RRR Trailer: ರಾಜಮೌಳಿ ದೃಶ್ಯ ವೈಭವದಲ್ಲಿ ಅಬ್ಬರಿಸಿದ ಜ್ಯೂ.ಎನ್​ಟಿಆರ್-ರಾಮ್​ ಚರಣ್

Suvarna News   | Asianet News
Published : Dec 09, 2021, 01:28 PM ISTUpdated : Dec 10, 2021, 02:44 PM IST
RRR Trailer: ರಾಜಮೌಳಿ ದೃಶ್ಯ ವೈಭವದಲ್ಲಿ ಅಬ್ಬರಿಸಿದ  ಜ್ಯೂ.ಎನ್​ಟಿಆರ್-ರಾಮ್​ ಚರಣ್

ಸಾರಾಂಶ

ಎಸ್‌.ಎಸ್‌.ರಾಜಮೌಳಿ ನಿರ್ದೇಶನದ ಜ್ಯೂ.ಎನ್​ಟಿಆರ್  ಮತ್ತು ರಾಮ್​ ಚರಣ್ ಕಾಂಬಿನೇಷನ್‌ನ ಬಹು ನಿರೀಕ್ಷಿತ ಚಿತ್ರ 'ಆರ್‌ಆರ್‌ಆರ್‌' ಚಿತ್ರದ ಟ್ರೇಲರ್ ರಿಲೀಸ್ ಆಗಿದೆ. ಈಗಾಗಲೇ ಟೀಸರ್ ಹಾಗೂ ಹಾಡುಗಳಿಂದಲೇ ಸಾಕಷ್ಟು ಕುತೂಹಲವನ್ನು ಹುಟ್ಟುಹಾಕಿದ್ದ 'ಆರ್​ಆರ್​ಆರ್'​​ ಸಿನಿಮಾ ಟ್ರೇಲರ್​ನಲ್ಲಿ ಮತ್ತಷ್ಟು ನಿರೀಕ್ಷೆ ಹೆಚ್ಚಿಸಿದೆ.   

ಎಸ್‌.ಎಸ್‌.ರಾಜಮೌಳಿ (SS Rajamouli) ನಿರ್ದೇಶನದ ಜ್ಯೂ.ಎನ್​ಟಿಆರ್ (Jr.NTR) ಮತ್ತು ರಾಮ್​ ಚರಣ್ (Ram Charan)​ ಕಾಂಬಿನೇಷನ್‌ನ ಬಹು ನಿರೀಕ್ಷಿತ ಚಿತ್ರ 'ಆರ್‌ಆರ್‌ಆರ್‌' (RRR) (ರೌದ್ರ-ರಣ-ರುಧಿರ) ಚಿತ್ರದ ಟ್ರೇಲರ್ (Trailer)​ ರಿಲೀಸ್ ಆಗಿದೆ. ಈಗಾಗಲೇ ಟೀಸರ್ (Teaser)​ ಹಾಗೂ ಹಾಡುಗಳಿಂದಲೇ (Songs) ಸಾಕಷ್ಟು ಕುತೂಹಲವನ್ನು ಹುಟ್ಟುಹಾಕಿದ್ದ 'ಆರ್​ಆರ್​ಆರ್'​​ ಸಿನಿಮಾ ಟ್ರೇಲರ್​ನಲ್ಲಿ ಮತ್ತಷ್ಟು ನಿರೀಕ್ಷೆ ಹೆಚ್ಚಿಸಿದೆ. ಟ್ರೇಲರ್​ ಉದ್ದಕ್ಕೂ ದೃಶ್ಯ ವೈಭವ ಅಮೋಘವಾಗಿದ್ದು, ರಾಮ್​ ಚರಣ್​ ಹಾಗೂ ಜ್ಯೂ.ಎನ್​ಟಿಆರ್ ಭರ್ಜರಿಯಾಗಿ​ ಮಿಂಚಿದ್ದಾರೆ. 

