
ಹಾಸ್ಯನಟ ಮದನ್ ಬಾಬ್, ( ಕೃಷ್ಣಮೂರ್ತಿ ) ಶನಿವಾರ (ಆಗಸ್ಟ್ 2) ಸಂಜೆ ಚೆನ್ನೈನಲ್ಲಿ 71 ನೇ ವಯಸ್ಸಿನಲ್ಲಿ ನಿಧನರಾದರು. ತಮಿಳು ಚಿತ್ರರಂಗದಲ್ಲಿ ಪ್ರಸಿದ್ಧಿಯಾದ ಇವರು ಕೆಲವು ವರ್ಷಗಳಿಂದ ಕ್ಯಾನ್ಸರ್‌ನಿಂದ ಬಳಲುತ್ತಿದ್ದರು. ಆದ್ಯಾರ್‌ನಲ್ಲಿರುವ ಅವರ ನಿವಾಸದಲ್ಲಿ ಕೊನೆಯುಸಿರೆಳೆದರು. ನಟ ಮದನ್ ಬಾಬ್ ನಿಧನವನ್ನು ಅವರ ಮಗ ಆರ್ಚಿತ್ ದೃಢಪಡಿಸಿದ್ದಾರೆ.
ಪ್ರಭುದೇವ ಹೇಳಿದ್ದೇನು?
ಮದನ್‌ರೊಂದಿಗೆ ಸಿನಿಮಾದಲ್ಲಿ ನಟಿಸಿದ್ದ ನಟ ಪ್ರಭುದೇವ ಅವರು, ಸಂತಾಪವನ್ನು ವ್ಯಕ್ತಪಡಿದ್ದಾರೆ.. X ನಲ್ಲಿ ಒಂದು ಫೋಟೋ ಹಂಚಿಕೊಂಡು, "ನಾವು ಸ್ಕ್ರೀನ್ ಶೇರ್ ಮಾಡಿದ್ದೇವೆ. ಅವರ ಉಪಸ್ಥಿತಿ ಯಾವಾಗಲೂ ಶೂಟಿಂಗ್ ಸೆಟ್‌ಗೆ ಸಂತೋಷವನ್ನು ತಂದಿತ್ತು. ಯಾವಾಗಲೂ ನಗುತ್ತಿದ್ದ, ದಯಾಳು ಆಗಿದ್ದ ಮತ್ತು ಹಾಸ್ಯದಿಂದ ಕೂಡಿದ್ದ ಅವರು ಎಲ್ಲರನ್ನೂ ನಗಿಸುತ್ತಿದ್ದರು. ಅವರ ಕುಟುಂಬಕ್ಕೆ ಹೃದಯಪೂರ್ವಕ ಸಂತಾಪಗಳು. ಅವರು ಯಾವಾಗಲೂ ನೆನಪಿನಲ್ಲಿ ಇರುತ್ತಾರೆ" ಎಂದು ಬರೆದಿದ್ದಾರೆ.
ಸ್ಮೈಲ್ ರಾಜ ಇನ್ನಿಲ್ಲ!
ಇವರನ್ನು 'ಪುನ್ನಗೈ ಮನ್ನನ್' (ಸ್ಮೈಲ್‌ನ ರಾಜ) ಎಂದು ಪ್ರೀತಿಯಿಂದ ಕರೆಯಲಾಗುತ್ತಿತ್ತು. ವಿಶಿಷ್ಟ ಹಾಸ್ಯ ಶೈಲಿ, ಟ್ರೇಡ್‌ಮಾರ್ಕ್ ನಗು, ಎಲ್ಲರನ್ನೂ ನಗೆಗಡಲಿನಲ್ಲಿ ಮುಳುಗಿಸುವ ಗುಣಕ್ಕೆ ಹೆಸರಾಗಿದ್ದರು. 600ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅದರಲ್ಲಿಯೂ ಹೆಚ್ಚಾಗಿ ತಮಿಳು ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದಾರೆ. 1992 ರಲ್ಲಿ ಕೆ. ಬಾಲಚಂದರ್ ನಿರ್ದೇಶನದ 'ವಾನಮೇ ಎಲ್ಲೈ' ಸಿನಿಮಾ ಮೂಲಕ ಅವರು ಚಿತ್ರರಂಗ ಪ್ರವೇಶ ಮಾಡಿದರು.
ಸಿನಿಮಾಗಳಲ್ಲಿ ನಟನೆ!
'ತೇನಾಲಿ' (2000) ಸಿನಿಮಾದಲ್ಲಿ ಡೈಮಂಡ್ ಬಾಬು ಮತ್ತು 'ಫ್ರೆಂಡ್ಸ್' (2000) ಸಿನಿಮಾದಲ್ಲಿ ಮ್ಯಾನೇಜರ್ ಸುಂದರೇಸನ್. 'ತೇವರ್ ಮಗನ್' (1992), 'ಸತಿ ಲೀಲಾವತಿ' (1995), 'ಚಂದ್ರಮುಖಿ' (2005), ಮತ್ತು 'ಎತಿರ್ ನೀಚಲ್' (2013) ಸೇರಿವೆ. ಮದನ್ ಅವರು 'ತೇವರ್ ಮಗನ್' ಸಿನಿಮಾದಲ್ಲಿ ತಮ್ಮ ಅಭಿನಯವನ್ನು ಶಿವಾಜಿ ಗಣೇಶನ್ ಮೆಚ್ಚಿದ್ದಾರೆ ಎಂದು ಹಂಚಿಕೊಂಡಿದ್ದರು.
ಮದನ್ ಅವರು ತೆಲುಗು ಚಿತ್ರ 'ಬಂಗಾರಂ' (2006), ಹಿಂದಿಯ 'ಚಾಚಿ 420' (1997), ಮಲಯಾಳಂನ 'ಭ್ರಮರಂ' (2009), 'ಸೆಲ್ಯುಲಾಯ್ಡ್' (2013) ಸಿನಿಮಾಗಳಲ್ಲಿ ನಟಿಸಿದ್ದಾರೆ.
ಸಂಗೀತಗಾರ ಕೂಡ ಹೌದು!
ನಟನೆಯ ಜೊತೆಗೆ, ಎಸ್ ರಾಮನಾಥನ್, 'ವಿಕ್ಕು' ವಿನಾಯಕರಾಮ್, ಹರಿಹರ ಶರ್ಮಾರಿಂದ ಪಾಶ್ಚಿಮಾತ್ಯ ಶಾಸ್ತ್ರೀಯ,ತು ಕರ್ನಾಟಕ ಸಂಗೀತದ ತರಬೇತಿಯನ್ನು ಪಡೆದಿದ್ದರು. ಅವರು ಎ.ಆರ್ ರೆಹಮಾನ್‌ರ ಸಂಗೀತ ಗುರುವಾಗಿದ್ದರಂತೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.