ಹಿಂದೂ ಹೆಸರಿಟ್ಟುಕೊಂಡ ಬಳಿಕ ಸಕ್ಸಸ್‌ ಆದ ಹಿಂದಿ ಫಿಲಂ ಹೀರೋಯಿನ್‌ಗಳಿವರು!

By Suvarna NewsFirst Published Jan 29, 2023, 4:28 PM IST
Highlights

ಹಿಂದಿ ಚಲನಚಿತ್ರ ರಂಗದಲ್ಲಿ ಕೆಲವು ನಟಿಯರಿದ್ದಾರೆ. ಮೂಲತಃ ಇವರು ಮುಸ್ಲಿಮರಾಗಿದ್ದರೂ, ಆ ಹೆಸರಿನಿಂದ ಯಾವುದೇ ಯಶಸ್ಸು ಕಾಣದೇ, ಹಿಂದೂ ಹೆಸರುಗಳಿಂದಲೇ ಪ್ರಸಿದ್ಧರಾದವರು. ಅಂಥವರ್ಯಾರು ನೋಡೋಣ ಬನ್ನಿ.

ದಶಕಗಳಿಂದ, ಹಲವಾರು ಬಾಲಿವುಡ್ (bollywood) ನಟಿಯರು ತಮ್ಮ ಶಕ್ತಿಯುತ ನಟನೆ ಮತ್ತು ಚೆಲುವಿನಿಂದ ಲಕ್ಷಾಂತರ ಜನರ ಹೃದಯವನ್ನು ಗೆದ್ದಿದ್ದಾರೆ. ಕೆಲವು ನಟಿಯರು ಜನರ ಮನಸ್ಸಿನಲ್ಲಿ ಶಾಶ್ವತವಾದ ಪ್ರಭಾವ ಬೀರಿದ್ದಾರೆ. ಅವರಲ್ಲಿ ಹೆಚ್ಚಿನವರು ತಮ್ಮ ಆನ್-ಸ್ಕ್ರೀನ್ ಹೆಸರಿನಿಂದಲೇ ಪರಿಚಿತರು. ಆದರೆ, ನೀವು ಹಿಂದೂ ಸುಂದರಿಯರು ಎಂದೇ ನಂಬಿಕೊಂಡಿರುವ ಕೆಲವು ಹೀರೋಯಿನ್‌ಗಳು ಮೂಲತಃ ಮುಸ್ಲಿಮರು, ಆದರೆ ಹಿಂದೂ ಹೆಸರುಗಳನ್ನು ಇಟ್ಟುಕೊಂಡ ನಂತರ ಅವರಿಗೆ ಬಾಲಿವುಡ್‌ನಲ್ಲಿ ಯಶಸ್ಸು ದೊರೆಯಿತು ಎಂಬುದು ನಿಮಗೆ ಗೊತ್ತೇ? ಹೌದು, ಅಂತ ಹಲವು ಮಂದಿ ಇದ್ದಾರೆ. ಹಿಂದಿ ಚಿತ್ರರಂಗದಲ್ಲಿ ತಮ್ಮ ಹೆಸರನ್ನು ಸ್ಥಾಪಿಸಲು ಕೆಲವು ನಟಿಯರು ತಮ್ಮ ಹೆಸರನ್ನೇ ಬದಲಾಯಿಸಿಕೊಂಡರು. ಹಾಗೆ ಬದಲಾಯಿಸಿದ ಹೆಸರೇ ಅವರಿಗೆ ಅದೃಷ್ಟ ತಂದುಕೊಟ್ಟಿತು. ಕೆಲವೊಮ್ಮೆ ಇವರು ತಾವೇ ಇಷ್ಟಪಟ್ಟು ಬದಲಾಯಿಸಿಕೊಂಡವರು, ಇನ್ನು ಕೆಲವೊಮ್ಮೆ ಚಿತ್ರ ನಿರ್ದೇಶಕರೇ ಅವರ ಹೆಸರನ್ನು ಬದಲಾಯಿಸಿದರು. ಹಾಗಿದ್ದರೆ ಅಂಥವರ್ಯಾರು, ನೋಡೋಣ.

ಮಧುಬಾಲಾ (Madhubala)
1950 ಮತ್ತು 1960ರ ದಶಕದ ಈ ಮೇರು ದರ್ಜೆಯ ನಟಿ, ಮಧುಬಾಲಾ ಅಪಾರ ಅಭಿಮಾನಿಗಳನ್ನು ಹೊಂದಿದ್ದರು. ಆಕೆಯ ನಿಜವಾದ ಹೆಸರು ಮುಮ್ತಾಜ್ ಬೇಗಂ. ಆದರೆ ಆಕೆ ಹಿಂದಿ ಚಲನಚಿತ್ರ ಜಗತ್ತಿಗೆ ಕಾಲಿಟ್ಟ ತಕ್ಷಣ ತಮ್ಮ ಹೆಸರನ್ನು ಮಧುಬಾಲಾ ಎಂದು ಬದಲಾಯಿಸಿಕೊಂಡರು. ಅವರು 1947ರಲ್ಲಿ 'ನೀಲಕಮಲ್' ಚಿತ್ರದ ಮೂಲಕ ಮನೆಮಾತಾಗಿದ್ದರು.