ನಿರ್ದೇಶಕ ರಾಜಮೌಳಿ ಶೈಲಿ ಸಿನಿಮಾದ ಅದ್ದೂರಿತನ ಟ್ರೇಲರ್‌ನಲ್ಲಿ ರಾರಾಜಿಸಿದ್ದು, ಭಾವುಕ ಅಂಶಗಳು ಸಹ ಇವೆ. ಜೊತೆಗೆ ನಾಯಕಿಯರಾದ ಆಲಿಯಾ ಭಟ್, ಒಲಿವಿಯಾ ಮೋರಿಸ್, ಶ್ರೇಯಾ ಶಿರಿನ್ ಅವರುಗಳ ಅಂದವೂ ಇದೆ. ಆಕ್ಷನ್ ದೃಶ್ಯಗಳು ಎಲ್ಲಕ್ಕಿಂತಲೂ ಹೆಚ್ಚಾಗಿ ಗಮನ ಸೆಳೆಯುತ್ತವೆ. ಹಾಗೂ ಟ್ರೇಲರ್​ನ  ಪ್ರತಿಯೊಂದು ಫ್ರೇಮ್​ ಕೂಡ ಅದ್ಭುತವಾಗಿದೆ. ಅದಕ್ಕೆ ತಕ್ಕಂತೆ ಹಿನ್ನಲೆ ಸಂಗೀತ ಕೂಡ ಇದ್ದು, ಎಲ್ಲಾ ಪಾತ್ರಗಳ ಪರಿಚಯವಾಗಿದೆ. ಸಿನಿಮಾ ಎಷ್ಟು ಅದ್ದೂರಿಯಾಗಿ ಇರಲಿದೆ ಎನ್ನುವುದರ ಸಣ್ಣ ಝಲಕ್​ ಈ ಟ್ರೇಲರ್​ನಲ್ಲಿ ಕಾಣಬಹುದಾಗಿದ್ದು, ಸಿನಿಮಾ ಬಗ್ಗೆ ಇದ್ದ ನಿರೀಕ್ಷೆ ದುಪ್ಪಟ್ಟಾಗಿದೆ.

RRR Movie: ಟ್ರೇಲರ್‌ಗೆ ಸಂಬಂಧಿಸಿದಂತೆ 'ಕೆವಿಎನ್‌' ಪ್ರೊಡಕ್ಷನ್ಸ್ ಸಂಸ್ಥೆಯಿಂದ ಮಹತ್ವವಾದ ಟ್ವೀಟ್!

3 ನಿಮಿಷ 10 ಸೆಕೆಂಡ್ ಇರುವ 'ಆರ್‌ಆರ್‌ಆರ್‌' ಚಿತ್ರದ ಟ್ರೇಲರ್‌ನಲ್ಲಿ ಕಥೆ ಹೇಗಿರುತ್ತದೆ ಎನ್ನವುದನ್ನು ರಾಜಮೌಳಿ ಬಿಟ್ಟುಕೊಟ್ಟಿಲ್ಲ. ಹಾಗಾಗಿ ಸಿನಿಮಾದ ಚಿತ್ರಕಥೆ ಬಗ್ಗೆ ತೀವ್ರ ಕುತೂಹಲ ಮೂಡುವಂತೆ ಮಾಡಿದೆ. ಐದು ಭಾಷೆಗಳಲ್ಲೂ 'ಆರ್​ಆರ್​ಆರ್'​​ ಚಿತ್ರದ ಟ್ರೇಲರ್​ ರಿಲೀಸ್​​ ಆಗಿದ್ದು, ವಿಶೇಷವಾಗಿ ಕನ್ನಡದಲ್ಲಿ ಬಿಡುಗಡೆಯಾಗಿರುವ 'ಆರ್​ಆರ್​ಆರ್'​ ಟ್ರೇಲರ್​ಗೆ ಸ್ವತಃ ಜೂನಿಯರ್​ ಎನ್​ಟಿಆರ್ ಹಾಗೂ ​ರಾಮ್​ ಚರಣ್ ವಾಯ್ಸ್​ ಡಬ್​ ಮಾಡಿದ್ದಾರೆ. ತೆಲುಗಿನ ಟ್ರೇಲರ್ ರಿಲೀಸ್​ ಆದ ಕೆಲವೇ ನಿಮಿಷಗಳಲ್ಲಿ ಲಕ್ಷಾಂತರ ಬಾರಿ ವೀಕ್ಷಣೆ ಕಂಡಿದ್ದು, ಸಿನಿಪ್ರಿಯರ ಮೆಚ್ಚುಗೆ ಪಡೆದಿದೆ. 



'ಆರ್‌ಆರ್‌ಆರ್‌' ಚಿತ್ರದ ಟ್ರೇಲರ್​ ರಿಲೀಸ್​ ಆದ ನಂತರದಲ್ಲಿ ಚಿತ್ರತಂಡ ಪ್ರಚಾರಕ್ಕೆ ಹೆಚ್ಚು ಪ್ರಾಮುಖ್ಯತೆ ನೀಡಲಿದೆ. ಟ್ರೇಲರ್ ರಿಲೀಸ್​ ಆದ ಒಂದು ತಿಂಗಳವರೆಗೆ ನಾನಾ ರಾಜ್ಯಗಳಿಗೆ ತೆರಳಿ ತಂಡ ಸಿನಿಮಾ ಪ್ರಚಾರ ಕಾರ್ಯ ನಡೆಸಿಲಿದೆ. ಕರ್ನಾಟಕದಲ್ಲಿ ಗ್ರ್ಯಾಂಡ್​ ಆಗಿ ಪ್ರೀ-ರಿಲೀಸ್​ ಇವೆಂಟ್​ ನಡೆಸಲು ಚಿತ್ರತಂಡ ನಿರ್ಧರಿಸಿದೆ. ಈ ಬಗ್ಗೆ ರಾಜಮೌಳಿ ಇತ್ತೀಚೆಗೆ ಮಾಹಿತಿ ನೀಡಿದ್ದರು. ಈ ಕಾರ್ಯ ಯಾವಾಗ ನಡೆಯಲಿದೆ ಎನ್ನುವ ಕುತೂಹಲ ಕನ್ನಡಿಗರಲ್ಲಿ ಮೂಡಿದೆ. ತೆಲುಗು, ತಮಿಳು, ಹಿಂದಿ, ಕನ್ನಡ ಹಾಗೂ ಮಲಯಾಳಂನಲ್ಲಿ ಸಿನಿಮಾ ಅದ್ಧೂರಿಯಾಗಿ ಮೂಡಿ ಬರುತ್ತಿದೆ.

