
ತಮಿಳು ಚಿತ್ರರಂಗದ ಖ್ಯಾತ ನಿರ್ಮಾಪಕ ರವೀಂದರ್ ಚಂದ್ರಶೇಖರ್ (Ravindra Chandrasekaran) ಮತ್ತು ಕಿರುತೆರೆ ನಿರೂಪಕಿ ಮಹಾಲಕ್ಷ್ಮಿ ( Mahalakshmi) ಸೆಪ್ಟೆಂಬರ್ 1ರಂದು ತಿರುಪತಿಯಲ್ಲಿ (Tirupati) ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಆಪ್ತ ಕುಟುಂಬಸ್ಥರು ಮಾತ್ರ ಭಾಗಿಯಾಗಿದ್ದ ಕಾರಣ ಸೋಷಿಯಲ್ ಮೀಡಿಯಾ ಮೂಲಕ ತಮ್ಮ ಮದುವೆ ವಿಚಾರವನ್ನು ಅಧಿಕೃತ ಮಾಡಿದ್ದರು. ಹಸೆಮಣೆ ಮೇಲೆ ಕುಳಿತಿರುವ ಫೋಟೋ, ತಾಳಿ ಕಟ್ಟುತ್ತಿರುವ ಫೋಟೋ ಪ್ರತಿಯೊಂದನ್ನು ಹಂಚಿಕೊಂಡಿದ್ದಾರೆ. ಆದರೆ ನೆಟ್ಟಿಗರು ಸ್ವೀಕಾರ ಮಾಡಿರುವ ರೀತಿನೇ ಬೇರೆಯಾಗಿದೆ.
ಹೌದು! ಇಷ್ಟು ಸುಂದರವಾಗಿರುವ ಹುಡುಗಿಗೆ ಈ ಅಂಕಲ್? ಹಣ ಇದ್ರೆ ಯಾರನ್ನ ಬೇಕಿದ್ದರೂ ಮದುವೆ ಆಗಬಹುದು, ಅಂಕಲ್‌ಗೆ ಹುಡುಗಿಯರು ಬೇಕು ಹುಡುಗರ ಏನು ಮಾಡಬೇಕು? ಕಪ್ಪಗಿರುವ ಹುಡುಗರು ಅಂದ್ರೆ ಯಾಕೆ ಬೇಗ ಇಷ್ಟ ಆಗುತ್ತಾರೆ? ಹೀಗೆ ನೂರಾರು ರೀತಿಯಲ್ಲಿ ಕಾಮೆಂಟ್ ಮಾಡಿ ಅವರಿಬ್ಬರನ್ನೂ ಸೋಷಿಯಲ್ ಮೀಡಿಯಾದಲ್ಲಿ (Social Media) ಟ್ರೋಲ್ ಮಾಡಲಾಗಿದೆ. ಅಲ್ಲದೆ ಯಾವ ವಿಚಾರಕ್ಕೆ ಇಷ್ಟ ಪಟ್ಟು ಮದುವೆಯಾಗಿದ್ದಾರೆ ಅನ್ನೋದನ್ನು ಇವರೇ ಅಳಿದು ಕುಡಿದು ಬಿಟ್ಟಿದ್ದಾರೆ. ಜನರು ಏನೇ ಹೇಳಲಿ ನಾವು ನೆಮ್ಮದಿಯಾಗಿದ್ದೀವಿ ಎಂದು ರವೀಂದ್ರ ಹೇಳಿದ್ದಾರೆ. ಇದೇ ಖುಷಿಗೆ ಪತ್ನಿಗೆ ದುಬಾರಿ ಗಿಫ್ಟ್ ಕೊಟ್ಟಿದ್ದಾರೆ.
ಮನೆ ಗಿಫ್ಟ್:
ಮಹಾಲಕ್ಷ್ಮಿಯನ್ನು ತುಂಬಾನೇ ಪ್ರೀತಿಸುತ್ತಿರುವ ರವೀಂದ್ರ ಮಲಗುವ ಹೊಸ ಮಂಚಕ್ಕೆ ಬಂಗಾರದ ಲೇಪನ ಇದೆಯಂತೆ. ಪತ್ನಿ ಮನೆಗೆ ಬಂದಾಗ ಸುಂದರವಾಗಿ ಕಾಣಿಸಬೇಕು ಎಂದು 300ಕ್ಕೂ ಹೆಚ್ಚು ರೇಶ್ಮೆ ಸೀರೆಗಳನ್ನು (Silk Saree) ನೀಡಿದ್ದಾರೆ. ಪ್ರತಿಯೊಂದು ಸೀರೆಗೂ ಮ್ಯಾಚ್ ಆಗಬೇಕು ಎಂದು ಕೋಟ್ಯಂತರ ರೂಪಾಯಿ ಆಭರಣಗಳನ್ನು ಕೊಡಿಸಿದ್ದಾರೆ. ಇಷ್ಟೆಲ್ಲಾ ಮಾಡಿ ಮನೆ ಇಲ್ಲದಿದ್ದರೆ ಹೇಗೆ? ಹೀಗಾಗಿ 75 ಲಕ್ಷ ರೂಪಾಯಿ ಮೌಲ್ಯದ ಮನೆ ನಿರ್ಮಾಣ ಮಾಡುವ ನಿರ್ಧಾರ ಮಾಡಿದ್ದಾರೆ. ಈ ಮನೆಗ ಕೂಡ ಪತ್ನಿಗೆ ಕೊಡುತ್ತಿರುವ ಗಿಫ್ಟ್ ಎಂದಿದ್ದಾರೆ.