ಮೀನಾಕುಮಾರಿ (Meena kumari)
ಮೀನಾ ಕುಮಾರಿ ದುರಂತದ ರಾಣಿ ಎಂದೇ ಹೆಸರಾದವಳು. 1933ರಲ್ಲಿ ಹುಟ್ಟಿದ ಈಕೆಯ ಜನ್ಮ ನಾಮ ಮಹಜಬೀನ್ ಬಾನೋ. ನಿರ್ದೇಶಕ ವಿಜಯ್ ಭಟ್ ಅವರು 1939ರಲ್ಲಿ ಈಕೆ ಮೊದಲ ಚಿತ್ರದಲ್ಲಿ ನಟಿಸುವಾಗ ʼಬೇಬಿ ಮೀನಾ' ಎಂದು ಮರುನಾಮಕರಣ ಮಾಡಿದರು. ಆಕೆಯ ಹೆಸರು ನಂತರ ಮೀನಾ ಕುಮಾರಿ ಎಂದು ರೂಪಾಂತರಗೊಂಡಿತು.

ಶಾರುಖ್ ಜತೆ ಕೆಲಸ ಮಾಡುವುದರ ಬಗ್ಗೆ ದೀಪಿಕಾ ಪಡುಕೋಣೆ ಏನ್ ಹೇಳಿದ್ರು ನೋಡಿ

ರೀನಾ ರಾಯ್ (Reena rai)
ಬಾಲಿವುಡ್ ಸೂಪರ್ ಸ್ಟಾರ್ ಜೀತೇಂದ್ರ ಅವರ ನಾಯಕಿ ಎಂದೇ ಖ್ಯಾತರಾಗಿರುವ ರೀನಾ ರಾಯ್ ಕೂಡ ಮುಸ್ಲಿಂ. ಆಕೆಯ ನಿಜವಾದ ಹೆಸರು ಸೈರಾ ಅಲಿ. 1972ರಲ್ಲಿ ‘ಜರೂರತ್’ ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ನಟಿ ಹಿಂದಿ ಚಿತ್ರರಂಗಕ್ಕೆ ಕಾಲಿಟ್ಟ ತಕ್ಷಣ ಸೈರಾ ಅಲಿಯಿಂದ ರೀನಾ ರಾಯ್ ಎಂದು ಬದಲಾಯಿಸಿಕೊಂಡರು.

ತಬು (Tabu)
ಭಾರತೀಯ ಚಿತ್ರರಂಗದ ಅತ್ಯುತ್ತಮ ನಟಿಯರಲ್ಲಿ ಒಬ್ಬರಾದ ಟಬು ಕೂಡ ಮುಸ್ಲಿಂ. ಆಕೆಯ ನಿಜವಾದ ಹೆಸರು ತಬಸ್ಸುಮ್ ಫಾತಿಮಾ ಹಶ್ಮಿ. ಅವರು 1985ರಲ್ಲಿ ʼಹಮ್ ನೌಜವಾನ್' ಚಿತ್ರದ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟರು ಮತ್ತು ನಂತರ ಹಲವಾರು ಹಿಟ್ ಚಿತ್ರಗಳನ್ನು ನೀಡಿದರು.

ಮಾನ್ಯತಾ ದತ್ (Manyata dutt)
ಬಾಲಿವುಡ್ ಸೂಪರ್ ಸ್ಟಾರ್ ಸಂಜಯ್ ದತ್ (Sanjay dutt) ಅವರ ಮೂರನೇ ಪತ್ನಿ ಮಾನ್ಯತಾ ದತ್ ಕೂಡ ಮುಸ್ಲಿಂ ಮೂಲದವರು. ಮೂಲ ಹೆಸರು ದಿಲ್ನಾಶಿನ್‌ ಶೇಖ್.‌ ‘ಗಂಗಾಜಲ್’ ಚಿತ್ರದಲ್ಲಿನ ಐಟಂ ಸಾಂಗ್ ಮೂಲಕ ಗ್ಲಾಮರ್ ಲೋಕದಲ್ಲಿ ಖ್ಯಾತಿ ಗಳಿಸಿದರು. ಅಮರ್‌ ಉಜಾಲಾ ವರದಿಯ ಪ್ರಕಾರ, ಬಾಲಿವುಡ್ ಚಲನಚಿತ್ರಗಳಲ್ಲಿ ವೃತ್ತಿಜೀವನ ಸ್ಥಾಪಿಸಿಕೊಳ್ಳಲು ಈಕೆ ತಮ್ಮ ಹೆಸರನ್ನು ದಿಲ್ನಾಶಿನ್ ಶೇಖ್‌ನಿಂದ ಮಾನ್ಯತಾ ಎಂದು ಬದಲಾಯಿಸಿಕೊಂಡಿದ್ದಾಳೆ.

ಸಲ್ಮಾನ್‌ನಿಂದ ಯಶ್ ಕೈಗೆ ಬಂದ ಪೆಪ್ಸಿ; ಪ್ರತಿಷ್ಠಿತ ಬ್ರಾಂಡ್‌ಗೆ KGF ಸ್ಟಾರ್ ಅಂಬಾಸಿಡರ್
 

click me!