Tamil Nadu Election Result: ಪಕ್ಷ ಕಟ್ಟಿ 2 ವರ್ಷಕ್ಕೆ ಕಿಂಗ್‌ ಮೇಕರ್‌ ಅಲ್ಲ, ಕಿಂಗ್‌ ಆದ Thalapathy Vijay

Published : May 04, 2026, 09:53 AM IST
thalapathy vijay

ಸಾರಾಂಶ

Tamil Nadu Election Result: 2026ರ ತಮಿಳುನಾಡು ವಿಧಾನಸಭಾ ಚುನಾವಣೆಯ ಮತ ಎಣಿಕೆಯಲ್ಲಿ ನಟ ವಿಜಯ್ ಅವರ 'ತಮಿಳಗ ವೆಟ್ರಿ ಕಳಗಂ' (TVK) ಪಕ್ಷ ಎಲ್ಲರ ಗಮನ ಸೆಳೆಯುತ್ತಿದೆ. ಆರಂಭದಲ್ಲಿ ಎಲ್ಲರೂ ಕಡೆಗಣಿಸಿದ್ದರೂ, ಎಕ್ಸಿಟ್ ಪೋಲ್‌ಗಳು ಭರ್ಜರಿ ಗೆಲುವಿನ ಭವಿಷ್ಯ ನುಡಿದಿದ್ದವು. ಇದೀಗ ವಿಜಯ್‌ ಪಕ್ಷವು ಆರಂಭಿಕ ಹಂತದಲ್ಲಿ ಗೆಲುವು ಸಾಧಿಸಿದೆ.

ಇಂದು 2026ರ ತಮಿಳುನಾಡು ವಿಧಾನಸಭಾ ಚುನಾವಣೆಯ ( Tamil Nadu Election Result 2026 ) ಮತ ಎಣಿಕೆ ನಡೆಯುತ್ತಿದೆ. ಯಾರು ಅಧಿಕಾರಕ್ಕೆ ಬರ್ತಾರೆ ಅನ್ನೋ ಕುತೂಹಲ ಎಲ್ಲರಲ್ಲೂ ಮನೆಮಾಡಿದೆ. ರಾಜಕೀಯ ಪಕ್ಷಗಳಷ್ಟೇ ಅಲ್ಲ, ಜನಸಾಮಾನ್ಯರೂ ಕೂಡ ಈ ರಿಸಲ್ಟ್‌ಗಾಗಿ ಕಾದು ಕೂತಿದ್ದಾರೆ.

ವಿಜಯ್ ಪಕ್ಷ ಫಸ್ಟ್‌ ಚುನಾವಣೆಯಲ್ಲೇ ಗೆಲ್ಲುತ್ತಾ?

ತಮಿಳುನಾಡು ರಾಜಕೀಯದಲ್ಲಿ ಹೊಸ ಅಲೆಯಾಗಿ ಎಂಟ್ರಿ ಕೊಟ್ಟಿರುವ ನಟ ವಿಜಯ್ ನೇತೃತ್ವದ 'ತಮಿಳಗ ವೆಟ್ರಿ ಕಳಗಂ' (TVK) ಈ ಚುನಾವಣೆಯಲ್ಲಿ ಎಲ್ಲರ ಗಮನ ಸೆಳೆದಿದೆ. ಪಕ್ಷ ಶುರುವಾಗಿ ಕೆಲವೇ ತಿಂಗಳುಗಳಲ್ಲಿ, ಮೊದಲ ಚುನಾವಣೆಯಲ್ಲೇ ಅಧಿಕಾರ ಹಿಡಿಯುತ್ತಾ ಅನ್ನೋ ಚರ್ಚೆ ಶುರುವಾಗಿದೆ.