RRR Movie: ಸಾಹಸಮಯ ಟ್ರೇಲರ್​ ರಿಲೀಸ್​ಗೆ ಹೊಸ ದಿನಾಂಕ ಹಂಚಿಕೊಂಡ ಜ್ಯೂ.ಎನ್​ಟಿಆರ್

ಡಿವಿವಿ ಎಂಟರ್‌ಟೈನ್ಮೆಂಟ್ (DVV Entertainment) ಬ್ಯಾನರ್‌ನಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರಕ್ಕೆ ವಿ.ವಿಜಯೇಂದ್ರ ಪ್ರಸಾದ್ ಕಥೆ, ಮತ್ತು ಶ್ರೀಕರ್ ಪ್ರಸಾದ್ ಸಂಕಲನವಿದೆ. ಬಿಗ್‌ ಬಜೆಟ್‌ನಲ್ಲಿ ತಯಾರಾದ ಈ ಚಿತ್ರಕ್ಕೆ ಎಂ.ಎಂ.ಕೀರವಾಣಿ (M.M. Keeravaani) ಸಂಗೀತ ಸಂಯೋಜಿಸಿದ್ದಾರೆ. ಈ ಚಿತ್ರವು 1920ನೇ ಇಸವಿಯ ಆರಂಭದಲ್ಲಿ ಇಬ್ಬರು ಸ್ವಾತಂತ್ರ್ಯ ಹೋರಾಟಗಾರರಾದ ಅಲ್ಲೂರಿ ಸೀತಾರಾಮರಾಜು ಮತ್ತು ಕೊಮರಂ ಭೀಮ್ ಅವರ ಜೀವನವನ್ನು ಆಧರಿಸಿದ ಕಾಲ್ಪನಿಕ ಕಥೆ. ಈ ಚಿತ್ರದಲ್ಲಿ ರಾಮ್ ಚರಣ್ ರಾಮರಾಜು ಪಾತ್ರದಲ್ಲಿ, ಜೂನಿಯರ್ ಎನ್‌ಟಿಆರ್ ಭೀಮ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇನ್ನು ಬಾಲಿವುಡ್ ನಟರಾದ ಅಜಯ್ ದೇವ್‌ಗನ್ ಮತ್ತು ಆಲಿಯಾ ಭಟ್ ಪ್ರಮುಖ ಪಾತ್ರಗಳಲ್ಲಿದ್ದಾರೆ. ಒಲಿವಿಯಾ ಮೋರಿಸ್, ಸಮುದ್ರಕನಿ, ಶ್ರೇಯಾ ಶಿರಿನ್, ಅಲಿಸನ್ ಡೂಡಿ ಹಾಗೂ ರೇ ಸ್ಟೀವನ್ಸನ್ ಈ ಚಿತ್ರದಲ್ಲಿ ನಟಿಸಿದ್ದಾರೆ. ಜನವರಿ 7ರಂದು 'ಆರ್​ಆರ್​ಆರ್​' ಸಿನಿಮಾ ವಿಶ್ವದಾದ್ಯಂತ ಬಿಡುಗಡೆಯಾಗಲಿದೆ.
 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ರಗಡ್‌ ಕಾಪ್‌, ಮ್ಯಾಕ್ಸಿಮಮ್‌ ಮಾಸ್‌.. 'ಮಾರ್ಕ್' ಕಥೆ ಬಗ್ಗೆ ಸ್ಫೋಟಕ ಸತ್ಯ ಬಿಚ್ಚಿಟ್ಟ ಕಿಚ್ಚ ಸುದೀಪ್!
ನನ್ನ ತಂದೆ ಕೂಡ ಗುಮ್ಮಡಿ ನರಸಯ್ಯ ಅವರಂತೆಯೇ ಜನರ ಸೇವೆ ಮಾಡಿದವರು: ನಟ ಶಿವಣ್ಣ ಹೇಳಿದ್ದೇನು?