ಎಲ್ಲಾ ಭಾಷೆಯ ಮಾಧ್ಯಮಗಳಲ್ಲಿ ಬ್ರೇಕಿಂಗ್ ನ್ಯೂಸ್ ಆಗುತ್ತಿರುವ ಈ ಜೋಡಿ ಅದ್ಯ ಮಹಾಬಲಿಪುರಂಗೆ ಹನಿಮೂನ್ (Mahabalipuram Honeymoon) ಪ್ರವಾಸಕ್ಕೆ ಹೋಗಿದ್ದಾರೆ.
ನಿರ್ಮಾಪಕ ರವೀಂದ್ರ ಜತೆ ಮದುವೆ ಆದ ಕಿರುತೆರೆ ನಟಿ ಮಹಾಲಕ್ಷ್ಮಿ! ಜೋಡಿ ನೋಡಿ ನೆಟ್ಟಿಗರು ಶಾಕ್
ಯಾರು ನಿರ್ಮಾಪಕ ರವೀಂದ್ರ?
ರವೀಂದ್ರ ಚಂದ್ರಶೇಖರನ್ ಮೂಲತಃ ಚೆನ್ನೈನವರು (Chennai). ತಮಿಳು ಚಿತ್ರರಂಗದಲ್ಲಿ ಹಲವು ವರ್ಷಗಳಿಂದದ ಕೆಲಸ ಮಾಡುತ್ತಿದ್ದಾರೆ. 'ಲಿಬ್ರಾ ಪ್ರೋಡಕ್ಷನ್' ಸಂಸ್ಥೆಯನ್ನು ಆರಂಭಿಸಿ 2013ರಿಂದ ದುಬಾರಿ ಬಜೆಟ್ ಸಿನಿಮಾಗಳನ್ನು ಮಾಡುತ್ತಿದ್ದಾರೆ. 2012ರಲ್ಲಿ ಶಾಂತಿ ಎಂಬುವವರನ್ನು ರವೀಂದ್ರ ಮದುವೆಯಾಗಿದ್ದರು, ವೈಯಕ್ತಿಕ ಕಾರಣಗಳಿಂದ ದೂರವಾಗಿದ್ದಾರೆ.
ಈ ಡಿಫರೆಂಟ್ ಕಪಲ್ ನಡುವೆ ಕೇವಲ 6 ವರ್ಷಗಳ ವಯಸ್ಸಿನ ಅಂತರವಿದೆ. ರವೀಂದ್ರ 38, ಮಹಾಲಕ್ಷ್ಮಿ 32 ವರ್ಷ. ಈ ಹಿಂದೆ ಅನಿಲ್ ಎಂಬುವವರನ್ನು ಮಹಾಲಕ್ಷ್ಮಿ ಮದುವೆಯಾಗಿದ್ದು ಒಬ್ಬ ಮಗನಿದ್ದಾನೆ ಎನ್ನಲಾಗಿದೆ. ಇಬ್ಬರಿಗೂ ಎರಡನೇ ಮದುವೆಯಾಗಿರುವ ಕಾರಣ ಕೆಲವೊಂದು ಟ್ರೋಲ್ ಪೇಜ್‌ಗಳು ಸುಮ್ಮನಾಗಿದ್ದಾರೆ.
ಮದುವೆ ಫೋಟೋ:
ಮದುವೆ ಫೋಟೋ ಹಂಚಿಕೊಂಡ ರವೀಂದ್ರ 'ಮಹಾಲಕ್ಷ್ಮಿ ರೀತಿಯ ಹೆಣ್ಣು ಮಕ್ಕಳು ಜೀವನದಲ್ಲಿದ್ದರೆ ಲೈಫ್ ಅದ್ಭುತವಾಗಿರುತ್ತದೆ. ಜೀವನಕ್ಕೆ ಪ್ರೀತಿ ಕೊಡುವವರು ಬೇಕು ಪ್ರೀತಿಗೆ ನನ್ನ ಮಹಾಲಕ್ಷ್ಮಿ ಬೇಕು. ಲವ್ ಯು ಪೊಂಡಾತಿ. ಜೀವನದಲ್ಲಿ ಸದಾ ಬೇಸರ ಮತ್ತು ನಿರಾಶೆ ಹೆಚ್ಚಿದರೆ ಆ ದೇವರು ನಮಗೆ ಅದ ವಿಶೇಷ ವ್ಯಕ್ತಿಗಳನ್ನು ಕಳುಹಿಸುತ್ತಾರೆ ಅವರೇ ಮಹಾಲಕ್ಷ್ಮಿ.' ಎಂದು ರವೀಂದ್ರ ಬರೆದುಕೊಂಡುದ್ದಾರೆ.
'ನನ್ನ ಹೃದಯವನ್ನು ನೀನು ಕದ್ದಿರುವೆ. ಅದನ್ನು ನಿನ್ನ ಜೊತೆ ಜೀವನ ಪೂರ್ತಿ ಇಟ್ಟುಕೊಳ್ಳಲು ನಾನು ಅವಕಾಶ ಕೊಡುವೆ. ನನ್ನ ಜೀವನ ಸುಂದರವಾಗಿ ಇದಕ್ಕೆಲ್ಲ ಕಾರಣ ನೀನೇ ನನ್ನ ಪುರುಷ' ಎಂದು ಮಹಾಲಕ್ಷ್ಮಿ ಬರೆದುಕೊಂಡಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.