
ಬೆಂಗಳೂರು (ಏ. 04): ಕಿಲ್ಲರ್ ಕೊರೋನಾ ವಿರುದ್ಧ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಪಣ ತೊಟ್ಟಿವೆ. ಈ ವೈರಸ್ ಇನ್ನಷ್ಟು ಹರಡಬಾರದೆಂದು ಪ್ರಧಾನಿ ನರೇಂದ್ರ ಮೋದಿ 21 ದಿನಗಳ ಕಾಲ ಲಾಕ್‌ಡೌನ್ ಘೋಷಿಸಿದ್ದಾರೆ. ಕೊರೋನಾ ವಿರುದ್ಧ ಹೋರಾಡಲು ಮಾರ್ಚ್ 22 ರಂದು ಜನತಾ ಕರ್ಫ್ಯೂ ಹೇರಿದ್ದರು. ಅಂದು ಸಂಜೆ ಕೊರೋನಾ ಜೊತೆ ಹಗಲು ರಾತ್ರಿ ಫೈಟ್ ಮಾಡುತ್ತಿರುವ ವೈದ್ಯರಿಗೆ, ನರ್ಸ್‌ಗಳಿಗೆ ಕೃತಜ್ಞತೆ ಸಲ್ಲಿಸಲು ಮನೆ ಬಾಗಿಲು, ಬಾಲ್ಕನಿಯಲ್ಲಿ ನಿಂತು ಚಪ್ಪಾಳೆ ತಟ್ಟಲು ಕೇಳಿಕೊಂಡಿದ್ದರು. ಅದಕ್ಕೆ ದೇಶಾದ್ಯಂತ ವ್ಯಾಪಕ ಬೆಂಬಲ ವ್ಯಕ್ತವಾಯಿತು.
ದೀಪ ಹಚ್ಚಿ ಏಕತೆಯ ಸಂದೇಶ ಸಾರಲು ಮೋದಿ ಭಾರತೀಯರಿಗೆ ಕರೆ!
ಕೊರೋನಾ ವೈರಸ್ ನಿಗ್ರಹಕ್ಕಾಗಿ ಜನತಾ ಕಫ್ರ್ಯೂ, ಚಪ್ಪಾಳೆ ಅಭಿಯಾನ, ಲಾಕ್‌ಡೌನ್‌ನಂತಹ ವಿಶಿಷ್ಟಕ್ರಮಗಳನ್ನು ಘೋಷಿಸಿದ್ದ ಪ್ರಧಾನಿ ನರೇಂದ್ರ ಮೋದಿ ಅವರು ಮತ್ತೊಂದು ಅಭಿಯಾನ ಪ್ರಕಟಿಸಿದ್ದಾರೆ. ಏ.5ರ ಭಾನುವಾರ ರಾತ್ರಿ 9ಕ್ಕೆ ಸರಿಯಾಗಿ 9 ನಿಮಿಷಗಳ ಕಾಲ ಮನೆಯ ಎಲ್ಲ ವಿದ್ಯುತ್ ದೀಪಗಳನ್ನು ಆರಿಸಿ, ದೀಪ ಬೆಳಗುವಂತೆ ದೇಶವಾಸಿಗಳಿಗೆ ಕರೆ ಕೊಟ್ಟಿದ್ದಾರೆ.
"
ಕೊರೋನಾ ವೈರಸ್‌ನಿಂದ ಸೃಷ್ಟಿಯಾಗಿರುವ ಅಂಧಕಾರದಿಂದ ದೇಶವನ್ನು ಹೊಸ ಬೆಳಕಿನೆಡೆಗೆ ಒಯ್ಯುವ ಸಾಂಕೇತಿಕತೆಯ ಭಾಗವಾಗಿ ಮೋದಿ ಅವರು ಪ್ರಯತ್ನ ನಡೆಸಿದ್ದಾರೆ ಎಂದು ವಿಶ್ಲೇಷಿಸಲಾಗಿದೆ. ಮೋದಿಯವರ ದೀಪ ಬೆಳಗಿಸೋಣ ಅಭಿಯಾನವನ್ನು ಬಹುತೇಕರು ಸ್ವಾಗತಿಸಿದರೆ ಅಲ್ಲಲ್ಲಿ ಅಪಸ್ವರಗಳು ಕೇಳಿ ಬಂದವು.
ತಪ್ಪಡ್ ನಟಿ ತಾಪ್ಸಿ ಪನ್ನು, 'ಮತ್ತೊಂದು ಟಾಸ್ಕ್ ಶುರು, ಯ..ಯ..ಯ..! ಎಂದು ಮೋದಿಯನ್ನು ಅಪಹಾಸ್ಯ ಮಾಡಲು ಹೋಗಿ ನೆಟ್ಟಿಗರಿಂದ ಮಂಗಳಾರತಿ ಎತ್ತಿಸಿಕೊಂಡಿದ್ದಾರೆ.
ಭಾರತೀಯರನ್ನು ನೀವು ತಮಾಷೆ ಮಾಡುತ್ತಿದ್ದೀರಿ. ಈ ದೇಶಕ್ಕಾಗಿ, ದೇಶದ ಜನರಿಗಾಗಿ ನೀವು ಏನು ಮಾಡಿದ್ದೀರಿ? ಯಾರಿಗೆಲ್ಲಾ ಸಹಾಯ ಮಾಡಿದ್ದೀರಿ? ಅನಗತ್ಯವಾಗಿ ನ್ಯೂಸೆನ್ಸ್ ಸೃಷ್ಟಿಸಬೇಡಿ. ನೆನಪಡಿ. ಇದು ಹೆಲ್ತ್ ಎಮರ್ಜೆನ್ಸಿ' ಎಂದು ನೆಟ್ಟಿಗರೊಬ್ಬರು ಜಾಡಿಸಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.