ವಿಷ್ಣು ಮಂಚು ಜೊತೆ ಲಿಪ್‌ಲಾಕ್‌ ಮಾಡಿದ ಸನ್ನಿ ಲಿಯೋನ್; ಅಸಲಿ ಕಥೆ ಏನು?

By Suvarna News  |  First Published Sep 11, 2022, 2:18 PM IST

ವಿಷ್ಣು ಮಂಚು ಚಿತ್ರದ ಟೀಸರ್ ರಿಲೀಸ್‌. ಸಲ್ಲಿ ಲಿಯೋನಿ ದೃಶ್ಯ ವೈರಲ್ ....


ತೆಲುಗು ಚಿತ್ರರಂಗ ಸಿಂಪಲ್ ನಟ ಕಮ್ ಉದ್ಯಮಿ ವಿಷ್ಣು ಮಂಚು ಅಭಿನಯದ ಜಿನ್ನಾ ಸಿನಿಮಾ ಟೀಸರ್ ಭರ್ಜರಿಯಾಗಿ ಬಿಡುಗಡೆಯಾಗಿದೆ. ಸೂರ್ಯ ನಿರ್ದೇಶನ ಮಾಡುತ್ತಿರುವ ಸಿನಿಮಾದಲ್ಲಿ ವಿಷ್ಣುಗೆ ಜೋಡಿಯಾಗಿ ಸನ್ನಿ ಲಿಯೋನಿ ಮತ್ತು ಪಾಯಲ್ ರಾಜ್‌ಪುತ್‌ ಜೋಡಿಯಾಗಿ ಅಭಿನಯಿಸಿದ್ದಾರೆ.  ಎಎಮ್‌ಬಿ ಸಿನಿಮಾಸ್‌ ಹೈದರಾಬಾದ್‌ ಅವರು ಜಿನ್ನಾ ಟೀಸರ್ ಲಾಂಚ್ ಮಾಡಿದ್ದಾರೆ. ಇದು ಪಕ್ಕಾ ಎಂಟರ್‌ಟೈಮೆಂಟ್ ಸಿನಿಮಾ ಎನ್ನಲಾಗಿದೆ. ರಂಗಮ್‌ಪೇಟೆಯ ಹಳ್ಳಿಯಲ್ಲಿ ವಿಷ್ಣು ಬಾಡಿಗೆ ಮನೆಯಲ್ಲಿ ವಾಸವಿರುತ್ತಾನೆ ಆದರೆ ಇಡೀ ಹಳ್ಳಿ ವಿಷ್ಣು ವಿರುದ್ಧವಾಗಿ ನಿಲ್ಲುತ್ತಾರೆ. ಈ ಊರಿಗೆ ಸನ್ನಿ ಲಿಯೋನಿ ಪ್ರವೇಶ ಕೊಟ್ಟ ನಂತರ ವಿಚಿತ್ರ ವಿಚಿತ್ರ ಘಟನೆಗಳು ನಡೆಯುತ್ತದೆ. ಆಕೆ ಯಾಕೆ ಬಂದಿದ್ದಾಳೆ ವಿಷ್ಣು ಜೊತೆ ಏನು ಸಂಬಂಧ ಎಂದು ಜನರು ಸತ್ಯ ಹುಡುಕಲು ಶುರು ಮಾಡುತ್ತಾರೆ.

ವೆನೀಲಾ ಕೀಶೋರ್, ನರೇಶ್ ಮತ್ತು ಸುನಿಲ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಎವಿಎ ಎಂಟರ್ಟೈಮೆಂಟ್‌ ಮತ್ತು 24 ಫ್ರೇಮ್ಸ್‌ ಫ್ಯಾಕ್ಟರಿ ಈ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಅನೂಪ್‌ ರುಬೇನ್ಸ್‌ ಸಂಗೀತ ನಿರ್ದೇಶನ ಮಾಡಿದ್ದಾರೆ. ತೆಲುಗು, ಹಿಂದಿ ಮತ್ತು ಮಲಯಾಳಂನಲ್ಲಿ ಅಕ್ಟೋಬರ್ 5ರಂದು ಬಿಡುಗಡೆ ಆಗಲಿದೆ.

