ಕರ್ನಾಟಕದಲ್ಲೂ ಸಾಮ್ರಾಜ್ಯ ವಿಸ್ತರಣೆಗೆ ದಳಪತಿ ಸ್ಕೆಚ್.. ಯಾರ ಸಪೋರ್ಟ್, ಏನಾಗ್ತಿದೆ ಇಲ್ಲಿ? ಸೀಕ್ರೆಟ್..

Published : May 23, 2026, 09:13 PM IST
Thalapathy Vijay

ಸಾರಾಂಶ

ಗ್ರೇಟರ್‌ ಬೆಂಗಳೂರು ಪ್ರಾಧಿಕಾರದ ವ್ಯಾಪ್ತಿಗೆ ಬರುವ 5 ನಗರ ಪಾಲಿಕೆಗಳಿಗೆ 2026ರ ಆಗಸ್ಟ್ 31ರೊಳಗೆ ಚುನಾವಣೆ ನಡೆಸುವಂತೆ ರಾಜ್ಯ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಆದೇಶಿಸಿದೆ. ಸೋ ಚುನಾವಣೆಗೆ ತಯಾರಿ ಶುರುವಾಗಿದೆ. ಈ ನಡುವೆ ತಮಿಳು ಮತದಾರರು ಹೆಚ್ಚು ಇರುವ ವಾರ್ಡ್‌ಗಳಲ್ಲಿ ಟಿವಿಕೆ ಪಕ್ಷದಿಂದ ಅಭ್ಯರ್ಥಿಗಳು ಕಣಕ್ಕಿಳಿಯಲು ಸಿದ್ಧತೆ ನಡೆಸಿದ್ದಾರೆ ಅನ್ನುವ ಸುದ್ದಿ ಹರಿದಾಡ್ತಾ ಇದೆ..!

ಪಕ್ಕದ ರಾಜ್ಯಗಳತ್ತ ದಳಪತಿ ವಿಜಯ್ ಕಣ್ಣು; ಕೆರಳಂ ಬಳಿಕ, ಕರ್ನಾಟಕದಲ್ಲೂ TVK ಟಾಕ್

ದಳಪತಿ ವಿಜಯ್ (Thalapathy Vijay) ತಮಿಳುನಾಡಿನಲ್ಲಿ ಎರಡೇ ವರ್ಷಗಳಲ್ಲಿ ಟಿವಿಕೆ ಪಾರ್ಟಿ (TVK) ಕಟ್ಟಿ ವಿಜಯ ಸಾಧಿಸಿ ಸಿಎಂ ಆಗಿರೋದು ಗೊತ್ತೇ ಇದೆ. ಟವಿಕೆಯ ಈ ಯಶಸ್ಸು ದೇಶದ ರಾಜಕೀಯ ಪಂಡಿತರನ್ನೇ ದಂಗುಬಡಿಸಿದೆ.

ತಮಿಳು ರಾಜ್ಯ ಗೆದ್ದ ದಳಪತಿ, ಸಾಮ್ರಾಜ್ಯ ವಿಸ್ತರಣೆಗೆ ಮುಂದಾಗ್ತಾ ಇದ್ದಾರಾ,,? ಹೌದು ಅಂತಿವೆ ಟಿವಿಕೆ ಮೂಲಗಳು. ಇತ್ತೀಚಿಗೆ ಕೇರಳಂದಲ್ಲಿ ಟಿವಿಕೆ ಪಕ್ಷದ ಸಭೆ ನಡೆದಿದೆ. ತಮಿಳುನಾಡು ಬಿಟ್ರೆ ಕೇರಳದಲ್ಲಿ ವಿಜಯ್​ಗೆ ದೊಡ್ಡ ಅಭಿಮಾನಿ ಬಳಗ ಇದೆ. ಸೋ ಟಿವಿಕೆ ಮುಂದೆ ಕೇರಳಂನತ್ತ ಕಣ್ಣು ನೆಟ್ಟಿದೆ.

ಇತ್ತೀಚಿಗೆ ಕೇರಳದಲ್ಲಿ ಟಿವಿಕೆ ಸಭೆ ನಡೆದಿದ್ದು, ಬಹಳಷ್ಟು ಐಟಿ ವೃತ್ತಿಪರರು, ಯುವಕರು, ಜೆನ್ ಜಿ ಕಿಡ್ಸ್ ಭಾಗಿರೋದು ಸುದ್ದಿಯಾಗಿದೆ. ಮುಂದಿನ ದಿನಗಳಲ್ಲಿ ಕೆರಳದಲ್ಲಿ ಟಿವಿಕೆ ಸಂಘಟನೆ ಮಾಡ್ಲಿಕ್ಕೆ ಇವರು ಸಜ್ಜಾಗಿದ್ದಾರಂತೆ.

