
ಸಿಂಗಂ ನಟ ಸೂರ್ಯಗೆ ಕೊರೋನಾ ಪಾಸಿಟಿವ್ ದೃಢಪಟ್ಟಿದೆ. ಸದ್ಯ ಅವರು ಚಿಕಿತ್ಸೆ ಪಡೆಯುತ್ತಿದ್ದು, 45 ವರ್ಷದ ನಟ ತಾವು ಚಿಕಿತ್ಸೆ ಪಡೆಯುತ್ತಿದ್ದು, ಆರಾಮವಾಗಿರುವುದಾಗಿ ತಿಳಿಸಿದ್ದಾರೆ.
ತಮಿಳಿನಲ್ಲಿ ಟ್ವೀಟ್ ಮಾಡಿ ಅಭಿಮಾನಿಗಳಿಗೆ ವಿಷಯ ತಿಳಿಸಿದ್ದಾರೆ. ನನಗೆ ಕೊರೋನಾ ವೈರಸ್‌ಗೆ ಚಿಕಿತ್ಸೆ ನೀಡಲಾಗುತ್ತಿದೆ. ನಾನೀಗ ಆರಾಮವಾಗಿದ್ದೇನೆ. ಜೀವನ ಸಹಜತೆಗೆ ಬಂದಿಲ್ಲ ಎಂಬುದನ್ನು ಎಲ್ಲರೂ ಅರ್ಥ ಮಾಡಿಕೊಳ್ಳೋಣ, ನಾವು ಭಯಪಡಬೇಕೆಂದಲ್ಲ, ಆದರೆ ನಾವು ಎಚ್ಚರವಾಗಿದ್ದು ಸುರಕ್ಷಿತರಾಗಿರಬೇಕು, ನನ್ನ ಜೊತೆ ನಿಂತಿರುವ ವೈದ್ಯರೂ, ಸಿಬ್ಬಂದಿಗೂ ಧನ್ಯವಾದ ಎಂದಿದ್ದಾರೆ.
ಸಲಾರ್‌ನಲ್ಲಿ ಪ್ರಭಾಸ್ ಜೊತೆ ಪ್ರಿಯಾಂಕ ಚೋಪ್ರಾ..?
ಸೂರ್ಯ ಅನೇಕ ಪ್ರಾಜೆಕ್ಟ್‌ಗಳನ್ನು ಇಟ್ಟುಕೊಂಡಿದ್ದಾರೆ. ಅವರು ಇತ್ತೀಚೆಗೆ ತಮಿಳು ಬಯೋಪಿಕ್ ಸೂರಾರೈ ಪೊಟ್ರುನಲ್ಲಿ ಕಾಣಿಸಿಕೊಂಡಿದ್ದರು. ಇದು ಅಮೆಜಾನ್ ಪ್ರೈಮ್‌ನಲ್ಲಿ ರಿಲೀಸ್ ಆಗಿತ್ತು. ಈ ಚಿತ್ರವು ಏರ್ ಡೆಕ್ಕನ್‌ನ ಕ್ಯಾಪ್ಟನ್ ಜಿ.ಆರ್.ಗೋಪಿನಾಥ್ ಅವರ ಜೀವನವನ್ನು ಆಧರಿಸಿದೆ.
ಸೂರ್ಯ ಇತ್ತೀಚೆಗೆ ಮುಂಬರುವ ನೆಟ್‌ಫ್ಲಿಕ್ಸ್ ನವರಸ ಚಿತ್ರದ ಶೂಟಿಂಗ್ ಪೂರ್ಣಗೊಳಿಸಿದ್ದಾರೆ. ಈ ಪ್ರಾಜೆಕ್ಟ್ ಮೂಲಕ ಹಲವು ವರ್ಷಗಳ ನಂತರ ನಿರ್ದೇಶಕ ಗೌತಮ್ ಮೆನನ್ ಅವರೊಂದಿಗೆ ಸೇರಿದ್ದಾರೆ ಸೂರ್ಯ. ಈ ಹಿಂದೆ ಅವರು ಕಾಖಾ ಕಾಖಾ ಮತ್ತು ವಾರಣಂ ಆಯಿರಾಮ್ ಎಂಬ ತಮಿಳು ಚಿತ್ರಗಳಲ್ಲಿ ಒಟ್ಟಿಗೆ ಕೆಲಸ ಮಾಡಿದ್ದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.