Tap to resize

Latest Videos

ಸೋಷಿಯಲ್ ಮೀಡಿಯಾದಲ್ಲಿ ಟೀಸರ್ ಸಂಚಲನ ಸೃಷ್ಟಿ ಮಾಡಿದೆ. ಟೀಸರ್‌ನಲ್ಲಿ ಸನ್ನಿ ಲಯೋನ್‌ ಮತ್ತು ನಟ ವಿಷ್ಣು ಮಂಚು ಲಿಪ್‌ಲಾಪ್ ಮಾಡುತ್ತಾರೆ. ಈ ಸಣ್ಣ ದೃಶ್ಯ ಸಖತ್ ವೈರಲ್ ಆಗಿದೆ. ವಿಷ್ಣು ಕಮ್‌ ಬ್ಯಾಕ್‌ ಬಗ್ಗೆ ಟ್ರೋಲ್‌ಗಳು ವೈರಲ್ ಆಗುತ್ತಿದೆ. ವಿಷ್ಣು ಸಿನಿಮಾ ರಂಗದಲ್ಲಿ ತಂದೆ ಮೋಹನ್ ಬಾಬು ಮತ್ತು ಸಹೋದರಿ ಲಕ್ಷ್ಮಿ ಅಷ್ಟು ಯಶಸ್ಸು ಕಾಣಲಿಲ್ಲ. ಹೀಗಾಗಿ ವರ್ಷಕ್ಕೆ ಒಂದು ಸಿನಿಮಾ ಮಾಡಿದ್ದರೂ ಅದು ತಮ್ಮ ಹೊಸ ಸಿನಿಮಾ ಎಂದು ಭಾವಿಸಿ ಅಭಿನಯಿಸುತ್ತಾರೆ. ಕಳೆದ ವರ್ಷ ಮೋಸಗಾಳ್ಳು ಸಿನಿಮಾ ಬಿಡುಗಡೆಯಾಗಿತ್ತು, ಪ್ರಚಾರಕ್ಕೆಂದು ಲಕ್ಷ ಲಕ್ಷ ಹಣ ಖರ್ಚು ಮಾಡಿದ್ದು ಯಾರೆ ಹುಸಿಯಾಗಿತ್ತು. ಈ ಸಿನಿಮಾ ಬಾಕ್ಸ್‌ ಆಫೀಸ್ ಮುಟ್ಟ ಬೇಕು ಎಂದು ಕಷ್ಟ ಪಡುತ್ತಿದ್ದಾರೆ.

SIIMA; ಸೈಮಾ ಸಮಾರಂಭದಲ್ಲಿ ಮಿಂಚಿದ ದಕ್ಷಿಣದ ಸುಂದರಿಯರು, ಯಾರ್ಯಾರ ಲುಕ್ ಹೇಗಿದೆ ನೋಡಿ

ಹಣ ಇದ್ದರೆ ಯಾರನ್ನ ಬೇಕಿದ್ದರೂ ಸಿನಿಮಾದಲ್ಲಿ ನಟಿಸುವಂತೆ ಮಾಡಬಹುದು ಆದರೆ ಕಲೆ ಇದ್ದರೆ ಮಾತ್ರ ಸಿನಿ ರಸಿಕರನ್ನು ಚಿತ್ರಮಂದಿರಕ್ಕೆ ಕರೆ ತರಲು ಅಗುವುದು ಎಂದು ನೆಟ್ಟಿಗರು ಹಾಸ್ಯ ಮಾಡುತ್ತಿದ್ದಾರೆ.

ಯಾರು ವಿಷ್ಣು ಮಂಚು? 

2003ರಲ್ಲಿ 'ವಿಷ್ಣು' ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ವಿಷ್ಣು ಶ್ರೀ ವಿದ್ಯಾನಿಕೇತನ್‌ ವಿದ್ಯಾಸಂಸ್ಥೆ ಹಾಗೂ ನ್ಯೂ ಯಾರ್ಕ್‌ ಅಕಾಡೆಮಿ ಫೌಂಡರ್.ಆಂಧ್ರ ಪ್ರದೇಶ, ತೆಲಂಗಾಣ, ತಮಿಳುನಾಡು ಹಾಗೂ ಕರ್ನಾಟಕದಲ್ಲಿರುವ 75ಕ್ಕೂ 'ಪ್ರಿಂಗ್ ಬೋರ್ಡ್‌ ಇಂಟರ್‌ನ್ಯಾಷನಲ್ ಪ್ರೀ ಸ್ಕೂಲ್‌' ಮುಖ್ಯಸ್ಥ.ಸೆಲೆಬ್ರಿಟಿ ಕ್ರಿಕೆಟ್‌ ಲೀಗ್‌ - ತೆಲುಗು ವಾರಿಯರ್‌ಗೆ ಸ್ಪಾನ್ಸರ್‌ ಮಾಡುತ್ತಾರೆ. 2009ರಲ್ಲಿ ವಿರಾನಿಕಾ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.2011ರಲ್ಲಿ ಜವಳಿ ಹೆಣ್ಣು ಮಕ್ಕಳಿಗೆ ಪೋಷಕರಾದರು.2018ರಲ್ಲಿ ಗಂಡು ಮಗುವನ್ನು ಬರ ಮಾಡಿಕೊಂಡರು.2019ರಲ್ಲಿ ನಾಲ್ಕನೇ ಮಗುವನ್ನು ಬರ ಮಾಡಿಕೊಂಡಾಗ, ಸಿಕ್ಕಾಪಟ್ಟೆ ಟ್ರೋಲ್ ಆಗಿದ್ದರು.ವಿರಾನಿಕಾ ವಿಷ್ಣು ಅವರನ್ನು ಮೊದಲು ನೋಡಿದ್ದು ಪಾರ್ಟಿಯೊಂದರಲ್ಲಿ.

click me!