ಗ್ರೇಟರ್ ಬೆಂಗಳೂರು ಎಲೆಕ್ಷನ್​ಗೆ ವಿಜಯ್ ಎಂಟ್ರಿ; ತಮಿಳು ಭಾಷಿಕರು ಹೆಚ್ಚಿರುವ ಕಡೆ TVK ಸ್ಪರ್ಧೆ..?

ಹೌದು ಇಂಥದ್ದೊಂದು ಸುದ್ದಿ ಈಗ ಬೆಂಗಳೂರುನಲ್ಲಿ ಹರಿದಾಡ್ತಾ ಇದೆ. ಗ್ರೇಟರ್‌ ಬೆಂಗಳೂರು ಪ್ರಾಧಿಕಾರದ ವ್ಯಾಪ್ತಿಗೆ ಬರುವ 5 ನಗರ ಪಾಲಿಕೆಗಳಿಗೆ 2026ರ ಆಗಸ್ಟ್ 31ರೊಳಗೆ ಚುನಾವಣೆ ನಡೆಸುವಂತೆ ರಾಜ್ಯ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಆದೇಶಿಸಿದೆ. ಸೋ ಚುನಾವಣೆಗೆ ತಯಾರಿ ಶುರುವಾಗಿದೆ. ಈ ನಡುವೆ ತಮಿಳು ಮತದಾರರು ಹೆಚ್ಚು ಇರುವ ವಾರ್ಡ್‌ಗಳಲ್ಲಿ ಟಿವಿಕೆ ಪಕ್ಷದಿಂದ ಅಭ್ಯರ್ಥಿಗಳು ಕಣಕ್ಕಿಳಿಯಲು ಸಿದ್ಧತೆ ನಡೆಸಿದ್ದಾರೆ ಅನ್ನುವ ಸುದ್ದಿ ಹರಿದಾಡ್ತಾ ಇದೆ,

ತಮಿಳುನಾಡಿನಲ್ಲಿ ಟಿವಿಕೆ ಪಕ್ಷ ಗೆದ್ದ ಕ್ರೇಜ್ ಬಳಸಿಕೊಂಡು ಇಲ್ಲಿ ಸ್ಪರ್ಧಿಗಳು ಚುನಾವಣೆಗೆ ಸ್ಪರ್ಧಿಸಲು ಮುಂದಾಗ್ತಾ ಇದ್ದಾರೆ. ಅನೇಕರು ಕರ್ನಾಟಕದಲ್ಲಿ ಟಿವಿಕೆ ವಿಸ್ತಾರ ಮಾಡಲು ಅವಕಾಶ ಕೊಡಿ ಅಂತ ವಿಜಯ್ ಮುಂದೆ ಬೇಡಿಕೆ ಇಡೋದಕ್ಕೆ ಹೊರಟಿದ್ದಾರಂತೆ.

ಕರುನಾಡಿಗೇಕೆ ಪರಭಾಷಿಕರ ಪಕ್ಷ..? ಜನರ ಆಕ್ರೋಶ..!

ಹೌದು ಯಾವುದೇ ಪಕ್ಷ ಕರ್ನಾಟಕಕ್ಕೆ ಬರಬಾರದು ಅಂತೇನಿಲ್ಲ. ಹಿಂದೆ ಡಿಎಂಕೆ ಬೆಂಗಳೂರುನಲ್ಲೂ ಸ್ಪರ್ಧೆ ಮಾಡಿದ್ದ ಇತಿಹಾಸ ಇದೆ. ಆದ್ರೆ ಟಿವಿಕೆ ಅಂದ್ರೆ ತಮಿಳಿಗ ವೆಟ್ರಿ ಕಳಗಂ ಅಂತ. ಹೆಸರಲ್ಲೇ ತಮಿಳರ ವಿಜಯದ ಪಕ್ಷ ಅಂತಿದೆ. ಅವರು ಕರ್ನಾಟಕದಲ್ಲಿ ಹೇಗೆ ತಾನೇ ಸ್ಪರ್ಧೆ ಮಾಡೋದಕ್ಕೆ ಸಾಧ್ಯ ಅಲ್ವಾ..?

