7.4 ಅಂಕ ನೀಡಿದೆ. ನಾ ಹಾಂಗ್-ಜಿನ್ ಅವರ ಕತೆಯಾಗಿದ್ದು, ಜಿನ್ ಅವರೇ ಆಕ್ಷನ್ಕ ಕಟ್ ಹೇಳಿದ್ದಾರೆ. ಜುನ್ ಕುನಿಮುರಾ, ಹ್ವಾಂಗ್ ಜಂಗ್-ಮಿನ್, ಕ್ವಾಕ್ ಡೊ-ವಾನ್ ಚಿತ್ರದಲ್ಲಿ ನಟಿಸಿದ್ದಾರೆ.

click me!