1966 ರಲ್ಲಿ ಎನ್‌ಬಿಸಿ ಧಾರಾವಾಹಿಯಲ್ಲಿ ಟಾರ್ಜನ್ ಪಾತ್ರದಲ್ಲಿ ನಟಿಸುವ ಮೂಲಕ ಅವರು ಪ್ರಸಿದ್ಧರಾದರು. ಸಾಹಸ ದೃಶ್ಯಗಳನ್ನು ಚಿತ್ರೀಕರಿಸುವಾಗ ಹಲವು ಬಾರಿ ಗಾಯಗೊಂಡರು.
ಲಾಸ್ ಏಂಜಲೀಸ್(ಅಮೇರಿಕಾ): ಪ್ರಪಂಚದಾದ್ಯಂತ ಅಭಿಮಾನಿಗಳನ್ನು ಹೊಂದಿದ್ದ 'ಟಾರ್ಜನ್' ಟಿವಿ ಧಾರಾವಾಹಿಯ ಪ್ರಮುಖ ಪಾತ್ರ ಟಾರ್ಜನ್ ಆಗಿ ನಟಿಸಿದ್ದ ಹಾಲಿವುಡ್ ನಟ ರಾನ್ ಎಲಿ (86) ನಿಧನರಾಗಿದ್ದಾರೆ. ಅವರ ಮಗಳು ಕಿರ್ಸ್ಟನ್ ಕ್ಯಾಸಲ್ ಎಲಿ ಸಾಮಾಜಿಕ ಮಾಧ್ಯಮದ ಮೂಲಕ ಈ ವಿಷಯವನ್ನು ತಿಳಿಸಿದ್ದಾರೆ. 1966 ರಲ್ಲಿ ಬಿಡುಗಡೆಯಾದ ಧಾರಾವಾಹಿ ಟಾರ್ಜನ್. 'ಸೌತ್ ಪೆಸಿಫಿಕ್', 'ದಿ ಫೈಂಡ್ ಹೂ ವಾಕ್ಡ್ ದಿ ವೆಸ್ಟ್', 'ದಿ ರಿಮಾರ್ಕಬಲ್ ಮಿಸ್ಟರ್ ಪೆನ್ನಿಪ್ಯಾಕರ್' ಮುಂತಾದ ಚಿತ್ರಗಳ ಮೂಲಕ ರಾನ್ ಎಲಿ ಗಮನ ಸೆಳೆದಿದ್ದರು.
1966 ರಲ್ಲಿ, ಅವರು NBC ಸರಣಿಯಲ್ಲಿ ಟಾರ್ಜನ್ ಪಾತ್ರವನ್ನು ನಿರ್ವಹಿಸುವ ಮೂಲಕ ಪ್ರಸಿದ್ಧರಾದರು. ಸಾಹಸ ದೃಶ್ಯಗಳ ಚಿತ್ರೀಕರಣದ ವೇಳೆ ಹಲವು ಬಾರಿ ಗಾಯಗೊಂಡಿದ್ದರು. ಅವರು 1960-61 ರ 'ದಿ ಅಕ್ವಾನಾಟ್ಸ್', 1966 ರಲ್ಲಿ ಬಿಡುಗಡೆಯಾದ ಸಾಹಸ ಚಿತ್ರ 'ದಿ ನೈಟ್ ಆಫ್ ದಿ ಗ್ರಿಜ್ಲಿ' ಮತ್ತು 1978 ರಲ್ಲಿ ಜುರ್ಗೆನ್ ಗೊಸ್ಲರ್ ಅವರ 'ಸ್ಲೇವರ್ಸ್' ಚಿತ್ರಗಳಲ್ಲಿ ನಟಿಸಿದ್ದಾರೆ.