ಬಹುಶಃ ವಿಜಯ್​ಗೆ ಸದ್ಯ ಪರರಾಜ್ಯಗಳಿಗೆ ಪಕ್ಷ ವಿಸ್ತರಣೆ ಮಾಡೋವಷ್ಟು ಪುರುಸೊತ್ತು ಖಂಡಿತ ಇಲ್ಲ. ಯಾಕಂದ್ರೆ ಬಹುಮತ ಇಲ್ಲದೇ ಅನೇಕ ಪಕ್ಷಗಳನ್ನ ಒಗ್ಗೂಡಿಸಿಕೊಂಡು ಸರ್ಕಾರ ರಚಿಸಿರೋ ವಿಜಯ್​ಗೆ ಅವರನ್ನೆಲ್ಲಾ ಒಗ್ಗೂಡಿಸಿಕೊಂಡು ಹೋಗೋ ಸವಾಲ್ ಇದೆ. ಇದರ ನಡುವೆ ಬೇರೆ ರಾಜ್ಯದ ಕಡೆಗೆ ಗಮನ ಹರಿಸೋದು ಕಷ್ಟ ಕಷ್ಟ.

ಆಧ್ರೆ ಪರಭಾಷಿಕರ ಪಕ್ಷಗಳು ಕರ್ನಾಟಕದಲ್ಲಿ ನೆಲೆ ನಿಲ್ಲಲಿಕ್ಕೆ ಪ್ರಯತ್ನ ಮಾಡ್ತಾ ಇರೋದು ಸುಳ್ಳೇನೂ ಅಲ್ಲ. ಆಂಧ್ರದ ಪವನ್ ಕಲ್ಯಾಣ್ ನೇತೃತ್ವದ ಜನಸೇನಾ ಪಕ್ಷವನ್ನ ಕರ್ನಾಟಕಕ್ಕೆ ವಿಸ್ತರಿಸುವ ಕೆಲಸ ಆರಂಭವಾಗಿದೆ. ಚಿತ್ರದುರ್ಗದಲ್ಲಿ ಕಳೆದ ತಿಂಗಳು ಜನಸೇನಾ ಪಕ್ಷದ ಕಾರ್ಯಕ್ರಮ ನಡೆದಿದೆ. ಸ್ವತಃ ಪವನ್ ಸಹೋದರ ನಾಗಬಾಬು ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದರು. ಅವರ ನೇತೃತ್ವದಲ್ಲಿ ಕೆಲವರು ಜನಸೇನಾ ಪಕ್ಷ ಸೇರಿದ್ದರು.

ಈಗ ನೋಡಿದ್ರೆ ಬೆಂಗಳೂರಿಗೆ ಟಿವಿಕೆ ಎಂಟ್ರಿ ಬಗ್ಗೆ ಚರ್ಚೆ ಶುರುವಾಗಿದೆ. ಕರ್ನಾಟಕದಲ್ಲಿ ಕನ್ನಡದ ಪ್ರಾದೇಶಿಕ ಪಕ್ಷಗಳು ಗಟ್ಟಿಯಾಗಿಲ್ಲ. ಇದರ ನಡುವೆ ಪರಭಾಷಿಕರ ಪಕ್ಷಗಳು ಬೇರೆ ಎಂಟ್ರಿ ಕೊಡೋದಕ್ಕೆ ಪ್ರಯತ್ನ ಮಾಡ್ತಾ ಇವೆ. ಇದು ಒಂಥರಾ ಕನ್ನಡಿಗರ ದುರಂತವೇ ಸರಿ ಅಂತಿದ್ದಾರೆ ಕನ್ನಡಿಗರು..!

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಮೇ.23.. ಒಂದೇ ದಿನದಲ್ಲಿ ಎರಡು ವಿಶೇಷ ನೆನಪು: ನಾಗಾರ್ಜುನ ಕಥೆ ಕೇಳಿದ್ರೆ ಭಾವುಕರಾಗ್ತೀರಾ!
ಶಾರುಖ್ ಜೊತೆ 'ಡರ್' ಚಿತ್ರಕ್ಕೆ ಐಶ್ವರ್ಯಾ ರೈ ಆಯ್ಕೆ ಆಗಿದ್ರು; ಆಮೇಲೆ ಜೂಹಿ ಚಾವ್ಲಾ ಬಂದಿರೋ ಸೀಕ್ರೆಟ್ ಸ್ಟೋರಿ ಇದು!