ಟ್ವಿಟರ್‌ನಲ್ಲಿ ಸುದ್ದಿ ಮಾಡೋ ಬದಲು ಬಡ ಜನಕ್ಕೆ ಉಚಿತ ಆಹಾರ ನೀಡಿ: ಕಂಗನಾಗೆ ಸಿಂಗರ್ ಟಾಂಗ್

Published : Dec 05, 2020, 09:30 AM ISTUpdated : Dec 05, 2020, 09:44 AM IST
ಟ್ವಿಟರ್‌ನಲ್ಲಿ ಸುದ್ದಿ ಮಾಡೋ ಬದಲು ಬಡ ಜನಕ್ಕೆ ಉಚಿತ ಆಹಾರ ನೀಡಿ: ಕಂಗನಾಗೆ ಸಿಂಗರ್ ಟಾಂಗ್

ಸಾರಾಂಶ

ನೀವು ನಮ್ಮೊಡನೆ ಸೇರಿ 20 ಜನರಿಗಾದರೂ ಆಹಾರ ಒದಗಿಸಿ ಎಂದು ಟಾಪ್ ಸಿಂಗರ್ ಕಂಗನಾ ಅವರಿಗೆ ಟಾಂಗ್ ಕೊಟ್ಟಿದ್ದಾರೆ.

ದೆಹಲಿ ರೈತರ ಪ್ರತಿಭಟನೆ ಬಗ್ಗೆ ಟ್ವೀಟ್ ಮಾಡಿದ ಮೇಲೆ ನಟಿ ಕಂಗನಾ ರಣಾವತ್ ಅವರನ್ನು ಬಹಳಷ್ಟು ಸೆಲೆಬ್ರಿಟಿಗಳು ಟೀಕಿಸುತ್ತಿದ್ದಾರೆ. ಶಾಹೀನ್‌ಭಾಗ್ ಅಜ್ಜಿಯ ಬಗ್ಗೆ ಮಾಡಿದ ಟ್ವೀಟ್ ಅಂತೂ ಭಾರೀ ಟೀಕೆಗೆ ಕಾರಣವಾಗಿದೆ.

ಇದೀಗ ಇನ್ನೊಬ್ಬ ಟಾಪ್ ಗಾಯಕ ನಟಿಗೆ ಟಾಂಗ್ ಕೊಟ್ಟಿದ್ದಾರೆ. ಪಂಜಾಬಿ ಸಿಂಗರ್ ಮತ್ತು ನಟ ದಿಲ್‌ಜಿತ್ ದೋಸಂಜ್ ಕಂಗನಾ ಅವರನ್ನು ಟೀಕಿಸಿದ ಬೆನ್ನಲ್ಲೇ ಇದೀಗ ಮಿಕಾ ಸಿಂಗ್ ಅವರು ಟೀಕಿಸಿದ್ದಾರೆ.

ಶಾಹೀನ್‌ಭಾಗ್ ಅಜ್ಜಿ ಬಗ್ಗೆ ಸುಳ್ಳು ಟ್ವೀಟ್: ಕಂಗನಾ ವಿರುದ್ಧ ಸಿಖ್ ಸಿಂಗರ್ ಕಿಡಿ

ಜಾವೇದ್ ಅಖ್ತರ್, ಮಹಾರಾಷ್ಟ್ರ ಸರ್ಕಾರ, ಹಾಗೂ ಇತರ ಗುಂಪುಗಳಿಂದ ಟಾರ್ಗೆಟ್ ಆಗ್ತಿದ್ದೇನೆ ಎಂದು ನಟಿ ಮಾಡಿದ ಟ್ವೀಟ್‌ಗೆ ಪ್ರತಿಕ್ರಿಯಿಸಿದ ಮಿಕಾ ಸಿಂಗ್, ನಿಮ್ಮಲ್ಲಿ ತಟ್ಟಂತ ದೇಶ ಭಕ್ತಿ ಹುಟ್ಟೋಕೆ ಕಾರಣವೇನು ಎಂದು ಪ್ರಶ್ನಿಸಿದ್ದಾರೆ.

ನೀವು ಒಳ್ಳೆಯ ನಟಿ. ಸುಂದರ ನಟಿ. ನೀವ್ಯಾಕೆ ಈ ರೀತಿ ಮಾತನಾಡುತ್ತಿದ್ದೀರಿ..? ನಾವು ಪ್ರತಿ ದಿನ 5 ಲಕ್ಷ ಬಡ ಜನರಿಗೆ ಆಹಾರ ಒದಗಿಸುತ್ತಿದ್ದೇವೆ. ನೀವು ನಮ್ಮೊಡನೆ ಸೇರಿ 20 ಜನರಿಗಾದರೂ ಆಹಾರ ಒದಗಿಸಿ. ಟ್ವಿಟರ್ ಮತ್ತು ನ್ಯೂಸ್‌ನಲ್ಲಿ ದೊಡ್ಡ ಜನ ಆಗೋದು ಅಷ್ಟು ದೊಡ್ಡ ವಿಷ್ಯ ಅಲ್ಲ. ಆದ್ರೆ ಯಾವತ್ತೂ ನಾನು ನಿಮ್ಮ ದೊಡ್ಡ ಫ್ಯಾನ್ ಎಂದಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

Ram Charan: 'ಸ್ಟಾರ್ ಕಿಡ್' ಆರೋಪಕ್ಕೆ ಉತ್ತರ ಕೊಟ್ಟ ರಾಮ್ ಚರಣ್.. 'ಪ್ರೇಕ್ಷಕರಿಗೆ ಕಷ್ಟವಿತ್ತು' ಎಂದಿದ್ಯಾಕೆ ನಟ?
ಪಕ್ಕಾ ಎಕ್ಸ್‌ಪೀರಿಯನ್ಸ್ ಇರುವ 3 ಬ್ರೇಕಪ್ ಆಗಿರೋ ಗಂಡ ಬೇಕು, 100 ಎಕರೆ ಜಮೀನ್ದಾರ ಆಗಿರಬೇಕು: ನಟಿ ಮೀನಾಕ್ಷಿ!