ಎಕ್ಸಿಟ್ ಪೋಲ್‌ಗಳು ಬದಲಿಸಿದ ಲೆಕ್ಕಾಚಾರ

ಚುನಾವಣೆಗೂ ಮುನ್ನ, ಟಿವಿಕೆ ಒಂದೇ ಒಂದು ಸೀಟು ಗೆಲ್ಲಲ್ಲ ಅಂತ ಟೀಕೆಗಳು ಕೇಳಿಬಂದಿದ್ದವು. ಇನ್ನೂ ಕೆಲವರು 31 ಸೀಟ್‌ ಬರತ್ತೆ ಎಂದು ಹೇಳಿದ್ದರು. ಆದರೆ, ನಂತರ ಬಂದ ಎಕ್ಸಿಟ್ ಪೋಲ್‌ಗಳು ಈ ಅಭಿಪ್ರಾಯವನ್ನೇ ಬದಲಿಸಿದವು. ಕೆಲವು ಪ್ರಮುಖ ಮಾಧ್ಯಮಗಳು, ಟಿವಿಕೆ 92 ರಿಂದ 120 ಸ್ಥಾನಗಳನ್ನು ಗೆಲ್ಲುವ ಸಾಧ್ಯತೆ ಇದೆ ಎಂದು ವರದಿ ಮಾಡಿವೆ. ಅಷ್ಟೇ ಅಲ್ಲ, ನಿವೃತ್ತ ಐಪಿಎಸ್ ಅಧಿಕಾರಿ ರವಿ ಅವರು ನಡೆಸಿದ ಸಮೀಕ್ಷೆಯಲ್ಲಿ ಪಕ್ಷಕ್ಕೆ 121 ಸೀಟುಗಳು ಸಿಗಲಿವೆ ಎಂದು ಅಂದಾಜಿಸಲಾಗಿತ್ತು.

ವಿಜಯ್ ತಂತ್ರಗಾರಿಕೆ

ಪಕ್ಷ ಸ್ಥಾಪ ಆದಾಗಿನಿಂದ ವಿಜಯ್ ತಮ್ಮ ತಂಡವನ್ನು ಕಟ್ಟುವಲ್ಲಿ ಸಖತ್ ಬ್ಯುಸಿಯಾಗಿದ್ದರು. ಗೆದ್ದ ತಕ್ಷಣ ಎಲ್ಲರೂ ಪನೈಯೂರ್‌ಗೆ ವಾಪಸ್ ಬರಬೇಕು ಅಂತ ಅವರು ಕೊಟ್ಟಿದ್ದ ಸೂಚನೆ, ಕಾರ್ಯಕರ್ತರ ವಿಶ್ವಾಸವನ್ನು ಮತ್ತಷ್ಟು ಹೆಚ್ಚಿಸಿದೆ. ಅಭ್ಯರ್ಥಿಗಳೂ ಕೂಡ ನಾವೇ ಗೆಲ್ಲುತ್ತೇವೆ ಎಂಬ ಭರವಸೆಯಲ್ಲಿದ್ದಾರೆ. ಅದಕ್ಕಾಗಿ ಸಿಕ್ಕಾಪಟ್ಟೆ ರ್ಯಾಲಿ, ಪ್ರಚಾರ ಮಾಡಿದ್ದರು. ಒಂದಿಷ್ಟು ಭರವಸೆಗಳನ್ನು ಕೂಡ ನೀಡಿದ್ದರು. ಸಿನಿಮಾದಿಂದ ದೂರವಾಗಿ ಪಕ್ಷದ ಗೆಲುವಿಗೆ ಶ್ರಮಿಸಿದ್ದರು.

ಸದ್ಯದ ಮತ ಎಣಿಕೆಯ ಟ್ರೆಂಡ್ ಪ್ರಕಾರ, ವಿಜಯ್ ಅವರ ಟಿವಿಕೆ ಪಕ್ಷವು 81 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ. ಪೆರಂಬೂರ್‌ನ, ತಿರುಚ್ಚಿ ಪೂರ್ವದಲ್ಲೂ ವಿಜಯ್ ಮುನ್ನಡೆ ಸಾಧಿಸಿರುವುದು ಚುನಾವಣಾ ಫಲಿತಾಂಶದ ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿದೆ. ದಳಪತಿ ವಿಜಯ್‌ ಅವರು ಪಕ್ಷ ಸ್ಥಾಪನೆ ಮಾಡಿ ಎರಡು ವರ್ಷಗಳಾಗಿವೆ, ಇಷ್ಟು ಕಡಿಮೆ ಸಮಯದಲ್ಲಿ ಈ ರೀತಿ ವಿಜಯ ಸಾಧಿಸಿರೋದು ಅಚ್ಚರಿಯ ವಿಷಯ.

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

‌Thalapathy Vijay ಭವಿಷ್ಯ ನಿರ್ಧಾರವಾಗೋ ದಿನವೇ ತಿರುಪತಿ ಮೊರೆ ಹೋದ ನಟಿ ತ್ರಿಶಾ; ಈಗಲೇ ಇಷ್ಟು ಬೆಂಬಲವೇ?
ನನ್ನ ಸಿನಿಮಾ ಹಾಳು ಮಾಡ್ಬೇಡಿ, ಚಿರಂಜೀವಿಗೆ ನೇರವಾಗಿ ಹೇಳಿದ್ದ ನಿರ್ದೇಶಕ: ಆಮೇಲೇನಾಯ್ತು?